America New Virus: ಅಮೆರಿಕದಲ್ಲಿ ಈರುಳ್ಳಿ ತಿಂದು 650 ಮಂದಿ ಅಸ್ವಸ್ಥ: ಮನೆಯಲ್ಲಿರುವ ಈರುಳ್ಳಿ ಎಸೆಯಲು ಸರ್ಕಾರದಿಂದ ಸೂಚನೆ

America New Virus: ಅಮೆರಿಕದಲ್ಲಿ ಸಾಲ್ಮೊನೆಲ್ಲಾ(Salmonella) ಬ್ಯಾಕ್ಟೀರಿಯಾ ಸೋಂಕು ಹರಡಿರುವುದು ಅಲ್ಲಿನ ಜನರನ್ನು ಆಘಾತಕ್ಕೀಡುಮಾಡಿದೆ. ಈ ಬ್ಯಾಕ್ಟೀರಿಯಾ ಸೋಂಕು ಹರಡಿರುವ ಈರುಳ್ಳಿಯನ್ನ ಸೇವಿಸಿ ಸುಮಾರು 650 ಮಂದಿ ಅಸ್ವಸ್ಥರಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈರುಳ್ಳಿ(Onion) ಎಲ್ಲಾ ಅಡುಗೆಗೆ ಬೇಕಿರುವ ಪದಾರ್ಥ. ಈರುಳ್ಳಿಯನ್ನು ಇಷ್ಟಪಡದೇ ಇರುವವರ ಸಂಖ್ಯೆ ತುಂಬಾ ಕಡಿಮೆ. ರುಚಿ(Taste)ಗೆ ಅಷ್ಟೇ ಅಲ್ಲದೇ ಆರೋಗ್ಯ(Health)ಕ್ಕೂ ಉತ್ತಮ. ಆದರೇ ಇದೇ ಈರುಳ್ಳಿ ಅಮೆರಿಕನ್ನರ ಪಾಲಿಗೆ ವಿಲನ್​(Villain) ಅಗಿದೆ. ಅದು ಯಾಕೆ? ಹೇಗೆ? ಅಂತೀರಾ ಇಲ್ಲಿದೆ ನೋಡಿ. ಹೌದು, ಕಳೆದ ದಿನಗಳಿಂದ ಎಲ್ಲಾ ದೇಶಗಳು ಮಹಾಮಾರಿ ಕೊರೋನಾ(Corona)ದಿಂದ ಅಟ್ಟಹಾಸದಿಂದ ಕೊಂಚ ಸಹಜಸ್ಥತಿಗೆ ಮರಳುತ್ತಿದ್ದೇವೆ. ಬಹುತೇಕ ದೇಶಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಕೋವಿಡ್​ 19 ವಿರುದ್ಧ ಅಮೆರಿಕ(America) ಹೋರಾಟ ನಡೆಸುತ್ತಿರುವಾಗಲೇ ಮತ್ತೊಂದು ಸೋಂಕು(Virus) ಹರಡಿರುವುದು ಆತಂಕ ಸೃಷ್ಟಿಸಿದೆ. ಅಮೆರಿಕದಲ್ಲಿ ಸಾಲ್ಮೊನೆಲ್ಲಾ(Salmonella) ಬ್ಯಾಕ್ಟೀರಿಯಾ ಸೋಂಕು ಹರಡಿರುವುದು ಅಲ್ಲಿನ ಜನರನ್ನು ಆಘಾತಕ್ಕೀಡುಮಾಡಿದೆ. ಈ ಬ್ಯಾಕ್ಟೀರಿಯಾ ಸೋಂಕು ಹರಡಿರುವ ಈರುಳ್ಳಿಯನ್ನ ಸೇವಿಸಿ ಸುಮಾರು 650 ಮಂದಿ ಅಸ್ವಸ್ಥರಾಗಿದ್ದಾರೆ. ಹೀಗಾಗಿ ಇಲ್ಲಿನ ಸರ್ಕಾರ ಮನೆಯಲ್ಲಿರುವ ಈರುಳ್ಳಿಗಳನ್ನ ಬಳಸದಂತೆ ಎಚ್ಚರಿಕೆ ನೀಡಿದೆ. ಅದರಲ್ಲೂ ಸ್ಟಿಕ್ಕರ್​ ರಹಿತ(Sticker less) ಅಥಾವಾ ಪ್ಯಾಕಿಂಗ್(Packing)​ ಮಾಹಿತಿ ಇಲ್ಲದ ಈರುಳ್ಳಿಯನ್ನ ಎಸೆಯೆರಿ ಎಂದು ಸರ್ಕಾರ ಸೂಚನೆ ನೀಡಿದೆ.

ಚಿವಾವಾ ಇಂದ ಡೇಂಜರಸ್​ ಈರುಳ್ಳಿ ಆಮದು

ಮೆಕ್ಸಿಕೋದ(Mexico) ಚಿವಾವಾ ಎಂಬಲ್ಲಿಂದ ಆಮದು ಮಾಡಿಕೊಂಡ ಈರುಳ್ಳಿಯನ್ನು ಹಸಿಯಾಗಿ ಸೇವಿಸಿದ ಜನರಿಗೆ ಈ ಸೋಂಕು ಹರಡಿದೆ. ಪ್ರೋಸೋರ್ಸ್‌ ಎಂಬ ಕಂಪನಿ ಈ ಈರುಳ್ಳಿ ಆಮದು ಮಾಡಿಕೊಂಡು ಮಾರಾಟ ಮಾಡಿದೆ. ಆಗಸ್ಟ್‌ ಹಾಗೂ ಸೆಪ್ಟೆಂಬರ್‌ನಿಂದಲೇ ದೇಶದಲ್ಲಿ ರೋಗ ಹರಡುತ್ತಿದ್ದು, ಟೆಕ್ಸಾಸ್‌(Texas) ಮತ್ತು ಓಕ್ಲಹಾಮಾದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅಸ್ವಸ್ಥರಾಗಿದ್ದಾರೆ. 129 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಾರೋಗ್ಯಪೀಡಿತರಲ್ಲಿ ಶೇ.75ರಷ್ಟು ಜನರು ತಾವು ಹಸಿ ಈರುಳ್ಳಿ ಸೇವಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈರುಳ್ಳಿಯನ್ನು ತಿಂಗಳುಗಟ್ಟಲೆ ಇಡುವುದರಿಂದ ಜನರ ಬಳಿ ಈಗಲೂ ಸೋಂಕಿತ ಈರುಳ್ಳಿ ಇರಬಹುದು. ಹೀಗಾಗಿ ಕೆಂಪು, ಹಳದಿ ಮತ್ತು ಬಿಳಿ ಈರುಳ್ಳಿಗಳು ಮನೆಯಲ್ಲಿದ್ದರೆ ಎಸೆದುಬಿಡಿ  ಎಂದು ಆರೋಗ್ಯ ಅಧಿಕಾರಿಗಳು ಸೂಚಿಸಿದ್ದಾರೆ. ಇನ್ನೂ ಈ ರೀತಿಯ ಸೂಚನೆ ನೀಡುತ್ತಿದ್ದಂತೆ ಅಲ್ಲಿನ ಜನರು ಭಯಗೊಂಡು ಮನೆಯಲ್ಲಿರುವ ಈರುಳ್ಳಿಯನ್ನು ಎಸೆಯುತ್ತಿದ್ದಾರೆ.

ಇದನ್ನು ಓದಿ : ವಿಶ್ವಕ್ಕೇ ವೈರಸ್​ ಹಂಚಿದ್ದ ಚೀನಾಗೆ ಮತ್ತೆ ಶಾಕ್​: ಕೊರೋನಾ​ ಅಟ್ಟಹಾಸಕ್ಕೆ ವಿಮಾನ, ಶಾಲೆಗಳು ಬಂದ್

ಏನಿದು ಹೊಸ ಸಾಲ್ಮೊನೆಲ್ಲಾ ಸೋಂಕು?

ಸಾಲ್ಮೊನೆಲ್ಲಾ ಎಂದರೇ ಒಂದು ಬ್ಯಾಕ್ಟೀರಿಯಾ, ಇದರ ಸೋಂಕು ಮನುಷ್ಯನ ದೇಹ ಹೊಕ್ಕರೆ ಹೊಟ್ಟೆಯಲ್ಲಿ ಅನಾರೋಗ್ಯ ಉಂಟಾಗುತ್ತದೆ. ಕೆಲವರಿಗೆ ಟೈಫಾಯ್ಡ್​ನಂತಹ ರೋಗಗಳು ಕಾಣಿಸಿಕೊಳ್ಳಬಹುದು. ಇನ್ನೂ ಕೆಲವರಿಗೆ ಭೇದಿ, ಜ್ವರ ಹಾಗೂ ಹೊಟ್ಟೆನೋವಿನ ಇನ್ನಿತರ ಲಕ್ಷಣಳು ಕಾಣಿಸಿಕೊಳ್ಳುತ್ತೆ. ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಇರುವ ಆಹಾರ ಸೇವಿದ 6 ಗಂಟೆಗಳಿಂದ 6 ದಿನದೊಳಗೆ ಅನಾರೋಗ್ಯ ಉಂಟಾಗುತ್ತದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದಿದದರೇ ಮೂತ್ರ, ರಕ್ತ, ಮೂಳೆ, ಕೀಲು ನರ, ಮೆದುಳಿಗೂ ಈ ಸೋಂಕು ಹರಡುತ್ತೆ. ಈ ಬಗ್ಗೆ ನಾವು ನಿಗಾ ವಹಿಸದಿದ್ದರೇ ಸೋಂಕು ಹರುಡುವ ಸಾಧ್ಯರೆ ಕೂಡ ಹೆಚ್ಚಿರುತ್ತೆ. ಹೀಗಾಗಿ ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ.

ಇದನ್ನು ಓದಿ : ಲಸಿಕೆ ಅಭಿಯಾನದ ಸಾಧನೆ, ಜನರ ಪಾಲ್ಗೊಳ್ಳುವಿಕೆಗೆ ಸಾಕ್ಷಿ; ಪ್ರಧಾನಿ ಮೋದಿ ಬಣ್ಣನೆ

ಈರುಳ್ಳಿಯನ್ನು ಹಿಂಪಡೆಯುತ್ತೇವೆ ಎಂದ ಪ್ರೋಸೋರ್ಸ್

ಹೊಸ ಸೋಂಕು ಅಮೆರಿಕದಲ್ಲಿ ಈಗ ಆತಂಕ ಸೃಷ್ಟಿಸಿದೆ. ಇದಾದ ಬಳಿಕ ಚಿವಾವಾದಿಂದ ಆಮದು ಮಾಡಲಾಗಿದ್ದ ಈರುಳ್ಳಿಯನ್ನು ಹಿಂಪಡೆಯುವುದಾಗಿ ಪ್ರೋಸೋರ್ಸ್ ಹೇಳಿದೆ. ಜುಲೈ 1 ರಿಂದ ಆಗಸ್ಟ್ 27ರವರೆಗೆ ಆಮದು ಮಾಡಿದ ಎಲ್ಲಾ ಈರುಳ್ಳಿಯನ್ನು ಸ್ವಯಂಪ್ರೇರಣೆಯಿಂದ ವಾಪಸ್ ಪಡೆಯಲು ಪ್ರೋಸೋರ್ಸ್ ಒಪ್ಪಿಕೊಂಡಿದೆ ಎಂದು ಆಹಾರ ನೀತಿ ಮತ್ತು ಔಷಧ ಆಡಳಿತದ ಉಪ ಆಯುಕ್ತ ಫ್ರಾಂಕ್ ಯಿಯಾನಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇನ್ನೂ ಈ ರೀತಿಯ ಸೋಂಕು ಹರಡುವುದರ ಹಿಂದೆ ಯಾರಾದರೂ ಇದ್ದಾರಾ ಎಂಬ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
First published: