ಸಿಎಎ, ಆರ್ಟಿಕಲ್ 370, ಟ್ರಿಪಲ್ ತಲಾಖ್ ಇತ್ಯಾದಿ: ಪ್ರಧಾನಿಯಿಂದ ಮೊದಲ ವರ್ಷದ ರಿಪೋರ್ಟ್ ಕಾರ್ಡ್

First Year Report Card - 2019ರಲ್ಲಿ ದೇಶದ ಜನರು ಸರ್ಕಾರವನ್ನಷ್ಟೇ ಅಲ್ಲ, ರಾಷ್ಟ್ರವನ್ನು ಹೊಸ ಸ್ತರಕ್ಕೆ ಕೊಂಡೊಯ್ಯುವ ಕನಸು ಕನಸು ಮುಂದುವರಿಸಿದ್ಧಾರೆ. ಕಳೆದ ಒಂದು ವರ್ಷದಲ್ಲಿ ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೋದಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

Vijayasarthy SN | news18
Updated:May 30, 2020, 8:01 AM IST
ಸಿಎಎ, ಆರ್ಟಿಕಲ್ 370, ಟ್ರಿಪಲ್ ತಲಾಖ್ ಇತ್ಯಾದಿ: ಪ್ರಧಾನಿಯಿಂದ ಮೊದಲ ವರ್ಷದ ರಿಪೋರ್ಟ್ ಕಾರ್ಡ್
ನರೇಂದ್ರ ಮೋದಿ
  • News18
  • Last Updated: May 30, 2020, 8:01 AM IST
  • Share this:
ನವದೆಹಲಿ(ಮೇ 30): ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಸತತ ಎರಡನೇ ಬಾರಿ ಅಧಿಕಾರಕ್ಕೆ ಬಂದು ಇವತ್ತಿಗೆ ಸರಿಯಾಗಿ 1 ವರ್ಷ ಪೂರ್ಣಗೊಂಡಿದೆ. ಈ ಮೊದಲ ವರ್ಷದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ 1 ವರ್ಷ ಅವಧಿಯಲ್ಲಿ ಸರ್ಕಾರ ಮಾಡಿದ ಸಾಧನೆಗಳ ಪಟ್ಟಿ ಮಾಡಿದ್ದಾರೆ. ಇವತ್ತು ಶನಿವಾರ ಇಡೀ ರಾಷ್ಟ್ರವನ್ನುದ್ದೇಶಿಸಿ ಅವರು ಪತ್ರ ಬರೆದು ತಮ್ಮ ಆಡಳಿತದ ಸಾಧನೆಯನ್ನು ಹೇಳಿಕೊಂಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ತಂದಿದ್ದು, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ಆರ್ಟಿಕಲ್ ಅನ್ನು ತೆಗೆದುಹಾಕಿದ್ದು, ತ್ರಿವಳಿ ತಲಾಖ್ ನಿಷೇಧ ಕಾನೂನು ಜಾರಿಗೆ ತಂದಿದ್ದು, ರಾಮ ಮಂದಿರ ಸಮಸ್ಯೆ ಇತ್ಯರ್ಥಪಡಿಸಿದ್ದು ಇವು ಒಂದು ವರ್ಷದ ಅವಧಿಯಲ್ಲಿ ತಮ್ಮ ಸರ್ಕಾರದ ಪ್ರಮುಖ ಸಾಧನೆಗಳೆಂದು ಪ್ರಧಾನಿ ಹೇಳಿದ್ಧಾರೆ.

2019ರಲ್ಲಿ ದೇಶದ ಜನರು ಸರ್ಕಾರವನ್ನಷ್ಟೇ ಅಲ್ಲ, ರಾಷ್ಟ್ರವನ್ನು ಹೊಸ ಸ್ತರಕ್ಕೆ ಕೊಂಡೊಯ್ದು ಜಾಗತಿಕ ನಾಯಕತ್ವದ ಮಟ್ಟಕ್ಕೆ ಏರುವ ಕನಸನ್ನೂ ಮುಂದುವರಿಸಿದ್ಧಾರೆ. ಕಳೆದ ಒಂದು ವರ್ಷದಲ್ಲಿ ಈ ಕನಸುಗಳನ್ನು ಸಾಕಾರಗೊಳಿಸುವತ್ತ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರ ಬಹಳ ವ್ಯಾಪಕವಾಗಿ ಚರ್ಚೆಯಾಗಿದೆ, ಸಾರ್ವಜನಿಕರ ಮನಃಪಟಲದಲ್ಲಿ ಚಿರಸ್ಥಾಯಿಯಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

“ಆರ್ಟಿಕಲ್ 370 ರದ್ಧತಿಯಿಂದ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಬಲಕೊಟ್ಟಿತು” ಎಂದು ಕಾಶ್ಮೀರ ವಿಚಾರದಲ್ಲಿ ಕೈಗೊಂಡ ಐತಿಹಾಸಿಕ ನಿರ್ಧಾರದ ಬಗ್ಗೆ ಮೋದಿ ಹೇಳಿದ್ಧಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ ಆರ್ಟಿಕಲ್ 370ನೇ ವಿಧಿ ವಿಶೇಷಾಧಿಕಾರ ನೀಡಿತ್ತು. ಈ ವಿಧಿ ರದ್ದು ಮಾಡುವ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆಯಲಾಯಿತು. ಹಾಗೆಯೇ ಆ ಕಣಿವೆ ರಾಜ್ಯವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು. ಇದು ತಮ್ಮ ಸರ್ಕಾರದ ಪ್ರಮುಖ ಸಾಧನೆಗಳಲ್ಲೊಂದು ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ: ಕಡೆಗೂ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಂಬಂಧ ಕಡಿದುಕೊಂಡ ಅಮೇರಿಕಾ

ತ್ರಿವಳಿ ತಲಾಖ್ ನಿಷೇಧ ಕಾನೂನು ರದ್ದು ಮಾಡಿದ್ದು ತಮ್ಮ ಇನ್ನೊಂದು ಸಾಧನೆ ಎಂದಿದ್ದಾರೆ ಮೋದಿ. ಇನ್​ಸ್ಟಂಟ್ ಟ್ರಿಪಲ್ ತಲಾಖ್ ಪದ್ಧತಿ ಮುಸ್ಲಿಮರಲ್ಲಿ ಅಸ್ತಿತ್ವದಲ್ಲಿತ್ತು. ಮಹಿಳೆಯರನ್ನು ಅಬಲೆಯರನ್ನಾಗಿಸುವ ಈ ಅಮಾನವೀಯ ಕಾನೂನನ್ನು ಕಸದಬುಟ್ಟಿಗೆ ಹಾಕಲಾಯಿತು ಎಂದಿದ್ದಾರೆ ಮೋದಿ.

ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನ ದೇಶಗಳಿಂದ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ವಲಸೆ ಬಂದಿರುವ ಅಲ್ಲಿನ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ದೊರಕಿಸಿಕೊಡುವ ಪೌರತ್ವ ತಿದ್ದುಪಡಿ ಕಾಯ್ದೆ (CAA) ತಮ್ಮ ಸರ್ಕಾರದ ಪ್ರಮುಖ ಸಾಧನೆಗಳಲ್ಲೊಂದು ಎಂದು ನರೇಂದ್ರ ಮೋದಿ ಈ ಪತ್ರದಲ್ಲಿ ತಿಳಿಸಿದ್ದಾರೆ. ಸರ್ವರ ಸಮಭಾಳ್ವೆ ಎಂಬ ಭಾರತದ ತತ್ವದ ಪ್ರದರ್ಶನವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ಧಾರೆ.

ಇದನ್ನೂ ಓದಿ: ಇಂಡಿಯಾ ಪದವನ್ನು ಭಾರತ್ ಎಂದು ಬದಲಿಸಲು ಕೋರಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ; ಜೂನ್ 2ರಂದು ವಿಚಾರಣೆಸುಪ್ರೀಂ ಕೋರ್ಟ್ ತೀರ್ಪಿನಿಂದ ರಾಮ ಮಂದಿರ ವಿವಾದ ಹಲವು ವರ್ಷಗಳ ಬಳಿಕ ಇತ್ಯರ್ಥಗೊಂಡಿದ್ದು ಗಮನಾರ್ಹ ಸಂಗತಿ ಎಂದು ಮೋದಿ ತಿಳಿಸಿದ್ದಾರೆ. ಇನ್ನು ತಮ್ಮ ಸರ್ಕಾರದ ಇತರ ಸಾಧನೆಗಳನ್ನೂ ಅವರು ಪ್ರಸ್ತಾಪಿಸಿದ್ದಾರೆ. ಅದರಲ್ಲಿ ಕೆಲವು ಕೆಳಕಂಡಂತಿವೆ:

* ಭೂಸೇನೆ, ವಾಯುಪಡೆ ಮತ್ತು ನೌಕಾಪಡೆ ಈ ಮೂರು ಸೇನೆ ಮಧ್ಯೆ ಉತ್ತಮ ಸಂವಹನ ಏರ್ಪಡುವ ಉದ್ದೇಶದಿಂದ ರಕ್ಷಣಾ ಮುಖ್ಯಸ್ಥರ ಹುದ್ದೆ ರಚನೆ ಮಾಡಿದ್ದು;
* ಗಗನಯಾನ ಯೋಜನೆ;
* ಪಿಎಂ ಕಿಸಾನ್ ಸಮ್ಮಾನ್ ನಿಧಿ;
* ಜಲಜೀವನ್ ಯೋಜನೆ;
* 60 ವರ್ಷ ಮೇಲ್ಪಟ್ಟ ಹಿರಿಯ ರೈತರು, ಕೃಷಿ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು ಮೊದಲಾದವರಿಗೆ ತಿಂಗಳಿಗೆ 3,000 ರೂ ಪಿಂಚಣಿ;
* ಮೀನುಗಾರರಿಗೆ ಸುಲಭವಾಗಿ ಬ್ಯಾಂಕ್ ಸಾಲ ಲಭ್ಯವಾಗುವಂತೆ ಪ್ರತ್ಯೇಕ ವಿಭಾಗ ರಚಿಸಿದ್ದು.

First published: May 30, 2020, 7:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading