• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಮುಜಾಫರ್‌ನಗರ ಕೋಮು ಗಲಭೆ ಪ್ರಕರಣ; ಸಂಗೀತ ಸೋಮ್ ಸೇರಿದಂತೆ 12 ಬಿಜೆಪಿ ಮುಖಂಡರ ಪ್ರಕರಣ ಹಿಂದಕ್ಕೆ

ಮುಜಾಫರ್‌ನಗರ ಕೋಮು ಗಲಭೆ ಪ್ರಕರಣ; ಸಂಗೀತ ಸೋಮ್ ಸೇರಿದಂತೆ 12 ಬಿಜೆಪಿ ಮುಖಂಡರ ಪ್ರಕರಣ ಹಿಂದಕ್ಕೆ

ಮುಜಾಫರ್​ ನಗರ ಗಲಭೆ ಆರೋಪಿ ಸಂಗೀತ್ ಸೋಮ್.

ಮುಜಾಫರ್​ ನಗರ ಗಲಭೆ ಆರೋಪಿ ಸಂಗೀತ್ ಸೋಮ್.

ಆಗಸ್ಟ್ 2013 ರ ಕೊನೆಯ ವಾರದಲ್ಲಿ ಆರೋಪಿಗಳು ಮಹಾಪಂಚಾಯತ್‌ನಲ್ಲಿ ಪಾಲ್ಗೊಂಡು ತಮ್ಮ ಭಾಷಣಗಳ ಮೂಲಕ ಹಿಂಸಾಚಾರವನ್ನು ಪ್ರಚೋದಿಸಿದರು ಎಂದು ಆರೋಪಿಸಲಾಗಿತ್ತು.

  • Share this:

    ಉತ್ತರಪ್ರದೇಶ (ಮಾರ್ಚ್​ 28); 2013ರ ಮುಜಾಫರ್​ ನಗರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗೀತ್​ ಸೋಮ್ ಸೇರಿದಂತೆ 12 ಜನ ಭಾರತೀಯ ಜನತಾ ಪಕ್ಷದ ಮುಖಂಡರು ಸೇರಿದಂತೆ ವಿವಿಧ ಆರೋಪಿಗಳ ವಿರುದ್ಧದ ಹಿಂಸಾಚಾರಕ್ಕೆ ಪ್ರಚೋದಿಸಿದ ಪ್ರಕರಣವನ್ನು ಹಿಂಪಡೆಯಬೇಕು ಎಂಬ ರಾಜ್ಯ ಸರ್ಕಾರದ ಮನವಿಯನ್ನು ಉತ್ತರ ಪ್ರದೇಶದ ವಿಶೇಷ ನ್ಯಾಯಾಲಯ ಇಂದು ಅನುಮತಿ ನೀಡಿದೆ. ಈ ಮೂಲಕ ರಾಜ್ಯ ಸಚಿವ ಸುರೇಶ್ ರಾಣಾ, ಬಿಜೆಪಿ ಶಾಸಕ ಸಂಗೀತ ಸೋಮ್, ಮಾಜಿ ಸಂಸದ ಭರರೇಂದ್ರ ಸಿಂಗ್ ಮತ್ತು ವಿಶ್ವ ಹಿಂದೂ ಪರಿಷತ್ ನಾಯಕ ಪ್ರಾಚಿ ಸೇರಿದಂತೆ 12 ಜನ ಇದೀಗ ನಿರಾಳರಾದಂತಾಗಿದೆ. ಈ ಎಲ್ಲರ ಮೇಲೂ ಹಿಂಸಾಚಾರ ನಡೆಯಲು ಪ್ರಚೋಧನೆ ನೀಡಿದ ಪ್ರಕರಣವನ್ನು ದಾಖಲಿಸಲಾಗಿತ್ತು. ಆದರೆ, ಉತ್ತರ ಪ್ರದೇಶ ಸರ್ಕಾರ ಇವರ ಬೆನ್ನಿಗೆ ನಿಂತಿತ್ತು.


    ಅಸಲಿಗೆ 2013 ರ ಸೆಪ್ಟೆಂಬರ್‌ನಲ್ಲಿ ನಡೆದ ಈ ಕೋಮು ಗಲಭೆಯಲ್ಲಿ ಕನಿಷ್ಠ 60 ಜನರು ಸಾವನ್ನಪ್ಪಿದ್ದರೆ, ಸಾವಿರಾರು ಮುಸ್ಲಿಂ ಕುಟುಂಬಗಳು ಕೋಮು ಗಲಭೆ ಪೀಡಿತ ಪ್ರದೇಶದಿಂದ ಸ್ಥಳಾಂತರಗೊಂಡಿದ್ದರು. ದಿನ ಕಳೆದಂತೆ ಮುಸ್ಲಿಂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ನಿಂದನೆಯ ವರದಿಗಳು ಸಹ ಹೊರಬರಲು ಪ್ರಾರಂಭಿಸಿದ್ದವು. ಹೀಗಾಗಿ ಈ ಪ್ರಕರಣ ದೇಶದಾದ್ಯಂತ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿತ್ತು.


    ಆದರೆ, ಶುಕ್ರವಾರ, ನ್ಯಾಯಾಧೀಶ ರಾಮ್ ಸುಧ್ ಸಿಂಗ್ ಅವರು ಪ್ರಕರಣವನ್ನು ಹಿಂಪಡೆಯಲು ಸರ್ಕಾರಕ್ಕೆ ಅನುಮತಿ ನೀಡಿದ್ದಾರೆ. ಕಳೆದ ವರ್ಷ ಪ್ರಕರಣವನ್ನು ಹಿಂಪಡೆಯುವಂತೆ ಕೋರಿ ರಾಜ್ಯ ಸರ್ಕಾರ ಪತ್ರವೊಂದನ್ನು ಕಳುಹಿಸಿದೆ ಎಂದು ಮುಜಫರ್​ ನಗರ ಹೆಚ್ಚುವರಿ ಜಿಲ್ಲಾ ಸರ್ಕಾರದ ವಕೀಲ ಲಲಿತ್ ಭರದ್ವಾಜ್ ಹೇಳಿದ್ದಾರೆ.


    ಜಿಲ್ಲಾ ಸರ್ಕಾರಿ ವಕೀಲ ರಾಜೀವ್ ಶರ್ಮಾ ಅವರ ಪ್ರಕಾರ, "ಸರ್ಕಾರಿ ನೌಕರರು ತಮ್ಮ ಕರ್ತವ್ಯವನ್ನು ನಿರ್ವಹಿಸದಂತೆ ತಡೆಯುವ ಮತ್ತು ದುರ್ವರ್ತನೆಯಿಂದ ನಿಷೇಧಿತ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು" ಎಂದು ಹೇಳಿದ್ದಾರೆ.


    ಇದನ್ನೂ ಓದಿ: ಭಾರತದ ‘ಜನತಾ ಕರ್ಫ್ಯೂ’ ಇಡೀ ವಿಶ್ವಕ್ಕೆ ನೀಡಿತ್ತು ಪ್ರೇರಣೆ: ಮನ್ ಕೀ ಬಾತ್​ನಲ್ಲಿ ಪ್ರಧಾನಿ ಹೇಳಿಕೆ


    ಆಗಸ್ಟ್ 2013 ರ ಕೊನೆಯ ವಾರದಲ್ಲಿ ಆರೋಪಿಗಳು ಮಹಾಪಂಚಾಯತ್‌ನಲ್ಲಿ ಪಾಲ್ಗೊಂಡು ತಮ್ಮ ಭಾಷಣಗಳ ಮೂಲಕ ಹಿಂಸಾಚಾರವನ್ನು ಪ್ರಚೋದಿಸಿದರು ಎಂದು ಆರೋಪಿಸಲಾಗಿತ್ತು.


    ಬಿಜೆಪಿ ಮುಖಂಡರ ವಿರುದ್ಧ ಕಾನೂನು ಕ್ರಮ ಜರುಗಿಸದಂತೆ ಉತ್ತರ ಪ್ರದೇಶ ಸರ್ಕಾರ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ನಿರ್ಧರಿಸಿದ್ದು, ಈ ಪ್ರಕರಣವನ್ನು ಹಿಂಪಡೆಯಲು ನ್ಯಾಯಾಲಯವು ತನ್ನ ಮನವಿಯನ್ನು ಅನುಮತಿಸಬೇಕು ಎಂದು ರಾಜ್ಯ ವಕೀಲರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

    Published by:MAshok Kumar
    First published: