• Home
  • »
  • News
  • »
  • national-international
  • »
  • Lumpy Skin Disease: ರಾಸುಗಳ ಮೂಕರೋಧನೆ; ಬಾಧಿಸುತ್ತಿರುವ ಚರ್ಮಗಂಟು ರೋಗ

Lumpy Skin Disease: ರಾಸುಗಳ ಮೂಕರೋಧನೆ; ಬಾಧಿಸುತ್ತಿರುವ ಚರ್ಮಗಂಟು ರೋಗ

ಜಾನುವಾರು

ಜಾನುವಾರು

Lumpy Skin Disease: ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಸೆಪ್ಟೆಂಬರ್ 23 ರವರೆಗೆ ಈ ರೋಗವು 20 ಲಕ್ಷಕ್ಕೂ ಹೆಚ್ಚು ಪ್ರಾಣಿಗಳನ್ನು ಬಾಧಿಸಿದೆ ಎಂದು ತಿಳಿಸಿದೆ.

  • Share this:

ಈಗಂತೂ ಈ ಹೊಸ ಹೊಸ ವೈರಸ್ ಗಳು ಮನುಷ್ಯನನ್ನು (People) ಹಲವು ವರ್ಷಗಳಿಂದ (Year) ಬೆಂಬಿಡದೆ ಕಾಡುತ್ತಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಈಗ ನಮಗೆ ಹಾಲು ಕೊಡುವ ಜಾನುವಾರುಗಳಿಗೂ ಒಂದು ರೋಗ ಕಾಡಲು ಶುರುವಾಗಿದೆ (Started) ನೋಡಿ.ಹೌದು ನೀವೆಲ್ಲಾ ಚರ್ಮಗಂಟು (Lump Skin) ರೋಗ (ಲಂಪಿ ರೋಗ) ಅಂತ ಕೇಳಿಯೇ ಇರುತ್ತೀರಿ. ಈಗಾಗಲೇ ಈ ರೋಗ ಜಾನುವಾರುಗಳಲ್ಲಿ  ಕಂಡುಬಂದಿದ್ದು, ಲಕ್ಷಕ್ಕಿಂತಲೂ ಹೆಚ್ಚು ಜಾನುವಾರುಗಳು ಚಿಕಿತ್ಸೆ (Treatment) ಇಲ್ಲದೆ ಸಾವನ್ನಪ್ಪಿವೆ ಎಂದು ಹೇಳಲಾಗುತ್ತಿದೆ.ಸರ್ಕಾರದ ಅಂಕಿಅಂಶಗಳ ಪ್ರಕಾರ, ಜಾನುವಾರುಗಳನ್ನು ಬಾಧಿಸುತ್ತಿರುವ ಈ ಚರ್ಮ ರೋಗವು ದೇಶಾದ್ಯಂತ 15 ರಾಜ್ಯಗಳಿಗೆ ಹರಡಿದೆ. ಮೀನುಗಾರಿಕೆ (Fishing), ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಸೆಪ್ಟೆಂಬರ್ 23 ರವರೆಗೆ ಈ ರೋಗವು 20 ಲಕ್ಷಕ್ಕೂ ಹೆಚ್ಚು ಪ್ರಾಣಿಗಳನ್ನು ಬಾಧಿಸಿದೆ ಎಂದು ತಿಳಿಸಿದೆ.


ದೇಶದಲ್ಲಿ ಮೊದಲ ಸೋಂಕಿನ ಪ್ರಕರಣವು ಗುಜರಾತಿನ ಕಚ್ ಪ್ರದೇಶದಿಂದ ವರದಿಯಾಗಿದೆ. ಜುಲೈನಿಂದ ಇಲ್ಲಿಯವರೆಗೆ 75,000 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ. ಅಧಿಕೃತ ಅಂಕಿಅಂಶಗಳ ಪ್ರಕಾರ, 14 ಲಕ್ಷ ಜಾನುವಾರುಗಳ ಸಾವು ವರದಿಯಾಗಿರುವ ರಾಜಸ್ಥಾನ ಅತಿ ಹೆಚ್ಚು ಬಾಧಿತ ರಾಜ್ಯವಾಗಿದೆ.


ಸದ್ಯದ ಪರಿಸ್ಥಿತಿ ಏನು?


ಗುಜರಾತ್, ಹಿಮಾಚಲ ಪ್ರದೇಶ, ಪಂಜಾಬ್, ರಾಜಸ್ಥಾನ, ಉತ್ತರಾಖಂಡ್, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ದೆಹಲಿ ಮತ್ತು ಬಿಹಾರ್ ಸೇರಿದಂತೆ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಈ ರೋಗದ ಪ್ರಕರಣಗಳು ವರದಿಯಾಗಿವೆ.


ಉತ್ತರಪ್ರದೇಶ ಸರ್ಕಾರವು ನಾಲ್ಕು ನೆರೆಹೊರೆಯ ರಾಜ್ಯಗಳೊಂದಿಗೆ ಜಾನುವಾರು ವ್ಯಾಪಾರವನ್ನು ನಿಷೇಧಿಸಿದೆ ಮತ್ತು 28 ಜಿಲ್ಲೆಗಳಿಂದ ಪ್ರಾಣಿಗಳ ಅಂತರರಾಜ್ಯ ಚಲನೆಗೆ "ಲಾಕ್ಡೌನ್" ಸಹ ವಿಧಿಸಿದೆ.ರಾಜ್ಯದಲ್ಲಿ 26,197 ಹಸುಗಳಿಗೆ ಸೋಂಕು ತಗುಲಿದ್ದು, ಈ ಪೈಕಿ 16,872 ಹಸುಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಪಶುಸಂಗೋಪನಾ ಸಚಿವ ಧರ್ಮಪಾಲ್ ಸಿಂಗ್ ಅವರು ಶುಕ್ರವಾರ ತಿಳಿಸಿದ್ದಾರೆ. ದೇಶಾದ್ಯಂತ ಇದುವರೆಗೂ 16 ಮಿಲಿಯನ್ ಜಾನುವಾರುಗಳಿಗೆ ಸೋಂಕಿನ ವಿರುದ್ಧ ಲಸಿಕೆ ನೀಡಲಾಗಿದೆ.


ಇದನ್ನೂ ಓದಿ: ಬಸ್-ಟ್ರಕ್ ನಡುವೆ ಭೀಕರ ಅಪಘಾತ; 8 ಜನರು ದುರ್ಮರಣ


ಚರ್ಮಗಂಟು (ಲಂಪಿ ಸ್ಕಿನ್ ಡಿಸಿಸ್) ಕಾಯಿಲೆ ಎಂದರೇನು?


ಈ ರೋಗವು ಕ್ಯಾಪ್ರಿಪಾಕ್ಸ್ ವೈರಸ್ ನಿಂದ ಉಂಟಾಗುತ್ತದೆ ಮತ್ತು ಇದು ಜನರ ಮೇಲೆ ಪರಿಣಾಮ ಬೀರುವುದಿಲ್ಲ. ಇದು ನೊಣಗಳು, ಸೊಳ್ಳೆಗಳು, ಹೇನುಗಳು ಮತ್ತು ಕಣಜಗಳ ಮೂಲಕ ಜಾನುವಾರುಗಳಲ್ಲಿ ಹರಡುತ್ತದೆ, ಇದರಿಂದ ಚರ್ಮದ ಮೇಲೆ ಗಂಟುಗಳು ರೂಪುಗೊಳ್ಳುತ್ತವೆ. ಹೆಚ್ಚಿನ ಜ್ವರ, ಕಡಿಮೆ ಹಾಲು ಉತ್ಪಾದನೆ, ಚರ್ಮದ ಗಂಟುಗಳು, ಹಸಿವಾಗದಿರುವುದು, ಹೆಚ್ಚಿದ ಮೂಗಿನ ಸ್ರಾವ ಮತ್ತು ನೀರಿನಿಂದ ಕೂಡಿದ ಕಣ್ಣುಗಳು ರೋಗಲಕ್ಷಣಗಳಲ್ಲಿ ಸೇರಿವೆ.


ಜಾನುವಾರುಗಳ ಹಾಲು ಸೇವಿಸುವುದು ಸುರಕ್ಷಿತವೇ?


ವೈರಸ್ ಹರಡುವಿಕೆಯು ಹಾಲಿನ ಸೇವನೆಯ ಬಗ್ಗೆ ಕಳವಳವನ್ನು ಉಂಟುಮಾಡಿದೆ. ಆದಾಗ್ಯೂ, ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ (ಐವಿಆರ್‌ಐ) ಹಿರಿಯ ಅಧಿಕಾರಿಯೊಬ್ಬರು, ಚರ್ಮ ಗಂಟು ಪ್ರಾಣಿಜನ್ಯವಲ್ಲದ ಸೋಂಕು ಮತ್ತು ಪ್ರಾಣಿಗಳಿಂದ ಮಾನವರಿಗೆ ಹರಡುವುದಿಲ್ಲ ಎಂದು ಹೇಳಿದರು.


ಇದನ್ನೂ ಓದಿ: IS ಜೊತೆ ಸಂಪರ್ಕ, ತೀವ್ರವಾದ, ಟೆರರ್​ ಫಂಡಿಂಗ್: ಪಿಎಫ್​ಐ ಬ್ಯಾನ್​ಗೆ ಕಾರಣವಾದ ಅಂಶಗಳು!


"ಸೋಂಕಿತ ಜಾನುವಾರುಗಳಿಂದ ಹಾಲು ಸೇವಿಸುವುದು ಸುರಕ್ಷಿತವಾಗಿದೆ. ಕುದಿಸಿದ ನಂತರ ಅಥವಾ ಕುದಿಸದೆ ನೀವು ಹಾಲನ್ನು ಕುಡಿದರೂ ಸಹ ಯಾವುದೇ ಸಮಸ್ಯೆಯಿಲ್ಲ" ಎಂದು ಐವಿಆರ್‌ಐ ಜಂಟಿ ನಿರ್ದೇಶಕ ಅಶೋಕ್ ಕುಮಾರ್ ಮೊಹಾಂತಿ ಈ ತಿಂಗಳ ಆರಂಭದಲ್ಲಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಜಾನುವಾರುಗಳಿಗೆ ಸರಿಯಾದ ಸಮಯಕ್ಕೆ ಲಸಿಕೆ ಹಾಕಿಸಿದರೆ ರೋಗ ಮತ್ತು ಹಾಲಿನ ಉತ್ಪಾದನೆಯ ಮೇಲೆ ಅದರ ಪರಿಣಾಮವನ್ನು ತಡೆಯಬಹುದು. ಜಾನುವಾರುಗಳಿಗೆ ಮೊದಲ ಬಾರಿಗೆ ಸೋಂಕು ತಗುಲಿದರೆ ಮತ್ತು ಲಸಿಕೆ ಹಾಕಿಸದಿದ್ದರೆ, ಹಾಲಿನ ಉತ್ಪಾದನೆ ಶೇಕಡಾ 40 ರಿಂದ 50 ರಷ್ಟು ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು. ಸೆಪ್ಟೆಂಬರ್ 2020 ರಲ್ಲಿ ಭಾರತದಲ್ಲಿ ಮೊದಲ ಚರ್ಮ ಗಂಟು ರೋಗದ ಪ್ರಕರಣಗಳು ವರದಿಯಾಗಿದ್ದವು.

First published: