ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ ಮಾಜಿ ಸಂಸದೆ ಸಾವಿತ್ರಿ ಬಾಯಿ ಫುಲೆ; ನನ್ನ ಧ್ವನಿ ಕೇಳಲಿಲ್ಲ ಎಂದು ಸೋನಿಯಾ ಪಡೆ ಮೇಲೆ ಆರೋಪ

ಇವರು ಮೊದಲಿಗೆ 2000ನೇ ಇಸವಿಯಲ್ಲಿ ಬಿಜೆಪಿ ಸೇರಿದ್ದರು. ಬಳಿಕ 2002, 2007 ಮತ್ತು 2017ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ಪೈಕಿ ಫುಲೆ ಕೇವಲ 2012 ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ಸಾವಿತ್ರಿಬಾಯಿ ಫುಲೆ

ಸಾವಿತ್ರಿಬಾಯಿ ಫುಲೆ

 • Share this:
  ನವದೆಹಲಿ(ಡಿ.26): ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ಗೆ ಉತ್ತರ ಪ್ರದೇಶದ ಮಾಜಿ ಸಂಸದೆ ಸಾವಿತ್ರಿಬಾಯಿ ಫುಲೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ಸಿಗರಿಗೆ ನನ್ನ ಧ್ವನಿ ಕೇಳಿಸಲಿಲ್ಲ. ಯಾವುದಾದರೂ ಸಮಸ್ಯೆ ಹೇಳಿದರೂ ಅದನ್ನು ಬಗೆಹರಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ ಬಳಿಕ ಇಲ್ಲಿಯಾದರೂ ನನ್ನ ಧ್ವನಿಯೆತ್ತಬಹುದು ಎಂದು ಭಾವಿಸಿದ್ದೆ. ಆದರೀಗ ಕಾಂಗ್ರೆಸ್​ನಲ್ಲಿಯೂ ನನ್ನ ಧ್ವನಿ ಕೇಳಿಸಿಕೊಳ್ಳದ ಕಾರಣ ರಾಜೀನಾಮೆ ನೀಡಿದ್ದೇನೆ ಎಂದು ಸಾವಿತ್ರಿಬಾಯಿ ಫುಲೆ ಅಸಮಾಧಾನ ಹೊರಹಾಕಿದ್ಧಾರೆ. 

  ಆಂಜನೇಯ ಒಬ್ಬ ದಲಿತ ಎಂದು ಯೋಗಿ ಆದಿತ್ಯನಾಥ್ ನೀಡಿದ್ದ ಹೇಳಿಕೆ ವಿರುದ್ಧ ಹಿಂದೆ ಮಾಜಿ ಸಂಸದೆ ಸಾವಿತ್ರಿಬಾಯಿ ಫುಲೆ ಕಿಡಿಕಾರಿದ್ದರು. ಕಳೆದ ವರ್ಷ ಮಾರ್ಚ್​​ ತಿಂಗಳಿನಲ್ಲಿ ದಲಿತರನ್ನು ದಮನ ಮಾಡಲು ಬಿಜೆಪಿಯಿಂದ ದೊಡ್ಡ ಸಂಚು ನಡೆಯುತ್ತಿದೆ ಎಂದು ಆರೋಪಿಸಿ ಕಮಲ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಅಂಬೇಡ್ಕರ್ ಪರಿಣಿಬ್ಬಾಣ ದಿನದಂದೇ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್​ ಸೇರಿದ್ದರು.

  ‘ಭಾರತದ ಪ್ರತಿಯೊಬ್ಬ ನಾಗರಿಕನೂ ಹಿಂದುವೇ‘: ಆರ್​ಎಸ್​ಎಸ್​​ ಮುಖ್ಯಸ್ಥ ಮೋಹನ್​ ಭಾಗವತ್​​

  38 ವರ್ಷದ ಸಾವಿತ್ರಿ ಬಾಯಿ ಅವರು ದಲಿತ ಬೌದ್ಧ ಧರ್ಮೀಯರಾಗಿದ್ದು, ಹಿಂದಿನಿಂದಲೂ ಬಿಜೆಪಿಯ ಕೆಲ ನೀತಿಗಳನ್ನು ಬಹಿರಂಗವಾಗಿಯೇ ವಿರೋಧಿಸುತ್ತಾ ಬಂದಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹನುಮಂತ ದೇವರನ್ನು ಅರಣ್ಯವಾಸಿ, ದಲಿತ ಎಂದು ಬಣ್ಣಿಸಿದ್ದರು. ಬಜರಂಗಬಲಿಯು ಉತ್ತರದಿಂದ ದಕ್ಷಿಣ, ಪೂರ್ವದಿಂದ ಪಶ್ಚಿಮದವರೆಗೆ ಎಲ್ಲಾ ಭಾರತೀಯ ಸಮುದಾಯಗಳನ್ನು ಬೆಸೆಯುವ ಕೆಲಸ ಮಾಡಿದ್ದರು ಎಂದೂ ಯೋಗಿ ಅಭಿಪ್ರಾಯಪಟ್ಟಿದ್ದರು. ಆಗ ಇದನ್ನು ಸಾವಿತ್ರಿ ಬಾಯಿ ಪುಲೆ ಖಂಡಿಸಿದ್ದರು.

  ಸಾವಿತ್ರಿ ಬಾಯಿ ಫುಲೆ ಬಿಎಸ್​​ಪಿ ಮುಖ್ಯಸ್ಥೆ ಮಾಯಾವತಿ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಇವರು ಮೊದಲಿಗೆ 2000ನೇ ಇಸವಿಯಲ್ಲಿ ಬಿಜೆಪಿ ಸೇರಿದ್ದರು. ಬಳಿಕ 2002, 2007 ಮತ್ತು 2017ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ಪೈಕಿ ಫುಲೆ ಕೇವಲ 2012 ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ (ದೌರ್ಜನ್ಯ ತಡೆ) ಕಾಯ್ದೆ ಸಂಬಂಧ ಸುಪ್ರೀಂಕೋರ್ಟ್​​ ವ್ಯತಿರಿಕ್ತ ತೀರ್ಮಾನ ನೀಡಿದ ಸಂದರ್ಭದಲ್ಲೇ ಸಾವಿತ್ರಿ ಬಾಯಿ ಬಿಜೆಪಿ ತೊರೆದರು.

  ಮಂಗಳೂರು ಗೋಲಿಬಾರ್​ನಲ್ಲಿ ಸತ್ತವರು ಸಮಾಜಘಾತುಕರು; ಪೊಲೀಸರನ್ನು ಶ್ಲಾಘಿಸಿದ ಕಲ್ಲಡ್ಕ ಪ್ರಭಾಕರ್​ ಭಟ್

   
  Published by:Latha CG
  First published: