China's Yutu-2 Roverನಿಂದ ಚಂದ್ರನ ಮೇಲ್ಮೈಯಲ್ಲಿ ನಿಗೂಢ ಘನಾಕಾರದ ವಸ್ತು ಪತ್ತೆ

China's Yutu-2 Rover: ರೋವರ್ ಸಮೀಪವಾಗುತ್ತಿದ್ದಂತೆ ವಸ್ತುವಿನ ನೈಜ ಸ್ವರೂಪ ಅರ್ಥಮಾಡಿಕೊಳ್ಳಲು ತಜ್ಞರಿಗೆ ಉತ್ತಮ ಚಿತ್ರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಯುಟು-2 ರೋವರ್‌

ಯುಟು-2 ರೋವರ್‌

  • Share this:
2019ರ ಆರಂಭದಿಂದ ಚಂದ್ರನ ದೂರದ ಭಾಗವನ್ನು ಅನ್ವೇಷಣೆ (mysterious)ನಡೆಸುತ್ತಿರುವ ಚೀನಾದ(chinas) Yutu-2 ರೋವರ್ ಅನ್ನು ಉತ್ತರ ದಿಗಂತದಲ್ಲಿ ಗುರುತಿಸಲಾದ ನಿಗೂಢ ಘನಾಕಾರದ ವಸ್ತುವಿನ ತನಿಖೆಗೆ ಇತ್ತೀಚೆಗೆ ಕಳುಹಿಸಲಾಗಿದೆ. ಚೀನಾದ ಬಾಹ್ಯಾಕಾಶ ಕಾರ್ಯಕ್ರಮವನ್ನು ವರದಿ ಮಾಡುವ ಪತ್ರಕರ್ತ ಆ್ಯಂಡ್ರ್ಯೂ ಜೋನ್ಸ್(Andrew Jones) ರೋವರ್ ಅಪ್‌ಡೇಟ್‌ಗಳನ್ನು ಸರಣಿ ಟ್ವೀಟ್‌ಗಳ ಮೂಲಕ ಹಂಚಿಕೊಂಡಿದ್ದಾರೆ. ಮೊದಲ ಟ್ವೀಟ್‌ನಲ್ಲಿ ಯುಟು-2 ಉತ್ತರ ದಿಗಂತದಲ್ಲಿ(Northern Horizon) ಘನ (cube)ಆಕಾರದ ವಸ್ತುವಿನ ಚಿತ್ರ ಸೆರೆಹಿಡಿಆ್ಯಂಡ್ರ್ಯೂ ದಿದೆ ಎಂದು ಬರೆದುಕೊಂಡಿದ್ದು ವಾನ್ ಕಾರ್ಮನ್ ಜ್ವಾಲಾಮುಖಿಯ ಬಾಯಿಯಲ್ಲಿರುವ ರೋವರ್‌ನಿಂದ 80 ಮೀ ದೂರದಲ್ಲಿದೆ. ನಂತರ ಟ್ವೀಟ್‌ನಲ್ಲಿ ಹರಳು ಹರಳಾದ ಚಿತ್ರದಲ್ಲಿ ಕಂಡುಬಂದ ವಸ್ತುವು ಒಬೆಲಿಸ್ಕ್(Obelisk) (ಒಂದು ಮೊನಚಾದ ಕಲ್ಲಿನ ಕಂಬ) ಅಥವಾ ಏಲಿಯನ್ಸ್ (Aliens)ಅಲ್ಲ ಎಂದು ಬರೆದುಕೊಂಡಿದ್ದಾರೆ.

ಜೆಲ್ ರೀತಿಯ ವಸ್ತು:

ವರದಿಗಳು ತಿಳಿಸಿರುವಂತೆ, ಯುಟು-2 ರೋವರ್‌ನಿಂದ ಸುಮಾರು 80 ಮೀಟರ್ ದೂರದಲ್ಲಿದೆ ಎಂದು ಅಂದಾಜಿಸಲಾದ ಘನಾಕೃತಿಯ ರಚನೆಯಿಂದ ಸಂಶೋಧಕರು ದಿಗ್ಮೂಢರಾಗಿದ್ದರು. ರೋವರ್ ಸಮೀಪವಾಗುತ್ತಿದ್ದಂತೆ ವಸ್ತುವಿನ ನೈಜ ಸ್ವರೂಪ ಅರ್ಥಮಾಡಿಕೊಳ್ಳಲು ತಜ್ಞರಿಗೆ ಉತ್ತಮ ಚಿತ್ರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಚಂದ್ರನ ಮೇಲ್ಮೈಯಲ್ಲಿ ವೃತ್ತಾಕಾರದ ಕುಳಿಗಳನ್ನು ಗುರುತಿಸಲಾಗಿರುವುದರಿಂದ ತಜ್ಞರು ಅದರ ದೊಡ್ಡ ಬಂಡೆಯ ಪ್ರಮಾಣ ಕಂಡುಹಿಡಿದಿದ್ದಾರೆ.

ಇದನ್ನೂ ಓದಿ: Sunset in Mars: ಮಂಗಳ ಗ್ರಹದಲ್ಲಿ ಸೂರ್ಯಾಸ್ತ ಹೇಗಿರುತ್ತೆ ಗೊತ್ತಾ..? ನಾಸಾ ರೋವರ್‌ ತೆಗೆದಿರುವ ಅದ್ಭುತ ಚಿತ್ರ ನೋಡಿ..

2019ರಿಂದ ಯುಟು-2 ರೋವರ್ ಕಂಡುಹಿಡಿದ ಏಕೈಕ ವಿಚಿತ್ರ ಸಂಗತಿ ಇದು ಮೊದಲಲ್ಲ. ಅದರ ವಿಶೇಷ ಕಾರ್ಯಯಾತ್ರೆಯ ಆರಂಭದ ದಿನಗಳಲ್ಲಿ ಉಪಗ್ರಹದ ಮೇಲಿನ ಕುಳಿಯ ಕೆಳಭಾಗದಲ್ಲಿ ಇದು ಜೆಲ್ ರೀತಿಯ ವಸ್ತುವನ್ನು ಅನ್ವೇಷಿಸಿತ್ತು. ಆದರೆ ಅದು ಬಂಡೆಯಾಗಿ ಮಾರ್ಪಟ್ಟಿತು.

ಸರಳವಾದ ಲ್ಯಾಂಡಿಂಗ್
ಯುಟು-2 ರೋವರ್ 2019ರಲ್ಲಿ Chang'e-4 ಲ್ಯಾಂಡರ್ ಬಳಸಿಕೊಂಡು ಚಂದ್ರನ ದೂರ ಭಾಗದಲ್ಲಿ (ಅಂದರೆ ಚಂದ್ರನ ದೂರದ ಭಾಗವು ಚಂದ್ರನ ಗೋಳಾರ್ಧವಾಗಿದ್ದು, ಅದು ಯಾವಾಗಲೂ ಭೂಮಿಯಿಂದ ದೂರದಲ್ಲಿದೆ, ಸಮೀಪ ಭಾಗಕ್ಕೆ ವಿರುದ್ಧವಾಗಿರುತ್ತದೆ) ಸರಳವಾದ ಲ್ಯಾಂಡಿಂಗ್ ಮಾಡಿತು. ಯುಟು-2 ಮತ್ತು ಚಾಂಗ್'-4 ಲ್ಯಾಂಡರ್ ತಮ್ಮ 37ನೇ ಚಂದ್ರನ ದಿನದ ಚಟುವಟಿಕೆಗಳನ್ನು ಪೂರ್ಣಗೊಳಿಸಿದೆ ಎಂದು ಜೋನ್ಸ್ ತನ್ನ ಫಾಲೋವರ್ಸ್‌ಗೆ ತಿಳಿಸಿದ್ದಾರೆ.

ಯುಟು-2 ರೋವರ್ ಎಂದರೇನು?
2019ರಲ್ಲಿ ಚಂದ್ರನ ದಕ್ಷಿಣ ಧ್ರುವ-ಐಟ್ಕೆನ್ ಜಲಾನಯನ ಪ್ರದೇಶದೊಳಗೆ ಚಾಂಗ್'ಇ-4 ಮಿಷನ್ ಮೂಲಕ ಯುಟು-2 ಅನ್ನು ಚಂದ್ರನ ಮೇಲ್ಮೈಯ ದೂರದ ಭಾಗದಲ್ಲಿ ಇಳಿಸಲಾಯಿತು. ಸೂರ್ಯನ ಬೆಳಕನ್ನು ಎಂದಿಗೂ ನೋಡಿಲ್ಲದ ಮತ್ತು ಇದು ಆರಂಭಿಕ ಸೌರವ್ಯೂಹ ಮತ್ತು ಭೂಮಿಯ ಬಗ್ಗೆ ಮಾಹಿತಿ ಹೊಂದಿರಬಹುದೆಂದು ವಿಜ್ಞಾನಿಗಳು ಊಹಿಸಿರುವ ಮೇಲ್ಮೈಯನ್ನು ರೋವರ್ ಅನ್ವೇಷಿಸುತ್ತಿದೆ. CNET ಪ್ರಕಾರ, ವಸ್ತುವಿಗೆ "ಮಿಸ್ಟರಿ ಹೌಸ್" (Mystery House On Moon) ಎಂದು ಹೆಸರಿಸಲಾಗಿದೆ. ಉತ್ತಮ ನೋಟವನ್ನು ಪಡೆಯಲು ವಿಜ್ಞಾನಿಗಳು ರೋವರ್ ಅನ್ನು ಅದರ ಹತ್ತಿರ ಕಳುಹಿಸುವ ಸಾಧ್ಯತೆಯಿದೆ.

ಚಂದ್ರನ ಮೇಲ್ಮೈಯ ಅಧ್ಯಯನ
ಚಂದ್ರನ ಸೂಕ್ಷ್ಮಗ್ರಾಹಿ ರಾಡಾರ್ ಅದರ ರೆಗೋಲಿತ್ ಅಧ್ಯಯನ ಮಾಡುವುದರ ಜೊತೆಗೆ 100 ಮೀಟರ್‌ಗಿಂತಲೂ ಹೆಚ್ಚು ಉಪಮೇಲ್ಮೈ ನೋಡಲು ರೋವರ್ 2 ಬಣ್ಣದ ಕ್ಯಾಮೆರಾಗಳನ್ನು ಒಳಗೊಂಡಿದೆ. ಕಾಣುವ ಹಾಗೂ ಸಮೀಪ – ಅವರೋಹಿತ ಇಮೇಜಿಂಗ್ ಸ್ಪೆಕ್ಟ್ರೋಮೀಟರ್ ಚಂದ್ರನ ಮೇಲ್ಮೈಯ ಖನಿಜ ಸಂಯೋಜನೆಯನ್ನು ಅಧ್ಯಯನ ಮಾಡುತ್ತದೆ ಮತ್ತು ಸೌರ ಮಾರುತವು ಚಂದ್ರನ ರೆಗೋಲಿತ್‌ನೊಂದಿಗೆ ಹೇಗೆ ಸಂವಹನ ನಡೆಸುತ್ತದೆ ಎಂಬುದನ್ನು ನಿರ್ಧರಿಸುತ್ತದೆ.

ಇದನ್ನೂ ಓದಿ: New Planet: ಈ ಗ್ರಹದಲ್ಲಿ 16 ಗಂಟೆಗೆ ಒಂದು ವರ್ಷ! NASA ಹುಡುಕಿದ ಹೊಸಾ ಗ್ರಹದಲ್ಲಿ ಇನ್ನೇನಿದೆ?

ಊಹಾಪೋಹ
2019 ರಲ್ಲಿ, ಯುಟು-2 (Yutu-2 moon rover)ಚಂದ್ರನ ಮೇಲೆ "ಹಸಿರು-ಲೇಪಿತ ಜೆಲ್ ತರಹದ ವಸ್ತು" ವನ್ನು (green-tinged gel-like substance) ಕಂಡುಹಿಡಿದಿದೆ. ಹೆಚ್ಚು ನಿರ್ದಿಷ್ಟವಾಗಿ, ಖನಿಜಗಳು ಮತ್ತು ಬಂಡೆಗಳು ಒಟ್ಟಿಗೆ ಬೆಸೆದಾಗ ರೂಪುಗೊಳ್ಳುವ ಕಲ್ಲಿನಂತಹ ವಸ್ತು ಇರಬಹುದು ಎನ್ನಲಾಗಿದೆ. ಇನ್ನೂ, ಕ್ಯೂಬ್ ಆಕಾರದ ವಸ್ತು ಏನಾಗಿರಬಹುದು ಎಂಬುದರ ಕುರಿತು ಊಹಾಪೋಹಗಳು ಹರಿದಾಡುತ್ತಿವೆ.
Published by:vanithasanjevani vanithasanjevani
First published: