HOME » NEWS » National-international » MUTATED FORMS OF THE VIRUS PRODUCING DIFFERENT SYMPTOMS AS WELL SESR

CoronaVirus: ಕಿವಿ ಕೇಳಿಸದಂತೆ, ದೃಷ್ಟಿಯನ್ನೂ ಮಂಜಾಗಿಸುತಂತೆ ಹೊಸ ರೂಪಾಂತರಿ ಕೊರೋನಾ..!

ಅತಿವೇಗವಾಗಿ ಹರಡುವ ಸಾಮರ್ಥ್ಯ ಗಳಿಸಿಕೊಂಡಿರುವ ರೂಪಾಂತರಿ ಸೋಂಕು ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಲಿದೆ ಎಂದು ಹೊಸ ಅಧ್ಯಯನ ಹೇಳುತ್ತಿದೆ

news18-kannada
Updated:April 12, 2021, 3:46 PM IST
CoronaVirus: ಕಿವಿ ಕೇಳಿಸದಂತೆ, ದೃಷ್ಟಿಯನ್ನೂ ಮಂಜಾಗಿಸುತಂತೆ ಹೊಸ ರೂಪಾಂತರಿ ಕೊರೋನಾ..!
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಏ. 12) : ಲಸಿಕೆ ವಿತರಣೆ ಮಧ್ಯೆಯೂ ದೇಶಾದ್ಯಂತ ಕೊರೋನಾ 2ನೇ ಅಲೆ ಅಬ್ಬರಿಸುತ್ತಿದೆ. ಮತ್ತೆ ನೈಟ್ ಕರ್ಫ್ಯೂ, ಲಾಕ್ಡೌನ್ಗಳದ್ದೇ ಸದ್ದು. ಈ ಮಧ್ಯೆ ಡೆಡ್ಲಿ ವೈರಸ್ ಕೊರೋನಾ ಕೂಡ ನಾನಾ ರೀತಿಯಲ್ಲಿ ಕಾಡಲು ಮತ್ತಷ್ಟು ಪ್ರಬಲವಾಗಿ ರೂಪಾಂತರಗೊಂಡಿದೆ. ರೂಪಾಂತರಿ ಕೊರೋನಾದ ರೋಗಲಕ್ಷಣಗಳು ಮತ್ತಷ್ಟು ಆತಂಕವನ್ನು ಹೆಚ್ಚಿಸುತ್ತಿದೆ. ಅತಿವೇಗವಾಗಿ ಹರಡುವ ಸಾಮರ್ಥ್ಯ ಗಳಿಸಿಕೊಂಡಿರುವ ರೂಪಾಂತರಿ ಸೋಂಕು ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಲಿದೆ ಎಂದು ಹೊಸ ಅಧ್ಯಯನ ಹೇಳುತ್ತಿದೆ.  ಇಷ್ಟು ದಿನ ಜ್ವರ, ಒಣಕೆಮ್ಮು, ರುಚಿ-ವಾಸನೆ ಕಳೆದುಕೊಳ್ಳುವುದನ್ನು ಕೊರೋನಾದ ಸಾಮಾನ್ಯ ರೋಗ ಲಕ್ಷಣಗಳೆಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ರೂಪಾಂತರಗೊಂಡು 2ನೇ ಅಲೆ ಎಬ್ಬಿಸಿದುವ ಸೋಂಕಿನ ಲಕ್ಷಣಗಳು ಭಯಾನಕವಾಗಿದೆ.

ರೂಪಾಂತರಿ ಸೋಂಕು ತಗುಲಿರುವ ಹಲವರಲ್ಲಿ ಕಿವಿ ಕೇಳಿಸದಿರುವುದು, ದೃಷ್ಟಿದೋಷ, ಹೊಟ್ಟೆನೋವು, ಮಾಂಸಖಂಡಗಳಲ್ಲಿ ನೋವು, ಚರ್ಮದಲ್ಲಿ ಅಲರ್ಜಿ, ಜೀರ್ಣಕ್ರಿಯೆಯಲ್ಲಿ ತೊಂದರೆಯಂತ ರೋಗಲಕ್ಷಣಗಳು ಕಾಣಿಸಿಕೊಂಡಿವೆ. ಕೆಲ ಸೋಂಕಿತರಲ್ಲಿ ಅತಿಯಾದ ತಲೆನೋವು, ಕೈ-ಕಾಲಿನ ಬೆರಳುಗಳಲ್ಲಿ ಸೆಳೆತ ಕೂಡ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಹೊಸ ರೋಗಲಕ್ಷಣಗಳು ಕಾಣಿಸಿಕೊಂಡವರಲ್ಲಿ ಜ್ವರ-ಕೆಮ್ಮಿನಂತ ಸಾಮಾನ್ಯ ಲಕ್ಷಣಗಳು ಪ್ರಾರಂಭದಲ್ಲಿ ಕಾಣಿಸಿಕೊಂಡಿಲ್ಲ ಎಂಬುವುದು ಆತಂಕಕಾರಿಯಾಗಿದೆ. ಎಲ್ಲೆಡೆಯೂ ಕೊರೋನಾ ರೋಗಲಕ್ಷಣಗಳನ್ನು ಕಂಡು ಹಿಡಿಯಲು ದೇಹದ ಉಷ್ಣಾಂಶ ಪರೀಕ್ಷೆ, ಕೆಮ್ಮು ಕಾಣಿಸಿಕೊಂಡರೆ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಆದರೆ ಸದ್ದಿಲ್ಲದೇ ನುಸುಳುವ ರೂಪಾಂತರಿ ಸೋಂಕು ಮೊದಲಿಗೆ ವ್ಯಕ್ತಿಯ ಗಮನಕ್ಕೆ ಬರದೇ ಹೋಗಬಹುದು. ಇದರಿಂದ ಸೋಂಕಿನ ಹಬ್ಬುವಿಕೆ ಪ್ರಮಾಣ ಹೆಚ್ಚಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಶೀಘ್ರವೇ ಸ್ಪುಟ್ನಿಕ್ ಲಸಿಕೆ ಬಳಕೆಗೆ ಅನುಮತಿ ನೀಡುವ ಬಗ್ಗೆ ಇಂದು ನಿರ್ಧಾರ ಕೈಗೊಳ್ಳುವ ಸಾಧ್ಯತೆ

ಅತಿವೇಗವಾಗಿ ಹರಡುವ ‘ರೂಪಾಂತರಿ’..!

ಕಳೆದ ವರ್ಷ ಇಡೀ ವಿಶ್ವವನ್ನೇ ಕಂಗೆಡಿಸಿದ್ದ ಸೋಂಕು ಸರ್ವವ್ಯಾಪಿಯಾಗಿತ್ತು. ಕೊರೋನಾ ವಿರುದ್ಧ ವೈದ್ಯಲೋಕ ಯುದ್ಧವನ್ನೇ ಸಾರಿ ನೂರಾರು ಸಂಶೋಧನೆಗಳನ್ನು ನಡೆಸಿತು. ಅದರ ಫಲವಾಗಿ ಸಂಜೀವಿನಿಯಂತೆ ಲಸಿಕೆ ಸಿಕ್ಕಿದೆ. ಆದರೆ ಎಲ್ಲಾ ಸಂಶೋಧನೆಗಳನ್ನು ಹಿಂದಿಕ್ಕಿರುವ ಸೋಂಕು ರೂಪಾಂತರಗೊಂಡು ಮತ್ತಷ್ಟು ಬಲಿಷ್ಠಗೊಂಡಿದೆ. ಹಳೆಯ ಸೋಂಕಿಗಿಂತ ರೂಪಾಂತರಿ ಸೋಂಕು ಶೇ.70ರಷ್ಟು ಹೆಚ್ಚು ವೇಗವಾಗಿ ಹರಡುತ್ತಿದೆ ಎಂದು ಸಂಶೋಧನೆ ಹೇಳುತ್ತಿದೆ.

ವ್ಯಾಕ್ಸಿನ್ ಹೊಸ ಸೋಂಕನ್ನೂ ತಡೆಯುತ್ತಾ..? ಸತತ ಸಂಶೋಧನೆ ಬಳಿಕ ಸೋಂಕಿಗೆ ಲಸಿಕೆ ಕಂಡು ಹಿಡಿಯಲಾಗಿದ್ದು, ಸದ್ಯ ಭಾರತದಲ್ಲಿ ಲಸಿಕಾ ಅಭಿಯಾನ ಭರದಿಂದ ಸಾಗುತ್ತಿದೆ. ಆದರೆ ಈಗ ವಿತರಿಸುತ್ತಿರುವ ಲಸಿಕೆ ರೂಪಾಂತರಿ ಸೋಂಕನ್ನೂ ತಡೆಯುತ್ತಾ ಎಂಬ ಪ್ರಶ್ನೆ ಕಾಡುತ್ತಿದೆ. ಕೆಲ ತಜ್ಞರು ಹೇಳುವ ಪ್ರಕಾರ ಹೊಸ ಸೋಂಕನ್ನೂ ಪರಿಣಾಮಕಾರಿಯಾಗಿ ತಡೆಯಲು ಲಸಿಕೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಬೇಕಿದೆ. ಅದಕ್ಕೆ ಸಮಯವೂ ಹಿಡಿಯಲಿದೆ. ಈಗಿರುವ ಲಸಿಕೆಯನ್ನೂ ಪಡೆಯುವುದು ಮುಖ್ಯ, ಇದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಲಿದೆ. ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ದೇಹಕ್ಕೆ ದೊರೆಯುತ್ತದೆ. ಜನ ಹೆದರದೆ ಮುಂದೆ ಬಂದು ಲಸಿಕೆಯನ್ನು ಪಡೆಯಬೇಕು. ಜೊತೆಗೆ ಮಾಸ್ಕ್, ಸಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಎಚ್ಚರಿಸಿದ್ದಾರೆ.

(ವರದಿ: ಕಾವ್ಯಾ. ವಿ)
Published by: Seema R
First published: April 12, 2021, 3:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories