mystery fever : ನಿಗೂಢ ಜ್ವರಕ್ಕೆ 10 ದಿನದಲ್ಲಿ 8 ಮಕ್ಕಳು ಬಲಿ; ಆತಂಕದಲ್ಲಿ ಗ್ರಾಮಸ್ಥರು

ಮಕ್ಕಳ ಜೊತೆಯಲ್ಲಿ ದೊಡ್ಡವರಲ್ಲಿ ಕೂಡ ಈ ಜ್ವರದ ಲಕ್ಷಣ ಕಾಣಿಸಿಕೊಳ್ಳುತ್ತಿದ್ದು, ಕಳೆದ ಕೆಲವು ದಿನಗಳಿಂದ ಜ್ವರ ಪೀಡಿತರ ಸಂಖ್ಯೆಯಲ್ಲಿ ಹೆಚ್ಚಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹರಿಯಾಣದ ಪಲ್ವಾಲ್​ ಜಿಲ್ಲೆಯ ಚಿಲ್ಲಿಯಲ್ಲಿ ನಿಗೂಢ ಜ್ವರವೊಂದು (Mystery Fever) ಜನರನ್ನು ಕಾಡುತ್ತಿದೆ. ಮಕ್ಕಳು ಸೇರಿದಂತೆ ದೊಡ್ಡವರು ಈ ನಿಗೂಢ ಜ್ವರಕ್ಕೆ ತುತ್ತಾಗಿದ್ದು, ಏನಿದಕ್ಕೆ ಕಾರಣ ಎಂಬುದು ಪತ್ತೆಯಾಗಿಲ್ಲ. ಕಳೆದ 10 ದಿನದಲ್ಲಿ ಕನಿಷ್ಠ ಎಂದರೂ 44 ಮಂದಿ ಈ ಜ್ವರಕ್ಕೆ ತುತ್ತಾಗಿದ್ದಾರೆ. ಅದರಲ್ಲಿ 35 ಮಂದಿ ಅಪ್ರಾಪ್ತ ಮಕ್ಕಳು ಎಂಬುದು ಗಮನಾರ್ಹ. ಇನ್ನು ಈ ನಿಗೂಢ ಜ್ವರಕ್ಕೆ ಇಲ್ಲಿಯವರೆಗೆ 8 ಮಕ್ಕಳು ಸಾವನ್ನಪ್ಪಿದ್ದು, ಸಾವಿನ ಕಾರಣಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಅನೇಕರಲ್ಲಿ ಈ ಜ್ವರ ಉಲ್ಭಣಿಸಿತ್ತಿರುವು ಆತಂಕ ಸೃಷ್ಟಿಯಾಗಿದೆ.

  ಸಾವಿಗೆ ನಿಖರ ಕಾರಣ ಇನ್ನು ಪತ್ತೆಯಾಗಿಲ್ಲ. ಜ್ವರ ಬಂದವರಲ್ಲಿ ದೇಹದ ಉಷ್ಣಾಂಶ ಹೆಚ್ಚಾಗುತ್ತಿದ್ದು ಡೆಂಘ್ಯೂ ಲಕ್ಷಣ (dengue) ಕಾಣಿಸುತ್ತಿದೆ. ಅಲ್ಲದೇ, ಅವರಕ್ಕು ಪ್ಲೇಟ್​ಟ್​ ಕೌಂಟ್​ ಕಡಿಮೆಯಾಗುತ್ತಿದೆ ಎಂದು ವೈದ್ಯ ಅಧಿಕಾರಿಗಳು ತಿಳಿಸಿದ್ದಾರೆ.

  ಆತಂಕದಲ್ಲಿ ಗ್ರಾಮಸ್ಥರು

  ಗ್ರಾಮದಲ್ಲಿ ಹೆಚ್ಚಿನ ಜ್ವರದ ಪ್ರಕರಣ ಕಾರಣ ಅಧಿಕಾರಿಗಳು ಮನೆ ಮನೆಗಳಿಗೆ ಭೇಟಿ ನೀಡಿ ಡೆಂಗ್ಯೂ ಮತ್ತು ನೈರ್ಮಲ್ಯದ ಕುರಿತು ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಅಲ್ಲದೇ, ಜ್ವರ ಬಂದವರಲ್ಲಿ ಡೆಂಗ್ಯೂ ಮತ್ತು ಮಲೇರಿಯಾ ಪರೀಕ್ಷೆ ಮಾಡಲಾಗುತ್ತಿದೆ. ಜೊತೆಗೆ ಅವರಿಗೆ ಕೋವಿಡ್ ಪರೀಕ್ಷೆಯನ್ನೂ ಮಾಡಲಾಗುತ್ತಿದೆ.

  ನೈರ್ಮಲ್ಯ ಸಮಸ್ಯೆ

  ಮಕ್ಕಳು ಜ್ವರದಿಂದ ಬಳಲುತ್ತಿದ್ದು, ಸಾವು ಸಂಭವಿಸಿದೆ. ಇದು ಆತಂಕಕಾರಿ ಬೆಳವಣಿಗೆ ಆಗಿದೆ. ಈ ಹಿನ್ನಲೆ ನಾವು ಮನೆಗಳಿಗೆ ಭೇಟಿ ನೀಡುತ್ತಿದ್ದೆವು. ಈ ಸಂಬಂಧ ಸಮೀಕ್ಷೆಗಳನ್ನು ನಡೆಸುತ್ತಿದ್ದು, ಔಷಧಿಗಳನ್ನು ನೀಡಲಾಗುತ್ತಿದೆ. ನೈರ್ಮಲ್ಯ ಶುಚಿ ಇಲ್ಲದಿರುವುದರಿಂದ ಈ ಸಮಸ್ಯೆ ಉಲ್ಬಣಿಸಿರುವ ಸಾಧ್ಯತೆ ಇದೆ. ಆದರೂ ಜ್ವರಕ್ಕೆ ನಿಖರ ಕಾರಣ ಪತ್ತೆಯಾಗುತ್ತಿಲ್ಲ. ಈ ಹಿನ್ನಲೆ ಹೆಚ್ಚುವರಿ ಪರೀಕ್ಷೆ ನಡೆಸುತ್ತಿದ್ದೇವೆ ಎಂದು ಆರೋಗ್ಯ ಅಧಿಕಾರಿ ವಿಜಯ್​ ಕುಮಾರ್​ ತಿಳಿಸಿದ್ದಾರೆ.

  ದನ್ನು ಓದಿ: ಸದನದಲ್ಲಿ ಬೆಲೆ ಏರಿಕೆಗೆ ಇಡ್ಲಿ, ದೋಸೆ ಉದಾಹರಣೆ; ಗೃಹ ಸಚಿವರಿಗೆ ಹೋಂ ವರ್ಕ್​ ಕೊಟ್ಟ ಸಿದ್ದರಾಮಯ್ಯ

  ಪ್ಲೆಟ್ಲೆಟ್​ ಕಡಿಮೆ

  ಮಕ್ಕಳ ಜೊತೆಯಲ್ಲಿ ದೊಡ್ಡವರಲ್ಲಿ ಕೂಡ ಈ ಜ್ವರದ ಲಕ್ಷಣ ಕಾಣಿಸಿಕೊಳ್ಳುತ್ತಿದ್ದು, ಕಳೆದ ಕೆಲವು ದಿನಗಳಿಂದ ಜ್ವರ ಪೀಡಿತರ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಅಧಿಕ ಜ್ವರ ಮತ್ತು ಪ್ಲೆಟ್ಲೆಟ ಕಡಿಮೆಯಾಗುತ್ತಿರುವ ಹಿನ್ನಲೆ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಡೆಂಘ್ಯೂ ಲಕ್ಷಣವನ್ನೇ ಅನೇಕ ಮಂದು ಹೊಂದಿದ್ದಾರೆ. ಆರೋಗ್ಯ ಅಧಿಕಾರಿಗಳು ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಿದರೆ ಜನರನ್ನು ರಕ್ಷಿಸಬಹುದು ಎಂದು ತಿಳಿಸಿದ್ದಾರೆ.

  ಇದನ್ನು ಓದಿ: ಜೆಇಇ ಮೇನ್ ಫಲಿತಾಂಶ ಪ್ರಕಟ; ಕರ್ನಾಟಕದ ಗೌರಬ್ ದಾಸ್​ಗೆ First Rank ​

  ಆರೋಗ್ಯ ಸೌಲಭ್ಯ ವಂಚಿತ ಗ್ರಾಮ

  ಇಲ್ಲಿಯವರೆಗೆ ಸರಿ ಸುಮಾರು ಏಳರಿಂದ 8 ಮಕ್ಕಳು ಸಾವನ್ನಪ್ಪಿದ್ದಾರೆ. ಕಲುಷಿತ ನೀರು ಸರಬರಾಜು ಮತ್ತು ನಿಂತ ನೀರಿನ ಸೇವನೆಯಿಂದ ಸಮಸ್ಯೆ ಕಾಣಿಸಿಕೊಂಡಿರಬಹುದು. ಕಳೆದ 15 ರಿಂದ 20 ದಿನದಿಂದ ಸಮಸ್ಯೆ ಉಂಟಾಗಿದೆ. ಜ್ವರ ಪೀಡಿತರಲ್ಲಿ ಡೆಂಘ್ಯೂ ಪತ್ತೆಯಾಗಿಲ್ಲ. ಗ್ರಾಮದಲ್ಲಿ ಜ್ವರ ಹೆಚ್ಚುತ್ತಿರುವ ಹಿನ್ನಲೆ ನಮ್ಮ ಆರೋಗ್ಯ ತಂಡ ಇಲ್ಲಿಯೇ ಇರಲಿದೆ. ಜೊತೆಗೆ ಆಶಾ ಕಾರ್ಯಕರ್ತರು ನಮ್ಮ ಕೇಂದ್ರಕ್ಕೆ ಬರುತ್ತಾರೆ. ಗ್ರಾಮಕ್ಕೆ ಅವರು ಬರುವುದು ಬೇಡ. ಇಲ್ಲಿ ಯಾವುದೇ ಆರೋಗ್ಯ ಸೌಲಭ್ಯ ಇಲ್ಲ ಎಂದು ಚಿಲ್ಲಿ ಗ್ರಾಮ ಸರಪಂಚ್​ ನರೇಶ್​ ಕುಮಾರ್​ ತಿಳಿಸಿದರು.

  ಜ್ವರದ ಹಿನ್ನಲೆ ಕೂಡ ಪ್ಲೆಟ್ಲೆಟ್​ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ಮತ್ತೊಂದೆಡೆ ಅಧಿಕಾರಿಗಳು ತಿಳಿಸಿದ್ದಾರೆ. ಚಿಲ್ಲಿ ಗ್ರಾಮದಲ್ಲಿ 4 ಸಾವಿರ ಜನರು ವಾಸವಾಗಿದ್ದು, ಅವರು ಯಾವುದೇ ಆರೋಗ್ಯ ಸೌಲಭ್ಯವನ್ನು ಹೊಂದಿಲ್ಲ. ಸ್ವಚ್ಛತೆಯಂತ ಸಂಪೂರ್ಣವಾಗಿ ಅಧೋಗತಿಗೆ ಇಳಿದಿದೆ
  Published by:Seema R
  First published: