ಪ್ರಧಾನಿಗೆ ಮಾತನಾಡಲು ಬಿಡದ ಪ್ರತಿಪಕ್ಷಗಳು: ಗದ್ದಲದ ಗೂಡಾದ ಮೊದಲ ದಿನದ ಅಧಿವೇಶನ

ಪ್ರಧಾನಿ ಮೋದಿ: ಚಿತ್ರ ಕೃಪೆ ಎಲ್​ಎಸ್​ ಟಿವಿ

ಪ್ರಧಾನಿ ಮೋದಿ: ಚಿತ್ರ ಕೃಪೆ ಎಲ್​ಎಸ್​ ಟಿವಿ

ನರೇಂದ್ರ ಮೋದಿಯವರು, ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಸಂಸದರು ಮತ್ತು ರಾಜಕೀಯ ಪಕ್ಷಗಳು ಸರ್ಕಾರಕ್ಕೆ ತೀಕ್ಷ್ಣವಾದ ಮತ್ತು ಕಠಿಣವಾದ ಪ್ರಶ್ನೆಗಳನ್ನು ಕೇಳಬೇಕೆಂದು ಒತ್ತಾಯಿಸಿದ್ದರು. ಹಾಗೂ ಅವರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಸರ್ಕಾರಕ್ಕೂ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.

ಮುಂದೆ ಓದಿ ...
  • Share this:

    ಸೋಮವಾರ ಪ್ರಾರಂಭವಾದ ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳು ಕೋಲಾಹಲ ನಡೆಸಿದ ಪರಿಣಾಮ ಪ್ರಧಾನಿ ನರೇಂದ್ರ ಮೋದಿಯವರಿಗೆ ತಮ್ಮ ಹೊಸ ಮಂತ್ರಿಗಳನ್ನು ಸಂಸತ್ತಿಗೆ ಪರಿಚಯಿಸಲು ಸಾಧ್ಯವಾಗಲಿಲ್ಲ. ಮಧ್ಯಾಹ್ನ 2 ಗಂಟೆಯವರೆಗೆ ಸದನವನ್ನು ಮುಂದೂಡಲಾಯಿತು.


    ಕೋಲಾಹಲದ ಮಧ್ಯೆ, ಪ್ರಧಾನಿ ಮೋದಿ ಅವರು ಮಾತನಾಡುತ್ತಾ, “ಸಂಸತ್ತಿನಲ್ಲಿ ಅನೇಕ ಮಹಿಳೆಯರು, ದಲಿತರು, ಬುಡಕಟ್ಟು ಜನಾಂಗದವರು ಮಂತ್ರಿಗಳಾಗಿದ್ದರಿಂದ ಉತ್ಸಾಹ ಹೆಚ್ಚಾಗಲಿದೆ ಎಂದು ನಾನು ಭಾವಿಸಿದ್ದೇನೆ. ಈ ಬಾರಿ ಕೃಷಿ ಮತ್ತು ಗ್ರಾಮೀಣ ಹಿನ್ನೆಲೆಯ ಒಬಿಸಿ ಸಮುದಾಯದ ನಮ್ಮ ಸಹೋದ್ಯೋಗಿಗಳಿಗೆ ಕೌನ್ಸಿಲ್ ಮಂತ್ರಿ ಸ್ಥಾನ ನೀಡಲಾಗಿದೆ”, ಎಂದು ವಿವರಿಸಿದರು.


    ಆದರೆ ವಿರೋಧ ಪಕ್ಷಗಳು ಪ್ರಧಾನ ಮಂತ್ರಿಯವರ ಮಾತುಗಳಿಗೆ ಅಡ್ಡಯನ್ನು ಉಂಟು ಮಾಡಿದರು ಹಾಗೂ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗೆ ಇಳಿದು ಸಾಕಷ್ಟು ಕೋಲಾಹಲ ಎಬ್ಬಿಸಿದವು.


    “ಈ ದೇಶದ ಹೆಮ್ಮೆಯ  ಮಹಿಳೆಯರು, ಒಬಿಸಿಗಳು, ರೈತರ ಮಕ್ಕಳು ಮಂತ್ರಿಗಳಾಗಿ ಅಧಿಕಾರ ಅನುಭವಿಸುತ್ತಿರುವುದು ಬಹುಶಃ ಕೆಲವರಿಗೆ ಸಂತೋಷವಾಗಿರುವುದಿಲ್ಲ. ಅದಕ್ಕಾಗಿಯೇ ಅವರು ನೂತನ ಸಚಿವರ ಪರಿಚಯ ಮಾಡಿಕೊಡಲೂ ಸಹ ಬಿಡುತ್ತಿಲ್ಲ. ಪ್ರತಿಪಕ್ಷಗಳ ಸಂಸದರ ಕೋಲಾಹಲದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ತಮ್ಮ ಮಂತ್ರಿ ಮಂಡಳಿಯನ್ನು ಪರಿಚಯಿಸಲು ಮುಂದಾದಾಗ ಈ ಪರಿಸ್ಥಿತಿಯನ್ನು ಎದುರಿಸಬೇಕಾಯಿತು.


    ಜುಲೈ ತಿಂಗಳ ಮೊದಲನೇ ವಾರ ಮೋದಿ ಅವರು ತಮ್ಮ ಎರಡನೇ ಅವಧಿಯಲ್ಲಿ ಮೊದಲನೇ ಬಾರಿಗೆ ತಮ್ಮ ಸಚಿವ ಸಂಪುಟವನ್ನು ಪುನರ್​ರಚನೆ ಮಾಡಿದ್ದರು. ನೂತನ ಮಂತ್ರಿ ಮಂಡಲಕ್ಕೆ 36 ಹೊಸಾ ಮುಖಗಳು ಸೆರಿದಂತೆ, ಯುವ ನಾಯಕರಿಗೆ ಮಣೆ ಹಾಕಲಾಗಿತ್ತು.


    ಕಾಂಗ್ರೆಸ್, ಎಸ್‌ಎಡಿ, ಸಿಪಿಐ (ಎಂ) ಸೇರಿದಂತೆ ಹಲವಾರು ಪಕ್ಷಗಳು ಸೋಮವಾರ ಸಂಸತ್ತಿನಲ್ಲಿ ಕೃಷಿ ಕಾನೂನುಗಳು, ಇಂಧನ ಹೆಚ್ಚಳ ಮತ್ತು ಇತರೇ ಸಂಬಂಧಿತ ವಿಷಯಗಳ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ಬೇಡಿಕೆ ಇಟ್ಟವು.


    ಪ್ರತಿಪಕ್ಷಗಳು ಜೋರಾಗಿ ಘೋಷಣೆಗಳನ್ನು ಕೂಗುತ್ತಾ ಪ್ರಧಾನಿಯವರ ಮಾತಿಗೆ ಅಡ್ಡಿಯುಂಟು ಮಾಡಿದವು. ಈ ವೇಳೆ ಓಂ ಪ್ರಕಾಶ್​ ಬಿರ್ಲಾ ಪ್ರತಿಪಕ್ಷಗಳಲ್ಲಿ ಮನವಿ ಮಾಡಿದರು. ದಯವಿಟ್ಟು ಸದನದ ಗಂಭೀರತೆಯನ್ನು ಹಾಳು ಮಾಡದೇ ಶಾಂತಿಯಿಂದ ವರ್ತಿಸಬೇಕು ಎಂದರು. ಪ್ರತಿಪಕ್ಷಗಳು ಸಂಸತ್ತಿನ ಒಳಗಿನ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದ್ದು ಅದನ್ನು ಕಾಪಾಡಬೇಕು, ನಾವು ಜಗತ್ತಿನಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಎನ್ನುವುದು ನೆನಪಿರಲಿ ಎಂದು ಹೇಳಿದರು.


    ಪ್ರಧಾನಮಂತ್ರಿಯವರ ಭಾಷಣದ ನಂತರ, ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿ, “ಕಾಂಗ್ರೆಸ್ ಮಾಡಿದ್ದು ಅತ್ಯಂತ ದುಃಖಕರ ಮತ್ತು ದುರದೃಷ್ಟಕರ ಕೆಲಸ. ಪ್ರಧಾನಿ ಅವರು ತಮ್ಮ ನೂತನ ಮಂತ್ರಿಗಳನ್ನುಸಹ ಪರಿಚಯ ಮಾಡಿಕೊಡಲು ಸಾಧ್ಯವಾಗಲಿಲ್ಲ’’,  ಎಂದು  ಕಿಡಿಕಾರಿದರು.


    ಸಂಸತ್ತಿನ ಅಧಿವೇಶನಕ್ಕೆ ಮುಂಚಿತವಾಗಿ ಪತ್ರಕರ್ತರೊಂದಿಗೆ ಮಾತನಾಡಿದ ನರೇಂದ್ರ ಮೋದಿಯವರು, ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಸಂಸದರು ಮತ್ತು ರಾಜಕೀಯ ಪಕ್ಷಗಳು ಸರ್ಕಾರಕ್ಕೆ ತೀಕ್ಷ್ಣವಾದ ಮತ್ತು ಕಠಿಣವಾದ ಪ್ರಶ್ನೆಗಳನ್ನು ಕೇಳಬೇಕೆಂದು ಒತ್ತಾಯಿಸಿದ್ದರು. ಹಾಗೂ ಅವರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಸರ್ಕಾರಕ್ಕೂ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.


    ಇದನ್ನೂ ಓದಿ: ಡ್ಯಾನಿಶ್‌ ವ್ಯಂಗ್ಯಚಿತ್ರಕಾರ ಕರ್ಟ್ ವೆಸ್ಟರ್‌ಗಾರ್ಡ್‌ ನಿಧನ: ಪ್ರವಾದಿ ಮೊಹಮ್ಮದ್‌ ವಿವಾದಾತ್ಮಕ ಕಾರ್ಟೂನ್‌ ರಚಿಸಿದ್ದು ಇವರೇ


    "ಎಲ್ಲಾ ಸಂಸದರು ಮತ್ತು ರಾಜಕೀಯ ಪಕ್ಷಗಳು ತೀಕ್ಷ್ಣವಾದ ಮತ್ತು ಕಠಿಣವಾದ ಪ್ರಶ್ನೆಗಳನ್ನು ಕೇಳಬೇಕೆಂದು ನಾನು ಕೋರುತ್ತೇನೆ ಆದರೆ ಜನರಿಗೆ ಸತ್ಯವನ್ನು ತಿಳಿಸುವುದರಿಂದಲೇ ಪ್ರಜಾಪ್ರಭುತ್ವವು ಬಲಗೊಳ್ಳುವುದು ಎಂಬುದರ ಮೇಲೆ ನಂಬಿಕೆ ಇಟ್ಟಿರುವ ಕಾರಣ  ಪ್ರತಿಪಕ್ಷಗಳು ಸೌಹಾರ್ದಯುತ ವಾತಾವರಣದಲ್ಲಿ ಪ್ರತಿಕ್ರಿಯಿಸಲು ಸರ್ಕಾರಕ್ಕೆ ಅವಕಾಶ ನೀಡಬೇಕು ಎಂದರು.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    Published by:HR Ramesh
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು