HOME » NEWS » National-international » NAL RECRUITMENT 2020 JUNIOR SECRETARIAT ASSISTANT POSTS FOR 12TH PASS HG

NAL Recruitment 2020: ಜ್ಯೂ.ಸೆಕ್ರೆಟರಿಯೆಟ್ ಅಸಿಸ್ಟೆಂಟ್ ಮತ್ತು ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪಿಯುಸಿ ಆದವರಿಗೆ ಆದ್ಯತೆ!

ವಿದ್ಯಾರ್ಹತೆ: ಪಿಯುಸಿ ವಿದ್ಯಾರ್ಹತೆಯನ್ನುಪಡೆದ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

news18-kannada
Updated:November 30, 2020, 7:08 PM IST
NAL Recruitment 2020: ಜ್ಯೂ.ಸೆಕ್ರೆಟರಿಯೆಟ್ ಅಸಿಸ್ಟೆಂಟ್ ಮತ್ತು ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪಿಯುಸಿ ಆದವರಿಗೆ ಆದ್ಯತೆ!
jobs
  • Share this:
ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ ಜ್ಯೂನಿಯರ್ ಸೆಕ್ರೆಟರಿಯೆಟ್ ಅಸಿಸ್ಟೆಂಟ್ ಮತ್ತು ಜ್ಯೂನಿಯರ್ ಸ್ಟೆನೋಗ್ರಾಫರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.  ಆಸಕ್ತ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ತಿಳಿಸಿದೆ.

ವಿದ್ಯಾರ್ಹತೆ: ಪಿಯುಸಿ ವಿದ್ಯಾರ್ಹತೆಯನ್ನುಪಡೆದ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ವಯೋಮಿತಿ: 24 ಜ್ಯೂನಿಯರ್ ಸೆಕ್ರೆಟರಿಯೆಟ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ ಗರಿಷ್ಟ 28 ವರ್ಷ ತುಂಬಿರಬೇಕು. ಜ್ಯೂನಿಯರ್ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಗರಿಷ್ಟ 27 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

-ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ವೇತನ: ಜ್ಯೂನಿಯರ್ ಸೆಕ್ರೆಟರಿಯೆಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 30,000ರೂ ಮತ್ತು ಜ್ಯೂನಿಯರ್ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 38,000ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಟೈಪಿಂಗ್ ಪರೀಕ್ಷೆ, ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ನಡೆಸಲಾಗುತ್ತದೆ.

ಅರ್ಜಿ ಶುಲ್ಕ: ಅರ್ಜಿದಾರರು 100ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕು.-ಪ.ಜಾ/ಪ.ಪಂ/ಅಂಗವಿಕಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ?: ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://www.nal.res.in/en ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರವ ಮಾಹಿತಿಯನ್ನು ಓದಿ ನಂತರ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.  ಡಿಸೆಂಬರ್ 27,2020 ಅರ್ಜಿಯನ್ನು ಸಲ್ಲಿಸಲು ಕೊನಯ ದಿನಾಂಕವಾಗಿದೆ.
First published: November 30, 2020, 7:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading