ಇವತ್ತಿಂದ (ಮಾರ್ಚ್ 31) ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) (ಐಪಿಎಲ್) 2023 ಶುರುವಾಗಲಿದೆ ಅಂತ ತಿಳಿದ ಕ್ರಿಕೆಟ್ ಅಭಿಮಾನಿಗಳು (Cricket Fans) ಸಂಜೆ ಈ ಸೀಸನ್ ನ ಮೊದಲ ಮ್ಯಾಚ್ (First Match) ಅನ್ನು ನೋಡೋದಕ್ಕೆ ತುಂಬಾನೇ ಕಾತುರತೆಯಿಂದ ಕಾಯುತ್ತಿದ್ದಾರೆ ಅಂತ ಹೇಳಬಹುದು. ಪ್ರತಿ ವರ್ಷದಂತೆ ಈ ಐಪಿಎಲ್, ಈ ಬಾರಿಯೂ ಸಹ ನಮಗೆ ಅನೇಕ ಹೊಸ ಆಟಗಾರರನ್ನು ಪರಿಚಯಿಸಲಿದೆ ಅಂತ ಹೇಳಬಹುದು. ಹೀಗೆ ಈ ಬಾರಿಯ ಐಪಿಎಲ್ ನಲ್ಲಿ ಬೌಲರ್ ಖಲೀಲ್ ಅಹ್ಮದ್ (Khaleel Ahmed )ಗಮನಿಸಬೇಕಾದ ಆಟಗಾರರಲ್ಲಿ ಒಬ್ಬರು ಅಂತ ಹೇಳಬಹುದು.
ಖಲೀಲ್ 2018 ರಲ್ಲಿ ಭಾರತ ತಂಡದ ಪರ ಆಡಿದ್ರು
ಆದರೆ ಈ ಆಟಗಾರ ಈಗಾಗಲೇ ಎಂದರೆ 2018 ರಲ್ಲಿ ಭಾರತ ತಂಡದ ಪರ ಆಡಿದ್ದು, ನಂತರದಲ್ಲಿ ತಮ್ಮ ಸ್ಥಾನವನ್ನು ಟೀಂ ನಲ್ಲಿ ಉಳಿಸಿಕೊಳ್ಳಲು ವಿಫಲರಾದರು ಅಂತ ಹೇಳಬಹುದು. ಈ ಐಪಿಎಲ್ ಋತುವಿನಲ್ಲಿ ಅವರು ಎಡಗೈ ಬ್ಯಾಟರ್ ಮತ್ತು ವೇಗದ ಬೌಲರ್ ಆಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಈ ಬಾರಿ ಐಪಿಎಲ್ ನಲ್ಲಿ ಖಲೀಲ್ ಅವರು ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ ಮತ್ತೊಮ್ಮೆ ರಾಷ್ಟ್ರೀಯ ತಂಡಕ್ಕೆ ಮರಳುವುದಕ್ಕೆ ತನ್ನಿಂದಾದ ಎಲ್ಲಾ ಪ್ರಯತ್ನವನ್ನು ಆಟದಲ್ಲಿ ಹಾಕುತ್ತಾರೆ ಅಂತ ನಿರೀಕ್ಷಿಸಲಾಗುತ್ತಿದೆ.
ಸಾಮಾನ್ಯವಾಗಿ ನಾವೆಲ್ಲಾ ಚಿಕ್ಕವರಾಗಿದ್ದಾಗ ಮನೆಯಲ್ಲಿ ಓದುವುದನ್ನು ಬಿಟ್ಟು ಕ್ರಿಕೆಟ್ ಆಟ ಆಡಿದ್ದಕ್ಕೆ ಪೆಟ್ಟು ತಿಂದಿರ್ತಿವಿ. ಇಲ್ಲಿಯೂ ಸಹ ಅಂತಹ ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ ನೋಡಿ ಖಲೀಲ್ ಅಹ್ಮದ್.
ಓದುವುದನ್ನು ಬಿಟ್ಟು ಬರೀ ಕ್ರಿಕೆಟ್ ಆಡ್ತಿದ್ದಕ್ಕೆ ಖಲೀಲ್ ಗೆ ಬೆಲ್ಟ್ ಏಟುಗಳು ಬಿಳ್ತಿದ್ವಂತೆ..
“ಕ್ರಿಕೆಟ್ ಆಟ ಆಡಿದ್ದಕ್ಕಾಗಿ ಮತ್ತು ತನ್ನ ಓದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಕ್ಕಾಗಿ ತನ್ನ ತಂದೆಯಿಂದ ಬೆಲ್ಟ್ ಏಟುಗಳನ್ನು ತಿಂದಿದ್ದರಂತೆ” ಅಂತ ಅವರು ಹೇಳಿಕೊಂಡಿದ್ದಾರೆ ನೋಡಿ. ಜಿಯೋ ಸಿನೆಮಾದಲ್ಲಿ ಆಕಾಶ್ ಚೋಪ್ರಾ ಅವರೊಂದಿಗೆ ಮಾತನಾಡಿದ ಖಲೀಲ್, ತನ್ನ ತಂದೆ ಆಗ ಬೆಲ್ಟ್ ನಿಂದ ಹೊಡೆದ ಆ ಹೊಡೆತಗಳು ತನ್ನ ದೇಹದ ಮೇಲೆ ಗುರುತುಗಳನ್ನು ಬಿಟ್ಟಿದೆ ಮತ್ತು ಅವರ ಸಹೋದರಿಯರು ಅವರಿಗೆ ಆ ಗಾಯಗಳಿಗೆ ಚಿಕಿತ್ಸೆ ನೀಡುತ್ತಿದ್ದರಂತೆ ಎಂದು ಖಲೀಲ್ ಹೇಳಿಕೊಂಡರು.
"ನನಗೆ ಮೂವರು ಅಕ್ಕಂದಿರಿದ್ದಾರೆ ಮತ್ತು ನನ್ನ ತಂದೆ ಟೋಂಕ್ ಜಿಲ್ಲೆಯಲ್ಲಿ ಕಾಂಪೌಂಡರ್ ಆಗಿ ಕೆಲಸ ಮಾಡುತ್ತಿದ್ದರು. ನನ್ನ ತಂದೆ ತಮ್ಮ ಕೆಲಸಕ್ಕೆ ಅಂತ ಹೋದಾಗ ಮನೆಯಲ್ಲಿ ನಾನು ದಿನಸಿ, ಹಾಲು ಮುಂತಾದ ಕೆಲಸಗಳನ್ನು ಮಾಡಬೇಕಾಗಿತ್ತು. ಆದರೆ, ನಾನು ಈ ಎಲ್ಲಾ ಕೆಲಸಗಳ ಮಧ್ಯೆ ಸಮಯ ಮಾಡಿಕೊಂಡು ಕ್ರಿಕೆಟ್ ಆಡಲು ಹೋಗುತ್ತಿದ್ದೆ, ಇದರರ್ಥ ಮನೆಯ ಕೆಲಸಗಳು ಹಾಗೆಯೇ ಅಪೂರ್ಣವಾಗಿಯೇ ಉಳಿಯುತ್ತಿದ್ದವು" ಎಂದು ಖಲೀಲ್ ಹೇಳಿದರು.
"ನನ್ನ ತಾಯಿ ಈ ಬಗ್ಗೆ ನನ್ನ ತಂದೆಗೆ ದೂರು ನೀಡುತ್ತಿದ್ದರು, ಆಗ ತಂದೆ ಮನೆಗೆ ಬಂದವರೆ ನನ್ನನ್ನು ಹುಡುಕುತ್ತಿದ್ದರು. ನಾನು ಮನೆಯಲ್ಲಿ ಕೂತು ಓದದೆ, ಹೊರಗಡೆ ಕ್ರಿಕೆಟ್ ಆಡಲು ಹೋಗುತ್ತಿರುವುದರಿಂದ ನನ್ನ ತಂದೆಗೆ ತುಂಬಾನೇ ಕೋಪ ಬರುತ್ತಿತ್ತು. ಆಗ ಅವರ ಬೆಲ್ಟ್ ನಿಂದ ನನ್ನನ್ನು ಚೆನ್ನಾಗಿ ಹೊಡೆಯುತ್ತಿದ್ದರು, ಆ ಹೊಡೆತಗಳು ನನ್ನ ದೇಹದ ಮೇಲೆ ಅನೇಕ ಗುರುತುಗಳನ್ನು ಮಾಡಿದೆ. ಆದರೆ ನನ್ನ ಸಹೋದರಿಯರು ಆ ಗಾಯಗಳಿಗೆ ರಾತ್ರಿಯೆಲ್ಲಾ ಕೂತು ಚಿಕಿತ್ಸೆ ನೀಡುತ್ತಿದ್ದರು" ಎಂದು ಖಲೀಲ್ ಹೇಳಿಕೊಂಡರು.
ಇದನ್ನೂ ಓದಿ: MS Dhoni: ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಧೋನಿ, ಕೊಹ್ಲಿ ಕ್ಲಬ್‌ಗೆ ಎಂಟ್ರಿಕೊಟ್ಟ ಕ್ಯಾಪ್ಟನ್ ಕೂಲ್
ಭಾರತ ತಂಡದ ಪರ ಖಲೀಲ್ 11 ಏಕದಿನ, 14 ಟ್ವೆಂಟಿ20 ಪಂದ್ಯಗಳನ್ನು ಆಡಿದ್ದಾರೆ..
2018 ರಲ್ಲಿ ಪಾದಾರ್ಪಣೆ ಮಾಡಿದಾಗಿನಿಂದ ಖಲೀಲ್ ಟೀಂ ಇಂಡಿಯಾದ ಪರ 11 ಏಕದಿನ ಮತ್ತು 14 ಟ್ವೆಂಟಿ20 ಪಂದ್ಯಗಳನ್ನು ಆಡಿದ್ದಾರೆ. 2019 ರ ನವೆಂಬರ್ ನಲ್ಲಿ ಬಾಂಗ್ಲಾದೇಶ ವಿರುದ್ಧದ ಟ್ವೆಂಟಿ20 ಪಂದ್ಯದಲ್ಲಿ ಅವರು ಭಾರತ ಪರ ಆಡಿದ್ದರು. ಅಂದಿನಿಂದ ಖಲೀಲ್ ಟೀಮ್ ಇಂಡಿಯಾದಲ್ಲಿ ಮತ್ತೆ ಅವಕಾಶ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರಸ್ತುತ ಐಪಿಎಲ್ 2023 ರ ಆವೃತ್ತಿಯಲ್ಲಿ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ