Divorce Case: ಮದುವೆ ಬಳಿಕ ದಪ್ಪಗಾಗಿದ್ದೀ, ನಜ್ಮಾಗೆ ಡೈವೋರ್ಸ್​ ಕೊಟ್ಟ ಸಲ್ಮಾನ್!

ಪತಿ ತನಗೆ ಥಳಿಸಿ ವಿಚ್ಛೇದನ ನೀಡಿದ್ದು, ನೀನು ದಪ್ಪಗಾದೆ, ನಿನ್ನ ಜೊತೆ ಬಾಳಲು ಇಷ್ಟವಿಲ್ಲ ಎಂದು ಹೇಳುತ್ತಾನೆ ಎಂದು ಮೀರತ್ ನಿವಾಸಿ ನಜ್ಮಾ ಆರೋಪಿಸಿದ್ದಾರೆ. ಆಕೆಯ ಪತಿ ಕೂಡ ವಿಚ್ಛೇದನದ ನೋಟಿಸ್ ನೀಡಿದ್ದಾರೆ. ನಜ್ಮಾ ಮತ್ತು ಸಲ್ಮಾನ್‌ಗೆ 7 ವರ್ಷದ ಮಗನಿದ್ದಾನೆ. ನಜ್ಮಾ ತನಗೆ 7 ವರ್ಷದ ಮಗನಿದ್ದಾನೆ, ನನ್ನ ಪಾಡೇನು ಎಂದು ಕಣ್ಣೀರು ಹಾಕಿದ್ದಾರೆ.

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಲಕ್ನೋ(ಸೆ.01): ಗಂಡ-ಹೆಂಡತಿ ಜಗಳ (Husband Wife Fight) ತಾರಕಕ್ಕೇರಿ, ವಿಚ್ಛೇದನ ಪಡೆದ ಅನೇಕ ಪ್ರಕರಣಗಳನ್ನು ನೀವು ಕೇಳಿರಬಹುದು. ಆದರೀಗ ಮೀರತ್​ನಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೌದು, ಮದುವೆಯಾದ ಬಳಿಕ ಪತ್ನಿ ದಪ್ಪಗಾಗಿದ್ದಾಳೆಂದು ಆಕೆಗೆ ಪತಿ ವಿಚ್ಛೇದನ (Divorce) ನೀಡಿದ್ದಾನೆ. ಪತಿ ತನಗೆ ಥಳಿಸಿ ವಿಚ್ಛೇದನ ನೀಡಿದ್ದಾನೆ ಎಂದು ಪತ್ನಿ ಆರೋಪಿಸಿದ್ದು, ನೀನು ದಪ್ಪಗಾದೆ, ನಿನ್ನ ಜೊತೆ ಬಾಳಲು ಬಯಸುವುದಿಲ್ಲ ಎಂದು ಹೇಳಿದ್ದಾನೆ. ಆಕೆಯ ಪತಿ ಕೂಡ ವಿಚ್ಛೇದನದ ನೋಟಿಸ್ ನೀಡಿದ್ದಾರೆ. ವಿವಾಹಿತ ಮಹಿಳೆ ತಾನು ತನ್ನ ಪತಿಯೊಂದಿಗೆ ಬದುಕಲು ಬಯಸುತ್ತೇನೆ ಆದರೆ ತನ್ನ ಪತಿ ನನ್ನನ್ನು ಆತನೊಂದಿಗೆ ಉಳಿಸಿಕೊಳ್ಳಲು ಸಿದ್ಧವಾಗಿಲ್ಲ ಎಂದು ಹೇಳಿದ್ದಾರೆ.

    ಮೀರತ್‌ನ ಝಾಕಿರ್ ಕಾಲೋನಿಯ ನಿವಾಸಿ ನಜ್ಮಾ ಅವರು ಮೀರತ್‌ನ ಫತಾಹ್‌ಪುರ ನಿವಾಸಿ ಸಲ್ಮಾನ್‌ನೊಂದಿಗೆ 8 ವರ್ಷಗಳ ಹಿಂದೆ ವಿವಾಹವಾಗಿದ್ದರು. ಅವರಿಗೆ ಏಳು ವರ್ಷದ ಮಗನೂ ಇದ್ದಾನೆ. ಪತಿ ತನಗೆ ಮೊದಲು ವಿಚ್ಛೇದನದ ನೋಟಿಸ್ ನೀಡಿದ್ದರು ಎಂದು ನಜ್ಮಾ ಆರೋಪಿಸಿದ್ದಾರೆ.

    ಇದನ್ನೂ ಓದಿ:  Divorce: ಪರಸ್ಪರ ಒಪ್ಪಿಗೆಯ ಮೇಲೆ ವಿಚ್ಛೇದನ ಪಡೆಯುವುದು ಹೇಗೆ..? ಕಾನೂನು ಏನು ಹೇಳುತ್ತದೆ..?

    ನಜ್ಮಾ ಹೇಳುವ ಅನ್ವಯ, ವಿಚ್ಛೇದನದ ಸೂಚನೆ ನೀಡಿದ ಕೆಲವೇ ದಿನಗಳಲ್ಲಿ ಸಲ್ಮಾನ್ ಆಕೆಗೆ ವಿಚ್ಛೇದನ ನೀಡಿದ್ದಾರೆ. ಮದುವೆಯ ನಂತರ ದಪ್ಪ ಆಗಿದ್ದೇನೆ ಎಂಬ ಕಾರಣಕ್ಕೆ ಪತಿ ತನಗೆ ವಿಚ್ಛೇದನ ನೀಡಿದ್ದಾನೆ ಎಂದು ನಜ್ಮಾ ಆರೋಪಿಸಿದ್ದು, ಈಗ ನೀನು ನನಗಿಷ್ಟವಿಲ್ಲ ಮತ್ತು ನಾನು ನಿನ್ನೊಂದಿಗೆ ಇರಲು ಬಯಸುವುದಿಲ್ಲ ಎಂದು ಪತಿ ಹೇಳಿದ್ದಾನೆನ್ನಲಾಗಿದೆ.

    1 ತಿಂಗಳ ಹಿಂದೆ ಪತಿ ತನ್ನನ್ನು ಮನೆಯಿಂದ ಹೊರಹಾಕಿ ಮನೆಗೆ ವಿಚ್ಛೇದನದ ನೋಟಿಸ್ ಕಳುಹಿಸಿದ್ದಾರೆ ಎಂದು ನಜ್ಮಾ ಹೇಳಿದ್ದಾರೆ. ನಂತರ ಪತಿ ಸಲ್ಮಾನ್ ತನಗೆ ವಿಚ್ಛೇದನ ನೀಡಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ ಮತ್ತು ವಿಚ್ಛೇದನಕ್ಕ ಆಕೆ ದಪ್ಪಗಾಗಿದ್ದಾಳೆ ಎಂದು ತಿಳಿಸಿದ್ದಾನೆ. ನಜ್ಮಾ ತನಗೆ 7 ವರ್ಷದ ಮಗನಿದ್ದಾನೆ ಹೀಗಿರುವಾಗ ತಾನೇನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: Viral News: ಈ ದೇಶದಲ್ಲಿ ಜಾಸ್ತಿ ಮಕ್ಕಳಿದ್ರೆ ಟ್ಯಾಕ್ಸ್ ಡಿಸ್ಕೌಂಟ್​ ಕೊಡ್ತಾರಂತೆ!

    ತಾನು ತನ್ನ ಪತಿಯೊಂದಿಗೆ ಇರಲು ಬಯಸಿದ್ದೇನೆ ಆದರೆ ಪತಿ ಸಲ್ಮಾನ್ ತನ್ನೊಂದಿಗಿರಲು ಬಯಸುವುದಿಲ್ಲ ಎಂದು ನಜ್ಮಾ ಹೇಳುತ್ತಾರೆ. ನಜ್ಮಾ ಮೀರತ್‌ನ ಲಿಸಾಡಿ ಗೇಟ್ ಪೊಲೀಸ್ ಠಾಣೆಗೆ ಬಂದು ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಈ ವಿಷಯದಲ್ಲಿ ಸಿಒ ಕೊತ್ವಾಲಿ ಅರವಿಂದ್ ಚೌರಾಸಿಯಾ ಅವರು, ಅಂತಹ ಯಾವುದೇ ಪ್ರಕರಣವು ಇನ್ನೂ ತನ್ನ ಗಮನಕ್ಕೆ ಬಂದಿಲ್ಲ, ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

    ವಿದ್ಯಾವಂತೆಯಾಗಿದ್ರೆ ಪತಿ ಜೀವನಾಂಶ ಕೊಡುವ ಅವಶ್ಯಕತೆ ಇಲ್ಲ ಎಂದ ಕೋರ್ಟ್

    ವಿದ್ಯಾವಂತ ಪತ್ನಿಗೆ ಪತಿಯ ಜೀವನಾಂಶದ ಅವಶ್ಯಕತೆ ಇರುವುದಿಲ್ಲ. ಅವರು ತಮ್ಮ ವಿದ್ಯೆಯಿಂದ ಉತ್ತಮ ಉದ್ಯೋಗದಲ್ಲಿ ಈಗಾಗಲೇ ಇರುವುದರಿಂದ, ಅವರಿಗೆ ಬೇರೆಯವರ ಆರ್ಥಿಕ ಸಹಾಯದ  ಅಗತ್ಯ ಇರುವುದಿಲ್ಲ. ಆದ್ದರಿಂದ ವಿಚ್ಛೇದನದ ನಂತರ ಪತಿಯೂ ಆರ್ಥಿಕ ಸಬಲತೆ ಇರುವ ಪತ್ನಿಗೆ ಜೀವನಾಂಶ ನೀಡುವ ಅವಶ್ಯಕತೆ ಇರುವುದಿಲ್ಲ. ವಿದ್ಯಾವಂತ ಪತ್ನಿಯೂ ಜೀವನಾಂಶಕ್ಕೆ ಹಕ್ಕುದಾರಳು ಆಗಿರುವುದಿಲ್ಲ ಎಂದು ಮುಂಬೈ ನಗರದ ನ್ಯಾಯಾಲಯ ಮಹತ್ತರ ತೀರ್ಪು ನೀಡಿದೆ. ಇಷ್ಟು ದಿನ ವಿಚ್ಚೇದನ ಆದರೆ ಮುಗೀತು ಪತಿಯಿಂದ ಪತ್ನಿಗೆ ಜೀವನಾಂಶ ಬರುತ್ತಿತ್ತು. ಆದರೆ ವಿದ್ಯಾವಂತ ಮತ್ತು ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೆ, ಅಂತಹವರಿಗೆ ಪತಿಯಿಂದ ಯಾವುದೇ ಜೀವನಾಂಶ ದೊರೆಯುವುದಿಲ್ಲ ಎಂದು ನ್ಯಾಯಾಲಯ ವಿದ್ಯಾವಂತ ಮಹಿಳೆಯರಿಗೆ ಶಾಕ್‌ ನೀಡಿದೆ.
    Published by:Precilla Olivia Dias
    First published: