HOME » NEWS » National-international » NAME TO THIS BABY ELEPHANT BORN IN DUDHWA FOREST AND GET SURPRISE GIFT STG LG

ಈ ಮುದ್ದಾದ ಆನೆಮರಿಗೆ ಒಂದು ಚಂದದ ಹೆಸರಿಟ್ಟು ಬಹುಮಾನ ಗೆಲ್ಲಿ..!

ಎರಡು ವರ್ಷಗಳಲ್ಲಿ ಕರ್ನಾಟಕದಿಂದ ಉತ್ತರಪ್ರದೇಶದ ದುಧ್ವಾ ಹುಲಿ ಮೀಸಲು ಪ್ರದೇಶದ ದಕ್ಷಿಣ ಸೋನಾರಿಪುರ ಶ್ರೇಣಿಗೆ 10 ಆನೆಗಳನ್ನು ಸ್ಥಳಾಂತರ ಮಾಡಲಾಗಿದೆ. ಇದೀಗ ಅಲ್ಲಿನ ತೆರೇಸಾ ಎಂಬ ಹೆಣ್ಣು ಆನೆಯೊಂದು ಫೆ.3 ರಂದು ಮರಿ ಆನೆಗೆ ಜನ್ಮ ನೀಡಿದೆ. ಇದರಿಂದ ಸಂತಸಗೊಂಡ ಅರಣ್ಯ ಅಧಿಕಾರಿಗಳು ಮತ್ತು ಅರಣ್ಯ ಸಿಬ್ಬಂದಿಗಳು ಸೇರಿ ಮರಿ ಆನೆಗೆ ಮುದ್ದಾಗಿರುವ ಹೆಸರು ಇಟ್ಟರೆ ಉಡುಗೊರೆ ನೀಡುವುದಾಗಿ ಆಫರ್ ನೀಡಿದ್ದಾರೆ.

news18-kannada
Updated:February 10, 2021, 12:28 PM IST
ಈ ಮುದ್ದಾದ ಆನೆಮರಿಗೆ ಒಂದು ಚಂದದ ಹೆಸರಿಟ್ಟು ಬಹುಮಾನ ಗೆಲ್ಲಿ..!
ಸಾಂದರ್ಭಿಕ ಚಿತ್ರ
  • Share this:
ಯಾರಿಗೇ ಆಗಲಿ ಒಂದು ಹೆಸರು ಇದ್ದರೆ ಚೆನ್ನಾಗಿರುತ್ತದೆ. ಆ ಹೆಸರು ಕೇಳಿದಾಗ ಮತ್ತು ಕರೆದಾಗ ಏನೋ ಒಂದು ಸಂತಸ ಆಗುತ್ತದೆ. ಪ್ರಾಣಿ, ಪಕ್ಷಿಗಳಿಗೂ ಪ್ರಾಣಿಪ್ರಿಯರು ಮುದ್ದಾದ ಹೆಸರಿಟ್ಟು, ತಾವಿಟ್ಟ ಹೆಸರನ್ನು ಕರೆಯುವ ಮೂಲಕ ಸಂಭ್ರಮಿಸುತ್ತಾರೆ. ಇದೇ ರೀತಿ, ಉತ್ತರ ಪ್ರದೇಶದ ದುಧ್ವಾ ಅರಣ್ಯಾಧಿಕಾರಿಗಳು ಆನೆ ಮರಿಗೆ ಮುದ್ದಾದ ಹೆಸರು ಇಡಲು ಹುಡುಕಾಟ ನಡೆಸುತ್ತಿದ್ದು, ಇದನ್ನು ಸೂಚಿಸಿದವರಿಗೆ ಆಶ್ಚರ್ಯಕರ ಗಿಫ್ಟ್ ನೀಡುತ್ತೇವೆ ಎಂದು ಆಫರ್ ನೀಡಿದ್ದಾರೆ.

ಎರಡು ವರ್ಷಗಳಲ್ಲಿ ಕರ್ನಾಟಕದಿಂದ ಉತ್ತರಪ್ರದೇಶದ ದುಧ್ವಾ ಹುಲಿ ಮೀಸಲು ಪ್ರದೇಶದ ದಕ್ಷಿಣ ಸೋನಾರಿಪುರ ಶ್ರೇಣಿಗೆ 10 ಆನೆಗಳನ್ನು ಸ್ಥಳಾಂತರ ಮಾಡಲಾಗಿದೆ. ಇದೀಗ ಅಲ್ಲಿನ ತೆರೇಸಾ ಎಂಬ ಹೆಣ್ಣು ಆನೆಯೊಂದು ಫೆ.3 ರಂದು ಮರಿ ಆನೆಗೆ ಜನ್ಮ ನೀಡಿದೆ. ಇದರಿಂದ ಸಂತಸಗೊಂಡ ಅರಣ್ಯ ಅಧಿಕಾರಿಗಳು ಮತ್ತು ಅರಣ್ಯ ಸಿಬ್ಬಂದಿಗಳು ಸೇರಿ ಮರಿ ಆನೆಗೆ ಮುದ್ದಾಗಿರುವ ಹೆಸರು ಇಟ್ಟರೆ ಉಡುಗೊರೆ ನೀಡುವುದಾಗಿ ಆಫರ್ ನೀಡಿದ್ದಾರೆ.

Fact Check: ಫೋಟೋಗ್ರಾಫರ್​ಗೆ ಹೊಡೆದ ವರನ ವಿಡಿಯೋ ವೈರಲ್; ಇದರ ಹಿಂದಿನ ಅಸಲಿಯತ್ತೇನು ಗೊತ್ತಾ?

ಹೆಸರು ಸೂಚಿಸಿದವರಿಗೆ ಆಶ್ಚರ್ಯಕರ ಉಡುಗೊರೆ!

ಫೆ.3ರಂದು ಜನಿಸಿದ ತೆರೇಸಾಗೆ ಮರಿ ಆನೆ ಜನಿಸಿದ ಕಾರಣಕ್ಕೆ ದುಧ್ವಾ ಅರಣ್ಯ ಸಿಬ್ಬಂದಿ ಉತ್ಸಾಹಭರಿತರಾಗಿದ್ದು, ಮರಿ ಆನೆಗೆ ಕನ್ನಡ ಬದಲಾಗಿ ಹಿಂದಿ ಮೂಲಕ ಆಜ್ಞೆಗಳಿಗೆ ಸ್ಪಂದಿಸಲು ಕಲಿಸುತ್ತಿದ್ದೇವೆ ಎಂದು ದುಧ್ವಾ ಸಿಬ್ಬಂದಿ ಹೇಳಿದ್ದಾರೆ. ತೆರೇಸಾಳ ಮರಿ ಆನೆಗೆ ಪ್ರವಾಸಿಗರಿಗೆ ಮತ್ತು ವನ್ಯಜೀವಿ ಪ್ರಿಯರು ಯಾರಾದರೂ ಅತ್ಯುತ್ತಮ ಹೆಸರನ್ನು ನೀಡಿದರೆ ಆಶ್ಚರ್ಯ ಉಡುಗೊರೆಯನ್ನು ನೀಡಲಾಗುತ್ತದೆ ಎಂದು ಅಲ್ಲಿನ ಅರಣ್ಯ ಅಧಿಕಾರಿಗಳು ಆಹ್ವಾನ ನೀಡಿದ್ದಾರೆ.

ಡಿಟಿಆರ್‌ನ ಕ್ಷೇತ್ರ ನಿರ್ದೇಶಕ ಸಂಜಯ್ ಪಾಠಕ್ ಅವರು ಈ ಬಗ್ಗೆ ಮಾತನಾಡಿ, ಈ ಆನೆ ಮರಿಗೆ ಯಾರಾದರೂ ಹೆಸರನ್ನು ಸೂಚಿಸಬಹುದು. ಆನೆ ಮರಿ ಮತ್ತು ಅದರ ತಾಯಿಯ ಆರೋಗ್ಯದ ಬಗ್ಗೆ ನಮ್ಮ ಪಶುವೈದ್ಯರು ನಿರಂತರವಾಗಿ ಗಮನ ಹರಿಸುತ್ತಾರೆ. ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ತೆರೇಸಾ 2018ರ ಮೇ ತಿಂಗಳಿನಲ್ಲಿ ಗರ್ಭ ಧರಿಸಿದ್ದಳು. ಆನೆಗಳು 18-22 ತಿಂಗಳ ಕಾಲ ಗರ್ಭವನ್ನು ಧರಿಸುತ್ತವೆ. ಗರ್ಭ ಧರಿಸಿದ್ದ ವೇಳೆ ತೆರೇಸಾಳನ್ನು ಹೆಚ್ಚು ಕಾಳಜಿ ಮಾಡಲಾಗಿತ್ತು ಎಂದೂ ಸಂಜಯ್ ಪಾಠಕ್ ಅವರು ತಿಳಿಸಿದರು.
Published by: Latha CG
First published: February 10, 2021, 12:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories