Modi in Italy: ರೋಮ್​ನಲ್ಲೂ ‘ಹೌಡಿ ಮೋದಿ’ ಹವಾ : ಭಾಯ್ ಕೇಮ್ ಛೋ ಎಂದು ಕೇಳಿದ ಭಾರತೀಯರು!​

Modi in Italy: ನಿನ್ನೆ ಮೋದಿ ಪಿಯಾಜಾ ಗಾಂಧಿಯಲ್ಲಿರುವ ಮಹಾತ್ಮಾ ಗಾಂಧಿಯವರ ಪುತ್ಥಳಿಗೆ ಗೌರವ ಸಲ್ಲಿಸಿದರು. ಇದೇ ವೇಳೆ ಅಲ್ಲಿ ನೆರೆದಿದ್ದ ಭಾರತೀಯರು ಸಂಸ್ಕೃತ ಶ್ಲೋಕಗಳನ್ನು ಪಠಿಸಿ ಹಾಗೂ ಗುಜರಾತಿ ಭಾಷೆಯಲ್ಲಿ ‘ಹೌಡಿ ಮೋದಿ’(Howdy Modi) ಎಂದು ಮೋದಿಯವರನ್ನು ಮಾತನಾಡಿಸಿದ್ದಾರೆ.

ಇಟಲಿಯಲ್ಲಿ ಪ್ರಧಾನಿ ಮೋದಿ

ಇಟಲಿಯಲ್ಲಿ ಪ್ರಧಾನಿ ಮೋದಿ

 • Share this:
   ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಜಿ-20 ಶೃಂಗಸಭೆ(G-20 Summit)ಯಲ್ಲಿ ಭಾಗಿಯಾಗಲು ಇಟಲಿ(Italy)ಗೆ ತೆರಳಿದ್ದಾರೆ. ಇಂದು ಮತ್ತು ನಾಳೆ ಈ ಶೃಂಗಸಭೆ ನಡೆಯಲಿದೆ. ಇದಕ್ಕೂ ಮುನ್ನನಿನ್ನೆ ಮೋದಿ ಪಿಯಾಜಾ ಗಾಂಧಿಯಲ್ಲಿರುವ ಮಹಾತ್ಮಾ ಗಾಂಧಿ(Mahatma Gandhi)ಯವರ ಪುತ್ಥಳಿಗೆ ಗೌರವ ಸಲ್ಲಿಸಿದರು. ಇದೇ ವೇಳೆ ಅಲ್ಲಿ ನೆರೆದಿದ್ದ ಭಾರತೀಯರು(Indians) ಸಂಸ್ಕೃತ ಶ್ಲೋಕಗಳನ್ನು ಪಠಿಸಿ ಹಾಗೂ ಗುಜರಾತಿ ಭಾಷೆಯಲ್ಲಿ ‘ಹೌಡಿ ಮೋದಿ’(Howdy Modi) ಎಂದು ಮೋದಿಯವರನ್ನು ಮಾತನಾಡಿಸಿದ್ದಾರೆ. ಈ ಹಿಂದೆ ಅಮೆರಿಕ(America)ದಲ್ಲಿ ಪ್ರಧಾನಿ ಮೋದಿ ಹೌಡಿ ಮೋದಿ ಹೆಸರಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಂದಿನಿಂದ `ಹೌಡಿ ಮೋದಿ’ ಸಖತ್​ ವೈರಲ್ ಆಗಿತ್ತು. ಇದೀಗ ಮತ್ತೆ ರೋಮ್​(Rome)ನಲ್ಲೂ ಹೌಡಿ ಮೋದಿ ಹವಾ ಜೋರಾಗಿದೆ.  ರೋಮ್‌ನಲ್ಲಿರುವ ಮಹಾತ್ಮಾ ಗಾಂಧಿಯರ ಪುತ್ಥಳಿಗೆ ಗೌರವ ಸಲ್ಲಿಸುವ ಮಹಾಭಾಗ್ಯ ನನಗೆ ದೊರಕಿದ್ದು ಅವರ ಆದರ್ಶಗಳು ಜಗತ್ತಿನಲ್ಲಿರುವ ಲಕ್ಷಾಂತರ ಜನರಿಗೆ ಧೈರ್ಯ ಹಾಗೂ ಸ್ಫೂರ್ತಿ ನೀಡುತ್ತವೆ ಎಂದು ಮೋದಿಯವರು ಈ ಕುರಿತು ಟ್ವೀಟ್ ಮಾಡಿದ್ದಾರೆ.

  ಓಂ ನಮಃ ಶಿವಾಯ ಮಂತ್ರ ಪಠಿಸಿದ ಮೋದಿ

  ಪಿಯಾಜಾ ಗಾಂಧಿಯಲ್ಲಿ ಭಾರತದ ತ್ರಿವರ್ಣ ಧ್ವಜಗಳನ್ನು ಹಿಡಿದುಕೊಂಡಿರುವ ಜನರೊಂದಿಗೆ ಮೋದಿಯವರು ಸಂವಹನ ನಡೆಸುತ್ತಿದ್ದಾಗ ಮೋದಿ ಮೋದಿ ಎಂಬ ಘೋಷಣೆಗಳು ಗುಂಪಿನಿಂದ ಕೇಳಿಬರುತ್ತಿದ್ದವು. ಒಂದು ಗುಂಪು ಸಂಸ್ಕೃತ ಶ್ಲೋಕಗಳನ್ನು ಪಠಿಸುತ್ತಿದ್ದರೆ, ಪ್ರಧಾನಿಯವರು ಕೂಡ ಕೈಮುಗಿದು ಓಂ ನಮಃ ಶಿವಾಯ ಮಂತ್ರವನ್ನು ಪುನರುಚ್ಛರಿಸಿದರು. ನೆರೆದಿದ್ದ ಗುಂಪು ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗಿದರು. ನರೇಂದ್ರ ಭಾಯಿ ಕೇಮ್ ಛೋ (ನರೇಂದ್ರ ಅಣ್ಣಾ ಹೇಗಿದ್ದೀರಿ) ಎಂದು ಕೇಳಿದರು. ಇದಕ್ಕೆ, ಮೋದಿಯವರು ನಗುತ್ತಾ ಮಜಾ ಮಾ ಛೋ (ನಾನು ಚೆನ್ನಾಗಿದ್ದೇನೆ) ಎಂದು ಗುಜರಾತಿಯಲ್ಲಿ ನಗುತ್ತಾ ಪ್ರತ್ಯುತ್ತರಿಸಿದರು.


  ಇದನ್ನು ಓದಿ : ಏಕ ರೂಪ ಕಾಯ್ದೆ ಜಾರಿಗೊಳಿಸಲು 60 ಅಂಶಗಳಿರುವ ಕ್ರಿಯಾ ಯೋಜನೆ ಸಿದ್ಧಪಡಿಸಿದ ಕೇಂದ್ರ ಸರ್ಕಾರ!

  ಇಂದು, ನಾಳೆ ಜಿ-20 ಶೃಂಗಸಭೆ

  ಸುಸ್ಥಿರ ಅಭಿವೃದ್ಧಿ ಹಾಗೂ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಎರಡು ದಿನಗಳ G-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಿದ್ದು, ಶೃಂಗ ಸಭೆಯು ಇಂದು ಹಾಗೂ ನಾಳೆ (ಅಕ್ಟೋಬರ್ 30 ಹಾಗೂ 31) ನಡೆಯಲಿದೆ. ಈ ಸಂದರ್ಭದಲ್ಲಿ ಮೋದಿಯವರು ಯುರೋಪಿಯನ್ ಕೌನ್ಸಿಲ್‌ನ ಅಧ್ಯಕ್ಷರಾದ ಚಾರ್ಲ್ಸ್ ಮೈಕೆಲ್ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಅವರೊಂದಿಗೆ ಜಂಟಿ ಸಭೆ ನಡೆಸಲಿದ್ದಾರೆ. G-20 ಶೃಂಗಸಭೆಯ ನಂತರ ಮೋದಿ ಗ್ಲಾಸ್ಗೋಗೆ ತೆರಳಲಿದ್ದು ಹವಾಮಾನ ಬದಲಾವಣೆಯ ಕುರಿತು 26ನೇ ಕಾನ್ಫರೆನ್ಸ್ ಆಫ್ ಪಾರ್ಟೀಸ್ (COP-26)ನಲ್ಲಿ ಭಾಗವಹಿಸಲಿದ್ದಾರೆ.

  ಪ್ರಧಾನಿ ಮೋದಿಯವರ ಇಂದು ಮತ್ತು ನಾಳಿನ ಕಾರ್ಯಕ್ರಮದ ಕಂಪ್ಲೀಟ್​ ಡಿಟೇಲ್ಸ್​ ಇಲ್ಲಿದೆ.

  ಶನಿವಾರ (ಭಾರತದ ಕಾಲಮಾನ)

  - ಮಧ್ಯಾಹ್ನ 12 : ರೋಮನ್​ ಕ್ಯಾಥೋಲಿಕ್​ ಚರ್ಚ್​ನ ಮುಖ್ಯಸ್ಥರೊಂದಿಗೆ ದೂರವಾಣಿ ಕರೆ ಜೊತೆ ಮಾತುಕತೆ
  - ಮಧ್ಯಾಹ್ನ 1.30 : ಜಿ20 ಶೃಂಗಸಭೆ ಉದ್ಘಾಟನಾ ಸಮಾರಂಭದಲ್ಲಿ ಭಾಗಿ
  - ಸಂಜೆ 5 : ಫ್ರಾನ್ಸ್​ ಅಧ್ಯಕ್ಷ ಇಮ್ಯನುಯೆಲ್​ ಮ್ಯಾಕ್ರನ್​ ಜೊತೆ ದ್ವೀಪಕ್ಷಿಯ ಮಾತುಕತೆ
  - ಸಂಜೆ 6 : ಇಂಡೋನೇಷಿಯಾ ಅಧ್ಯಕ್ಷ ಜೋಕೊ ವಿಡೋಡೋ ಜೊತೆ ಸಭೆ, ಚರ್ಚೆ
  - ಸಂಜೆ 6.30 : ಸಿಂಗಾಪುರ ಪ್ರಧಾನಿ ಲೀ ಸಿಯೆನ್ ಲೂಂಗ್ ಭೇಟಿ, ಮಾತುಕತೆ
  - ರಾತ್ರಿ 10.30 : ಜಿ20 ಶೃಂಗಸಭೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿ
  - ರಾತ್ರಿ 12 : ಜಿ-20 ಶೃಂಗಸಭೆಯ ನಾಯಕರೊಂದಿಗೆ ಔತಣಕೂಟ

  ಇದನ್ನು ಓದಿ : ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಮೋದಿ ರೋಮ್ ಭೇಟಿ, ಎರಡು ಮಹತ್ವದ ಶೃಂಗಸಭೆಯಲ್ಲಿ ಭಾಗಿ

  ಭಾನುವಾರ (ಭಾರತದ ಕಾಲಮಾನ)

  - ಮಧ್ಯಾಹ್ನ 12.30 : ಇಟಲಿಯ ಪ್ರಸಿದ್ಧ ತಾಣವಾದ ಟ್ರಿವಿ ಫೌಂಟೆನ್​ಗೆ ಭೇಟಿ
  - ಮಧ್ಯಾಹ್ನ 2.30: 2ನೇ ದಿನದ ಜಿ 20 ಶೃಂಗಸಭೆಯಲ್ಲಿ ಭಾಗಿ
  - ಮಧ್ಯಾಹ್ನ 4.45 : ಸ್ಫೇನ್​ ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್​ ಜೊತೆ ಮಾತುಕತೆ
  - ಸಂಜೆ 7.30 : ಜರ್ಮನಿ ಅಧ್ಯಕ್ಷೆ ಏಂಜೆಲಾ ಮರ್ಕೆಲ್​ ಅವರ ಭೇಟಿ, ಮಾತುಕತೆ
  - ರಾತ್ರಿ 10.30 : ಇಟಲಿಯಿಂದ ಯುಕೆ ದೇಶದ ಗ್ಲಾಸ್ಗೋ ಕಡೆ ಪ್ರಯಾಣ
  First published: