Nancy Pelosi: ಚೀನಾದ ಬೆದರಿಕೆಗಳ ನಡುವೆಯೂ ತೈವಾನ್ಗೆ ಸದಾ ಅಮೆರಿಕದ ಬೆಂಬಲವಿದೆ; ನ್ಯಾನ್ಸಿ ಪೆಲೋಸಿ

ನ್ಯಾನ್ಸಿ ಪೆಲೋಸಿ ಕಳೆದ 25 ವರ್ಷಗಳಲ್ಲಿ ತೈವಾನ್ ಗೆ ಭೇಟಿ ನೀಡಿದ ಮೊದಲ ಯುಎಸ್ ಅಧಿಕಾರಿಯಾಗಿದ್ದಾರೆ. ಅಲ್ಲದೆ ಇವರು ಅಲ್ಲಿ ತೈವಾನ್ಗೆ ಅಮೇರಿಕಾ ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡುತ್ತದೆ ಎಂದರು. ಆದರೆ ಇವರ ಈ ಪ್ರವಾಸವು ರಾಜತಾಂತ್ರಿಕತೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ತೈವಾನ್ಗೆ ಭೇಟಿ ನೀಡಿದ ನ್ಯಾನ್ಸಿ ಪೆಲೋಸಿ

ತೈವಾನ್ಗೆ ಭೇಟಿ ನೀಡಿದ ನ್ಯಾನ್ಸಿ ಪೆಲೋಸಿ

  • Share this:
ಯುಎಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಆಗಸ್ಟ್ 2 ರ ಮಂಗಳವಾರದಂದು ಚೀನಾದ (China) ಬೆದರಿಕೆಗಳ ನಡುವೆಯೂ ತೈವಾನ್ ಗೆ (Taiwan) ಭೇಟಿ ನೀಡಿದ್ದಾರೆ. ತೈವಾನ್ ಮೇಲೆ ಅಮೇರಿಕಾದ (America) ಸಹಕಾರ ಮತ್ತು ಬೆಂಬಲವನ್ನು ಪ್ರತಿನಿಧಿಸುವ ಸಲುವಾಗಿ ನ್ಯಾನ್ಸಿ ಪೆಲೋಸಿ (Nancy Pelosi) ತೈವಾನ್ ಗೆ ಬೇಟಿ ನೀಡಿದರು. ಇದು ಚೀನಾದ ಅಕ್ರೋಶವನ್ನು ಇನ್ನಷ್ಟು ಹೆಚ್ಚಿಸಿದೆ. ಇದರಿಂದಾಗಿ ಚೀನಾ, ತೈವಾನ್ ಮತ್ತು ಅಮೇರಿಕಾಕ್ಕೆ ಬೆದರಿಕೆಯನ್ನು ಹಾಕಿದೆ. ನ್ಯಾನ್ಸಿ ಪೆಲೋಸಿ ತೈವಾನ್ ದ್ವೀಪಕ್ಕೆ (Island) ಭೇಟಿ ನೀಡುತ್ತಿದ್ದಂತೆ ಚೀನಾದ ಬೆದರಿಕೆ ನಡುವೆ ತೈವಾನ್ ಹೈ ಅಲರ್ಟ್ ಆಗಿದೆ. ಅಲ್ಲದೆ ಚೀನಾದ ಬೆದರಿಕೆಗಳನ್ನು ಸವಲಾಗಿ ಸ್ವೀಕರಿಸುವ ತೈವಾನ್ ನಾವು ಇದರಿಂದ ಹಿಂತಿರುಗುವುದಿಲ್ಲ (Not Back Down) ಎಂದಿದೆ.

ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಇಂದು, "ತಮ್ಮ ನಿಯೋಗದ ತೈವಾನ್ ಭೇಟಿಯು ದ್ವೀಪಕ್ಕೆ ಬೆಂಬಲದ ಪ್ರದರ್ಶನವಾಗಿದೆ" ಎಂದು ಹೇಳಿದರು, ನ್ಯಾನ್ಸಿ ಪೆಲೋಸಿಯ ಈ ಪ್ರವಾಸವು ಚೀನಾದಿಂದ ಉಗ್ರ ಪ್ರತಿಕ್ರಿಯೆಯನ್ನು ಹುಟ್ಟುಹಾಕಿತು. ತೈವಾನ್ ಅಧ್ಯಕ್ಷ ತ್ಸೈ ಇಂಗ್-ವೆನ್ ಇದರ ಬಗ್ಗೆ ದ್ವೀಪವು "ನ್ವಾಟ್ ಬ್ಯಾಕ್ ಡೌನ್" ಎಂದು ಹೇಳಿದರು.

ಇದನ್ನೂ ಓದಿ: Taiwan Visit: ಚೀನಾದ ಎಚ್ಚರಿಕೆಗಳನ್ನು ಲೆಕ್ಕಿಸದೆ ತೈವಾನ್ ತಲುಪಿದ US ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ

25 ವರ್ಷಗಳಲ್ಲಿ  ತೈವಾನಿಗೆ ಭೇಟಿ ನೀಡಿದ ಮೊದಲ ಯುಎಸ್ ರಾಜಕಾರಿಣಿ
ಅಮೇರಿಕಾದ ಆಡಳಿತ ವ್ಯವಸ್ಥೆಯಲ್ಲಿ ಉನ್ನತ ಸ್ಥಾನ ಹೊಂದಿರುವ ಅಂದರೆ ಅಧ್ಯಕ್ಷ ಸ್ಥಾನದ ನಂತರದಲ್ಲಿರುವ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕಳೆದ 25 ವರ್ಷಗಳಲ್ಲಿ ತೈವಾನ್ ಗೆ ಭೇಟಿ ನೀಡಿದ ಮೊದಲ ಯುಎಸ್ ಅಧಿಕಾರಿಯಾಗಿದ್ದಾರೆ. ಆದರೆ ಇವರ ಈ ಪ್ರವಾಸವು ರಾಜತಾಂತ್ರಿಕತೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ತೈವಾನ್ ಜೊತೆಗಿಗ ಸ್ನೇಹ ಭದ್ರತೆಗಾಗಿ ಈ ನಿಯೋಗ
ಇಂದು, ನಮ್ಮ ನಿಯೋಗವು ತೈವಾನ್ ಗೆ ಭೇಟಿ ನೀಡಿದೆ "ನಾವು ತೈವಾನ್ ಜೊತೆ ಹೊಂದಿರುವ ಸ್ನೇಹದ ಬಗ್ಗೆ ಹೆಮ್ಮೆಯಿದೆ ಮತ್ತು ನಾವು ತೈವಾನ್ ನ ಬಗ್ಗೆ ಹೊಂದಿರುವ ಸಂಬಂಧಕ್ಕೆ ಬದ್ದರಾಗಿರುತ್ತೇವೆ" ಎಂದು ನ್ಯಾನ್ಸಿ ಪೆಲೋಸಿ ತೈವಾನ ಅಧ್ಯಕ್ಷ ತ್ಸೈ ಇಂಗ್ ವೆನ್ ಅವರೊಂದಿಗಿನ ಸಮಾರಂಭದಲ್ಲಿ ಹೇಳಿದರು.

ತೈವಾನ್ ಅನ್ನು ಸುತ್ತುವರೆದ ಚೀನಾ ಲೈವ್ ಫೈರ್
ಚೀನಾ ಲೈವ್ ಫೈರ್ ಡ್ರಿಲ್ ಗಳು ತೈವಾನ್ ಅನ್ನು ಸುತ್ತುವರೆದಿದೆ ಎಂದು ಘೋಷಿಸಿತು, ಈ ಕ್ರಮದಲ್ಲಿ ತೈಪೆಯ ರಕ್ಚಣಾ ಸಚಿವಾಲಯವು ದ್ವೀಪದ ಪ್ರಮುಖ ಬಂದರುಗಳು ಮತ್ತು ನಗರ ಪ್ರದೇಶಗಳಿಗೆ ಬೆದರಿಕೆ ಹಾಕಿದೆ ಎಂದು ಹೇಳಿದೆ. ಪೀಪಲ್ಸ್ ಲಿಬರೇಶನ್ ಆರ್ಮಿ ಹಂಚಿಕೊಂಡಿರುವ ನಿರ್ದೇಶಾಂಕಗಳ ಪ್ರಕಾರ, ಕೆಲವು ಹಂತಗಳಲ್ಲಿ, ಚೀನೀ ಕಾರ್ಯಾಚರಣೆಗಳ ವಲಯವು ತೈವಾನ್‌ನ ದಡದ 20 ಕಿಮೀ ವ್ಯಾಪ್ತಿಯಲ್ಲಿ ಬರುತ್ತದೆ.

ಸಾರ್ವಜನಿಕ ಶಾಂತಿ ಕಾಪಾಡುತ್ತಿರುವ ತೈವಾನ್ ಅಧಿಕಾರಿಗಳು
ತೈವಾನ್‌ನ ಅಧಿಕಾರಿಗಳು ಸಾರ್ವಜನಿಕ ಶಾಂತಿಯನ್ನು ಕಾಪಾಡಲು ದೃಢನಿಶ್ಚಯ ಮಾಡಿಕೊಂಡಿದ್ದಾರೆ. "ರಕ್ಷಣಾ ಸಚಿವಾಲಯವು ಇದರ ಬಗ್ಗೆ ನಿಕಟವಾಗಿ ಮೇಲ್ವಿಚಾರಣೆ ಮಾಡಿದೆ ಹಾಗೂ ಸಿದ್ಧತೆಗಳನ್ನು ಬಲಪಡಿಸಿದೆ ಮತ್ತು ಸರಿಯಾದ ಸಮಯದಲ್ಲಿ ಸೂಕ್ತವಾಗಿ ಪ್ರತಿಕ್ರಿಯಿಸುತ್ತದೆ" ಎಂದು ತೈವಾನ್ ರಕ್ಷಣಾ ಇಲಾಖೆ ತಿಳಿಸಿದೆ.

ಹಣ್ಣು ಮತ್ತು ಮೀನುಗಳ ಆಮದು ನಿರ್ಬಂಧಿಸಿದ ಚೀನಾ
ಪೆಲೊಸಿಯ ಭೇಟಿಗೆ ಆರ್ಥಿಕ ಪ್ರತಿಕಾರವಾಗಿ ಚೀನಾ ತೈವಾನ್ ನಿಂದ ಹಣ್ಣು ಮತ್ತು ಮೀನುಗಳ ಆಮದನ್ನು ತಡೆಹಿಡಿದೆ. ಚೀನಾ ತೈವಾನ್ ಅನ್ನು ಮಟ್ಟ ಹಾಕಲು ಹೊಸ ಹೊಸ ತಂತ್ರಗಳನ್ನು ಬಳಸುತ್ತಿದೆ.

ಮಿಲಿಟರಿ ಅಭ್ಯಾಸಗಳ ಬಗ್ಗೆ ಚೀನಾಕ್ಕೆ ಕಳವಳ ವ್ಯಕ್ತಪಡಿಸಿದ ಜಪಾನ್
ತೈವಾನ್ ಸುತ್ತಮುತ್ತಲಿನ ನೀರಿನಲ್ಲಿ ತನ್ನ ಮಿಲಿಟರಿ ಅಭ್ಯಾಸಗಳ ಬಗ್ಗೆ ಜಪಾನ್ ಚೀನಾಕ್ಕೆ ಕಳವಳ ವ್ಯಕ್ತಪಡಿಸಿದೆ. "ಚೀನೀ ಕಡೆಯಿಂದ ಘೋಷಿಸಲ್ಪಟ್ಟ ಕಡಲ ಪ್ರದೇಶಗಳು ಮಿಲಿಟರಿ ವ್ಯಾಯಾಮಗಳಿಗೆ ಬಳಸಬೇಕೆಂದು ಜಪಾನ್‌ನ ವಿಶೇಷ ಆರ್ಥಿಕ ವಲಯದೊಂದಿಗೆ ಅತಿಕ್ರಮಿಸುತ್ತದೆ. ಈ ಮಿಲಿಟರಿ ಚಟುವಟಿಕೆಯ ಲೈವ್-ಫೈರ್ ತರಬೇತಿ ಸ್ವರೂಪವನ್ನು ಪರಿಗಣಿಸಿ, ಜಪಾನ್ ಚೀನಾದ ಕಡೆಗೆ ಕಳವಳ ವ್ಯಕ್ತಪಡಿಸಿದೆ," ಎಂದು ಕ್ಯಾಬಿನೆಟ್ ಕಾರ್ಯದರ್ಶಿ ಹಿರೋಕಾಜು ಮಾಟ್ಸುನೊ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: China Taiwan Crisis 2022: ಚೀನಾ-ತೈವಾನ್ ಯುದ್ಧವಾದ್ರೆ ವಿಶ್ವದ ಕಾರು, ಮೊಬೈಲ್ ಕಂಪನಿಗಳಿಗೆ ಕಂಟಕ

ತೈವಾನ್ ಅನ್ನು ವಶಪಡಿಸಲು ಸಿದ್ಧ 
ಅಗತ್ಯ ಬಿದ್ದರೆ ಮುದೊಂದು ದಿನ ಬಲವಂತಾಗಿ ಮುಕ್ತ ಪ್ರಜಾಪ್ರಭುತ್ವ ದೇಶವಾದ ತೈವಾನ್ ಅನ್ನು ವಶಪಡಿಸಿಕೊಂಡು ಸ್ವ ಆಡಳಿತ ನಡೆಸುತ್ತೇವೆ ಎಂದು ಚೀನಾ ಪ್ರತಿಜ್ಞೆ ಮಾಡಿದೆ.  ಅದರೆ ಇದೀಗ ತೈವಾನ್ ಗೆ ಅಮೇರಿಕಾದ ಬೆಂಬಲ ಇನ್ನಷ್ಟು ಧೈರ್ಯ ಮತ್ತು ದೃಢತೆಯನ್ನು ನೀಡಿದೆ.
Published by:Nalini Suvarna
First published: