'ಅನಾರೋಗ್ಯ'ದಿಂದಾಗಿ 40 ದಿನಗಳಿಂದ ಆಸ್ಪತ್ರೆಯಲ್ಲಿದ್ದಾರೆ ಮುಜಫ್ಫರ್​ನಗರ್​ ರೇಪ್​ ಕೇಸ್​ನ ಮಾಸ್ಟರ್​ಮೈಂಡ್​!


Updated:August 6, 2018, 4:36 PM IST
'ಅನಾರೋಗ್ಯ'ದಿಂದಾಗಿ 40 ದಿನಗಳಿಂದ ಆಸ್ಪತ್ರೆಯಲ್ಲಿದ್ದಾರೆ ಮುಜಫ್ಫರ್​ನಗರ್​ ರೇಪ್​ ಕೇಸ್​ನ ಮಾಸ್ಟರ್​ಮೈಂಡ್​!

Updated: August 6, 2018, 4:36 PM IST
ನ್ಯೂಸ್​ 18 ಕನ್ನಡ

ಮುಜಫ್ಫರ್​ಪುರ(ಆ.06): ಮುಜಫ್ಫರ್​ಪುರದ ಬಾಲಿಕಾ ಗೃಹದಲ್ಲಿ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದ ಪ್ರಮುಖ ಆರೋಪಿ ಬ್ರಿಜೇಶ್​ ಠಾಕೂರ್​ ಕಳೆದ 40 ದಿನಗಳಿಂದ ಜೈಲಿನ ಮೆಡಿಕಲ್​ ವಾರ್ಡ್​ಗೆ ಭರ್ತಿಯಾಗಿದ್ದಾರೆ. ಜೈಲಿನಲ್ಲಿರುವ ವೈದ್ಯರು ನಿರಂತರವಾಗಿ ಬ್ರಿಜೇಶ್​ರಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಾರೆ. ಬ್ರಿಜೇಶ್​ರವರ ಬಿಪಿ ಏರುಪೇರಾಗುತ್ತಿದೆ. ಅಲ್ಲದೇ ಅವರು ಸ್ಲಿಪ್​ ಡಿಸ್ಕ್​ ಹಾಗೂ ಸಕ್ಕರೆ ಕಾಯಿಲೆಯಿಂದಲೂ ಬಳಲುತ್ತಿದ್ದಾರೆಂದು ಹೇಳಲಾಗಿದೆ.

ವೈಧ್ಯಾಧಿಕಾರಿ ಪ್ರತಿ ಬಾರಿಯೂ ಒಂದೇ ರೀತಿಯ ವರದಿ ನೀಡುತ್ತಿರುವುದನ್ನು ಗಮನಿಸಿದ ಜೈಲು ಅಧೀಕ್ಷಕರು ಸಿವಿಲ್​ ಸರ್ಜನ್​ರಿಂದ ಮೆಡಿಕಲ್​ ಬೋರ್ಡ್​ ರಚಿಸಿ ವರದಿ ನೀಡುವಂತೆ ತಿಳಿಸಿದ್ದಾರೆ. ರಿಪೋರ್ಟ್​ ಸಿಕ್ಕ ಬಳಿಕ ಜೈಲು ಅಧಿಕಾರಿಗಳು ಬ್ರಿಜೇಶ್ ಠಾಕೂರ್​ ವಿಚಾರವಾಗಿ ಮುಂದೇನು ಮಾಡಬೇಕೆಂಬ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ಲಭ್ಯವಾದ ಮಾಹಿತಿ ಅನ್ವಯ ಬ್ರಿಜೇಶ್​ರವರಿಗೆ ಜೈಲಿನಲ್ಲಿ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈಗಾಗಲೇ ಜೈಲು ಅಧೀಕ್ಷಕ ರಾಜೀವ್​ ಕುಮಾರ್​ ಝಾ ಸಿವಿಲ್​ ಸರ್ಜನ್​ಗೆ ಪತ್ರ ಬರೆದು ವೈದ್ಯಕೀಯ ಮಂಡಳಿಯನ್ನು ರಚಿಸಿ ತನಿಖಾ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಜೂನ್​ 2 ರಂದು ಬ್ರಿಜೇಶ್​ರನ್ನು ಬಂಧಿಸಿದ್ದು, ಜೂನ್​ 3 ರಂದು ಜೈಲಿಗೆ ಕಳುಹಿಸಲಾಯಿತು. ಆದರೆ ತನ್ನ ಪ್ರಭಾವವನ್ನು ದುರುಪಯೋಗಪಡಿಸಿಕೊಂಡು ಕೇವಲ 5 ದಿನಗಳೊಳಗೆ ಅಂದರೆ ಜೂನ್​ 9 ರಂದು ಅವರು ಎಸ್​ಕೆಎಮ್​ಇಎಚ್​ನಲ್ಲಿ ಚಿಕಿತ್ಸೆಗಾಗಿ ಭರ್ತಿಯಾದರು., 17 ದಿನಗಳವರೆಗೆ ಎಸ್​ಕೆಎಮ್​ಇಎಚ್ ನಲ್ಲಿ ಉಳಿದ ಬಳಿಕ ಆಸ್ಪತ್ರೆಯ ವೈಧ್ಯಾಧಿಕಾರಿಗಳು ಯಾವುದೇ ವರದಿ ನೀಡದಿರುವುದನ್ನು ಗಮನಿಸಿದ ನೂತನ ಜೈಲು ಅಧೀಕ್ಷಕ ರಜೀವ್​ ಕುಮಾರ್​ ಝಾ ವೈಧ್ಯಾಧಿಕಾರಿಗೆ ವರದಿ ನೀಡುವಂತೆ ಸೂಚಿಸಿದ್ದಾರೆ.

ಸಮಾಧಾನಕರ ವರದಿ ಸಿಗದಿದ್ದುದರಿಂದ ಬ್ರಿಜೇಶ್​ರನ್ನು ಮತ್ತೊಮ್ಮೆ ಹುತಾತ್ಮ ಖುದೀರಾಮ್​ ಬೋಸ್​ ಕೇಂದ್ರ ಕಾರಾಗೃಹ ಮುಜಫ್ಫರ್​ಪುರಕ್ಕೆ ಸೇರಿಸಲಾಯಿತು. ಆದರೆ ಕಳೆದ 40 ದಿನಗಳಿಂದ ಬ್ರಿಕಜೆಶ್​ ಠಾಕೂರ್​ ಜೈಲಿನ ಮೆಡಿಕಲ್​ ವಾರ್ಡ್​ನಲ್ಲಿ ಭರ್ತಿಯಾಗಿದ್ದಾರೆ. ಇತ್ತ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ನಿರಂತರವಅಗಿ ಜೈಲು ಅಧಿಕಾರಿಗಳಿಗೆ ವರದಿ ನೀಡುತ್ತಿದ್ದಾರೆ.

ಬ್ರಿಜೇಶ್​ ಠಾಕೂರ್​ರವರ ಭದ್ರತೆಯೊಂದಿಗೆ ಅವರ ಮೇಲೆ ನಿಗಾ ವಹಿಸಲು ಸಿಪಾಯಿಯೊಬ್ಬರನ್ನು ನೇಮಿಸಲಾಗಿದೆ. ಭದ್ರತಾ ಸಿಬ್ಬಂದಿಗಳು 24 ಗಂಟೆಯೂ ಬ್ರಿಜೇಶ್​ರವರ ಆಗು ಹೋಗುಗಳ ಮೆಲೆ ನಿಗಾ ವಹಿಸಿದ್ದಾರೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...