Sidharth Shukla| ‘ಅಮ್ಮ ನನ್ನ ಆತ್ಮೀಯ ಸ್ನೇಹಿತೆ’ : ಸಿದ್ದಾರ್ಥ್ ಶುಕ್ಲಾ ಅವರಿಗಿತ್ತು ತಾಯಿಯೊಂದಿಗೆ ವಿಶೇಷ ಬಾಂಧವ್ಯ

ಎಲ್ಲರ ಪ್ರೀತಿಯ ‘ಸಿದ್’ ಆಗಿದ್ದ ಸಿದ್ದಾರ್ಥ್‍ಗೆ ತಮ್ಮ ತಾಯಿಯ ಜೊತೆ ವಿಶೇಷ ಬಾಂಧವ್ಯವಿತ್ತು. ತಾಯಿ ಮಗನ ಬಾಂಧವ್ಯ ಅನ್ನೊದಷ್ಟೇ ಅಲ್ಲ, ಅವರಿಬ್ಬರದ್ದು ಗಾಢ ಸ್ನೇಹದ ಬಾಂಧವ್ಯವಾಗಿತ್ತು.

ತಾಯಿಯೊಂದಿಗೆ ಸಿದ್ದಾರ್ಥ್​ ಶುಕ್ಲಾ.

ತಾಯಿಯೊಂದಿಗೆ ಸಿದ್ದಾರ್ಥ್​ ಶುಕ್ಲಾ.

 • Share this:

  ಎಲ್ಲರ ಪ್ರೀತಿಯ ‘ಸಿದ್’ ಆಗಿದ್ದ ಸಿದ್ದಾರ್ಥ್‍ಗೆ ತಮ್ಮ ತಾಯಿಯ ಜೊತೆ ವಿಶೇಷ ಬಾಂಧವ್ಯವಿತ್ತು. ತಾಯಿ ಮಗನ ಬಾಂಧವ್ಯ ಅನ್ನೊದಷ್ಟೇ ಅಲ್ಲ, ಅವರಿಬ್ಬರದ್ದು ಗಾಢ ಸ್ನೇಹದ ಬಾಂಧವ್ಯವಾಗಿತ್ತು. ಅವರು ತಮ್ಮ ಸಂದರ್ಶನಗಳಲ್ಲಿ ಹಲವು ಬಾರಿ ತಾಯಿಯೊಂದಿಗೆ ವಿಶೇಷ ಬಾಂಧವ್ಯ ಮತ್ತು ತನ್ನ ಜೀವನದಲ್ಲಿ ಆಕೆಯ ಪಾತ್ರ ಎಂತದ್ದು ಎಂಬುದರ ಬಗ್ಗೆ ಅವರು ಹಲವಾರು ಹೇಳಿಕೊಂಡಿದ್ದಾರೆ.  ‘ಬಾಲಿಕಾ ವಧು’ , ದಿಲ್ ಸೇ ದಿಲ್ ತಕ್’ ಧಾರಾವಾಹಿಗಳ ಮೂಲಕ ಕಿರುತೆಗೆ ವೀಕ್ಷಕರ ಮನಗೆದ್ದಿದ್ದ , ಬಿಗ್ ಬಾಸ್ 13 ರಲ್ಲಿ ಪಾಲ್ಗೊಂಡು ಅತ್ಯಧಿಕ ಮೆಚ್ಚುಗೆ ಪಡೆದು, ಸೀಸನ್ ವಿಜೇತರಾಗಿದ್ದ, ಬಾಲಿವುಡ್‍ನಲ್ಲೂ ದೊಡ್ಡ ಬ್ಯಾನರ್‌ನ ಸಿನಿಮಾದಲ್ಲಿ ನಟಿಸಿ ಮಿಂಚಿದ್ದ, ಅಪಾರ ಅಭಿಮಾನಿ ಬಳಗದ ಕಣ್ಮಣಿ ಸಿದ್ಧಾರ್ಥ್ ಶುಕ್ಲಾ ಇನಿಲ್ಲ. ಜನಪ್ರಿಯ ನಟ ಮತ್ತು ಹಿಂದಿ ಬಿಗ್‍ಬಾಸ್ 13 ರ ವಿಜೇತ ಸಿದ್ದಾರ್ಥ್ ಶುಕ್ಲಾ ಅವರ ಅಕಾಲಿಕ ಮೃತ್ಯು ಇಡೀ ಕಿರುತೆರೆ ಮತ್ತು ಚಿತ್ರೋದ್ಯಮವನ್ನು ಮತ್ತು ಅವರ ಅಭಿಮಾನಿ ಬಳಗವನ್ನು ದೊಡ್ಡ ಆಘಾತಕ್ಕೆ ಈಡು ಮಾಡಿದೆ. ಗುರುವಾರ ಅವರು ಹೃದಯಾಘಾತದಿಂದ ಸಾವನ್ನಪ್ಪಿದರು. 40 ವರ್ಷ ವಯಸ್ಸಿನ ಸಿದ್ಧಾರ್ಥ್ ಶುಕ್ಲಾ ಅವರು ತಾಯಿ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.


  ಎಲ್ಲರ ಪ್ರೀತಿಯ ‘ಸಿದ್’ ಆಗಿದ್ದ ಸಿದ್ದಾರ್ಥ್‍ಗೆ ತಮ್ಮ ತಾಯಿಯ ಜೊತೆ ವಿಶೇಷ ಬಾಂಧವ್ಯವಿತ್ತು. ತಾಯಿ ಮಗನ ಬಾಂಧವ್ಯ ಅನ್ನೊದಷ್ಟೇ ಅಲ್ಲ, ಅವರಿಬ್ಬರದ್ದು ಗಾಢ ಸ್ನೇಹದ ಬಾಂಧವ್ಯವಾಗಿತ್ತು. ಅವರು ತಮ್ಮ ಸಂದರ್ಶನಗಳಲ್ಲಿ ಹಲವು ಬಾರಿ ತಾಯಿಯೊಂದಿಗೆ ವಿಶೇಷ ಬಾಂಧವ್ಯ ಮತ್ತು ತನ್ನ ಜೀವನದಲ್ಲಿ ಆಕೆಯ ಪಾತ್ರದ ಎಂತದ್ದು ಎಂಬುದರ ಬಗ್ಗೆ ಅವರು ಹಲವಾರು ಹೇಳಿಕೊಂಡಿದ್ದಾರೆ.


  ಅಂತದ್ದೇ ಒಂದು ಸಂದರ್ಶನದಲ್ಲಿ, “ನಾವು ಮೂವರು ಮಕ್ಕಳಲ್ಲಿ ತುಂಬಾ ಕಿರಿಯವನಾಗಿದ್ದ, ಅಕ್ಕಂದಿರ ಜೊತೆ ಆಟಕ್ಕೆ ಸೇರಿಕೊಳ್ಳದಷ್ಟು ಚಿಕ್ಕವನು. ಹಾಗಾಗಿ ಯಾವಾಗಲೂ ಅಮ್ಮನ ಜೊತೆಯೇ ಇರುತ್ತಿದ್ದೆ. ನಾನು ಪುಟಾಣಿಯಾಗಿದ್ದಾಗ, ಅಮ್ಮ ನನ್ನಿಂದ ಒಂದು ಸೆಕೆಂಡ್ ದೂರ ಹೋದರೂ ಅಳಲು ಆರಂಭಿಸುತ್ತಿದ್ದ. ಅವರು ರೋಟಿಗಳನ್ನು ಮಾಡುವಾಗಲು, ಒಂದು ಕೈಯಲ್ಲಿ ನನ್ನನ್ನು ಹಿಡಿದುಕೊಂಡು,ಇನ್ನೊಂದು ಕೈಯಲ್ಲಿ ರೋಟಿಗಳನ್ನು ಲಟ್ಟಿಸಬೇಕಿತ್ತು! ನಾನು ಬೆಳೆಯುತ್ತಿದ್ದಂತೆ ಅವರು ನನ್ನ ಆತ್ಮೀಯ ಸೇಹಿತೆಯಾದರು” ಎಂದು ಹೇಳಿಕೊಂಡಿದ್ದಾರೆ ಸಿದ್ದಾರ್ಥ್.


  ತನ್ನ ಆಕಾಂಕ್ಷೆಗಳಿಗೆ ತಾಯಿ ಹೇಗೆ ನೀರೆರೆದರು ಎಂಬುದನ್ನು ಹಂಚಿಕೊಳ್ಳುತ್ತಾ, ತನ್ನನ್ನು ಮಾಡೆಲಿಂಗ್ ಸ್ಪರ್ಧೆಯೊಂದಕ್ಕೆ ತಾಯಿಯೇ ಕಳಿಸಿದ್ದನ್ನು ಸಿದ್ದಾರ್ಥ್ ನೆನಪಿಸಿಕೊಂಡಿದ್ದರು. ಆ ಮಾಡೆಲಿಂಗ್ ಸ್ಪರ್ಧೆಯಲ್ಲಿ ಅವರು ಗೆದ್ದಿದ್ದರು ಕೂಡ. ಅವರ ತಂದೆ ತೀರಿ ಹೋದಾಗ ತಾಯಿ ತಮ್ಮ ಕುಟುಂಬಕ್ಕೆ ಆಧಾರ ಸ್ಥಂಭವಾಗಿ ನಿಂತರು ಎಂದಿದ್ದ ಸಿದ್ದಾರ್ಥ್ , “15 ವರ್ಷಗಳ ಹಿಂದೆ ನಮ್ಮ ತಂದೆ ತೀರಿ ಹೋದಾಗ, ನಮ್ಮ ತಲೆ ಮೇಲಿದ್ದ ಛತ್ರಿಯನ್ನು ಕಿತ್ತುಕೊಂಡಂತೆ ಅನಿಸಿತ್ತು. ಆದರೆ ಸಬಲ ಮಹಿಳೆಯಾಗಿದ್ದ ನಮ್ಮಮ್ಮ ನಮ್ಮ ಪಾಲಿಗೆ ಬಂಡೆಗಲ್ಲಿನಂತೆ ಆಶ್ರಯವಾಗಿ ನಿಂತಿದ್ದರು.


  ಇದನ್ನೂ ಓದಿ: Sidharth Shukla: ಬಿಗ್​ ಬಾಸ್​​ ಸ್ಪರ್ಧಿ ಸಾವಿನ ತನಿಖೆಗೆ ಮುಂದಾದ ಪೊಲೀಸರು: ಅಸಲಿಗೆ ಸಾವಿಗೆ ಮುನ್ನ ರಾತ್ರಿ ಆಗಿದ್ದಾದರೂ ಏನು?

  ಆಕೆ ಯಾವತ್ತೂ ದುರ್ಬಲತೆಯ ಲಕ್ಷಣಗಳನ್ನು ತೋರಿಸಲಿಲ್ಲ. ಹಣಕಾಸಿನ ಸಮಸ್ಯೆಯಿದ್ದರೂ ಕೂಡ , ಮನೆಯನ್ನು ಮುನ್ನಡೆಸಿದರು, ನಾವು ಮೂವರು ಮಕ್ಕಳ ಎಲ್ಲಾ ಬೇಡಿಕೆಗಳನ್ನು ಪೂರೈಸಿ ಸಾಕಿದರು” ಎಂದು ತನ್ನ ತಾಯಿಯನ್ನು ವರ್ಣಿಸಿದ್ದರು.


  ಬಿಗ್ ಬಾಸ್‍ನ ಅನುಭವದ ಬಗ್ಗೆ ಮಾತನಾಡುತ್ತಾ, ಅಪರಿಚಿತರ ಜೊತೆ ಮನೆಯೊಳಗೆ ಇರುವುದಕ್ಕಿಂತ ಕಷ್ಟ, ತಾಯಿಯನ್ನು ಬಿಟ್ಟು ಇರುವುದಾಗಿತ್ತು ಎಂದು ಹೇಳಿಕೊಂಡಿದ್ದರು. ಸಿದ್ದಾರ್ಥ್ ಅವರ ನಿಧನದ ಸುದ್ದಿ ಹರಡುತ್ತಲೇ, ಸಾಮಾಜಿಕ ಜಾಲ ತಾಣದಲ್ಲಿ ಶ್ರದ್ಧಾಂಜಲಿಯ ಮಹಾಪೂರವೇ ಹರಿದು ಬರತೊಡಗಿದೆ. ಈ ಸುದ್ದಿಯನ್ನು ದೃಢಪಡಿಸಿದ ಕೂಪರ್ ಆಸ್ಪತ್ರೆಯ ಅಧಿಕಾರಿ, “ಅವರನ್ನು ಕೆಲ ಸಮಯದ ಮೊದಲು ಆಸ್ಪತ್ರೆಗೆ ಕರೆ ತರುವಾಗಲೇ ನಿಧನರಾಗಿದ್ದರು” ಎಂದು ಹೇಳಿದ್ದಾರೆ.


  ಇದನ್ನೂ ಓದಿ: CoronaVirus| ರೂಪಾಂತರಿ ಭಯ; ಚೀನಾ ಸೇರಿ 7 ದೇಶಗಳ ಪ್ರಯಾಣಿಕರ ಭಾರತ ಪ್ರವೇಶಕ್ಕೆ RT-PCR ಪರೀಕ್ಷೆ ಕಡ್ಡಾಯ

  ಮಾಡೆಲ್ ಆಗಿ ಮನರಂಜನಾ ಉದ್ಯಮಕ್ಕೆ ಕಾಲಿಟ್ಟ ಸಿದ್ದಾರ್ಥ್ ಶುಕ್ಲಾ, ‘ಬಾಬುಲ್ ಕಾ ಆಂಗನ್ ಚೂಟೇನಾ’ ಎಂಬ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು. ಆ ಬಳಿಕ ಅವರು ‘ಜಾನೆ ಪೆಹಚಾನೆ ಸೇ.. ಅಜ್‍ನಬಿ’ , ‘ಲವ್ ಯು ಜಿಂದಗಿ’ ಶೋ ನಲ್ಲೂ ಕಾಣಿಸಿಕೊಂಡರು. ಆದರೆ ಅವರು ದೇಶದಾದ್ಯಂತ ಮನೆ ಮಾತಾಗಿದ್ದು, ‘ಬಾಲಿಕಾ ವಧು’ ಧಾರಾವಾಹಿಯ ಮೂಲಕ. ‘ಝಲಕ್ ದಿಕ್‍ಲಾಜಾ 6’, ‘ಫಿಯರ್ ಫ್ಯಾಕ್ಟರ್: ಖತ್‍ರೋಂಕಾ ಖಿಲಾಡಿ 7’ ಮತ್ತು ‘ಬಿಗ್ ಬಾಸ್ 13’ನಂತಹ ರಿಯಾಲಿಟಿ ಕಾರ್ಯಕ್ರಮಗಳಲ್ಲಿ ಸಿದ್ದಾರ್ಥ್ ಮಿಂಚಿದ್ದರು.

  Published by:MAshok Kumar
  First published: