ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ (Temjen Imna Along) ಅವರು ಟ್ವಿಟರ್‌ನ ಸಕ್ರೀಯ ಬಳಕೆದಾರರು ಎಂದೇ ಹೇಳಬಹುದು. ಇವರ ಹಾಕುವ ಪ್ರತಿ ಪೋಸ್ಟ್ ಕೂಡ ವಿಭಿನ್ನ ಮತ್ತು ವಿಶೇಷವಾಗಿರುತ್ತದೆ. ಇವರು ತಮ್ಮ ಪೋಸ್ಟ್ಗಳ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತ ತಮಾಷೆಯಾಗಿ ಆಗಾಗ ಹರಟೆ ಹೊಡೆಯುತ್ತಿರುತ್ತಾರೆ. ಹೌದು, ನಾಗಾಲ್ಯಾಂಡ್‌ನ (Nagaland) ಉನ್ನತ ಶಿಕ್ಷಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವರಾದ ತೆಮ್ಜೆನ್ ಇಮ್ನಾ ಅಲೋಂಗ್ ಅವರು ತಮ್ಮ ಹಾಸ್ಯ ಪ್ರಜ್ಞೆಗೆ ಹೆಸರುವಾಸಿಯಾಗಿದ್ದಾರೆ.
ಮಗುವಿನ ಜೊತೆ ಫೋಟೋ ಹಂಚಿಕೊಂಡ ಸಚಿವ
ಭಾನುವಾರ, ಸಚಿವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಮಗುವನ್ನು ಎತ್ತಿಕೊಂಡಿರುವ ಫೋಟೋ ಹಂಚಿಕೊಂಡು ಮುದ್ದಾದ ಒಂದು ಶೀರ್ಷಿಕೆ ಸಹ ನೀಡಿದ್ದಾರೆ. ಏನಾಗದಿದ್ದರೂ ಒಳ್ಳೆಯ ಮನುಷ್ಯನಾಗು ಎಂದು ಬರೆದಿರುವ ಟ್ವಿಟರ್ ಪೋಸ್ಟ್ ಶೀರ್ಷಿಕೆಗೆ ನೆಟ್ಟಿಗರು ಮನಸೋತಿದ್ದಾರೆ.
ಕ್ಯಾಪ್ಷನ್‌ಗೆ ಮನಸೋತ ನೆಟ್ಟಿಗರು:
ಸಚಿವರಾದ ತೆಮ್ಜೆನ್ ಇಮ್ನಾ ಅಲೋಂಗ್ ಹಂಚಿಕೊಂಡಿರುವ ಫೋಟೋದಲ್ಲಿ ಅವರು ಪುಟ್ಟ ಮಗುವನ್ನು ಎದೆಗಪ್ಪಿ ಎತ್ತಿಕೊಂಡಿರುವುದನ್ನು ನೀವಿಲ್ಲಿ ನೋಡಬಹುದು. ಹೀಗೆ ಮಗುವನ್ನು ಎದೆಗವಚಿ ಎತ್ತಿಕೊಂಡು ಮುದ್ದಾದ ಶೀರ್ಷಿಕೆ ಕೂಡ ನೀಡಿದ್ದಾರೆ. “ನಾನು ಅವನಿಗೆ ಹೇಳುತ್ತಿದ್ದೇನೆ, ನೀನು ಏನಾಗದಿದ್ದರೂ ಒಳ್ಳೆಯ ಮನುಷ್ಯನಾಗಿ ಬೆಳೆಯಬೇಕು.
Just telling him!
बड़े होकर अच्छा इंसान बनना ।
Doctor, Engineer ना बनकर भी Out of the Box सोचना ! pic.twitter.com/Il21UBeSQq
— Temjen Imna Along (@AlongImna) February 26, 2023
ಇದನ್ನೂ ಓದಿ: Indian Railways: ಇಂದಿಗೂ ಬ್ರಿಟಿಷರ ವಶದಲ್ಲಿದೆ ಭಾರತದ ಈ ರೈಲುಮಾರ್ಗ, ಪ್ರತಿ ವರ್ಷ ಭಾರೀ ಮೊತ್ತ ಪಾವತಿ, ಇದಕ್ಕೆ ಕಾರಣವೇನು?
ನೆಟ್ಟಿಗರ ಹೃದಯ ಗೆದ್ದ ಸಚಿವರ ಪೋಸ್ಟ್:
ನೆಟ್ಟಿಗರು ತೆಮ್ಜೆನ್ ಇಮ್ನಾ ಅಲೋಂಗ್ ಪೋಸ್ಟ್ ಅನ್ನು ಮೆಚ್ಚಿಕೊಂಡಿದ್ದು, ಆ ಮಗು ಮತ್ತು ಮಕ್ಕಳು ನಿಮ್ಮಂತೆಯೇ ಸರಳ ಮತ್ತು ತತ್ವಬದ್ಧ ನಾಯಕರಾಗಬೇಕೆಂದು ನಾವು ಬಯಸುತ್ತೇವೆ ಎಂದು ಟ್ವಿಟರ್ ಬಳಕೆದಾರರು ಬರೆದಿದ್ದಾರೆ.
ಇನ್ನೊಬ್ಬರು ತೆಮ್ಜೆನ್ ಇಮ್ನಾ ಅಲೋಂಗ್ ಅವರ ಕಾರ್ಯವೈಖರಿಯನ್ನು ಕಾಮೆಂಟ್‌ನಲ್ಲಿ ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲ ಬಳಕೆದಾರರು ಹಾರ್ಟ್ ಎಮೋಜಿಯನ್ನು ಕಳುಹಿಸುವ ಮೂಲಕ ಪ್ರೀತಿ ವ್ಯಕ್ತಪಡಿಸಿದ್ದಾರೆ.
ಊಟದ ಫೋಟೋ, ಡ್ಯಾನ್ಸ್ ವಿಡಿಯೋ ವೈರಲ್:
ಮೊನ್ನೆ ಎಲೆಕ್ಷನ್ ಬ್ಯುಸಿ ನಡುವೆಯೂ ತಮ್ಮ ಊಟದ ಫೋಟೋವನ್ನು ಟ್ವೀಟ್ ಮಾಡಿದ್ದರು. "ಚುನಾವಣೆ ನೆಪದಲ್ಲಾದರೂ ಒಳ್ಳೆಯ ಊಟ ಸಿಕ್ಕಿದೆ" ಎಂಬ ಅರ್ಥದಲ್ಲಿ ಶೀರ್ಷಿಕೆ ನೋಡಿ ಊಟ ಮಾಡುತ್ತಿರುವ ಫೋಟೋ ಪೋಸ್ಟ್ ಮಾಡಿದ್ದರು.
ಕೊರಳಲ್ಲಿ ಬಿಜೆಪಿ ಸ್ಕಾರ್ಫ್ ಧರಿಸಿ, ಪಕ್ಕದಲ್ಲಿ ಇಟ್ಟಿದ್ದ ಪಾಪಾಡ್ ತುಂಬಿದ ಬಟ್ಟಲಿನೊಂದಿಗೆ ಮಾಂಸಾಹಾರಿ ಊಟವನ್ನು ಸವಿಯುತ್ತಿರುವುದನ್ನು ಫೋಟೋದಲ್ಲಿ ನೋಡಬಹುದಾಗಿದೆ. ಇದಕ್ಕೂ ಸಹ ನೆಟ್ಟಿಗರು ಕಾಮೆಂಟ್ ಮೂಲಕ ಪ್ರೀತಿ ತೋರಿದ್ದರೂ, ನಿಮ್ಮ ಆರೋಗ್ಯಕ್ಕೆ ಇದೇ ಮಂತ್ರನಾ ಎಂದು ಸಚಿವರಿಗೆ ನೆಟ್ಟಿಗರು ತಮಾಷೆಯಾಗಿ ಪ್ರಶ್ನಿಸಿದ್ದರು.
ಸಚಿವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಆಗಾಗ್ಗೆ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ಅವರ ಮಗಳ ವಿವಾಹ ಸಮಾರಂಭದಲ್ಲಿ ತೆಮ್ಜೆನ್ ಇಮ್ನಾ ಅಲೋಂಗ್ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಕೂಡ ಸಾಕಷ್ಟಯ ವೈರಲ್ ಆಗಿತ್ತು.
ಮುಖ್ಯಮಂತ್ರಿ ನೆಫಿಯು ರಿಯೊ ಜಿ ಅವರ ಮಗಳ ಮದುವೆಯಲ್ಲಿ ನಾನು ಡ್ಯಾನ್ಸ್ ಮಾಡಿದೆ ಎಂದು ಉನ್ನತ ಶಿಕ್ಷಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ಟೆಮ್ಜೆನ್ ಇಮ್ನಾ ಅಲೋಂಗ್ ವಿಡಿಯೋ ಹಂಚಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ