Narendra Modi Birthday: ಜನ್ಮದಿನದ ಶುಭಾಶಯವನ್ನು ನೇರವಾಗಿ ಮೋದಿಗೆ ತಲುಪಿಸಬಹುದು!; ಹೇಗೆ ಗೊತ್ತಾ?

ನರೇಂದ್ರ ಮೋದಿ ಅವರು ಜನರ ಜೊತೆ ಸಂಪರ್ಕದಲ್ಲಿರಲು ಟ್ವಿಟ್ಟರ್​, ಫೇಸ್​ಬುಕ್​ ಸೇರಿ ಸಾಕಷ್ಟು ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್​ ಆಗಿದ್ದಾರೆ. ಇದರ ಜೊತೆಗೆ ಅವರಿಗೆ ನೇರವಾಗಿ ಜನ್ಮದಿನದ ಶುಭಾಶಯ ತಿಳಿಸಿಬಹುದಾಗಿದೆ. ಅದು ಹೇಗೆ ಎಂಬುದಕ್ಕೆ ಇಲ್ಲಿದೆ ಉತ್ತರ.

news18-kannada
Updated:September 17, 2020, 11:28 AM IST
Narendra Modi Birthday: ಜನ್ಮದಿನದ ಶುಭಾಶಯವನ್ನು ನೇರವಾಗಿ ಮೋದಿಗೆ ತಲುಪಿಸಬಹುದು!; ಹೇಗೆ ಗೊತ್ತಾ?
ನರೇಂದ್ರ ಮೋದಿ ಅವರು ಜನರ ಜೊತೆ ಸಂಪರ್ಕದಲ್ಲಿರಲು ಟ್ವಿಟ್ಟರ್​, ಫೇಸ್​ಬುಕ್​ ಸೇರಿ ಸಾಕಷ್ಟು ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್​ ಆಗಿದ್ದಾರೆ. ಇದರ ಜೊತೆಗೆ ಅವರಿಗೆ ನೇರವಾಗಿ ಜನ್ಮದಿನದ ಶುಭಾಶಯ ತಿಳಿಸಿಬಹುದಾಗಿದೆ. ಅದು ಹೇಗೆ ಎಂಬುದಕ್ಕೆ ಇಲ್ಲಿದೆ ಉತ್ತರ.
  • Share this:
ನವದೆಹಲಿ (ಸೆಪ್ಟೆಂಬರ್ 17) : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು (ಸೆಪ್ಟೆಂಬರ್ 17) 70 ವರ್ಷ ತುಂಬಿದೆ. ಇಂದು ಅವರದ್ದು 71ನೇ ಜನ್ಮದಿನ. ಎರಡನೇ ಬಾರಿ ಪ್ರಧಾನಿ ಮಂತ್ರಿ ಆಗಿರುವ ಅವರು ಆ ಮುಂಚೆ ಸತತ ನಾಲ್ಕು ಬಾರಿ ಗುಜರಾತ್ ಸಿಎಂ ಆಗಿ 2001ರಿಂದ 2014ರವರೆಗೆ ಆಡಳಿತ ಮಾಡಿದ ಅನುಭವ ಹೊಂದಿದ್ದರು. ಹಲವು ಟೀಕೆಗಳ ಮಧ್ಯೆಯೂ ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳುವುದರಲ್ಲಿ ಮೀನಮೇಷ ಎಣಿಸದ ನರೇಂದ್ರ ಮೋದಿ ಈಗ ವಿಶ್ವದ ಅತ್ಯಂತ ಪ್ರಭಾವಶಾಲಿ ನಾಯಕರಲ್ಲೊಬ್ಬರಾಗಿ ಬೆಳೆದಿದ್ದಾರೆ. ಪ್ರಧಾನಿ ಮೋದಿ ಜನ್ಮದಿನಕ್ಕೆ ಸಾಕಷ್ಟು ವಿಶ್ವ ನಾಯಕರು ಶುಭಾಶಯ ಕೋರಿದ್ದಾರೆ. ವಿಶೇಷ ಎಂದರೆ ನೀವು ಕೂಡ ಪ್ರಧಾನಿ ಮೋದಿಗೆ ಜನ್ಮದಿನದ ಶುಭಶಾಯ ಕೋರಬಹುದು. ಅದು ಹೇಗೆ ಅಂತೀರ ಇಲ್ಲಿದೆ ಅದಕ್ಕೆ ಉತ್ತರ.

ನರೇಂದ್ರ ಮೋದಿ ಅವರು ಜನರ ಜೊತೆ ಸಂಪರ್ಕದಲ್ಲಿರಲು ಟ್ವಿಟ್ಟರ್​, ಫೇಸ್​ಬುಕ್​ ಸೇರಿ ಸಾಕಷ್ಟು ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್​ ಆಗಿದ್ದಾರೆ. ಅಲ್ಲದೆ, ನಮೋ ಆ್ಯಪ್​ ಕೂಡ ಇದರಲ್ಲಿ ಪ್ರಮುಖವಾಗಿದೆ. ನಮೋ ಆ್ಯಪ್ ಮೂಲಕ ನೀವು ನಿಮ್ಮ ಶುಭಾಶಯವನ್ನು ಪ್ರಧಾನಿ ಮೋದಿಗೆ ತಿಳಿಸಬಹುದಾಗಿದೆ.

ಪ್ಲೇಸ್ಟೋರ್​ನಲ್ಲಿ ನಮೋ ಆ್ಯಪ್ ಲಭ್ಯವಿದೆ. ಈ ಆ್ಯಪ್ ಡೌನ್​ಲೋಡ್​ ಮಾಡಿಕೊಂಡು ಲಾಗಿನ್​ ಆಗಬೇಕು. ಅಲ್ಲಿ, ನೀವು ಮೋದಿಗೆ ಶುಭಾಶಯ ಕೋರಬಹುದು.
ಮೋದಿ ಜನ್ಮದಿನಕ್ಕೆ ಪುಟಿನ್​ ವಿಶ್

ವಿಶ್ವದ ಬಹುತೇಕ ದೇಶದ ನಾಯಕರು ಮೋದಿ ಶುಭಾಶಯಗಳನ್ನು ಕೋರುತ್ತಿದ್ದಾರೆ. ಈ ಪೈಕಿ ಪ್ರಧಾನಿ ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಭಾಶಯ ಕೋರಿದ್ದಾರೆ. ನರೇಂದ್ರ ಮೋದಿಗೆ ಜನ್ಮದಿನದ ಶುಭಾಶಯ ಕೋರಿ ಪತ್ರ ಬರೆದಿರುವ ಪುಟಿನ್, "ಪ್ರಧಾನ ಮಂತ್ರಿಯಾಗಿ ನೀವು ಮಾಡಿದ ಸಾಧನೆಯೂ ಅಂತಾರಾಷ್ಟ್ರೀಯ ಮಟ್ಟದ ಗೌರವಕ್ಕೆ ಅರ್ಹ. ನಿಮ್ಮ ನಾಯಕತ್ವದಲ್ಲಿ ಭಾರತ ಆರ್ಥಿಕ, ಸಾಮಾಜಿಕ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದೆ. ಭಾರತ ರಷ್ಯಾ ನಡುವಿನ ಶತಮಾನಗಳಷ್ಟು ಹಳೆಯದಾದ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಗೊಳಿಸಲು ಶ್ರಮಿಸಿದ ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅಭಿವೃದ್ಧಿ ಹಾಗೂ ಶಾಂತಿ ಸ್ಥಾಪನೆಗಾಗಿ ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ" ವ್ಲಾಡಿಮಿರ್ ಪುಟಿನ್ ಶುಭಾಶಯ ಸಂದೇಶದಲ್ಲಿ ತಿಳಿಸಿದ್ದಾರೆ. ಅಲ್ಲದೆ, ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಆರೋಗ್ಯವಂತರಾಗಿ, ಸಂತೋಷದಿಂದ ದೀರ್ಘಕಾಲ ಬಾಳಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.
Published by: Rajesh Duggumane
First published: September 17, 2020, 11:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading