• Home
  • »
  • News
  • »
  • national-international
  • »
  • Smriti Irani: ಸ್ಕೃತಿ ಇರಾನಿ ಪುತ್ರಿ ಅಕ್ರಮವಾಗಿ ಬಾರ್ ನಡೆಸುತ್ತಿದ್ದಾರಾ? ಕಾಂಗ್ರೆಸ್ ಆರೋಪಕ್ಕೆ ಸಚಿವೆಯ ತಿರುಗೇಟು

Smriti Irani: ಸ್ಕೃತಿ ಇರಾನಿ ಪುತ್ರಿ ಅಕ್ರಮವಾಗಿ ಬಾರ್ ನಡೆಸುತ್ತಿದ್ದಾರಾ? ಕಾಂಗ್ರೆಸ್ ಆರೋಪಕ್ಕೆ ಸಚಿವೆಯ ತಿರುಗೇಟು

ಸ್ಕೃತಿ ಇರಾನಿ

ಸ್ಕೃತಿ ಇರಾನಿ

  • Share this:

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ (Union Minister Smriti Irani) ಅವರನ್ನು ಟಾರ್ಗೆಟ್​ ಮಾಡಿರುವ ಕಾಂಗ್ರೆಸ್ (Congress)​, ಸಚಿವೆಯ ಪುತ್ರಿ ಗೋವಾದಲ್ಲಿ ಬಾರ್​​ (Bar in Goa) ನಡೆಸುತ್ತಿದ್ದಾರೆ ಎಂದು ಆರೋಪಿಸಿದೆ. ಈ ಬಗ್ಗೆ ತಿರುಗೇಟು ಕೊಟ್ಟಿರುವ ಸಚಿವೆ, ಗೋವಾದಲ್ಲಿ ತನ್ನ 18 ವರ್ಷದ ಮಗಳು ಯಾವುದೇ ಅಕ್ರಮ ಬಾರ್‌ ನಡೆಸುತ್ತಿಲ್ಲ ಎಂದು ಆರೋಪವನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ಸುದ್ದಿಗೋಷ್ಟಿ ನಡೆಸಿ ಸ್ಪಷ್ಟನೆ ನೀಡಿದ ಸಚಿವೆ, ನನ್ನ ಮಗಳ ತಪ್ಪು ಒಂದೇ. ಅವಳ ತಾಯಿ ಕಾಂಗ್ರೆಸ್​ ಲೂಟಿಯ ಬಗ್ಗೆ ಮಾತನಾಡಿದ್ದು. ಅದಕ್ಕಾಗಿ ಅವಳನ್ನು ಟಾರ್ಗೆಟ್​ ಮಾಡಲಾಗುತ್ತಿದೆ ಎಂದು ಪ್ರತ್ಯಾರೋಪಿಸಿದರು. ಸೋನಿಯಾ ಮತ್ತು ರಾಹುಲ್ ಗಾಂಧಿ ಅವರಿಂದ ₹ 5,000 ಕೋಟಿ ಲೂಟಿ ನಡೆದಿದೆ ಎಂದು ಈ ಹಿಂದೆ ಸಚಿವೆ ಆರೋಪಿಸಿದ್ದರು. ಇದರ ಬೆನ್ನಲ್ಲೇ ಮಗಳ ಬಗ್ಗೆ ಕೇಳಿ ಬಂದ ಆರೋಪಕ್ಕೆ ಸ್ಕೃತಿ ಇರಾನಿ ಕೆಂಡಾಮಂಡಲಾಗಿದ್ದಾರೆ. ತನ್ನ ಮಗಳು ಮೊದಲ ವರ್ಷದ ಕಾಲೇಜು ವಿದ್ಯಾರ್ಥಿನಿ ಮತ್ತು ಯಾವುದೇ ಬಾರ್ ಅನ್ನು ನಡೆಸುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.


ಕಾಂಗ್ರೆಸ್​ ವಿರುದ್ಧ ಆರೋಪ ಮಾಡಿದ್ದ ಸಚಿವೆ


'ಸೋನಿಯಾ ಮತ್ತು ರಾಹುಲ್ ಗಾಂಧಿ ₹ 5,000 ಕೋಟಿ ಲೂಟಿ ಮಾಡಿದ ಬಗ್ಗೆ ತಾಯಿ ಪತ್ರಿಕಾಗೋಷ್ಠಿ ನಡೆಸಿದ್ದು, ನನ್ನ ಮಗಳ ತಪ್ಪ.  2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಅವರ ತಾಯಿ ರಾಹುಲ್ ಗಾಂಧಿ ವಿರುದ್ಧ ಹೋರಾಡಿದ್ದು ಅಕೆಯ ತಪ್ಪು ಎಂದು ಸಚಿವೆ ವಾಗ್ದಾಳಿ ನಡೆಸಿದರು. ನ್ಯಾಷನಲ್ ಹೆರಾಲ್ಡ್‌ಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಸೋನಿಯಾ ಗಾಂಧಿಯನ್ನು ಪ್ರಶ್ನಿಸುತ್ತಿದೆ. ರಾಹುಲ್ ಗಾಂಧಿಯವರನ್ನು ತನಿಖಾ ಸಂಸ್ಥೆ ಪ್ರಶ್ನಿಸಿದ್ದನ್ನು ವಿರೋಧಿಸಿ ಕಾಂಗ್ರೆಸ್ಸಿಗರು ಪ್ರತಿಭಟಿಸಿದಾಗ, ಗಾಂಧಿ ಕುಟುಂಬದ ಒಡೆತನದ ₹ 2,000 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಶ್ರೀಮತಿ ಇರಾನಿ ಕಳೆದ ತಿಂಗಳು ಆರೋಪಿಸಿದ್ದರು.


ಇದನ್ನೂ ಓದಿ: Bengal Minister Arrested: ಆಪ್ತನ ಮನೆಯಲ್ಲಿ 20 ಕೋಟಿ! ಶಿಕ್ಷಕರ ನೇಮಕಾತಿ ಹಗರಣದಲ್ಲಿ ಸಚಿವ ಅರೆಸ್ಟ್


ಕಾಂಗ್ರೆಸ್ ತನ್ನ ಮಗಳ ಇಮೇಜನ್ನು ಹಾಳು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತನ್ನ ಮಗಳು ಅಕ್ರಮ ಬಾರ್ ನಡೆಸುತ್ತಿದ್ದಾಳೆ ಎಂಬ ಕಾಂಗ್ರೆಸ್ ಆರೋಪದ ವಿಚಾರವಾಗಿ ಕೋರ್ಟ್​​ ಮೊರೆ ಹೋಗುವುದಾಗಿ ಸ್ಮೃತಿ ಇರಾನಿ ಹೇಳಿದರು. ನಾನು ನ್ಯಾಯಾಲಯದಲ್ಲಿ, ಜನರ ನ್ಯಾಯಾಲಯದಲ್ಲಿ ಉತ್ತರವನ್ನು ಹುಡುಕುತ್ತೇನೆ ಎಂದರು.


ಕಾಂಗ್ರೆಸ್​ ಆರೋಪವೇನು?


ಕಾಂಗ್ರೆಸ್ ವಕ್ತಾರ ಪವನ್ ಖೇರಾ ಸುದ್ದಿಗಾರರೊಂದಿಗೆ ಮಾತನಾಡಿ, ಇರಾನಿ ಅವರ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳಿವೆ. ಅವರ ಮಗಳು ಗೋವಾದಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.  "ನಕಲಿ ಪರವಾನಗಿ" ಮೇಲೆ ಬಾರ್ ಕಾರ್ಯನಿರ್ವಹಿಸುತ್ತಿದೆ. ಸ್ಮೃತಿ ಇರಾನಿ ಅವರ ಮಗಳ ಪರವಾನಗಿಯು ಮೇ 2021 ರಲ್ಲಿ ನಿಧನರಾದ ವ್ಯಕ್ತಿಯ ಹೆಸರಿನಲ್ಲಿದೆ. 2022 ರ ಜೂನ್‌ನಲ್ಲಿ ಗೋವಾದಲ್ಲಿ ಪರವಾನಗಿ ತೆಗೆದುಕೊಳ್ಳಲಾಗಿದೆ. ಆದರೆ ಪರವಾನಗಿ ಹೊಂದಿರುವ ವ್ಯಕ್ತಿ 13 ತಿಂಗಳ ಹಿಂದೆ ಸಾವನ್ನಪ್ಪಿದ್ದಾರೆ. ಇದು ಕಾನೂನುಬಾಹಿರವಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.


ನಕಲಿ ಲೈಸೆನ್ಸ್​ ಬಗ್ಗೆ ಆರೋಪ


ಗೋವಾ ನಿಯಮಗಳ ಪ್ರಕಾರ ಒಂದು ರೆಸ್ಟೋರೆಂಟ್‌ಗೆ ಕೇವಲ ಒಂದು ಬಾರ್ ಲೈಸೆನ್ಸ್ ಸಿಗುತ್ತದೆ. ಆದರೆ ಈ ರೆಸ್ಟೊರೆಂಟ್‌ಗೆ ಎರಡು ಬಾರ್ ಲೈಸೆನ್ಸ್‌ಗಳಿವೆ ಎಂದು ಅವರು ಹೇಳಿದರು. ಸ್ಮೃತಿ ಇರಾನಿ ಅವರನ್ನು ತಕ್ಷಣವೇ ಕೇಂದ್ರ ಸಂಪುಟದಿಂದ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ನಾವು ಪ್ರಧಾನಿಯವರಲ್ಲಿ ಒತ್ತಾಯಿಸುತ್ತೇವೆ. ನೀವು ಈ ದೇಶಕ್ಕೆ, ಈ ದೇಶದ ಯುವಕರಿಗೆ ಋಣಿಯಾಗಿದ್ದೀರಿ ಎಂದು ಅವರು ಹೇಳಿದರು.

Published by:Kavya V
First published: