news18-kannada Updated:February 13, 2020, 6:17 PM IST
ನಾರಾಯಣ ಮೂರ್ತಿ, ಸುಧಾ ಮೂರ್ತಿ, ಪುತ್ರಿ ಹಾಗೂ ಅಳಿಯ ರಿಷಿ ಸುನಕ್.
ನವದೆಹಲಿ: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ (39) ಅವರನ್ನು ಇಂಗ್ಲೆಂಡ್ ಹಣಕಾಸು ಇಲಾಖೆ ಚಾನ್ಸುಲರ್ ಆಗಿ ನೇಮಿಸಲಾಗಿದೆ. ಅಚ್ಚರಿ ಬೆಳವಣಿಗೆಯಲ್ಲಿ ಸಜ್ಜಿದ್ ಜಾವೇದ್ ರಾಜಿನಾಮೆ ನೀಡಿದ ಬಳಿಕ ಆ ಸ್ಥಾನಕ್ಕೆ ರಿಷಿ ಅವರನ್ನು ನೇಮಿಸಲಾಗಿದೆ. ಚಾನ್ಸುಲರ್ ಸ್ಥಾನ ಹಣಕಾಸು ಸಚಿವರ ಸ್ಥಾನಕ್ಕೆ ಸಮನಾಗಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಪಡೆದ ಬಳಿಕ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಮೊದಲ ಬಾರಿಗೆ ಸಚಿವ ಸಂಪುಟ ಪುನಾರಚನೆ ಮಾಡಿದ್ದರು. ಆದಾದ ಬಳಿಕ ಹಣಕಾಸು ಸಚಿವ ಸ್ಥಾನಕ್ಕೆ ಸಜ್ಜಿದ್ ಜಾವೇದ್ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಅವರ ವಕ್ತಾರ ಖಚಿತಪಡಿಸಿದ್ದಾರೆ. ತೆರವಾದ ಸ್ಥಾನಕ್ಕೆ ರಿಷಿ ಸುನಕ್ ಅವರನ್ನು ಬ್ರಿಟನ್ ಸರ್ಕಾರ ನೇಮಕ ಮಾಡಿದೆ. 2015ರ ಮೊದಲ ಬಾರಿಗೆ ರಿಷಿ ಅವರು ಸಂಸತ್ಗೆ ಆಯ್ಕೆಯಾಗಿದ್ದರು. ಇದಕ್ಕೂ ಮೊದಲು ರಿಷಿ ಅವರು ಖಜಾನೆಯ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಇದನ್ನು ಓದಿ: ಇನ್ಫೋಸಿಸ್ ಸಂಸ್ಥಾಪಕರ ಸಂಸ್ಕಾರ; ವೇದಿಕೆ ಮೇಲೆ ರತನ್ ಟಾಟಾ ಕಾಲಿಗೆ ನಾರಾಯಣಮೂರ್ತಿ ನಮಸ್ಕಾರ
First published:
February 13, 2020, 5:55 PM IST