• Home
  • »
  • News
  • »
  • national-international
  • »
  • Muzaffarnagar Riots: ಗಲಭೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಸೇರಿ 12 ಮಂದಿ ದೋಷಿ, ಜೈಲು ಶಿಕ್ಷೆ!

Muzaffarnagar Riots: ಗಲಭೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಸೇರಿ 12 ಮಂದಿ ದೋಷಿ, ಜೈಲು ಶಿಕ್ಷೆ!

ಬಿಜೆಪಿ ಶಾಸಕ ವಿಕ್ರಮ್ ಸೈನಿ ಸೇರಿದಂತೆ 12 ಮಂದಿ ತಪ್ಪಿತಸ್ಥರು

ಬಿಜೆಪಿ ಶಾಸಕ ವಿಕ್ರಮ್ ಸೈನಿ ಸೇರಿದಂತೆ 12 ಮಂದಿ ತಪ್ಪಿತಸ್ಥರು

Muzaffarnagar Riots: 27 ಆಗಸ್ಟ್ 2013 ರಂದು, ಮುಜಾಫರ್‌ನಗರ ಜಿಲ್ಲೆಯ ಕಾವಲ್ ಗ್ರಾಮದಲ್ಲಿ ಗೌರವ್ ಮತ್ತು ಸಚಿನ್ ಹತ್ಯೆಯ ಬಳಿಕ, ಪೊಲೀಸರು ಖತೌಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ವಿಕ್ರಮ್ ಸೈನಿ ಸೇರಿದಂತೆ 28 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದೇ ಪ್ರಕರಣದಲ್ಲಿ ಶಾಸಕ ವಿಕ್ರಮ್ ಸೈನಿ ಸೇರಿದಂತೆ 28 ಮಂದಿಯಲ್ಲಿ 12 ಮಂದಿಗೆ ಮುಜಾಫರ್‌ನಗರದ ಎಂಪಿ-ಎಂಎಲ್‌ಎ ನ್ಯಾಯಾಲಯ ತಲಾ ಎರಡು ವರ್ಷ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿದೆ.

ಮುಂದೆ ಓದಿ ...
  • News18 Kannada
  • Last Updated :
  • Bangalore, India
  • Share this:

ಲಕ್ನೋ(ಅ.12): 2013ರ ಗಲಭೆಗೂ ಮುನ್ನ ನಡೆದ ಕಾವಲ್ (Muzaffarnagar Riots) ಘಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಬಿಜೆಪಿ ಶಾಸಕ ವಿಕ್ರಮ್ ಸೈನಿ ಸೇರಿದಂತೆ 12 ಮಂದಿ ತಪ್ಪಿತಸ್ಥರು ಎಂದು ಉತ್ತರ ಪ್ರದೇಶದ (Uttar Pradesh) ಮುಜಾಫರ್‌ನಗರದಲ್ಲಿರುವ ಸಂಸದ-ಶಾಸಕ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ. ಇಷ್ಟಾದರೂ ಶಿಕ್ಷೆ ಪ್ರಕಟವಾದ ಬಳಿಕ, ಬಿಜೆಪಿ ಶಾಸಕ (BJP MLA Vikram Saini) ಸೇರಿದಂತೆ ಎಲ್ಲಾ 12 ಅಪರಾಧಿಗಳಿಗೆ ನ್ಯಾಯಾಲಯದಿಂದಲೇ ಜಾಮೀನು ನೀಡಲಾಯಿತು.


27 ಆಗಸ್ಟ್ 2013 ರಂದು, ಮುಜಾಫರ್‌ನಗರ ಜಿಲ್ಲೆಯ ಕಾವಲ್ ಗ್ರಾಮದಲ್ಲಿ ಗೌರವ್ ಮತ್ತು ಸಚಿನ್ ಹತ್ಯೆಯ ಬಳಿಕ, ಪೊಲೀಸರು ಖತೌಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ವಿಕ್ರಮ್ ಸೈನಿ ಸೇರಿದಂತೆ 28 ಜನರ ವಿರುದ್ಧ ಸೆಕ್ಷನ್ 147, 148, 149, 307, 336, 353, 504 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.


ಇದನ್ನು ಓದಿ: ಮನೆಯವರ ವಿರೋಧಿಸಿ ಮದುವೆಯಾದ ಅಕ್ಕನ ಕತ್ತು ಸೀಳಿ ಸೆಲ್ಪಿ ತೆಗೆದುಕೊಂಡ ತಮ್ಮ; ಮಹಾರಾಷ್ಟ್ರದಲ್ಲೊಂದು ಮರ್ಯಾದಾ ಹತ್ಯೆ


15 ಮಂಸಿ ದೋಷಮುಕ್ತ


ಇದೇ ಪ್ರಕರಣದಲ್ಲಿ ಶಾಸಕ ವಿಕ್ರಮ್ ಸೈನಿ ಸೇರಿದಂತೆ 28 ಮಂದಿಯಲ್ಲಿ 12 ಮಂದಿಗೆ ಮುಜಾಫರ್‌ನಗರದ ಎಂಪಿ-ಎಂಎಲ್‌ಎ ನ್ಯಾಯಾಲಯ ತಲಾ ಎರಡು ವರ್ಷ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ, 15 ಮಂದಿಯನ್ನು ಸಾಕ್ಷಿ ಕೊರತೆಯಿಂದ ದೋಷಮುಕ್ತಗೊಳಿಸಿದೆ. ವಿಚಾರಣೆ ವೇಳೆ ಒಬ್ಬ ಆರೋಪಿ ಸಾವನ್ನಪ್ಪಿದ್ದ.


ನ್ಯಾಯಾಂಗ ಗೌರವಿಸುತ್ತೇನೆಂದ ಸೈನಿ


ಈ ನಿರ್ಧಾರವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಿದ್ದಾರೆ ಬಿಜೆಪಿ ಶಾಸಕ
ಇನ್ನು ಬಿಜೆಪಿ ಶಾಸಕ ವಿಕ್ರಮ್ ಸೈನಿ ತಾನು ನ್ಯಾಯಾಂಗವನ್ನು ಗೌರವಿಸುತ್ತೇನೆ ಎಂದಿದ್ದಾರೆ. ಹೀಗಿದ್ದರೂ ಹೈಕೋರ್ಟ್‌ನಲ್ಲಿ ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಲು ಮುಂದಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಶಾಸಕ ವಿಕ್ರಮ್ ಸೈನಿ ಪರ ವಕೀಲ ಭರತ್‌ವೀರ್ ಸಿಂಗ್ ಅಹ್ಲಾವತ್, ಶಾಸಕರು ಮುಸ್ಲಿಮರ ವಿರುದ್ಧ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ: ಭಾರತದ ‘ಜನತಾ ಕರ್ಫ್ಯೂ’ ಇಡೀ ವಿಶ್ವಕ್ಕೆ ನೀಡಿತ್ತು ಪ್ರೇರಣೆ: ಮನ್ ಕೀ ಬಾತ್​ನಲ್ಲಿ ಪ್ರಧಾನಿ ಹೇಳಿಕೆ


ಆ ವೇಳೆ ಏಳೆಂಟು ಮಂದಿ ಪೊಲೀಸರ ಕೈಗೆ ಸಿಕ್ಕಿಬಿದ್ದು, ಉಳಿದವರು ಪರಾರಿಯಾಗಿದ್ದರು. ಪಲಾಯನ ಮಾಡಿದವರನ್ನೆಲ್ಲ ಖುಲಾಸೆಗೊಳಿಸಲಾಗಿದೆ, ಆದರೆ ಸ್ಥಳದಲ್ಲೇ ಸಿಕ್ಕಿಬಿದ್ದವರಿಗೆ ತಲಾ ಎರಡು ವರ್ಷ ಶಿಕ್ಷೆ ಮತ್ತು ತಲಾ ಹತ್ತು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಇದರಲ್ಲಿ ಶಾಸಕ ವಿಕ್ರಮ್ ಸೈನಿ ಕೂಡ ಒಬ್ಬರಾಗಿದ್ದಾರೆ. 2 ವರ್ಷ ಶಿಕ್ಷೆ ವಿಧಿಸಲಾಗಿದ್ದು, ಶಾಸಕ ಸೇರಿ 12 ಮಂದಿಗೆ ನ್ಯಾಯಾಲಯದಿಂದಲೇ ಜಾಮೀನು ಸಿಕ್ಕಿದೆ ಎಂದಿದ್ದಾರೆ.


ಸಂಗೀತ ಸೋಮ್ ಸೇರಿದಂತೆ 12 ಬಿಜೆಪಿ ಮುಖಂಡರ ಪ್ರಕರಣ ಹಿಂದಕ್ಕೆ


ಅಸಲಿಗೆ 2013 ರ ಸೆಪ್ಟೆಂಬರ್‌ನಲ್ಲಿ ನಡೆದ ಈ ಕೋಮು ಗಲಭೆಯಲ್ಲಿ ಕನಿಷ್ಠ 60 ಜನರು ಸಾವನ್ನಪ್ಪಿದ್ದರೆ, ಸಾವಿರಾರು ಮುಸ್ಲಿಂ ಕುಟುಂಬಗಳು ಕೋಮು ಗಲಭೆ ಪೀಡಿತ ಪ್ರದೇಶದಿಂದ ಸ್ಥಳಾಂತರಗೊಂಡಿದ್ದರು. ದಿನ ಕಳೆದಂತೆ ಮುಸ್ಲಿಂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ನಿಂದನೆಯ ವರದಿಗಳು ಸಹ ಹೊರಬರಲು ಪ್ರಾರಂಭಿಸಿದ್ದವು. ಹೀಗಾಗಿ ಈ ಪ್ರಕರಣ ದೇಶದಾದ್ಯಂತ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿತ್ತು.


ಆದರೆ ಮುಖಂಡರ ವಿರುದ್ಧ ಕಾನೂನು ಕ್ರಮ ಜರುಗಿಸದಂತೆ ಉತ್ತರ ಪ್ರದೇಶ ಸರ್ಕಾರ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ನಿರ್ಧರಿಸಿದ್ದು, ಈ ಪ್ರಕರಣವನ್ನು ಹಿಂಪಡೆಯಲು ನ್ಯಾಯಾಲಯವು ತನ್ನ ಮನವಿಯನ್ನು ಅನುಮತಿಸಬೇಕು ಎಂದು ರಾಜ್ಯ ವಕೀಲರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

Published by:Precilla Olivia Dias
First published: