400 ವರ್ಷ ಹಿಂದಿನ ಈ ಮಂದಿರದಲ್ಲಿ ಮಧ್ಯರಾತ್ರಿ ವಿಗ್ರಹಗಳ ಚಮತ್ಕಾರ: ವಿಜ್ಞಾನಿಗಳಿಗೂ ಶಾಕ್​!


Updated:August 31, 2018, 8:40 AM IST
400 ವರ್ಷ ಹಿಂದಿನ ಈ ಮಂದಿರದಲ್ಲಿ ಮಧ್ಯರಾತ್ರಿ ವಿಗ್ರಹಗಳ ಚಮತ್ಕಾರ: ವಿಜ್ಞಾನಿಗಳಿಗೂ ಶಾಕ್​!

Updated: August 31, 2018, 8:40 AM IST
ನ್ಯೂಸ್​ 18 ಕನ್ನಡ

ಪಾಟ್ನಾ(ಆ.30): ದೇವರು ಇದ್ದಾರಾ? ಇಲ್ಲವಾ ಎಂಬ ಪ್ರಶ್ನೆ ಪ್ರತಿಯೊಬ್ಬ ವ್ಯಕ್ತಿಯ ಮನದಲ್ಲೂ ಒಂದಿಲ್ಲೊಂದು ದಿನ ಬಂದಿರುತ್ತದೆ. ವಿಜ್ಞಾನವು ದೇವರಿದ್ದಾನೆಂಬುವುದನ್ನು ಅನುಮಾನದಿಂದ ಕಂಡರೂ, ಕೆಲ ಚಮತ್ಕಾರಗಳ ಹಿಂದಿನ ಕಾರಣ ಹುಡುಕುವಲ್ಲಿ ವಿಜ್ಞಾನಿಗಳೂ ವಿಫಲರಾಗಿದ್ದಾರೆ. ಇನ್ನು ಭಾರತವನ್ನು ಪರಿಗಣಿಸಿದರೆ ಇದು ಮಂದಿರಗಳ ದೇಶವೆಂದೇ ಹೇಳಬಹುದು. ಇಲ್ಲಿನ ಕೆಲ ಪುರಾತನ ಮಂದಿರಗಳಲ್ಲಾಗುವ ಚಮತ್ಕಾರಗಳು ಜನಸಾಮಾನ್ಯರಿಗೆ ರಹಸ್ಯದಂತೆ ಕಂಡು ಬಂದರೆ, ವಿಜ್ಞಾನಿಗಳಿಗೆ ಬಿಡಿಸಲಾಗದ ಕಗ್ಗಂಟಾಗಿದೆ. ಭಾರತದ ರಹಸ್ಯಯ ಹಾಗೂ ವಿಜ್ಞಾನ ಕ್ಷೇತ್ರಕ್ಕೆ ಅಚ್ಚರಿ ಮೂಡಿಸಿರುವ ಮಂದಿರದ ಮಾಹಿತಿ ಇಲ್ಲಿದೆ.

ವಾಸ್ತವವಾಗಿ ಬಿಹಾರದ ಬಕ್ಸರ್​ ಜಿಲ್ಲೆಯಲ್ಲಿ ದೇಶದ ಜನರಿಗಷ್ಟೇ ಅಲ್ಲ ಬದಲಾಗಿ ವಿಜ್ಞಾನಿಗಳಿಗೇ ಅಚ್ಚರಿ ಮೂಡಿಸಿದೆ. ಇಲ್ಲಿನ ರಾಜರಾಜೇಶ್ವರಿ ತ್ರಿಪುರ ಸುಂದರಿ ಮಂದಿರದ ವಿಗ್ರಹಗಳು ಭಕ್ತರೊಂದಿಗೆ ಮಾತನಾಡುತ್ತವೆ ಎನ್ನಲಾಗುತ್ತದೆ. ವಿಜ್ಞಾನಿಗಳು ಈ ಕುರಿತಾಗಿ ಸಂಶೋಧನೆ ನಡೆಸಿದಾಗ ಈ ವಿಚಾರವನ್ನು ಅವರಿಂದಲೂ ಅಲ್ಲಗಳೆಯಲು ಆಗಲಿಲ್ಲ.ಇದು 400 ವರ್ಷ ಹಳೆಯ ಮಂದಿರವಾಗಿದೆ. ಪ್ರಸಿದ್ಧ ಮಾಂತ್ರಿಕ ಭವಾನಿ ಮಿಶ್ರಾ ಸುಮಾರು 400 ವರ್ಷಗಳ ಹಿಂದೆ ಈ ಮಂದಿರವನ್ನು ಸ್ಥಾಪಿಸಿದ್ದರು. ಅಂದಿನಿಂದ ಇಂದಿನವರೆಗೂ ಅವರದೇ ಕುಟುಂಬ ಸದಸ್ಯರು ಇಲ್ಲಿನ ಪೂಜಾರಿಗಳಾಗಿ ಮುಂದುವರೆದಿದ್ದಾರೆ. ಮಾಂತ್ರಿಕ ಶಕ್ತಿಗಳಿಂದಲೇ ಇಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ ಎನ್ನಲಾಗುತ್ತದೆ.ಮಂತ್ರವಾದಿಗಳು ಈ ಮಂದಿರದ ಮೇಲೆ ಬಹಳಷ್ಟು ನಂಬಿಕೆ ಇಟ್ಟಿದ್ದಾರೆ. ಇನ್ನು ಇಲ್ಲಿ ಯಾರೂ ಇಲ್ಲದಿದ್ದರೂ ವಿಚಿತ್ರವಾದ ಶಬ್ಧಗಳು ಕೇಳುತ್ತವೆ ಎನ್ನಲಾಗುತ್ತದೆ. ಈ ರಾಜರಾಜೇಶ್ವರಿ ಮಂದಿರದಲ್ಲಿ ಸ್ಥಾಪಿತಗೊಂಡ ವಿಗ್ರಹಗಳು ಮಧ್ಯರಾತ್ರಿ ಮಾತನಾಡುತ್ತವೆ ಎಂಬುವುದು ಇಲ್ಲಿನ ಅತ್ಯಂತ ವಿಶಿಷ್ಟ ನಂಬಿಕೆಯಾಗಿದೆ. ಮಧ್ಯರಾತ್ರಿ ಜನರು ಈ ಮಂದಿರವನ್ನು ದಾಟಿ ಹೋಗುವಾಗ ಮಾತನಾಡುವ ಶಬ್ಧ ಕೇಳುತ್ತದೆಯಂತೆ.
Loading...

ಈ ಮಂದಿರದಲ್ಲಿ ಕಾಳಿ, ತ್ರಿಪುರ, ಧೂಮಾವತಿ, ತಾರಾ, ಛಿನ್ನ ಮಸ್ತಾ, ಷೋಡಸೀ, ಮಾತಂಗಡೀ, ಕಮಲಾ, ಉಗ್ರ ತಾರಾ, ಭುವನೇಶ್ವರಿ ಹೀಗೆ ಹತ್ತು ದೇವತೆಗಳನ್ನು ಪ್ರತಿಷ್ಟಾಪಿಸಲಾಗಿದೆ. ಇದನ್ನು ಹೊರತುಪಡಿಸಿ ಇಲ್ಲಿ ಬಂಗಾಲಮುಖೀ ಮಾತೆ, ದತ್ತಾತ್ರೇಯ ಭೈರವ, ಬಟುಕ್​ ಭೈರವ, ಅನ್ನಪೂರ್ಣ ಭೈರವ, ಕಾಲಾ ಭೈರವ ಹಾಗೂ ಮಾತಂಗೀ ಭೈರವ ವಿಗ್ರಹಗಳನ್ನೂ ಸ್ಥಾಪಿಸಲಾಗಿದೆ. ಇಲ್ಲಿ ವಿಚಿತ್ರ ಶಬ್ಧಗಳು ಕೇಳುತ್ತವೆ ಎನ್ನಲಾಗಿದ್ದು, ಮಾನವ ಧ್ವನಿಯಂತೆ ಕೇಳುತ್ತದೆ ಎನ್ನಲಾಗುತ್ತದೆ.ವಿಜ್ಞಾನಿಗಳೂ ಈ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದು ಯಾವುದೇ ರೀತಿಯ ಭ್ರಮೆಯಲ್ಲ. ಈ ಮಂದಿರದ ಸುತ್ತಲೂ ಶಬ್ಧಗಳು ನಿಜಕ್ಕೂ ಕೇಳುತ್ತವೆ ಎಂದಿದ್ದಾರೆ. ಇಲ್ಲಿ ವಿಜ್ಞಾನಿಗಳ ಒಂದು ತಂಡವೂ ಭೇಟಿ ನೀಡಿತ್ತು. ಸಂಶೋಧನೆ ನಡೆಸಿದ ಅವರು ಇಲ್ಲಿ ಯಾವೊಬ್ಬ ವ್ಯಕ್ತಿಯೂ ಇರುವುದಿಲ್ಲ, ಹೀಗಾಗಿ ಇಲ್ಲಿ ಶಬ್ಧಗಳಾಗುತ್ತವೆ ಎಂದಿದ್ದಾರೆ. ಅಲ್ಲದೇ ಮಂದಿರದಲ್ಲಿ ನಡೆಯುವ ಕೆಲ ಚಮತ್ಕಾರಗಳಿಂದ ಇಲ್ಲಿ ವಿಚಿತ್ರ ಶಬ್ಧಗಳಾಗುತ್ತವೆ ಎಂದಿದ್ದಾರೆ.
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ