ಮೋದಿ ಹತ್ಯೆಗೆ ಸಂಚು ಆರೋಪ ಹೋರಾಟಗಾರರ ಬಂಧನ​: ಜವಾಬ್ದಾರಿಯಿಂದ ವರ್ತಿಸಿ ಎಂದು ಪೊಲೀಸರಿಗೆ ಸುಪ್ರೀಂ ಛೀಮಾರಿ


Updated:September 6, 2018, 4:43 PM IST
ಮೋದಿ ಹತ್ಯೆಗೆ ಸಂಚು ಆರೋಪ ಹೋರಾಟಗಾರರ ಬಂಧನ​: ಜವಾಬ್ದಾರಿಯಿಂದ ವರ್ತಿಸಿ ಎಂದು ಪೊಲೀಸರಿಗೆ ಸುಪ್ರೀಂ ಛೀಮಾರಿ

Updated: September 6, 2018, 4:43 PM IST
ನ್ಯೂಸ್​-18 ಕನ್ನಡ

ನವದೆಹಲಿ(ಸೆಪ್ಟೆಂಬರ್​.06): ಸುಪ್ರೀಂಕೋರ್ಟ್​​ ಆದೇಶ ಉಲ್ಲಂಘಿಸಿ ಮಾನವ ಹಕ್ಕು ಹೋರಾಟಗಾರರ ಬಂಧನದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡ ಮಹರಾಷ್ಟ್ರ ಪೊಲೀಸರಿಗೆ ಉನ್ನತ ನ್ಯಾಯಲಯದ ಚೀಫ್​​ ಜಸ್ಟೀಸ್​​ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಛೀಮಾರಿ ಹಾಕಿದೆ. ಅಲ್ಲದೇ ಪೊಲೀಸರು ಜವಾಬ್ದಾರಿಯಿಂದ ನಡೆದುಕೊಳ್ಳುವಂತೆ ಸೂಚಿಸಿ ಎಂದು ಮಹರಾಷ್ಟ್ರ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದೆ.

ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಆರೋಪದಡಿಯಲ್ಲಿ ದೇಶದ ಐವರು ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸಲಾಗಿತ್ತು. ಬಳಿಕ ಸುಪ್ರೀಂಕೋರ್ಟ್​​ ಸೆರೆಮನೆ ಬದಲಿಗೆ ಮನೆಸೆರೆ ವಾಸದಲ್ಲಿ ಇರಿಸುವಂತೆ ಆದೇಶ ನೀಡಿತ್ತು. ಈ ಬೆನ್ನಲ್ಲೇ ಮಹರಾಷ್ಟ್ರ ಪೊಲೀಸರು ಕೋರ್ಟ್​ ಆದೇಶ ಉಲ್ಲಂಘಿಸಿ ಮಾಧ್ಯಮಗಳಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಭೀಮಾಕೊರೆಂಗಾವ್​​ ಹಿಂಸಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ಬಂಧಿಸಿದ್ದ ಐವರು ಹೋರಾಟಗಾರರ ಮನೆಸೆರೆ ವಾಸವನ್ನು ಸೆಪ್ಟೆಂಬರ್​.12 ರವೆಗೂ ವಿಸ್ತರಿಸಲಾಯ್ತು. ಈ ವಿಚಾರವನ್ನು ಮಹರಾಷ್ಟ್ರ ಪೊಲೀಸರು ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡಿದ್ದರು. ಹೀಗಾಗಿ, ಸುಪ್ರೀಂಕೋರ್ಟ್​​ ಆದೇಶವನ್ನು ಉಲ್ಲಂಘಿಸಿದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವಂತೆ ನ್ಯಾಯಮೂರ್ತಿ ದೀಪಕ್​ ಮಿಶ್ರಾ ಸರ್ಕಾರಕ್ಕೆ ಸೂಚಿಸಿದ್ಧಾರೆ.

ಈ ನಡುವೆ ಮಧ್ಯಪ್ರವೇಶಿಸಿದ ಮಹರಾಷ್ಟ್ರ ಪೊಲೀಸ್​ಪರ ವಕೀಲ ಆರೋಪಿಗಳನ್ನು ಮನೆಬಂಧನದಲ್ಲಿಟ್ಟರೇ ಪ್ರಸ್ತುತ ವಿಚಾರಣೆಗೆ ಹಾನಿಯಾಗಲಿದೆ ಎಂದು ವಾದಿಸಿದ್ದಾರೆ. ಈ ವಿಚಾರವನ್ನು ಸುಪ್ರೀಂಕೋರ್ಟ್​ ಸೆಪ್ಟೆಂಬರ್​​.12ಕ್ಕೆ ಮುಂದೂಡಿದೆ. ಈ ಮೂಲಕ ಸುಪ್ರೀಂಕೋರ್ಟ್​​ ಮಾನವ ಹಕ್ಕು ಹೋರಾಟಗಾರರ ಹಕ್ಕುಗಳನ್ನು ಎತ್ತಿಹಿಡಿದಿದೆ.

ತೆಲಂಗಾಣ ಮೂಲದ ಕ್ರಾಂತಕಾರಿ ಕವಿ ವರವರ ರಾವ್​, ಸುಧಾ ಭಾರದ್ವಾಜ್​, ಗೌತಮ್​ ನವಲಖಾ, ಅರುಣ್​ ಫೆರೇರಾ ಮತ್ತು ವರ್ನನ್​ ಗೊನ್ಸಾಲ್ವೆಸ್​ ಅವರನ್ನು ಮಹರಾಷ್ಟ್ರ ಪೊಲೀಸರು ಬಂಧಿಸಿದ್ದರು. ಸೆಪ್ಟೆಂಬರ್​ 12ರ ವರೆಗೆ ಗೃಹ ಬಂಧನದಲ್ಲಿಡುವಂತೆ ಸುಪ್ರೀಂ ಕೋರ್ಟ್​ ಆದೇಶಿಸಿತ್ತು.

ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿರುವುದಕ್ಕೆ ಸಾಕ್ಷಿಯಿದೆ ಎಂದು ಮಹಾರಾಷ್ಟ್ರದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಪಿ.ಬಿ. ಸಿಂಗ್ ತಿಳಿಸಿದ್ದರು. ಈ ಮೂಲಕ ಹೋರಾಟಗಾರರ ಬಂಧನವನ್ನು ಪೊಲೀಸರು ಸಮರ್ಥಿಸಿಕೊಂಡಿದ್ದರು. ಮಾವೋವಾದಿಗಳೊಂದಿಗೆ ಹೋರಾಟಗಾರರಿಗೆ ಸಂಬಂಧ ಇರುವುದಕ್ಕೆ ಸಾಕ್ಷಿಗಳು ಸಿಕ್ಕಿವೆ ಎಂದು ತಿಳಿಸಿದ್ದರು.
Loading...

ಗ್ರೆನೇಡ್ ಉಡಾವಣಾ ವಾಹಕದ ಕ್ಯಾಟಲಾಗ್, ಕೋಡ್ ಭಾಷೆಯಲ್ಲಿರುವ ಮಾವೋವಾದಿಗಳ ಪತ್ರಗಳು, ಶಸ್ತ್ರಾಸ್ತ್ರಗಳನ್ನು ಕೊಂಡಿರುವುದಕ್ಕೆ ಸಾಕ್ಷಿಗಳು ಸೇರಿದಂತೆ ಐದು ಮಹತ್ವದ ಸಾಕ್ಷಿಗಳು ಸಿಕ್ಕಿವೆ. ಜಿಗ್ನೇಶ್ ಮೇವಾನಿ, ಉಮರ್​ ಖಾಲಿದ್ ಅವರು ಕೂಡ ಗಲಭೆಯಲ್ಲಿ ಪಾತ್ರವಹಿಸಿರುವ ಸಾಧ್ಯತೆಯಿದೆ ಎಂದು ನ್ಯಾಯಲಯಕ್ಕೆ ಮಹರಾಷ್ಟ್ರ ಪೊಲೀಸರು ಸಾಕ್ಷಿಸಲ್ಲಿಸಿ ಬಂಧನವನ್ನು ಸಮರ್ಥಿಸಿಕೊಂಡಿದ್ಧಾರೆ ಎನ್ನಲಾಗಿದೆ.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ