Narendra Modiಯವರಿಂದ ಇಂದು ಉದ್ಘಾಟನೆಗೊಳ್ಳಲಿದೆ 'ಭಾರತ್ ಗ್ಯಾಲರಿ', ಹಾಗಿದ್ರೆ ಇದರ ವಿಶೇಷತೆಗಳು ಏನು ಗೊತ್ತಾ?

ಪ್ರಧಾನ ಮಂತ್ರಿಗಳಿಂದ ಇಂದು ಉದ್ಘಾಟನೆಗೊಳ್ಳಲಿರುವ ಭಾರತ್ ಗ್ಯಾಲರಿಯು ಅತೀ ಮಹತ್ವದ್ದಾಗಿದೆ. ಇದು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ಕೊಡುಗೆಯನ್ನು ಚಿತ್ರಿಸುತ್ತದೆ.

ಇಂದು ಉದ್ಘಾಟನೆಗೊಳ್ಳಲಿರುವ 'ಭಾರತ್ ಗ್ಯಾಲರಿ'

ಇಂದು ಉದ್ಘಾಟನೆಗೊಳ್ಳಲಿರುವ 'ಭಾರತ್ ಗ್ಯಾಲರಿ'

  • Share this:
ಪಶ್ಚಿಮ ಬಂಗಾಳ: ಇಂದು ದೇಶದೆಲ್ಲೆಡೆ 88ನೇ ವರ್ಷದ ‘ಬಲಿದಾನ್ ದಿವಸ್‌’ (Balidan Diwas) ಅನ್ನು ಆಚರಿಸಲಾಗುತ್ತಿದೆ.  ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ (Freedom Fight) ಅಚ್ಚಳಿಯದ ಹೆಸರು ಹೊಂದಿರುವ ಕ್ರಾಂತಿವೀರ ಭಗತ್ ಸಿಂಗ್ (Bhagat Singh), ರಾಜಗುರು (Rajguru) ಹಾಗೂ ಸುಖದೇವ್ (Sukhdev) ಅವರನ್ನು ಬ್ರಿಟಿಷರು (British) ನೇಣಿಗೇರಿಸಿದ ದಿನವಿಂದು. ಮಹಾನ್ ದೇಶಭಕ್ತರ ತ್ಯಾಗ ಬಲಿದಾನದ ಸ್ಮರಣೆಗೆ ಈ ದಿನವನ್ನು ಆಚರಿಸಲಾಗುತ್ತದೆ. ಇಂದಿನ ‘ಶಹೀದ್ ದಿವಸ್’ (Shahid Diwas) ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್‌ನಲ್ಲಿ (Victoria Memorial Hall) ಬಿಪ್ಲೋಬಿ ಭಾರತ್ ಗ್ಯಾಲರಿಯನ್ನು (Biplobi Bharat Gallery) ವಿಡಿಯೋ ಕಾನ್ಫರೆನ್ಸಿಂಗ್ (Video Conference) ಮೂಲಕ ಸಂಜೆ 6 ಗಂಟೆಗೆ ಉದ್ಘಾಟಿಸಲಿದ್ದಾರೆ. ಈ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಏನಿದು ಭಾರತ್ ಗ್ಯಾಲರಿ?

ಪ್ರಧಾನ ಮಂತ್ರಿಗಳಿಂದ ಇಂದು ಉದ್ಘಾಟನೆಗೊಳ್ಳಲಿರುವ ಭಾರತ್ ಗ್ಯಾಲರಿಯು ಅತೀ ಮಹತ್ವದ್ದಾಗಿದೆ. ಇದು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ಕೊಡುಗೆಯನ್ನು ಚಿತ್ರಿಸುತ್ತದೆ. ಸ್ವಾತಂತ್ರ್ಯ ಹೋರಾಟದ ಮೊದಲ ದಿನಗಳಿಂದ ಹಿಡಿದು, 1947 ರವರೆಗಿನ ಘಟನೆಗಳ ಸಮಗ್ರ ನೋಟವನ್ನು ಈ ಗ್ಯಾಲರಿ ಒದಗಿಸುತ್ತದೆ.

ಸ್ವಾತಂತ್ರ್ಯ ಸಮರದ ಸಮಗ್ರ ನೋಟ

"ಈ ಭಾರತ್ ಗ್ಯಾಲರಿಯು ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ಕೊಡುಗೆ ಮತ್ತು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಗೆ ಅವರ ಸಶಸ್ತ್ರ ಪ್ರತಿರೋಧವನ್ನು ಪ್ರದರ್ಶಿಸುತ್ತದೆ. ಸ್ವಾತಂತ್ರ್ಯ ಚಳವಳಿಯ ಮುಖ್ಯವಾಹಿನಿಯ ನಿರೂಪಣೆಯಲ್ಲಿ ಈ ಅಂಶಕ್ಕೆ ಸರಿಯಾದ ಸ್ಥಾನವನ್ನು ಹೆಚ್ಚಾಗಿ ನೀಡಲಾಗಿಲ್ಲ. ಈ ಹೊಸ ಗ್ಯಾಲರಿಯ ಉದ್ದೇಶವು 1947 ರವರೆಗೆ ಕಾರಣವಾದ ಘಟನೆಗಳ ಸಮಗ್ರ ನೋಟವನ್ನು ಒದಗಿಸುವುದು ಮತ್ತು ಕ್ರಾಂತಿಕಾರಿಗಳು ನಿರ್ವಹಿಸಿದ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುವುದಾಗಿದೆ”ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Padma Shri: ಪದ್ಮಶ್ರೀ ಸ್ವೀಕಾರಕ್ಕೂ ಮುನ್ನ ಪ್ರಧಾನಿ, ರಾಷ್ಟ್ರಪತಿಗೆ 125 ವರ್ಷದ ಯೋಗ ಗುರು ನಮಿಸಿದ್ದು ಹೀಗೆ

ಇತರೇ ಮಹತ್ವದ ಘಟಗೆಗಳ ಬಗ್ಗೆ ಮಾಹಿತಿ

ಇನ್ನು ಕ್ರಾಂತಿಕಾರಿ ಚಳವಳಿ, ಕ್ರಾಂತಿಕಾರಿ ನಾಯಕರಿಂದ ಮಹತ್ವದ ಸಂಘಗಳ ರಚನೆ, ಚಳವಳಿಯ ಹರಡುವಿಕೆ, ಭಾರತೀಯ ರಾಷ್ಟ್ರೀಯ ಸೇನೆಯ ರಚನೆ, ನೌಕಾ ದಂಗೆಯ ಕೊಡುಗೆಯನ್ನು ಸಹ ಭಾರತ್ ಗ್ಯಾಲರಿಯಲ್ಲಿ ಪ್ರದರ್ಶಿಸಲಾಗುತ್ತದೆ.

ಇಂದು ಬಲಿದಾನ್ ದಿವಸ್ ಆಚರಣೆ

 ಇಂದು ದೇಶದೆಲ್ಲೆಡೆ 88ನೇ ವರ್ಷದ ‘ಬಲಿದಾನ್ ದಿವಸ್‌’ ಅನ್ನು ಆಚರಿಸಲಾಗುತ್ತಿದೆ.  ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅಚ್ಚಳಿಯದ ಹೆಸರು ಹೊಂದಿರುವ ಕ್ರಾಂತಿವೀರ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರನ್ನು ಬ್ರಿಟಿಷರು ನೇಣಿಗೇರಿಸಿದ ದಿನವಿಂದು. ಮಹಾನ್ ದೇಶಭಕ್ತರ ತ್ಯಾಗ ಬಲಿದಾನದ ಸ್ಮರಣೆಗೆ ಈ ದಿನವನ್ನು ಆಚರಿಸಲಾಗುತ್ತದೆ. ಇಂದಿನ ‘ಶಹೀದ್ ದಿವಸ್’ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಹುತಾತ್ಮರನ್ನು ನೆನೆಸಿಕೊಂಡಿದ್ದಾರೆ.

 ಸ್ಮಾತಂತ್ರ್ಯ ಹೋರಾಟಗಾರರಿಗೆ ನೇಣು

23 ಮಾರ್ಚ್, 1931ರಲ್ಲಿ ಸಭಗತ್ ಸಿಂಗ್, ಸುಖದೇವ್ ಥಾಪರ್ ಮತ್ತು ಶಿವರಾಜ್ ರಾಜಗುರುಗೆ ನೇಣು ಹಾಕಲಾಗಿತ್ತು. ಮಾರ್ಚ್ 24, 1931ರಂದು ಅವರನ್ನು ನೇಣಿಗೇರಿಸುವುದೆಂದು ತೀರ್ಮಾನಿಸಲಾಗಿತ್ತು. ಆದರೆ ಅದನ್ನು 11 ಗಂಟೆ ಹಿಂದೂಡಿ ಮಾರ್ಚ್ 23. 1931, ಸಂಜೆ 7 ಗಂಟೆ 33 ನಿಮಿಷಕ್ಕೆ ಗಲ್ಲಿಗೇರಿಸಲಾಯಿತು. ನಿಗದಿಪಡಿಸಿದ ವೇಳೆಗಿಂತ ಒಂದು ಗಂಟೆ ಮೊದಲೇ ಅವರನ್ನು ಗಲ್ಲಿಗೇರಿಸಲಾಯಿತು ಮತ್ತು ಸತ್ಲೆಜ್ ನದಿಯ ದಡದಲ್ಲಿ ಜೈಲು ಅಧಿಕಾರಿಗಳೇ ರಹಸ್ಯವಾಗಿ ಅಂತ್ಯಕ್ರಿಯೆ ನೇರವೇರಿಸಿದರು.

 ಇದನ್ನೂ ಓದಿ: Shaheed Diwas: ಹುತಾತ್ಮರ ದಿನವನ್ನು ಪಬ್ಲಿಕ್ ಹಾಲಿಡೇ ಎಂದು ಘೋಷಿಸಿದ ಸಿಎಂ ಭಗವಂತ್ ಮನ್

ಪ್ರಧಾನಿ ನರೇಂದ್ರ ಮೋದಿ ಟ್ವೀಟ್

 “ಸ್ವಾತ್ರಂತ್ರ್ಯ ಹೋರಾಟದ ಅಮರ ಸೇನಾನಿಗಳಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರಿಗೆ ಬಲಿದಾನ ದಿನದಂದು ಶತ ಶತ ನಮನ. ಭಾರತ ಮಾತೆಯ ಈ ಪರಾಕ್ರಮಿ ಸುಪುತ್ರರ ತ್ಯಾಗ, ಹೋರಾಟ ಮತ್ತು ಆದರ್ಶಗಳ ಕಥೆ ಈ ದೇಶವಾಸಿಗಳಲ್ಲಿ ಸದಾ ಸ್ಪೂರ್ತಿ ತುಂಬುತ್ತಾ ಇರುತ್ತದೆ… ಜೈ ಹಿಂದ್” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
Published by:Annappa Achari
First published: