Aung San Suu Kyi: ಅಂಗ್ ಸಾನ್ ಸೂಕಿಗೆ 6 ವರ್ಷ ಜೈಲು; ಮಯನ್ಮಾರ್​ನಲ್ಲಿ ಏನಾಗ್ತಿದೆ?

ಅಂಗ್ ಸಾನ್ ಸೂಕಿ

ಅಂಗ್ ಸಾನ್ ಸೂಕಿ

ಕಳೆದ 30 ವರ್ಷಗಳಿಂದ ಅಂಗ್ ಸಾನ್ ಸೂಕಿ ಮಯನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಪರ ಹೋರಾಟ ನಡೆಸುತ್ತಿದ್ದಾರೆ. ಆದರೆ ಈಗ ಅವರಿಗೆ ಮತ್ತೊಮ್ಮೆ ಜೈಲುಶಿಕ್ಷೆ ವಿಧಿಸಿದ್ದರಿಂದ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯನ್ನು ಕಿತ್ತುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

  • Share this:

ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಯನ್ಮಾರ್​ನ (Myanmar Updates) ಉಚ್ಛಾಟಿತ ಪ್ರಧಾನಿ ಅವರಿಗೆ ಮತ್ತೆ 6 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ. ಮಯನ್ಮಾರ್ ಜುಂಟಾ ನ್ಯಾಯಾಲಯವು ಸೋಮವಾರ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಆಂಗ್ ಸಾನ್ ಸೂಕಿ ಅವರಿಗೆ ಆರು ವರ್ಷಗಳ ಜೈಲು ಶಿಕ್ಷೆ (Aung San Suu Kyi Jailed) ವಿಧಿಸಿದೆ.  ಸೂಕಿ ಅವರಿಗೆ ನಾಲ್ಕು ಭ್ರಷ್ಟಾಚಾರ ವಿರೋಧಿ ಆರೋಪಗಳ ಅಡಿಯಲ್ಲಿ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅವರು ಮಾಧ್ಯಮಗಳೊಂದಿಗೆ ಮಾತನಾಡಲು ಅಧಿಕಾರ ಹೊಂದಿಲ್ಲದ ಕಾರಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಯನ್ಮಾರ್​ನ ನೈಪಿಟಾಲ್​ ಜೈಲಿನಲ್ಲಿ ಅಂಗ್ ಸಾನ್ ಸೂಕಿ (Aung San Suu Kyi) ಅವರನ್ನು ಇರಿಸಲಾಗಿದ್ದು ಅವರಿಗೆ ಈಗಾಗಲೇ 11 ವರ್ಷಗಳ ಸೆರೆಮನೆವಾಸ ವಿಧಿಸಲಾಗಿತ್ತು.


ಇನ್ನೂ ಹೆಚ್ಚಿನ ಜೈಲುಶಿಕ್ಷೆ?
ಕಳೆದ ವರ್ಷ ಫೆಬ್ರವರಿಯಲ್ಲಿ ಮಿಲಿಟರಿ ದಂಗೆ ನಡೆಸಿ ಅಂಗ್ ಸಾನ್ ಸೂಕಿ ಅವರ ಸರ್ಕಾರವನ್ನು ಉರುಳಿಸಿದ ನಂತರ 77 ವರ್ಷದ ನಾಯಕಿಯನ್ನು ಬಂಧಿಸಲಾಗಿತ್ತು. ಇದರ ನಂತರ ಅವರು ಅಧಿಕೃತ ರಹಸ್ಯ ಕಾಯಿದೆಯ ಉಲ್ಲಂಘನೆ, ಭ್ರಷ್ಟಾಚಾರ ಮತ್ತು ಚುನಾವಣಾ ವಂಚನೆಯಂತಹ ಆರೋಪಗಳ ಸರಣಿಯನ್ನು ಎದುರಿಸಿದ್ದರು. ಈ ಆರೋಪಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಅಂಗ್ ಸಾನ್ ಸೂಕಿ ಇನ್ನಷ್ಟು ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.


2,000 ಕ್ಕೂ ಹೆಚ್ಚು ನಾಗರಿಕರ ಸಾವು, 17,000 ಜನರ ಬಂಧನ
ಕಳೆದ ವರ್ಷದ   ಫೆಬ್ರವರಿಯಲ್ಲಿ ಮಯನ್ಮಾರ್​ನಲ್ಲಿ ದಂಗೆಯು ವ್ಯಾಪಕ ಪ್ರತಿಭಟನೆಗಳು ಮತ್ತು ಅಶಾಂತಿಯನ್ನು ಹುಟ್ಟುಹಾಕಿತ್ತು. ಇದನ್ನು ಮಿಲಿಟರಿ ಬಲದಿಂದ ಹತ್ತಿಕ್ಕಲು ಪ್ರಯತ್ನಿಸಿತು. ಸ್ಥಳೀಯ ಮೇಲ್ವಿಚಾರಣಾ ಗುಂಪಿನ ಪ್ರಕಾರ ದಂಗೆ ಹತ್ತಿಕ್ಕಿದಾಗ 2,000 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದರು. ಅಲ್ಲದೇ ಸುಮಾರು 17,000 ಜನರನ್ನು ಬಂಧಿಸಲ್ಪಟ್ಟಿದ್ದರು.


ಇದನ್ನೂ ಓದಿ: Telangana: ತ್ರಿವರ್ಣ ಧ್ವಜ ಹಾರಿಸಿದ ಕೆಲವೇ ಕ್ಷಣಗಳಲ್ಲಿ ಟಿಆರ್‌ಎಸ್ ನಾಯಕನ ಹತ್ಯೆ, ಸೆಕ್ಷನ್ 144 ಜಾರಿ!


ಅಂಗ್ ಸಾನ್ ಸೂಕಿ ಚುನಾವಣೆಗೆ ಮತ್ತೆ ನಿಲ್ತಾರಾ?
ಕಳೆದ 30 ವರ್ಷಗಳಿಂದ ಅಂಗ್ ಸಾನ್ ಸೂಕಿ ಮಯನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಪರ ಹೋರಾಟ ನಡೆಸುತ್ತಿದ್ದಾರೆ. ಆದರೆ ಈಗ ಅವರಿಗೆ ಮತ್ತೊಮ್ಮೆ ಜೈಲುಶಿಕ್ಷೆ ವಿಧಿಸಿದ್ದರಿಂದ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯನ್ನು ಕಿತ್ತುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.


ಇನ್ನೋರ್ವ ನಾಯಕನಿಗೆ 75 ವರ್ಷ ಶಿಕ್ಷೆ
ಮಯನ್ಮಾರ್​ನಲ್ಲಿ ದಂಗೆಯ ನಂತರ ಅಂಗ್ ಸಾನ್ ಸೂಕಿ ಅವರ ಅನೇಕ ರಾಜಕೀಯ ಮಿತ್ರರನ್ನು ಸಹ ಬಂಧಿಸಲಾಗಿದೆ, ಓರ್ವ ನಾಯಕನಿಗೆ ಬರೋಬ್ಬರಿ 75 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.


ಕಳೆದ ತಿಂಗಳು ಮಯನ್ಮಾರ್​ನ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷದ ಮಾಜಿ ಶಾಸಕ ಫಿಯೋ ಜೆಯಾ ಥಾವ್ ಅವರನ್ನು ಭಯೋತ್ಪಾದನಾ ವಿರೋಧಿ ಕಾನೂನುಗಳ ಅಡಿಯಲ್ಲಿ ಅಪರಾಧಗಳಿಗಾಗಿ ಗಲ್ಲಿಗೇರಿಸಲಾಗಿತ್ತು. ಆಗ ಮಯನ್ಮಾರ್ ಸರ್ಕಾರದ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಭಅರೀ ಆಕ್ರೋಶ ಹುಟ್ಟಿಕೊಂಡಿತ್ತು. 


ಯೂರೋಪಿಯನ್ ಯೂನಿಯನ್ ಖಂಡನೆ
ಯೂರೋಪ್​ನ ವಿದೇಶಾಂಗ ನೀತಿ ಮುಖ್ಯಸ್ಥ ಜೋಸೆಪ್ ಬೊರೆಲ್ ಅವರು ಭ್ರಷ್ಟಾಚಾರದ ಆರೋಪದಲ್ಲಿ ಆಂಗ್ ಸಾನ್ ಸೂಕಿಗೆ ಆರು ವರ್ಷಗಳವರೆಗೆ ಮ್ಯಾನ್ಮಾರ್ ನ್ಯಾಯಾಲಯದ ಶಿಕ್ಷೆ ವಿಧಿಸಿದ್ದನ್ನು ಸೋಮವಾರ ಖಂಡಿಸಿದ್ದಾರೆ.  ಅಲ್ಲದೇ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಕರೆ ನೀಡಿದ್ದಾರೆ.ಇತ್ತೀಚಿನ ಅಪರಾಧದ ನಂತರ ಉಚ್ಚಾಟಿತ ನಾಯಕಿ ಈಗ 17 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದಾರೆ.


ಇದನ್ನೂ ಓದಿ: Independence Day: ಶ್ರೀನಗರದ ಲಾಲ್​ಚೌಕ್​ನಲ್ಲಿ ಮೊಳಗಿದ ವಂದೇ ಮಾತರಂ, ಭಯೋತ್ಪಾದಕರಿಗೆ ತಕ್ಕ ಉತ್ತರ!


ಅಂಗ್ ಸಾನ್ ಸೂಕಿಗೆ ಹೆಚ್ಚುವರಿ ಆರು ವರ್ಷಗಳ ಬಂಧನಕ್ಕೆ ವಿಧಿಸಲಾದ ಅನ್ಯಾಯದ ಶಿಕ್ಷೆಯನ್ನು ನಾನು ಖಂಡಿಸುತ್ತೇನೆ ಎಂದು ಬೊರೆಲ್ ಟ್ವಿಟರ್‌ನಲ್ಲಿ ಬರೆದಿದ್ದಾರೆ. ತಕ್ಷಣ ಮತ್ತು ಬೇಷರತ್ತಾಗಿ ಅವಳನ್ನು ಬಿಡುಗಡೆ ಮಾಡುವಂತೆ ಮ್ಯಾನ್ಮಾರ್ ಆಡಳಿತಕ್ಕೆ ಕರೆ ನೀಡಿದ್ದಾರೆ. ಎಲ್ಲಾ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಲು ಮತ್ತು ಜನರ ಇಚ್ಛೆಯನ್ನು ಗೌರವಿಸಲ  ಅವರು ಏಷ್ಯಾದ ರಾಷ್ಟ್ರದ ಮಿಲಿಟರಿಯನ್ನು  ಒತ್ತಾಯಿಸಿದರು.

top videos
    First published: