ಕರ್ಚೀಫ್​ ಕಳ್ಳನನ್ನು ಹುಡುಕದಿದ್ದರೆ ಸ್ಟೇಷನ್ ಬಿಟ್ಟು ಕದಲಲ್ಲ; ಪೊಲೀಸರಿಗೆ ತಲೆನೋವು ತಂದ ವಿಚಿತ್ರ ಪ್ರಕರಣ

ರೈಲ್ವೆ ಇಲಾಖೆಯ ಮಾಜಿ ಉದ್ಯೋಗಿಯಾಗಿರುವ ಹರ್ಷವರ್ಧನ್ ತನ್ನ ಕರ್ಚೀಫನ್ನು ಹುಡುಕಿಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಕರ್ಚೀಫನ್ನು ಹುಡುಕಿಕೊಡುವುದಾಗಿ ಭರವಸೆ ನೀಡುವ ತನಕ ಪೊಲೀಸ್ ಠಾಣೆ ಬಿಟ್ಟು ಕದಲುವುದಿಲ್ಲ ಎಂದು ಹಠ ಹಿಡಿದಿದ್ದಾರೆ.

Sushma Chakre | news18-kannada
Updated:December 4, 2019, 1:45 PM IST
ಕರ್ಚೀಫ್​ ಕಳ್ಳನನ್ನು ಹುಡುಕದಿದ್ದರೆ ಸ್ಟೇಷನ್ ಬಿಟ್ಟು ಕದಲಲ್ಲ; ಪೊಲೀಸರಿಗೆ ತಲೆನೋವು ತಂದ ವಿಚಿತ್ರ ಪ್ರಕರಣ
ಸಾಂದರ್ಭಿಕ ಚಿತ್ರ
  • Share this:
ಪೊಲೀಸ್ ಠಾಣೆಗೆ ಪ್ರತಿದಿನ ನಾನಾ ರೀತಿಯ ದೂರುಗಳು ಬರುತ್ತಲೇ ಇರುತ್ತದೆ. ನಾಪತ್ತೆಯಾದವರು, ಕೊಲೆ, ಅಪಹರಣ, ಅಪಘಾತ ಹೀಗೆ ಸಾವಿರಾರು ದೂರುಗಳನ್ನು ಪೊಲೀಸರು ಆಲಿಸುತ್ತಲೇ ಇರುತ್ತಾರೆ. ಆದರೆ, ಮಹಾರಾಷ್ಟ್ರದ ನಾಗ್ಪುರದ ಪೊಲೀಸ್ ಠಾಣೆಗೆ ಬಂದ ವ್ಯಕ್ತಿ ನೀಡಿದ ದೂರನ್ನು ಕೇಳಿದ ಪೊಲೀಸರೇ ಅವಾಕ್ಕಾಗಿ ನಿಂತಿದ್ದರು. ಹಾಗಿದ್ದರೆ ಆತ ನೀಡಿದ ದೂರಾದರೂ ಏನು? ಎಂದು ಯೋಚಿಸುತ್ತಿದ್ದೀರಾ?

ನಾಗ್ಪುರದ ಪೊಲೀಸ್ ಠಾಣೆಗೆ ಬಂದ ಹರ್ಷವರ್ಧನ್ ಜಿಥೆ ಎಂಬ ವ್ಯಕ್ತಿ ತನ್ನ ಕರ್ಚೀಫ್​ ಕಳೆದುಹೋಗಿದೆ, ಹುಡುಕಿಕೊಡಿ ಎಂದು ದೂರು ನೀಡಿದ್ದಾರೆ. ನಾಗ್ಪುರದ ಮನೀಶ್ ನಗರದಲ್ಲಿ ವಾಸಿಸುತ್ತಿರುವ ಹರ್ಷವರ್ಧನ್ ಪೊಲೀಸರಿಗೆ ದೂರು ನೀಡಿದ್ದು, ನನಗೆ ಬಹಳ ಆತ್ಮೀಯರು ಕೊಟ್ಟಿದ್ದ ಕರ್ಚೀಫ್​ ಕಳೆದುಹೋಗಿದೆ. ಗೆಳೆಯರನ್ನು ಭೇಟಿಯಾಗಲು ಡಿಆರ್​ಎಂ (ಡಿವಿಷನಲ್ ರೈಲ್ವೆ ಮ್ಯಾನೇಜರ್) ಕಚೇರಿಗೆ ತೆರಳಿದ್ದಾಗ ಯಾರೋ ಕರ್ಚೀಫನ್ನು ಕದ್ದಿದ್ದಾರೆ ಎಂದು ನಮೂದಿಸಿದ್ದಾರೆ ಎಂದು ಡೈಲಿ ಹಂಟ್ ವರದಿ ಮಾಡಿದೆ.

ಸರಸದ ವೇಳೆ ಗೆಳೆಯನ ಕೊಂದು ಬೆತ್ತಲಾಗಿ ಓಡಿದ ಹಾಸನದ ಯುವತಿಯ ಬಂಧನ

ರೈಲ್ವೆ ಇಲಾಖೆಯ ಮಾಜಿ ಉದ್ಯೋಗಿಯಾಗಿರುವ ಹರ್ಷವರ್ಧನ್ ತನ್ನ ಕರ್ಚೀಫನ್ನು ಹುಡುಕಿಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಕರ್ಚೀಫನ್ನು ಹುಡುಕಿಕೊಡುವುದಾಗಿ ಭರವಸೆ ನೀಡುವ ತನಕ ಪೊಲೀಸ್ ಠಾಣೆ ಬಿಟ್ಟು ಕದಲುವುದಿಲ್ಲ ಎಂದು ಹಠ ಹಿಡಿದಿದ್ದಾರೆ. ಇದೇ ಮೊದಲ ಬಾರಿಗೆ ಈ ರೀತಿಯ ಕೇಸನ್ನು ನಾವು ನೋಡುತ್ತಿದ್ದೇವೆ. ಆತನ ಮನವೊಲಿಸಿ ಠಾಣೆಯಿಂದ ಕಳುಹಿಸುವಷ್ಟರಲ್ಲಿ ಸಾಕಾಯಿತು ಎಂದು ಪೊಲೀಸರು ಹೇಳಿದ್ದಾರೆ.
First published: December 4, 2019, 1:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading