news18 Updated:January 29, 2020, 4:13 PM IST
ರತನ್ ಟಾಟಾ ಕಾಲಿಗೆ ನಮಸ್ಕರಿಸುತ್ತಿರುವ ನಾರಾಯಣ ಮೂರ್ತಿ
- News18
- Last Updated:
January 29, 2020, 4:13 PM IST
ಮುಂಬೈ(ಜ. 29): ಟ್ವಿಟ್ಟರ್ನಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅವರ ಫೋಟೋವೊಂದು ಭಾರೀ ಟ್ರೆಂಡಿಂಗ್ ಸೃಷ್ಟಿಸುತ್ತಿದೆ. ಕಾರ್ಯಕ್ರಮವೊಂದರ ವೇದಿಕೆಯ ಮೇಲೆ ನಾರಾಯಣಮೂರ್ತಿ ಅವರು ರತನ್ ಟಾಟಾ ಕಾಲಿಗೆರಗಿದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಶೇರ್ ಆಗುತ್ತಿದೆ. ನಾರಾಯಣಮೂರ್ತಿ ಅವರ ಸಂಸ್ಕಾರ ಮತ್ತು ಸರಳತೆಯನ್ನು ನೆಟ್ಟಿಗರು ಪ್ರಶಂಸಿದ್ದಾರೆ. ಸಾಫ್ಟ್ವೇರ್ ಸರ್ವಿಸ್ ಕ್ಷೇತ್ರದಲ್ಲಿ ಇನ್ಫೋಸಿಸ್ ಮತ್ತು ಟಾಟಾ ಸರ್ವಿಸಸ್ ಪ್ರತಿಸ್ಪರ್ಧಿಗಳೆಸಿದ್ದಾರೆ. ಹೀಗಿದ್ದರೂ ಇನ್ಫೋಸಿಸ್ ಸಂಸ್ಥಾಪಕರು ತಮ್ಮ ಪ್ರತಿಸ್ಪರ್ಧಿಯ ಕಾಲಿಗೆ ನಮಸ್ಕಾರ ಮಾಡಿಕೊಂಡಿದ್ದು ಅಚ್ಚರಿ ಮೂಡಿಸಿದೆ.
ಮುಂಬೈನ TiECon (ಇಂಡಸ್ ಎಂಟರ್ಪ್ರೈಸಸ್) ಕಾರ್ಯಕ್ರಮದ ವೇದಿಕೆ ಈ ಅಪರೂಪದ ಘಟನೆಗೆ ಸಾಕ್ಷಿಯಾಯಿತು. ಈ ಕಾರ್ಯಕ್ರಮದಲ್ಲಿ 82 ರತನ್ ಟಾಟಾ ಅವರಿಗೆ ಜೀವಿತಾವಧಿ ಸಾಧನೆ ಪ್ರಶಸ್ತಿ ನೀಡಲಾಗಿತ್ತು. 73 ವರ್ಷದ ನಾರಾಯಣಮೂರ್ತಿ ಅವರೇ ಈ ಪ್ರಶಸ್ತಿಯನ್ನು ಟಾಟಾಗೆ ನೀಡಿದರು. ಪ್ರಶಸ್ತಿ ಫಲಕ ನೀಡುವ ವೇಳೆ ಅವರು ಟಾಟಾ ಕಾಲಿಗೆ ನಮಸ್ಕರಿಸಿ ತಮ್ಮ ದೊಡ್ಡತನವನ್ನು ಮೆರೆದಿದ್ದಾರೆ.
ಟಾಟಾ ಸನ್ಸ್ ಸಂಸ್ಥೆ ಛೇರ್ಮನ್ ಆಗಿರುವ ರತನ್ ಟಾಟಾ ಅವರೇ ಈ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ನಾರಾಯಣಮೂರ್ತಿ ಅವರನ್ನು ತಮ್ಮ ದೊಡ್ಡ ಸ್ನೇಹಿತ ಎಂದು ಬಣ್ಣಿಸಿದ್ಧಾರೆ. “ನನ್ನ ಒಳ್ಳೆಯ ಸ್ನೇಹಿತ ನಾರಾಯಣ ಮೂರ್ತಿ ಅವರ ಕೈಯಿಂದ TIEcon ಪ್ರಶಸ್ತಿ ಪಡೆಯುವ ಗೌರವ ನನಗೆ ಸಿಕ್ಕಿತು” ಎಂದು ಅವರು ಬರೆದಿದ್ದಾರೆ. ಈ ಕಾರ್ಯಕ್ರಮದ ಆಯೋಜಕರೂ ಕೂಡ ಈ ಫೋಟೋಗಳನ್ನು ಹಾಕಿ ಇಬ್ಬರು ಉದ್ಯಮ ದಿಗ್ಗಜರ ಸರಳತೆಗೆ ಮೆಚ್ಚುಗೆ ಸೂಚಿಸಿ ಟ್ವೀಟ್ ಮಾಡಿದ್ದಾರೆ.
ಇದಾದ ಬಳಿಕ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ. ಬಹುತೇಕ ನೆಟ್ಟಿಗರು ಇಬ್ಬರನ್ನೂ, ಅದರಲ್ಲೂ ನಾರಾಯಣ ಮೂರ್ತಿ ಅವರ ಸರಳತೆ, ಸಜ್ಜನಿಕೆಯನ್ನು ಕೊಂಡಾಡಿದ್ಧಾರೆ.
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ.
First published:
January 29, 2020, 4:13 PM IST