• Home
  • »
  • News
  • »
  • national-international
  • »
  • Mann Ki Baat: ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಮೋದಿ ಮಾತು, ಬೆಂಗಳೂರು ಮೂಲದ ಸಂಸ್ಥೆ ಕಾರ್ಯಕ್ಕೆ ಶ್ಲಾಘನೆ

Mann Ki Baat: ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಮೋದಿ ಮಾತು, ಬೆಂಗಳೂರು ಮೂಲದ ಸಂಸ್ಥೆ ಕಾರ್ಯಕ್ಕೆ ಶ್ಲಾಘನೆ

ಮೋದಿ 'ಮನ್‌ ಕಿ ಬಾತ್' ಸಂಗ್ರಹ ಚಿತ್ರ

ಮೋದಿ 'ಮನ್‌ ಕಿ ಬಾತ್' ಸಂಗ್ರಹ ಚಿತ್ರ

93ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಈ ಬಾರಿ ಪ್ಲಾಸ್ಟಿಕ್ ನಿರ್ಮೂಲನೆ, ನವರಾತ್ರಿ, ವಿಜಯ ದಶಮಿ ಕುರಿತಂತೆ ಪ್ರಧಾನಿ ಮಾತನಾಡಿದರು. ಬೆಂಗಳೂರು (Bengaluru) ಮೂಲದ ಯೂತ್ ಫಾರ್ ಪರಿವರ್ತನ್ (youth for parivarthan) ಎಂಬ ಸ್ವಯಂ ಸೇವಾ ಸಂಸ್ಥೆ ಬಗ್ಗೆ ಪ್ರಸ್ತಾಪಿಸಿದ ಅವರು, ಅದರ ಸಮಾಜಸೇವಾ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಮುಂದೆ ಓದಿ ...
  • Share this:

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ‘ಮನ್ ಕಿ ಬಾತ್’ (Mann Ki baat) ಆಕಾಶವಾಣಿ ಕಾರ್ಯಕ್ರಮ (Radio Programme) ಇದೀಗ ಪ್ರಸಾರವಾಯ್ತು. 93ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಈ ಬಾರಿ ಪ್ಲಾಸ್ಟಿಕ್ (plastic) ನಿರ್ಮೂಲನೆ, ನವರಾತ್ರಿ (Navarathri), ವಿಜಯ ದಶಮಿ (Vijay Dashami) ಕುರಿತಂತೆ ಪ್ರಧಾನಿ ಮಾತನಾಡಿದರು. ಬೆಂಗಳೂರು (Bengaluru) ಮೂಲದ ಯೂತ್ ಫಾರ್ ಪರಿವರ್ತನ್ (youth for parivarthan) ಎಂಬ ಸ್ವಯಂ ಸೇವಾ ಸಂಸ್ಥೆ (NGO) ಬಗ್ಗೆ ಪ್ರಸ್ತಾಪಿಸಿದ ಅವರು, ಅದರ ಸಮಾಜಸೇವಾ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಇನ್ನು ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್, ದೀನದಯಾಳ್ ಉಪಾಧ್ಯಾಯ ಸೇರಿದಂತೆ ಅನೇಕ ಮಹನೀಯರನ್ನು ತಮ್ಮ ಭಾಷಣದಲ್ಲಿ ಸ್ಮರಿಸಿದರು.


ಭಗತ್‌ ಸಿಂಗ್, ದೀನ ದಯಾಳ್ ಉಪಾಧ್ಯಾಯ ಸ್ಮರಣೆ


ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹಾನ್ ಪುರುಷರ ಸ್ಮರಣೆ ಮಾಡಿದ್ರು. ಮೂರು ದಿನಗಳ ನಂತರ, ಅಂದರೆ ಸೆಪ್ಟೆಂಬರ್ 28 ರಂದು ಅಮೃತ ಮಹೋತ್ಸವದ ವಿಶೇಷ ದಿನ. ಈ ದಿನ ನಾವು ಭಾರತ ಮಾತೆಯ ವೀರ ಪುತ್ರ ಭಗತ್ ಸಿಂಗ್ ಅವರ ಜನ್ಮದಿನವನ್ನು ಆಚರಿಸುತ್ತೇವೆ ಅಂತ ಹೇಳಿದ್ರು. ಇನ್ನು ದೀನದಯಾಳ್ ಉಪಾಧ್ಯಾಯ ಅವರ ಸ್ಮರಣೆ ಮಾಡಿದ ಮೋದಿ, "ಭಾರತೀಯ ತತ್ವಶಾಸ್ತ್ರವು ಆಧುನಿಕ, ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಕೋನದಲ್ಲಿ ಜಗತ್ತನ್ನು ಹೇಗೆ ಮಾರ್ಗದರ್ಶಿಸುತ್ತದೆ ಎಂಬುದನ್ನು ದೀನದಯಾಳ್ ಜಿ ನಮಗೆ ಕಲಿಸಿದರು" ಎಂದು ದೀನದಯಾಳ್ ಉಪಾಧ್ಯಾಯ ಅವರ 106 ನೇ ಜನ್ಮದಿನದಂದು ಅವರನ್ನು ಸ್ಮರಿಸಿದರು.
ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಹೆಸರು


ಇನ್ನು 'ಚಂಡೀಗಢ ವಿಮಾನ ನಿಲ್ದಾಣವನ್ನು ಶಹೀದ್ ಭಗತ್ ಸಿಂಗ್ ವಿಮಾನ ನಿಲ್ದಾಣ ಎಂದು ಕರೆಯಲಾಗುವುದು' ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಘೋಷಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್ ಅವರು ನಿರ್ವಹಿಸಿದ ಪಾತ್ರ, ದೇಶಕ್ಕಾಗಿ ಅವರು ನೀಡಿದ ಕೊಡುಗೆ, ತ್ಯಾಗ ಪರಿಗಣಿಸಿ, ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವ ಮೂಲಕ ಗೌರವಿಸುವುದಾಗಿ ಹೇಳಿದರು.


ಇದನ್ನೂ ಓದಿ: PFI ವಿರುದ್ಧ ದಾಳಿ ನಡೆಸಿದ್ದೇಕೆ ಇಡಿ? ಮೋದಿ ವಿರುದ್ಧ ಸಂಚು, ಪಾಟ್ನಾ ರ್‍ಯಾಲಿ ರಹಸ್ಯ ಬಿಚ್ಚಿಟ್ಟ ಅಧಿಕಾರಿಗಳು


ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಪ್ರಧಾನಿ ಮಾತು


ಇನ್ನು ತಮ್ಮ ಭಾಷಣದಲ್ಲಿ ಪ್ಲಾಸ್ಟಿಕ್ ಬಗ್ಗೆ ಪ್ರಸ್ತಾಪ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ಲಾಸ್ಟಿಕ್‌ ತ್ಯಾಜ್ಯದಿಂದ ಪರಿಸರ ಹೇಗೆ ಹಾಳಾಗುತ್ತಿದೆ ಎಂಬ ಬಗ್ಗೆ ಕಳವಳ ವ್ಯಕ್ತಪಡಿಸಿದರು.


ಬೆಂಗಳೂರು ಮೂಲದ ಸಂಸ್ಥೆ ಕಾರ್ಯಕ್ಕೆ ಶ್ಲಾಘನೆ


ಬೆಂಗಳೂರು ಮೂಲದ ಸ್ವಯಂ ಸೇವಾ ಸಂಸ್ಥೆ ಯೂತ್ ಫಾರ್ ಪರಿವರ್ತನ್ ಬಗ್ಗೆ ಪ್ರಧಾನಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಯೂತ್ ಫಾರ್ ಪರಿವರ್ತನ್ ಸಂಸ್ಥೆ ಸಮಾಜ ಸೇವೆ ಜೊತೆಗೆ ಪರಿಸರ ಸಂರಕ್ಷಣೆಯಲ್ಲೂ ತೊಡಗಿದೆ ಅಂತ ಶ್ಲಾಘಿಸಿದರು.


ಚಿರತೆಗಳ ಮೇಲೆ ನಿಗಾ ಇಡಲು ಕಾರ್ಯಪಡೆ ರಚನೆ


"ನಮೀಬಿಯಾದಿಂದ ಭಾರತಕ್ಕೆ ತರಲಾದ ಚಿರತೆಗಳು - ಹೇಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಮೇಲ್ವಿಚಾರಣೆ ಮಾಡಲು ಕಾರ್ಯಪಡೆಯನ್ನು ಸ್ಥಾಪಿಸಲಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದ್ರು. ಚಿರತೆಗಳಿಗೆ ಹೆಸರಿಸಲು ರಾಷ್ಟ್ರವ್ಯಾಪಿ ಸ್ಪರ್ಧೆ ನಡೆಯಲಿದೆ ಎಂದು ಹೇಳಿದರು.


ಇದನ್ನೂ ಓದಿ: Uttar Pradesh: ಯೋಗಿ ಸರ್ಕಾರದ ಮಹತ್ವದ ಹೆಜ್ಜೆ: ರೇಪ್​ ಕೇಸಲ್ಲಿ ಸಿಗಲ್ಲ ನಿರೀಕ್ಷಣಾ ಜಾಮೀನು, ಮಸೂದೆ ಅಂಗೀಕಾರ!


93ನೇ ಮನ್ ಕೀ ಬಾತ್ ಕಾರ್ಯಕ್ರಮ


ಇದು ಪ್ರಧಾನಿ ನರೇಂದ್ರ ಮೋದಿ ಅವರ ಮಾಸಿಕ ರೇಡಿಯೋ ಕಾರ್ಯಕ್ರಮದ 93ನೇ ಸಂಚಿಕೆಯಾಗಿತ್ತು. ಇದರ ಮೊದಲ ಆವೃತ್ತಿಯನ್ನು ಅಕ್ಟೋಬರ್ 3, 2014 ರಂದು ಪ್ರಸಾರ ಮಾಡಲಾಯಿತು. ಆಲ್ ಇಂಡಿಯಾ ರೇಡಿಯೋ, ದೂರದರ್ಶನ, ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ 'ಮನ್ ಕಿ ಬಾತ್' ಪ್ರಸಾರವಾಯ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕೇರಳದ ಎರ್ನಾಕುಲಂನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿಯವರ 'ಮನ್ ಕಿ ಬಾತ್' ಅನ್ನು ಆಲಿಸಿದರು.

Published by:Annappa Achari
First published: