ತಾಜ್​ಮಹಲ್​ಗೆ ಟ್ರಂಪ್ ಭೇಟಿ; ಆಗ್ರಾ ರಸ್ತೆ ಬದಿಯ ಗೋಡೆಗಳಲ್ಲಿ 'ವೆಲ್​ಕಮ್ ಟ್ರಂಪ್' ಚಿತ್ತಾಕರ್ಷಣೆ!

Kemcho Trump : ಡೊನಾಲ್ಡ್​ ಭಾರತದ ಪ್ರವಾಸದ ಹಿನ್ನೆಲೆಯಲ್ಲಿ ಆಗ್ರಾದ ರಸ್ತೆ ಬದಿ ಇರುವ ಗೋಡೆಗಳಲ್ಲೆಲ್ಲಾ ಅಮೆರಿಕ ಅಧ್ಯಕ್ಷರ ವರ್ಣಚಿತ್ರಗಳನ್ನು ಬಿಡಿಸಿ ಅದರ ಕೆಳಗೆ 'ನಮಸ್ತೆ ಟ್ರಂಪ್’ ‘ವೆಲ್ಕಮ್ ಟ್ರಂಪ್’ ಎಂಬ ಅಡಿಬರಹಗಳನ್ನು ಬರೆಯಲಾಗುತ್ತಿದೆ.

ಡೊನಾಲ್ಡ್​ ಟ್ರಂಪ್ ಸ್ವಾಗತಿಸುವ ಗೋಡೆ ಬರಹ.

ಡೊನಾಲ್ಡ್​ ಟ್ರಂಪ್ ಸ್ವಾಗತಿಸುವ ಗೋಡೆ ಬರಹ.

  • Share this:
ನವ ದೆಹಲಿ: ಫೆಬ್ರವರಿ 24 ರಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಗೆ ಸ್ವಾಗತಿಸುವ ಕೆಲಸಗಳು ಬರದಿಂದ ಸಾಗುತ್ತಿವೆ. ಪ್ರವಾಸದ ವೇಳೆ ಟ್ರಂಪ್ ತಾಜ್ ಮಹಲ್​ಗೆ ಭೇಟಿ ನೀಡಲಿದ್ದು, ಆಗ್ರಾದ ಖೇರಿಯಾ ವಿಮಾನ ನಿಲ್ದಾಣದಿಂದ ತಾಜ್​ಮಹಲ್​ ಹೋಗುವ ರಸ್ತೆಯ ಉದ್ದಕ್ಕೂ ಗೋಡೆಗಳ ಮೇಲೆ ಡೊನಾಲ್ಡ್ ಟ್ರಂಪ್ ಅವರಿಗೆ ವಿಶೇಷ ಸ್ವಾಗತ ಕೋರುವ ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸಲಾಗಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪತ್ನಿ ಮೆಲಾನಿಯಾ ಹಾಗೂ ಉನ್ನತ ಮಟ್ಟದ ನಿಯೋಗದ ಜೊತೆಗೆ ಫೆಬ್ರವರಿ 24 ರಂದು ಗುಜರಾತ್​ನ ಅಹಮದಾಬಾದ್​ಗೆ ಆಗಮಿಸಲಿದೆ. ಅಲ್ಲಿನ ಮೊಟೇರಾ ಕ್ರೀಡಾಂಗಣದಲ್ಲಿ ನಡೆಯಲಿರುವ 'ನಮಸ್ತೆ ಟ್ರಂಪ್' ಎಂಬ ಕಾರ್ಯಕ್ರಮದಲ್ಲಿ ಟ್ರಂಪ್ ಜನರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ಅಹಮದಾಬಾದ್​ನಿಂದ ಆಗ್ರಾಕ್ಕೆ ತೆರಳಲಿದ್ದಾರೆ ಎನ್ನಲಾಗುತ್ತಿದೆ.ಹೀಗಾಗಿ ಆಗ್ರಾದ ರಸ್ತೆ ಬದಿ ಇರುವ ಗೋಡೆಗಳಲ್ಲೆಲ್ಲಾ ಅಮೆರಿಕ ಅಧ್ಯಕ್ಷರ ವರ್ಣಚಿತ್ರಗಳನ್ನು ಬಿಡಿಸಿ ಅದರ ಕೆಳಗೆ 'ನಮಸ್ತೆ ಟ್ರಂಪ್’ ‘ವೆಲ್ಕಮ್ ಟ್ರಂಪ್’ ಎಂಬ ಅಡಿಬರಹಗಳನ್ನು ಬರೆಯಲಾಗುತ್ತಿದೆ.

ಅಮೆರಿಕ ಅಧ್ಯಕ್ಷರು ತಾಜ್​ಮಹಲ್​ಗೆ ಭೇಟಿ ನೀಡಲಿರುವ ಪರಿಣಾಮ ಅವರ ಭದ್ರತೆಯ ದೃಷ್ಟಿಯಿಂದ ಫೆಬ್ರವರಿ 24ರ ಮಧ್ಯಾಹ್ನ 12 ಗಂಟೆಯಿಂದ ವಿಶ್ವವಿಖ್ಯಾತ ತಾಜ್​ಮಹಲ್​ಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಆಗ್ರಾ ವಿಭಾಗದ ಪುರಾತತ್ವ ಸರ್ವೇಕ್ಷಣಾ ವಿಭಾಗದ ಅಧೀಕ್ಷಕ ವಸಂತ್ ಕುಮಾರ್ ಸ್ವರ್ಣಕರ್ ತಿಳಿಸಿದ್ದಾರೆ.

ಇದನ್ನೂ ಓದಿ : ನಿರ್ಭಯಾ ಪ್ರಕರಣ: ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಚುನಾವಣಾ ಆಯೋಗದ ಮೊರೆಹೋದ ಅಪರಾಧಿ
First published: