ತಮಿಳುನಾಡು ದೇವಾಲಯದ ಕಲ್ಯಾಣಿಯಲ್ಲಿ ನಿಗೂಢ ಸ್ಪೋಟ; ಓರ್ವ ಸಾವು, ಐವರಿಗೆ ಗಾಯ

ದೇಶದೊಳಗೆ ಉಗ್ರರು ನುಸುಳುತ್ತಾರೆಂಬ ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿಯಂತೆ, ಎಲ್ಲೆಡೆ ಈಗ ಹೈ ಅಲರ್ಟ್​ ಘೋಷಣೆ ಮಾಡಲಾಗಿದೆ. ಆದರೆ ಈ ಸ್ಪೋಟಕ್ಕೂ ಉಗ್ರರಿಗೂ ಸಂಬಂಧವಿಲ್ಲ. ಇದು ಸಂಪೂರ್ಣ ವಿಭಿನ್ನ ಸ್ಪೋಟವಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ಧಾರೆ.

Latha CG | news18
Updated:August 26, 2019, 3:10 PM IST
ತಮಿಳುನಾಡು ದೇವಾಲಯದ ಕಲ್ಯಾಣಿಯಲ್ಲಿ ನಿಗೂಢ ಸ್ಪೋಟ; ಓರ್ವ ಸಾವು, ಐವರಿಗೆ ಗಾಯ
ಪ್ರಾತಿನಿಧಿಕ ಚಿತ್ರ
Latha CG | news18
Updated: August 26, 2019, 3:10 PM IST
ಚೆನ್ನೈ,(ಆ.26): ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ದೇವಾಲಯದ ಕಲ್ಯಾಣಿಯಲ್ಲಿ ನಿಗೂಢ ಸ್ಫೋಟವಾಗಿದ್ದು, ಓರ್ವ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಐವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.

ಭಾನುವಾರ ದೇವಸ್ಥಾನದ ಕಲ್ಯಾಣಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ವಸ್ತುವೊಂದು ಏಕಾಏಕಿ ಸ್ಪೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಈ ಸ್ಪೋಟ ಯಾವುದೇ ಭಯೋತ್ಪಾದಕ ಚಟುವಟಿಕೆಗೆ ಸಂಬಂಧಿಸಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಕಾಂಚಿಪುರಂ ಜಿಲ್ಲೆಯ ಗಂಗಾಯಿ ಅಮ್ಮನ್​ ಕೋಯಿಲ್​ ಬಳಿ ಈ ಘಟನೆ ಸಂಭವಿಸಿದೆ. ಇಲ್ಲಿ ಇರುವ ಕಲ್ಯಾಣಿ ಸಾಕಷ್ಟು ವರ್ಷಗಳಿಂದ ಪಾಳು ಬಿದ್ದಿತ್ತು. ಕೆಲವು ದಿನಗಳ ಹಿಂದೆ ಅಲ್ಲಿನ ನಿವಾಸಿಗಳು ಕಲ್ಯಾಣಿಯನ್ನು ಸ್ವಚ್ಛಗೊಳಿಸಲು ಮುಂದಾಗಿದದ್ದರು. ಆಗ ಕಲ್ಯಾಣಿಯಲ್ಲಿ ಅಪರಿಚಿತ ವಸ್ತುಗಳು ಪತ್ತೆಯಾಗಿವೆ. ಅವುಗಳನ್ನು ಹೊರತೆಗೆಯಲು ಯತ್ನಿಸಿದಾಗ ಸ್ಫೋಟಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Video: ಹಿಮಾಚಲಪ್ರದೇಶದಲ್ಲಿ ಮಳೆಯಿಂದ ರಸ್ತೆ ಕುಸಿತ; ಕಬ್ಬಿಣದ ಪೈಪ್ ಮೇಲೆ ಕಾರಿನ ಸವಾರಿ! ಇಲ್ಲಿದೆ ವಿಡಿಯೋ

ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟ ವ್ಯಕ್ತಿ ಕೆ.ಸೂರ್ಯ ಎಂದು ತಿಳಿದುಬಂದಿದೆ. ಕಾಂಚಿಪುರಂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

ದೇಶದೊಳಗೆ ಉಗ್ರರು ನುಸುಳುತ್ತಾರೆಂಬ ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿಯಂತೆ, ಎಲ್ಲೆಡೆ ಈಗ ಹೈ ಅಲರ್ಟ್​ ಘೋಷಣೆ ಮಾಡಲಾಗಿದೆ. ಆದರೆ ಈ ಸ್ಪೋಟಕ್ಕೂ ಉಗ್ರರಿಗೂ ಸಂಬಂಧವಿಲ್ಲ. ಇದು ಸಂಪೂರ್ಣ ವಿಭಿನ್ನ ಸ್ಪೋಟವಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ಧಾರೆ.

First published:August 26, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...