ಡ್ರೋಣ್​ ಪಾಲಿಸಿ ಕುರಿತು ಅಮಿತ್​ ಶಾ, ರಾಜನಾಥ್​ ಸಿಂಗ್​, ಅಜಿತ್​ ದೋವಲ್​ ಜೊತೆ ಮೋದಿ ಮಹತ್ವದ ಸಭೆ

ಸಭೆಯಲ್ಲಿ ಭದ್ರತೆ ಮತ್ತು ನೀತಿ ಹಾಗೂ ಡ್ರೋನ್ ನೀತಿಯನ್ನು ರೂಪಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಕುರಿತು ಹೆಚ್ಚಿನ ಮಾತುಕತೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ

 ಅಮಿತ್​ ಶಾ, ಮೋದಿ, ಅಜಿತ್​ ದೋವಲ್​

ಅಮಿತ್​ ಶಾ, ಮೋದಿ, ಅಜಿತ್​ ದೋವಲ್​

 • Share this:
  ಭಾರತದ ಡ್ರೋಣ್​ ನಿಯಮ ಸೇರಿದಂತೆ ಭದ್ರತಾ ನೀತಿಗಳ ಚರ್ಚೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಪ್ರಮುಖ ಸಭೆ ನಡೆಸಲು ಮುಂದಾಗಿದ್ದಾರೆ. ಈ ಸಭೆಯಲ್ಲಿ ಭದ್ರತೆ ಮತ್ತು ನೀತಿ ಹಾಗೂ ಡ್ರೋನ್ ನೀತಿಯನ್ನು ರೂಪಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಕುರಿತು ಹೆಚ್ಚಿನ ಮಾತುಕತೆ ನಡೆದಿರುವ ಸಾಧ್ಯತೆ ಇದೆ. ಭಾರತ ಶೀಘ್ರದಲ್ಲಿಯೇ ಹೊಸ ಡ್ರೋನ್​ ನಿಯಮವನ್ನು ಹೊಂದಲಿದೆ ಎಂದು ಸಿಎನ್‌ಎನ್-ನ್ಯೂಸ್ 18 ಗೆ ಮೂಲಗಳು ತಿಳಿಸಿವೆ. ಜಮ್ಮು ವಾಯುನೆಲೆಯ ಮೇಲೆ ಭಾನುವಾರದ ಡ್ರೋನ್ ದಾಳಿ ಮತ್ತು ನಂತರದ ನಡೆದ ಘಟಾನವಳಿ ಹಿನ್ನಲೆ ಈ ಸಭೆ ಪ್ರಾಮುಖ್ಯತೆ ಪಡೆದಿದೆ.

  ಭದ್ರತಾ ಬೆದರಿಕೆಗಳನ್ನು ನಿಶ್ಯಸ್ತ್ರಗೊಳಿಸುವ ಬಲವಾದ ಕಾರ್ಯವಿಧಾನವನ್ನು ನಿರ್ಮಿಸುವ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. ಇದೇ ವೇಳೆ ನಾಗರಿಕ ಬಳಕೆಗಾಗಿ ಡ್ರೋನ್‌ಗಳು ಬಳಕೆ ಮಾಡುತ್ತಿರುವ ಬಗ್ಗೆ ಸುರಕ್ಷತಾ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್‌ಗಳ ಬಳಕೆಯ ಮೇಲೆ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.

  ನಾಗರಿಕ ವಿಮಾನಯಾನ ಸಚಿವಾಲಯ ಹೊರಡಿಸಿದ 2021 ರ ಮಾರ್ಗಸೂಚಿಗಳ ಪ್ರಕಾರ, 250 ಗ್ರಾಂ ಗಿಂತ ಕಡಿಮೆ ತೂಕದ ಡ್ರೋನ್‌ಗಳನ್ನು ಹಾರಲು ಯಾವುದೇ ಪರವಾನಗಿ ಅಥವಾ ಪರವಾನಗಿ ಅಗತ್ಯವಿಲ್ಲ. ಆದರೆ, ವಿಮಾನ ನಿಲ್ದಾಣ ಸೇರಿದಂತೆ ಕೆಲವು ನಿರ್ಬಂಧ ಪ್ರದೇಶಗಳಲ್ಲಿ ಡ್ರೋಣ್​ ಹಾರಾಟಕ್ಕೆ ಅನುಮತಿ ಇಲ್ಲ.

  ಇದನ್ನು ಓದಿ: ಟೆಕ್ಕಿ ಹೆಂಡತಿ ಕೊಂದು ಡೆಲ್ಟಾ ಪ್ಲಸ್​ ಸೋಂಕಿಗೆ ಬಲಿಯಾದಳು ಎಂದು ಕುಟುಂಬಸ್ಥರಿಗೆ ನಂಬಿಸಿದ

  ಜಮ್ಮುವಿನ ಐಎಎಫ್ ನೆಲೆಯ ಮೇಲೆ ಭಾನುವಾರ ಮುಂಜಾನೆ 1.40ಕ್ಕೆ ಜಮ್ಮು ವಾಯುನೆಲೆಯ ಮೇಲೆ ಭಯೋತ್ಪಾದಕರು ಡ್ರೋನ್​ ದಾಳಿ ನಡೆಸಿದ್ದರು. 6 ನಿಮಿಷಗಳ ಅಂತರದಲ್ಲಿ ಎರಡು ಬಾಂಬ್ ಬ್ಲಾಸ್ಟ್​ ಆಗಿದ್ದು, ಇ್ಬಬರು ಸೈನಿಕರು ಗಾಯಕ್ಕೆ ಒಳಗಾಗಿದ್ದರು. ಈ ಸುದ್ದಿ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಈ ಸ್ಪೋಟ 2016ರ ಪಠಾಣ್ ಕೋಟ್​ ವಾಯನೆಲೆ ದಾಳಿಯ ಮುಂದು ವರಿಕೆಯಾಗಿದ್ದು, ಇದರ ಹಿಂದೆ ಜೈಶ್​-ಎ-ಮೊಹಮ್ಮದ್​ ಉಗ್ರ ಸಂಘಟನೆಯ ಕೈವಾಡ ಇರುವ ಶಂಕೆ ಇದೆ ಎಂದು ಗುಪ್ತಚರ ಇಲಾಖೆ ಉನ್ನತ ಮೂಲಗಳು ತಿಳಿಸಿದ್ದವು. ಇದರ ಬೆನ್ನಿಗೆ ಪ್ರಕರಣದ ತನಿಖೆಯನ್ನು ಎನ್ಐಎ (NIA-National Investigation Agency) ಗೆ ವಹಿಸಲಾ ಗಿತ್ತು

  ಇದಾದ 24 ಗಂಟೆಯೊಳಗೆ ಜಮ್ಮು ಸೇನಾ ನೆಲೆಯ ಬಳಿ ಮತ್ತೆ ಎರಡು ಡ್ರೋನ್​ಗಳು ಪತ್ತೆಯಾಗಿವೆ. ಈ ಡ್ರೋನ್​ಗಳನ್ನು ಸೈನಿಕರು ಹೊಡೆದು ಉರುಳಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ.
  Published by:Seema R
  First published: