ಅಯ್ಯಪ್ಪ ಮಾಲೆ ಧರಿಸಿ, ಮಂಡಲ ಪೂಜೆ ಮಾಡುವ ಮೂಲಕ ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಯುವಕ

ಬಾಬಲು ಅಫಸರ ಅವರು ಮೊದಲನೇ ಬಾರಿ ಅಯ್ಯಪ್ಪ ಮಾಲಾ ಧಾರಣೆ ಮಾಡಿ 41 ದಿನಗಳ ಕಾಲ ಮಣಿಕಂಠನ ವ್ರತ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಈ ಮೂಲಕ  ಸೌಹರ್ದತೆಗೆ ಸಾಕ್ಷಿಯಾಗಿದ್ದಾರೆ‌. ಗುರುಮಠಕಲ್ ಪಟ್ಟಣದಲ್ಲಿರುವ ಅಯ್ಯಪ್ಪನ ಮಂದಿರದಲ್ಲಿ ವಿಶೇಷ ಪೂಜೆ ಮಾಡಿಕೊಂಡು ಅಯ್ಯಪ್ಪನ ಸ್ಮರಣೆ ಮಾಡುತ್ತಿದ್ದಾರೆ.

news18-kannada
Updated:December 3, 2019, 7:37 AM IST
ಅಯ್ಯಪ್ಪ ಮಾಲೆ ಧರಿಸಿ, ಮಂಡಲ ಪೂಜೆ ಮಾಡುವ ಮೂಲಕ ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಯುವಕ
ಶಬರಿಮಲೆ ಮಾಲೆ ಧರಿಸಿರುವ ಮುಸ್ಲಿಂ ಭಕ್ತ
  • Share this:
ಯಾದಗಿರಿ: ಜಾತಿ ..! ಜಾತಿ..!  ಎಂದು ಬಡಿದಾಡುವ ಈ ದಿನದಲ್ಲಿ ..! ಮುಸ್ಲಿಂ ಯುವಕರೊಬ್ಬರು ಭಾವೈಕ್ಯತೆ ಸಂಕೇತ ಸಾರಿದ್ದಾರೆ..! ಹಿಂದು, ಮುಸ್ಲಿಂ ಎಲ್ಲಾ ದೇವರು ಒಂದೇ ಎಂದು ತಿಳಿದು ಮುಸ್ಲಿಂ ಯುವಕ ಅಯ್ಯಪ್ಪ ಮಾಲಾ ಧಾರಣೆ ಮಾಡಿ, ನಿತ್ಯವೂ ಈಗ ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಅಯ್ಯಪ್ಪ ನ ಜಪ ಮಾಡುತ್ತಿದ್ದಾರೆ.

ಮಹಾರಾಷ್ಟ್ರ ಮೂಲದ ಯುವಕ ಬಾಬಲು ಅಫಸರ್ ಡಾಂಗೆ ಗುರುಮಠಕಲ್​ನಲ್ಲಿ ಖಾಸಗಿ ಕಂಪನಿಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ವಾಸವಾಗಿದ್ದಾರೆ. ಹಿಂದು ಜನಾಂಗದವರ ಒಡನಾಟ ಹೆಚ್ಚಿಗೆ ಹೊಂದಿದ್ದು, ಅಯ್ಯಪ್ಪನ ಪರಮ ಭಕ್ತನಾಗಿದ್ದಾರೆ. ಅಲ್ಲಾಹನ ಜೊತೆ ಹಿಂದು ದೇವರ ಆರಾಧನೆ ಮಾಡಿಕೊಂಡು ಬರುತ್ತಿದ್ದಾರೆ.

ಬಾಬಲು ಅಫಸರ ಅವರು ಮೊದಲನೇ ಬಾರಿ ಅಯ್ಯಪ್ಪ ಮಾಲಾ ಧಾರಣೆ ಮಾಡಿ 41 ದಿನಗಳ ಕಾಲ ಮಣಿಕಂಠನ ವ್ರತ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಈ ಮೂಲಕ  ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ‌. ಗುರುಮಠಕಲ್ ಪಟ್ಟಣದಲ್ಲಿರುವ ಅಯ್ಯಪ್ಪನ ಮಂದಿರದಲ್ಲಿ ವಿಶೇಷ ಪೂಜೆ ಮಾಡಿಕೊಂಡು ಅಯ್ಯಪ್ಪನ ಸ್ಮರಣೆ ಮಾಡುತ್ತಿದ್ದಾರೆ.

ಇದನ್ನು ಓದಿ: ಶಬರಿಮಲೆ ದೇಗುಲ ಪ್ರವೇಶಿಸುವ ಮಹಿಳೆಯರಿಗೆ ರಕ್ಷಣೆ ಒದಗಿಸುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಬಿಂದು ಅಮ್ಮಿನಿ

ವಿಶೇಷ ವರದಿ: ನಾಗಪ್ಪ ಮಾಲಿಪಾಟೀಲ್

 
 
First published:December 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ