Saudi Ramadan Restrictions: ರಂಜಾನ್ ಆಚರಣೆಗೆ ಕೆಲ ನಿರ್ಬಂಧ ವಿಧಿಸಿದ ಸೌದಿ; ಮುಸ್ಲಿಮರಿಂದಲೇ ಅಸಮಾಧಾನ

ರಂಜಾನ್ ಆಚರಣೆಗೆ ಕೆಲ ನಿರ್ಬಂಧ ವಿಧಿಸಿದ ಸೌದಿ

ರಂಜಾನ್ ಆಚರಣೆಗೆ ಕೆಲ ನಿರ್ಬಂಧ ವಿಧಿಸಿದ ಸೌದಿ

ಸೌದಿಯ ಇಸ್ಲಾಮಿಕ್ ಸಚಿವಾಲಯವು 2023ರಲ್ಲಿ ಪವಿತ್ರ ರಂಜಾನ್ ತಿಂಗಳನ್ನು ಆಚರಿಸಲು ನಿಯಮಗಳು ಮತ್ತು ನಿರ್ಬಂಧಗಳನ್ನು ಹೊರಡಿಸಿದೆ.

  • Trending Desk
  • 3-MIN READ
  • Last Updated :
  • New Delhi, India
  • Share this:

ರಿಯಾದ್: ಸೌದಿ ಅರೇಬಿಯಾದ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯವು (Saudi Islamic Affairs Ministry )ಇತ್ತೀಚೆಗೆ ರಂಜಾನ್‌ ಆಚರಣೆಯ (Ramzan Celebration) ಬಗ್ಗೆ ಹೊಸ ನಿಯಮಗಳನ್ನು (New Rules) ಘೋಷಿಸಿದ್ದು, ಈ ಆದೇಶ ವಿಶ್ವದಾದ್ಯಂತ ಅನೇಕ ಮುಸ್ಲಿಮರನ್ನು (Muslim) ಅಸಮಾಧಾನಗೊಳ್ಳುವಂತೆ ಮಾಡಿದೆ. ಈ ಕುರಿತು ಟ್ವಿಟ್ಟರ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಮುಸ್ಲಿಮರು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಈ ನಿರ್ಬಂಧಗಳ ಕುರಿತು ವಿಶ್ಲೇಷಕ ಸಾಮಿ ಹಮ್ದಿ, ಈ ಆದೇಶಗಳು ಇಸ್ಲಾಂ ಅನ್ನು ಆಧಾರಸ್ತಂಭವಾಗಿ ನೋಡದ ಇರುವಂಥ ಹೊಸ ಸೌದಿಯನ್ನು ಪ್ರತಿನಿಧಿಸುತ್ತವೆ ಎಂದಿದ್ದಾರೆ.


ಅಲ್ಲದೇ ಎಂಬಿಎಸ್ ಆಡಳಿತ ಇಸ್ಲಾಂ ಅನ್ನು ಸಾರ್ವಜನಿಕ ಜೀವನದಿಂದ ಹೊರಹಾಕುತ್ತಿದೆ ಎಂಬುದಾಗಿ ಹಮ್ದಿ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.


ಏನಿದು ರಂಜಾನ್‌ ಆಚರಣೆಯ ಹೊಸ ನಿಯಮಗಳು ?


ಸೌದಿಯ ಇಸ್ಲಾಮಿಕ್ ಸಚಿವಾಲಯವು 2023ರಲ್ಲಿ ಪವಿತ್ರ ರಂಜಾನ್ ತಿಂಗಳನ್ನು ಆಚರಿಸಲು ನಿಯಮಗಳು ಮತ್ತು ನಿರ್ಬಂಧಗಳನ್ನು ಹೊರಡಿಸಿದೆ.


ಈ ಮಾರ್ಗಸೂಚಿಗಳಲ್ಲಿ ಧ್ವನಿವರ್ಧಕಗಳ ಬಳಕೆ ಮಾಡುವುದು, ಗುರುತಿನ ರಹಿತ ಇತಿಕಾಫ್, ಪ್ರಾರ್ಥನೆ ಪ್ರಸಾರಗಳು ಮತ್ತು ಮಸೀದಿಗಳಲ್ಲಿ ಇಫ್ತಾರ್‌ಅನ್ನು ನಿಷೇಧಿಸಿ ಆದೇಶ ಹೊರಡಿಸಿದೆ.


ಅಲ್ಲದೇ 2023 ರಿಂದ ಪ್ರಾರಂಭವಾಗುವ ಹೊಸ ನಿಯಮಗಳ ಪ್ರಕಾರ ಮಸೀದಿಗಳಿಗೆ ದೇಣಿಗೆ ನೀಡುವುದನ್ನು ನಿಷೇಧಿಸಲಾಗಿದೆ. ಜೊತೆಗೆ ಮಸೀದಿಗಳಲ್ಲಿ ಸೂರ್ಯಾಸ್ತದ ನಂತರದ ಇಫ್ತಾರ್ ಊಟವನ್ನು ಕೂಡ ನಿಷೇಧಿಸಲಾಗಿದೆ.


ಗುರುತಿನ ದಾಖಲೆ ಕಡ್ಡಾಯ


ಹೆಚ್ಚುವರಿಯಾಗಿ, ಪ್ರಾರ್ಥನೆಗಳನ್ನು ಸಂಕ್ಷಿಪ್ತವಾಗಿ ಮಾಡಬೇಕಾಗುತ್ತದೆ. ಮಕ್ಕಳನ್ನು ಮಸೀದಿಗಳಲ್ಲಿ ಪ್ರಾರ್ಥಿಸಲು ಅನುಮತಿಸಲಾಗುವುದಿಲ್ಲ. ಪ್ರಾರ್ಥನೆ ಮಾಡಲು ಬರುವವರು ತಮ್ಮ ಗುರುತಿನ ದಾಖಲೆಗಳನ್ನು ತರಬೇಕು.


ಮೆಕ್ಕಾ ಮತ್ತು ಮದೀನಾದಲ್ಲಿನ ಮುಖ್ಯ ಮಸೀದಿಗಳನ್ನು ಹೊರತುಪಡಿಸಿ, ವಾಲ್ಯೂಮ್ ಮಟ್ಟವನ್ನು ಕಡಿಮೆ ಮಾಡಬೇಕು. ಜೊತೆಗೆ ಪ್ರಾರ್ಥನೆಗಳನ್ನು ಪ್ರಸಾರ ಮಾಡಲಾಗುವುದಿಲ್ಲ ಎಂಬುದಾಗಿ ಆದೇಶ ಹೊರಡಿಸಲಾಗಿದೆ.


ಪ್ರಾರ್ಥನೆ ಪ್ರಸಾರಕ್ಕೆ ನಿರ್ಬಂಧ


ಹೊಸ ನಿಯಮಗಳ ಪ್ರಕಾರ ಪ್ರಾರ್ಥನೆಗಳನ್ನು ದೀರ್ಘಗೊಳಿಸಲು ಅನುಮತಿ ನೀಡಿಲ್ಲ. ಮಸೀದಿಯಲ್ಲಿ ಕ್ಯಾಮೆರಾಗಳನ್ನು ಬಳಸಿದರೆ, ಪ್ರಾರ್ಥನೆಯ ಸಮಯದಲ್ಲಿ ಇಮಾಮ್ ಅಥವಾ ಆರಾಧಕರ ಚಿತ್ರಗಳನ್ನು ತೆಗೆದುಕೊಳ್ಳಲು ಅವುಗಳನ್ನು ಬಳಸಬಾರದು ಎನ್ನಲಾಗಿದೆ. ಮಾಧ್ಯಮಗಳಲ್ಲಿ ಈ ಪ್ರಾರ್ಥನೆಗಳನ್ನು ಪ್ರಸಾರ ಮಾಡಬಾರದು ಎಂದೂ ಸಹ ಹೇಳಲಾಗಿದೆ.


ಇನ್ನು, ಇತಿಕಾಫ್‌ಗಾಗಿ ಮಸೀದಿಯಲ್ಲಿ ಉಳಿಯಲು ಬಯಸುವ ಜನರನ್ನು ಅನುಮೋದಿಸಲು ಇಮಾಮ್ ಜವಾಬ್ದಾರರಾಗಿರುತ್ತಾರೆ. ಉಪವಾಸ ಮಾಡುವ ಜನರಿಗೆ ಆಹಾರ ನೀಡುವಂಥ ಯೋಜನೆಗಳಿಗೆ ಯಾವುದೇ ಹಣಕಾಸಿನ ದೇಣಿಗೆ ಸಂಗ್ರಹಿಸಬಾರದು.




ಉಪವಾಸ ಮಾಡುವವರಿಗೆ ಆಹಾರವನ್ನು ನೀಡಿದರೆ, ಅದನ್ನು ಗೊತ್ತುಪಡಿಸಿದ ಪ್ರದೇಶಗಳಲ್ಲಿ ನೀಡಿ ನಂತರ ಸ್ವಚ್ಛ ಮಾಡಬೇಕು. ಹೊಸ ನಿಯಮಗಳ ಪ್ರಕಾರ ಇಫ್ತಾರ್‌ಗಾಗಿ ಯಾವುದೇ ತಾತ್ಕಾಲಿಕ ಕೊಠಡಿಗಳು ಅಥವಾ ಟೆಂಟ್‌ಗಳನ್ನು ಸ್ಥಾಪಿಸಬಾರದು ಎಂಬ ನಿಯಮ ವಿಧಿಸಲಾಗಿದೆ.


ಸೌದಿ ಆದೇಶಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನಾಭಿಪ್ರಾಯ


ಸೌದಿಯ ಈ ಆದೇಶವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ನಂತರ, ಒಬ್ಬ ಬಳಕೆದಾರ ಕೆಲವು ಅಂಶಗಳೊಂದಿಗೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೆಲವು ಜನರು ಆದೇಶದ ಇತರ ಅಂಶಗಳ ಹಿಂದಿನ ತಾರ್ಕಿಕತೆಯನ್ನು ಒಪ್ಪಿಕೊಂಡಿದ್ದಾರೆ.


Muslims get upset for Saudi Ramadan new restrictions stg mrq
ಸಾಂದರ್ಭಿಕ ಚಿತ್ರ


ಒಬ್ಬ ಟ್ವಿಟ್ಟರ್‌ ಬಳಕೆದಾರ, ಡಾಕ್ಯುಮೆಂಟ್ ಸೆನ್ಸಾರ್ಶಿಪ್ ಅನ್ನು ಒಳಗೊಂಡಿರುವಂತೆ ತೋರುತ್ತದೆ. ಆದರೆ ಸೌದಿಯಿಂದ ಹೊರಗಿರುವ ಮುಸ್ಲಿಮರು ರಂಜಾನ್ ಸಮಯದಲ್ಲಿ ಯಾವುದೇ ನಿರ್ಬಂಧಗಳನ್ನು ಎದುರಿಸಬಾರದು ಎಂದು ಎಂಬುದಾಗಿ ಹೇಳಿದ್ದಾರೆ.


ಇದನ್ನೂ ಓದಿ: Ramzan 2023: ರಂಜಾನ್​ ಹಬ್ಬಕ್ಕೆ ಸರ್ಕಾರದಿಂದ ಗುಡ್​​ ನ್ಯೂಸ್- ನೌಕರರು ಫುಲ್ ಖುಷ್


ಎಲ್ಲಾ ಮುಸ್ಲಿಮರನ್ನು ಸಮಾನವಾಗಿ ಪರಿಗಣಿಸಿ


ಮುಸ್ಲಿಮರಿಗೆ ರಂಜಾನ್ ಪ್ರಾರ್ಥನೆ ಮತ್ತು ಆಚರಣೆಯ ಸಮಯವಾಗಿರುವುದರಿಂದ, ಜನರು ಒಟ್ಟುಗೂಡಲು, ಬೆರೆಯಲು ಮತ್ತು ಸಂಪರ್ಕಿಸಲು ಸಣ್ಣ ಡೇರೆಗಳಿಗೆ ಅವಕಾಶ ನೀಡುವುದು ಮುಖ್ಯವಾಗಿದೆ. ರಾಷ್ಟ್ರೀಯತೆ ಅಥವಾ ಜನಾಂಗೀಯತೆಯನ್ನು ಲೆಕ್ಕಿಸದೆ ಎಲ್ಲಾ ಮುಸ್ಲಿಮರನ್ನು ಸಮಾನವಾಗಿ ಪರಿಗಣಿಸಲು ಅವರು ಹೇಳಿಕೊಂಡಿದ್ದಾರೆ.


Muslims get upset for Saudi Ramadan new restrictions stg mrq
ಸಾಂದರ್ಭಿಕ ಚಿತ್ರ


ಟ್ವಿಟ್ಟರ್‌ನ ಇನ್ನೊಬ್ಬ ಬಳಕೆದಾರರು ಈ ನಿಯಮಗಳನ್ನು ಅಸಂಬದ್ಧ ಎಂದು ಕರೆದಿದ್ದಾರೆ. ಮತ್ತೊಬ್ಬರು "ನಿಧಾನವಾಗಿ ಇಸ್ಲಾಂ ಅನ್ನು ತೆಗೆದುಹಾಕುವ ಮತ್ತೊಂದು ಪ್ರಯತ್ನ" ಎಂದು ಹೇಳಿದ್ದಾರೆ.


ಇನ್ನೊಬ್ಬ ಬಳಕೆದಾರರು ಬಂದಿರುವ "ದುಷ್ಟ ನಿರಂಕುಶ ರಾಜಪ್ರಭುತ್ವ ಕೊನೆಗಾಣಿಸುವ ಸಮಯ ಬಂದಿದೆ” ಎಂಬುದಾಗಿ ಕಾಮೆಂಟ್‌ ಮಾಡಿದ್ದಾರೆ.

Published by:Mahmadrafik K
First published: