• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Pakistan: ಆರ್ಥಿಕ ಹಿಂಜರಿತದಲ್ಲಿರುವ ಪಾಕಿಸ್ತಾನಕ್ಕೆ ಹೊಸ ಕಂಟಕ, ನಿಗೂಢ ಕಾಯಿಲೆಯಿಂದ ಹಲವರು ಸಾವು!

Pakistan: ಆರ್ಥಿಕ ಹಿಂಜರಿತದಲ್ಲಿರುವ ಪಾಕಿಸ್ತಾನಕ್ಕೆ ಹೊಸ ಕಂಟಕ, ನಿಗೂಢ ಕಾಯಿಲೆಯಿಂದ ಹಲವರು ಸಾವು!

ಕೆಮಾರಿಯ ಮಾವಾಚ್ ಗೋತ್ ಪ್ರದೇಶದಲ್ಲಿ ಕಳೆದ 15 ದಿನಗಳಲ್ಲಿ 14 ಮಕ್ಕಳು ಸೇರಿದಂತೆ 18 ಮಂದಿ ನಿಗೂಢ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸೇವೆಗಳ ನಿರ್ದೇಶಕ ಅಬ್ದುಲ್ ಹಮೀದ್ ಜುಮಾನಿ ಖಚಿತಪಡಿಸಿದ್ದಾರೆ.

ಕೆಮಾರಿಯ ಮಾವಾಚ್ ಗೋತ್ ಪ್ರದೇಶದಲ್ಲಿ ಕಳೆದ 15 ದಿನಗಳಲ್ಲಿ 14 ಮಕ್ಕಳು ಸೇರಿದಂತೆ 18 ಮಂದಿ ನಿಗೂಢ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸೇವೆಗಳ ನಿರ್ದೇಶಕ ಅಬ್ದುಲ್ ಹಮೀದ್ ಜುಮಾನಿ ಖಚಿತಪಡಿಸಿದ್ದಾರೆ.

ಕೆಮಾರಿಯ ಮಾವಾಚ್ ಗೋತ್ ಪ್ರದೇಶದಲ್ಲಿ ಕಳೆದ 15 ದಿನಗಳಲ್ಲಿ 14 ಮಕ್ಕಳು ಸೇರಿದಂತೆ 18 ಮಂದಿ ನಿಗೂಢ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸೇವೆಗಳ ನಿರ್ದೇಶಕ ಅಬ್ದುಲ್ ಹಮೀದ್ ಜುಮಾನಿ ಖಚಿತಪಡಿಸಿದ್ದಾರೆ.

  • Share this:

ಇಸ್ಲಮಾಬಾದ್(ಜ.29): ಪಾಕಿಸ್ತಾನದ (Pakistan) ಕರಾಚಿಯ ಕೆಮಾರಿ ಪ್ರದೇಶದಲ್ಲಿ ನಿಗೂಢ ಕಾಯಿಲೆಗೆ 14 ಮಕ್ಕಳು ಸೇರಿದಂತೆ 18 ಜನರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನದ ಈ ದಕ್ಷಿಣ ಬಂದರು (South Port) ನಗರದಲ್ಲಿರುವ ಆರೋಗ್ಯ ಅಧಿಕಾರಿಗಳಿಗೆ ಸಾವಿನ ಕಾರಣವನ್ನು ಕಂಡುಹಿಡಿಯಲು ಇನ್ನೂ ಸಾಧ್ಯವಾಗಿಲ್ಲ. ಕೆಮಾರಿಯ ಮಾವಾಚ್ ಗೋತ್ ಪ್ರದೇಶದಲ್ಲಿ ಕಳೆದ ಹದಿನೈದು ದಿನಗಳ ಅಂತರದಲ್ಲಿ 14 ಮಕ್ಕಳು ಸೇರಿದಂತೆ 18 ಜನರು ನಿಗೂಢ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸೇವೆಗಳ ನಿರ್ದೇಶಕ ಅಬ್ದುಲ್ ಹಮೀದ್ (Abdul Hameed) ಜುಮಾನಿ ಶುಕ್ರವಾರ ಖಚಿತಪಡಿಸಿದ್ದಾರೆ.


ಈ ಬಗ್ಗೆ ಮಾತನಾಡಿದ ಅಬ್ದುಲ್ ಹಮೀದ್ ಜುಮಾನಿ, “ಈ ಸಾವುಗಳಿಗೆ ಕಾರಣವನ್ನು ಕಂಡುಹಿಡಿಯಲು ಆರೋಗ್ಯ ತಂಡವು ಇನ್ನೂ ಕಾರ್ಯನಿರ್ವಹಿಸುತ್ತಿದೆ, ಆದರೆ ಇದು ಸಮುದ್ರ ಅಥವಾ ನೀರಿನಿಂದಾಗಿರುವ ಸಮಸ್ಯೆ ಎಂಬುವುದು ನಮ್ಮ ಅನುಮಾನ. ಏಕೆಂದರೆ ಈ ಸಾವುಗಳು ನಡೆದ ಗೋತ್ (ಗ್ರಾಮ) ಕರಾವಳಿ ಪ್ರದೇಶ.'' ಮಾವಾಚ್ ಗೋಥ್ ಒಂದು ಕೊಳೆಗೇರಿ ಪ್ರದೇಶವಾಗಿದ್ದು, ಹೆಚ್ಚಾಗಿ ಇಲ್ಲಿನ ಜನರು ದೈನಂದಿನ ಕೂಲಿ ಕಾರ್ಮಿಕರು ಅಥವಾ ಮೀನುಗಾರರಾಗಿದ್ದಾರೆ ಎಂದಿದ್ದಾರೆ.


ಇದನ್ನೂ ಓದಿ: BJP Tweet: ಸಿದ್ದರಾಮಯ್ಯಗೆ ಸುರಕ್ಷಿತ ಕ್ಷೇತ್ರ ಅಂದ್ರೆ ಮನೆ ಮಾತ್ರ; ಬಿಜೆಪಿ ವ್ಯಂಗ್ಯ


ಮೃತರ ಸಂಬಂಧಿಕರು ಸಾಯುವ ಮೊದಲು ಅವರ ಸಂಬಂಧಿಕರಿಗೆ ತೀವ್ರ ಜ್ವರ, ಗಂಟಲು ಊತ ಮತ್ತು ಉಸಿರಾಟದ ತೊಂದರೆ ಇತ್ತು ಎಂದು ಸಂಬಂಧಿಕರು ಖಚಿತಪಡಿಸಿದ್ದಾರೆ ಎಂದು ಜುಮಾನಿ ಹೇಳಿದರು. "ಕಳೆದ ಎರಡು ವಾರಗಳಿಂದ ಈ ಪ್ರದೇಶದಿಂದ ವಿಚಿತ್ರವಾದ ವಾಸನೆ ಹೊರಹೊಮ್ಮುತ್ತಿದೆ ಎಂದು ಕೆಲವರು ದೂರಿದ್ದಾರೆ" ಎಂದು ಅಧಿಕಾರಿ ಹೇಳಿದರು.


Body dragged to hospital with rope for post-mortem police officer suspended
ಸಾಂದರ್ಭಿಕ ಚಿತ್ರ


ಕೆಮಾರಿ ಜಿಲ್ಲಾಧಿಕಾರಿ ಮುಖ್ತಾರ್ ಅಲಿ ಅಬ್ರೋ ಅವರು ಈ ಬಗ್ಗೆ ಕಾರ್ಖಾನೆಯ ಮಾಲೀಕರನ್ನು ಸಹ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂರು ಕಾರ್ಖಾನೆಗಳಿಂದ ಮಾದರಿಗಳನ್ನು ಸಂಗ್ರಹಿಸಿದ ರಾಜ್ಯ ಪರಿಸರ ಸಂಸ್ಥೆಗೆ ಕರೆ ಮಾಡಿದ್ದೇವೆ ಎಂದು ಹೇಳಿದರು.


ಇದನ್ನೂ ಓದಿ: Congress Vs BJP: ಎಲ್ಲವೂ ಪೇಮೆಂಟ್ ವ್ಯವಹಾರವೇ ಎಂದ ಕಾಂಗ್ರೆಸ್; ಬಿಜೆಪಿ ನಾಯಕರ ತಿರುಗೇಟು ಹೀಗಿತ್ತು


ಸಿಂಧ್ ಕೇಂದ್ರದ (ರಾಸಾಯನಿಕ ವಿಜ್ಞಾನ) ಮುಖ್ಯಸ್ಥ ಇಕ್ಬಾಲ್ ಚೌಧರಿ ಅವರು ಕಾರ್ಖಾನೆಗಳಿಂದ ಸೋಯಾಬೀನ್‌ನ ಕೆಲವು ಮಾದರಿಗಳನ್ನು ಸಂಗ್ರಹಿಸಿದ್ದಾರೆ ಮತ್ತು ಸಾವಿಗೆ ಸೋಯಾ ಅಲರ್ಜಿಯೂ ಕಾರಣ ಎಂಬುವುದು ಅವರ ಅನಿಸಿಕೆ. ಗಾಳಿಯಲ್ಲಿರುವ ಸೋಯಾಬೀನ್ ಧೂಳಿನ ಕಣಗಳು ಸಹ ಗಂಭೀರ ರೋಗಗಳು ಮತ್ತು ಸಾವುಗಳಿಗೆ ಕಾರಣವಾಗಬಹುದು ಎಂದು ಅವರು ಹೇಳಿದರು ಮತ್ತು ವಾಯು ಮಾಲಿನ್ಯ ಮತ್ತು ಹವಾಮಾನವು ದೊಡ್ಡ ಪಾತ್ರವನ್ನು ವಹಿಸುತ್ತದೆ. ನಾವು ಇನ್ನೂ ಯಾವುದೇ ಖಚಿತ ತೀರ್ಮಾನಕ್ಕೆ ಬಂದಿಲ್ಲ ಮತ್ತು ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಚೌಧರಿ ಹೇಳಿದರು.
ಪಾಕಿಸ್ತಾನದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು: 


ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು, ಹಣದುಬ್ಬರ ಉಂಟಾಗಿದೆ. ಪರಿಣಾಮವಾಗಿ ಆಹಾರ ಪದಾರ್ಥಗಳ ಬೆಲೆಯೂ ಗಗನಕ್ಕೇರಿದೆ. ಶ್ರೀಲಂಕಾ ಅನುಭವಿಸಿದ ಸಂಕಷ್ಟದ ಪರಿಸ್ಥಿತಿಯೇ ಪಾಕಿಸ್ತಾನಕ್ಕೂ ಎದುರಾಗಿದೆ. ವಿದೇಶಗಳಿಂದ ವಸ್ತು, ಪದಾರ್ಥಗಳನ್ನು ಆಮದು ಮಾಡಿಕೊಳ್ಳಲು ಡಾಲರ್ ಕೊರತೆಯೂ ದೇಶದಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡಿದೆ. ಆಹಾರ ಬಿಕ್ಕಟ್ಟು ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸರ್ಕಾರದ ವಿರುದ್ಧ ಜನ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ.

Published by:Precilla Olivia Dias
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು