• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಮಯನ್ಮಾರ್​ ನಾಯಕಿ ಅಂಗ್ ಸಾನ್ ಸೂಕಿ ಬಂಧಿಸಿದ ಸೇನೆ; ಒಂದು ವರ್ಷ ರಾಜ್ಯ ತುರ್ತು ಪರಿಸ್ಥಿತಿ ಘೋಷಣೆ

ಮಯನ್ಮಾರ್​ ನಾಯಕಿ ಅಂಗ್ ಸಾನ್ ಸೂಕಿ ಬಂಧಿಸಿದ ಸೇನೆ; ಒಂದು ವರ್ಷ ರಾಜ್ಯ ತುರ್ತು ಪರಿಸ್ಥಿತಿ ಘೋಷಣೆ

ಅಂಗ್ ಸಾನ್ ಸೂಕಿ

ಅಂಗ್ ಸಾನ್ ಸೂಕಿ

ಮಯನ್ಮಾರ್​ನಲ್ಲಿ ಹೊಸದಾಗಿ ಚುನಾಯಿತವಾದ ಸಂಸತ್ತು ಫೆಬ್ರವರಿ 1 ರಂದು ನಾಯ್ಪಿಟಾವ್‌ನಲ್ಲಿ ತನ್ನ ಮೊದಲ ಅಧಿವೇಶನಕ್ಕೆ ಸಭೆ ಸೇರುವ ನಿರೀಕ್ಷೆಯಿತ್ತು. ಈ ನಡುವೆ ಈ ಘಟನೆ ನಡೆದಿದೆ. ಅಲ್ಲದೆ ಕಳೆದ ಕೆಲವು ದಿನಗಳಿಂದ ಮಯನ್ಮಾರ್ ರಾಜಧಾನಿ ಸೇರಿ ಪ್ರಮುಖ ನಗರಗಳಲ್ಲಿ ಸೇನೆಯ ಓಡಾಟ ಇತ್ತು, ಇಂಟರ್‌ನೆಟ್ ಸೇವೆ‌ಗಳನ್ನು ಸ್ಥಗಿತಗೊಳಿಸಲಾಗಿತ್ತು ಎಂದು ತಿಳಿದುಬಂದಿದೆ.

ಮುಂದೆ ಓದಿ ...
  • Share this:

    ನೇಪ್ಯಿಡಾವ್; ಮಯನ್ಮಾರ್​ನ ಮಿಲಿಟರಿ ಪಡೆ ಅಲ್ಲಿನ ಆಡಳಿತ ಪಕ್ಷದ ನಾಯಕಿ ಅಂಗ್ ಸಾನ್ ಸೂಕಿ ಮತ್ತು ರಾಷ್ಟ್ರದ ಅಧ್ಯಕ್ಷರನ್ನು ಬಂಧಿಸಿದೆ ಎಂದು ಸೂಕಿ ಪಕ್ಷದ ವಕ್ತಾರ ಸೋಮವಾರ ಹೇಳಿದ್ದಾರೆ. ದೇಶದಲ್ಲಿ ಒಂದು ವರ್ಷ ರಾಜ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.


    ಅಂಗ್​ ಸಾನ್ ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್​ಎಲ್​ಡಿ) ಪಕ್ಷ ಚುನಾವನೆಯಲ್ಲಿ ಸುಲಭವಾಗಿ ಜಯಗಳಿಸಿತ್ತು. ಆದರೆ, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಅಲ್ಲಿನ ಸೇನೆ ಕಳೆದ ವಾರ ಆರೋಪ ಮಾಡಿತ್ತು.


    ಅಂಗಸಾನ್ ಸೂಕಿ ಮತ್ತು ಅಧ್ಯಕ್ಷ ವಿನ್ ಮೈಂಟ್ ಅವರನ್ನು ರಾಜಧಾನಿ ನೇಪ್ಯಿಡಾವ್​ನಲ್ಲಿ ಬಂಧಿಸಲಾಗಿದೆ ಎಂದು ಎನ್​ಎಲ್​ಡಿ ಪಕ್ಷದ ವಕ್ತಾರ ಮೈಯೋ ನ್ಯೂಂಟ್​ ಅವರು ತಿಳಿಸಿದ್ದಾರೆ.


    ಮಿಲಿಟರಿ ದಂಗೆಯ ಆರೋಪವನ್ನು ಅಲ್ಲಿನ ಸೇನೆ ತಳ್ಳಿ ಹಾಕಿದೆ. ಆದರೆ ಆಡಳಿತ ಪಕ್ಷವು ನವೆಂಬರ್ ಚುನಾವಣೆಯಲ್ಲಿ ಭರ್ಜರಿ ಜಯವನ್ನು ಘೋಷಿಸಿದಾಗಿನಿಂದ ದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ಅಲ್ಲಿನ ಮಿಲಟರಿ ಆರೋಪಿಸಿದೆ. ಇದೇ ಕಾರಣಕ್ಕೆ ಇದೀಗ ಇಲ್ಲಿನ ಸೇನೆ ಸರಕಾರವನ್ನು ಉರುಳಿಸಲು ಮುಂದಾಗಿದೆ ಎನ್ನಲಾಗಿದೆ.


    ಇದನ್ನು ಓದಿ: Budget 2021: ನಿರ್ಮಲಾ ಸೀತಾರಾಮನ್ 3ನೇ ಬಾರಿ ಪೂರ್ಣಾವಧಿ ಬಜೆಟ್ ಮಂಡಿಸುವ ಮುನ್ನ ನೀವು ತಿಳಿದಿರಬೇಕಾದ ಅಂಶ


    ಮಯನ್ಮಾರ್​ನಲ್ಲಿ ಹೊಸದಾಗಿ ಚುನಾಯಿತವಾದ ಸಂಸತ್ತು ಫೆಬ್ರವರಿ 1 ರಂದು ನಾಯ್ಪಿಟಾವ್‌ನಲ್ಲಿ ತನ್ನ ಮೊದಲ ಅಧಿವೇಶನಕ್ಕೆ ಸಭೆ ಸೇರುವ ನಿರೀಕ್ಷೆಯಿತ್ತು. ಈ ನಡುವೆ ಈ ಘಟನೆ ನಡೆದಿದೆ. ಅಲ್ಲದೆ ಕಳೆದ ಕೆಲವು ದಿನಗಳಿಂದ ಮಯನ್ಮಾರ್ ರಾಜಧಾನಿ ಸೇರಿ ಪ್ರಮುಖ ನಗರಗಳಲ್ಲಿ ಸೇನೆಯ ಓಡಾಟ ಇತ್ತು, ಇಂಟರ್‌ನೆಟ್ ಸೇವೆ‌ಗಳನ್ನು ಸ್ಥಗಿತಗೊಳಿಸಲಾಗಿತ್ತು ಎಂದು ತಿಳಿದುಬಂದಿದೆ.


    ಕಳೆದ ಹಲವು ವರ್ಷಗಳಿಂದ ಮಯನ್ಮಾರ್​ನಲ್ಲಿ ಸರ್ವಾಧಿಕಾರದ ಆಡಳಿತವಿದೆ. ಆದರೆ 2010ರಿಂದ ನಾಗರಿಕರಿಗೆ ಆಡಳಿತವನ್ನು ಸೇನೆ ಹಸ್ತಾಂತರ ಮಾಡಿತ್ತು. ಬಳಿಕ ಚುನಾವಣೆಯಲ್ಲಿ ಗೆದ್ದು ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ನಾಯಕಿ ಆಂಗ್ ಸಾನ್ ಸೂಕಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಇದೀಗ ಮತ್ತೆ ಅಲ್ಲಿನ ಆಡಳಿತ ಮಿಲಿಟರಿ ಕೈ ಸೇರುವ ಸಾಧ್ಯತೆ ದಟ್ಟವಾಗಿದೆ.

    Published by:HR Ramesh
    First published: