Muslim Scholar: ಪ್ರಶಸ್ತಿ ಸ್ವೀಕರಿಸಲು ಬಾಲಕಿ ವೇದಿಕೆಗೆ ಬಂದಿದ್ದಕ್ಕೆ ಕೆಂಡಾಮಂಡಲರಾದ ಮುಸ್ಲಿಂ ವಿದ್ವಾಂಸಕ

ನಿಮಗೆ 10 ನೇ ತರಗತಿಯ ಹುಡುಗಿಯನ್ನು ವೇದಿಕೆಗೆ ಆಹ್ವಾನಿಸಲು ಯಾರು ಹೇಳಿದರು? ಮತ್ತೆ ನೀವು ಇದನ್ನು ಮಾಡಿದರೆ ತೋರಿಸುತ್ತೇನೆ.. ಅಂತಹ ಹುಡುಗಿಯರನ್ನು ಇಲ್ಲಿಗೆ ಕರೆಯಬೇಡಿ... ಸಮಸ್ತದ ನಿರ್ಧಾರ ನಿಮಗೆ ಗೊತ್ತಿಲ್ಲವೇ? ನೀವು ಅವಳನ್ನು ಕರೆದಿದ್ದೀರಾ? ದಯವಿಟ್ಟು ಅವಳ ಪೋಷಕರನ್ನು ವೇದಿಕೆಗೆ ಬರಲು ಹೇಳಿ ಎಂದು ಸಂಘಟಕರಿಗೆ ತಾಕೀತು ಮಾಡಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ (Malappuram district) ಮುಸ್ಲಿಂ ವಿದ್ವಾಂಸರೊಬ್ಬರು (Muslim scholar) ಪ್ರಶಸ್ತಿ ಸ್ವೀಕರಿಸಲು ವೇದಿಕೆಯ ಮೇಲೆ ಬಾಲಕಿಯನ್ನು (Girl on Stage) ಆಹ್ವಾನಿಸಿದ್ದಕ್ಕಾಗಿ ಕಾರ್ಯಕ್ರಮದ ಸಂಘಟಕರನ್ನು (organisers) ಸಾರ್ವಜನಿಕವಾಗಿ ನಿಂದಿಸುತ್ತಿರುವ ಘಟನೆಯ ವಿಡಿಯೋ ಹೊಸ ವಿವಾದವನ್ನು ಹುಟ್ಟು ಹಾಕಿದೆ. ವಿದ್ವಾಂಸರಾದ ಎಂ ಟಿ ಅಬ್ದುಲ್ಲಾ ಮುಸಲಿಯಾರ್ ಅವರು ಜಿಲ್ಲೆಯ ರಾಮಪುರಂನಲ್ಲಿ ಮದ್ರಸಾ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಂಘಟಕರಲ್ಲಿ ಒಬ್ಬರು ಹುಡುಗಿಯನ್ನು ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಆಹ್ವಾನಿಸಿದ್ದು ವೀಡಿಯೊದಲ್ಲಿ ಕಂಡು ಬರುತ್ತದೆ. ವೇದಿಕೆಯಲ್ಲಿ ಹಲವಾರು ಮುಸ್ಲಿಂ ವಿದ್ವಾಂಸರು ಉಪಸ್ಥಿತರಿದ್ದರು. ಈ ವೇಳೆ ವಿದ್ವಾಂಸರಾದ ಎಂ ಟಿ ಅಬ್ದುಲ್ಲಾ ಮುಸಲಿಯಾರ್ ಕಾರ್ಯಕ್ರಮದ ಸಂಘಟಕರ ಮೇಲೆ ಕೆಂಡಾಮಂಡಲರಾಗುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಅಂತಹ ಹುಡುಗಿಯರನ್ನು ಇಲ್ಲಿಗೆ ಕರೆಯಬೇಡಿ..

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ನಾಯಕ ಪಾಣಕ್ಕಾಡ್ ಸೈಯದ್ ಅಬ್ಬಾಸ್ ಅಲಿ ಶಿಹಾಬ್ ತಂಗಳ್ ಅವರು ಹುಡುಗಿಗೆ ಸ್ಮರಣಿಕೆಯನ್ನು ಹಸ್ತಾಂತರಿಸಿದ ನಂತರ, ಸಂಘಟಕರನ್ನು ಮುಸಲಿಯಾರ್ ಟೀಕಿಸಿದರು. ನಿಮಗೆ 10 ನೇ ತರಗತಿಯ ಹುಡುಗಿಯನ್ನು ವೇದಿಕೆಗೆ ಆಹ್ವಾನಿಸಲು ಯಾರು ಹೇಳಿದರು? ಮತ್ತೆ ನೀವು ಇದನ್ನು ಮಾಡಿದರೆ ತೋರಿಸುತ್ತೇನೆ.. ಅಂತಹ ಹುಡುಗಿಯರನ್ನು ಇಲ್ಲಿಗೆ ಕರೆಯಬೇಡಿ... ಸಮಸ್ತದ ನಿರ್ಧಾರ ನಿಮಗೆ ಗೊತ್ತಿಲ್ಲವೇ? ನೀವು ಅವಳನ್ನು ಕರೆದಿದ್ದೀರಾ?... ದಯವಿಟ್ಟು ಅವಳ ಪೋಷಕರನ್ನು ವೇದಿಕೆಗೆ ಬರಲು ಹೇಳಿ ಎಂದು ಸಂಘಟಕರಿಗೆ ತಾಕೀತು ಮಾಡಿದ್ದಾರೆ.

ಇದನ್ನೂ ಓದಿ: Sedition Law: ದೇಶದ್ರೋಹ ಕಾನೂನು ಸಂಬಂಧ ನಾಳೆ ಉತ್ತರಿಸಿ, ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತಾಕೀತು

ಕ್ಲಿಪ್‌ನಲ್ಲಿ, ವೇದಿಕೆಯ ಮೇಲೆ ಹುಡುಗಿಯನ್ನು ಆಹ್ವಾನಿಸಿದ ವ್ಯಕ್ತಿಯು ಅಸಮಾಧಾನಗೊಂಡಂತೆ ಕಾಣುತ್ತಾನೆ. ಕ್ಷಮಿಸುವಂತೆ ಮನವಿ ಮಾಡುತ್ತಾನೆ, ಆದರೆ ವೇದಿಕೆಯಲ್ಲಿದ್ದ ಇತರರು ಘಟನೆಯ ಬಗ್ಗೆ ಮೌನವಾಗಿಯೇ ಇರುತ್ತಾರೆ.

ವಿಡಿಯೋ ವೈರಲ್​, ಪರ-ವಿರೋಧ ಚರ್ಚೆ

ಮುಸಲಿಯಾರ್ ಅವರು ಕೇರಳದಲ್ಲಿ ಮದ್ರಸಾ ಶಿಕ್ಷಣವನ್ನು ನಿಯಂತ್ರಿಸುವ ಸಮಸ್ತ ಕೇರಳ ಸುನ್ನಿ ವಿದ್ಯಾಭ್ಯಾಸ ಮಂಡಳಿಯ ಹಿರಿಯ ಪದಾಧಿಕಾರಿಯಾಗಿದ್ದಾರೆ. ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಯನ್ನು ಉಂಟುಮಾಡಿದೆ. ಸಮಾಜದ ಮುಖಂಡರು ತಮ್ಮ ಪ್ರತಿಭೆಯನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಲು ಹುಡುಗಿಯರನ್ನು ಪ್ರೋತ್ಸಾಹಿಸಬೇಕು ಎಂದು ಹಲವರು ಸೂಚಿಸಿದ್ದಾರೆ. ಆದಾಗ್ಯೂ, ಹಲವಾರು ನೆಟಿಜನ್‌ಗಳು ಮುಸಲಿಯಾರ್ ಅವರನ್ನು ಬೆಂಬಲಿಸಿದ್ದಾರೆ. ಭಕ್ತರಿಗೆ ಮಾರ್ಗದರ್ಶನ ನೀಡುವುದು ಅವರ ಕೆಲಸ ಎಂದು ಹೇಳಿದ್ದಾರೆ. ಪರ-ವಿರೋಧ ಚರ್ಚೆಗಳು ನಡೆದಿವೆ.

ಇದನ್ನೂ ಓದಿ: Bulldozer Drive: ಶಾಹೀನ್​ ಭಾಗ್ ಬಳಿಕ ದಕ್ಷಿಣ ದೆಹಲಿಯಲ್ಲಿ ಬುಲ್ಡೋಜರ್​ ಡ್ರೈವ್​

ಸಮಸ್ತ ಕೇರಳ ಜಂ-ಇಯ್ಯತುಲ್ ಉಲೇಮಾ ಮುಸ್ಲಿಂ ವಿದ್ವಾಂಸರ ಪ್ರಮುಖ ಸಂಸ್ಥೆಯಾಗಿದೆ. ಇದು ಕೇರಳದಲ್ಲಿ ಕಾಂಗ್ರೆಸ್ ಮಿತ್ರ ಪಕ್ಷವಾಗಿರುವ ಐಯುಎಂಎಲ್‌ಗೆ ಹತ್ತಿರದಲ್ಲಿದೆ.

ಇತ್ತೀಚೆಗೆ ಇಂತಹದ್ದೇ ಘಟನೆ ನಡೆದಿತ್ತು

ಮಾರ್ಚ್​ ತಿಂಗಳಿನಲ್ಲಿಯೂ ಕೇರಳದಲ್ಲಿ ಇಂಥಹದ್ದೇ ಘಟನೆ ನಡೆದಿತ್ತು. ಖ್ಯಾತ ನೃತ್ಯಗಾರ್ತಿ ಡಾ.ನೀನಾ ಪ್ರಸಾದ್ (Dr Neena Prasad) ತಮಗಾದ ನೋವನ್ನು ತೋಡಿಕೊಂಡಿದ್ದರು. ನೀನಾ ಪ್ರಸಾದ್ ಅವರ ನೃತ್ಯ ಪ್ರದರ್ಶನವನ್ನು ಕೇರಳದ ನ್ಯಾಯಾಧೀಶ ಡಾ.ಕಲಾಂ ಪಾಷಾ (Dr Kalam Pasha) ಅವರು ಅರ್ಧಕ್ಕೆ ತಡೆದು, ನೃತ್ಯದಿಂದ ಡಿಸ್ಟರ್ಬ್​​​ ಆಗುತ್ತಿದೆ ಎಂದು ಆರೋಪಿಸಿದ್ದರು. ಘಟನೆ ಬಗ್ಗೆ ನ್ಯೂಸ್​ 18 ಜೊತೆ ಮಾತನಾಡಿದ ಕಲಾವಿದೆ, ಘಟನೆಯಿಂದ ತಮಗಾದ ನೋವನ್ನು ವ್ಯಕ್ತಪಡಿಸಿದ್ದರು.

ಸರ್ಕಾರಿ ಮೋಯನ್ ಎಲ್‌ಪಿ ಶಾಲೆಯ ಹಿಂಭಾಗದಲ್ಲಿ ಜಿಲ್ಲಾ ನ್ಯಾಯಾಧೀಶ ಡಾ.ಕಲಾಂ ಪಾಷಾ ಅವರು ವಾಸಿಸುತ್ತಿದ್ದಾರೆ. ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದೆ ನೀನಾ ಮೋಹಿನಿಯಾಟ್ಟಂ ನೃತ್ಯವನ್ನು ಪ್ರದರ್ಶಿಸುತ್ತಿದ್ದರು. ಈ ವೇಳೆ ಪೊಲೀಸರಿಗೆ ಕರೆ ಮಾಡಿದ ಜಿಲ್ಲಾ ನ್ಯಾಯಾಧೀಶರು ಕಾರ್ಯಕ್ರಮವನ್ನು ನಿಲ್ಲಿಸುವಂತೆ ದೂರಿದ್ದರು. ತಮಗೆ ಕಾರ್ಯಕ್ರಮದಿಂದ ತೊಂದರೆ ಆಗುತ್ತಿದೆ ಎಂದು ಪೊಲೀಸರಿಗೆ ಕೇಳಿದ್ದರು. ಈ ಹಿನ್ನೆಲೆಯಲ್ಲಿ ನೃತ್ಯ ಪ್ರದರ್ಶನವನ್ನು ಮೊಟಕುಗೊಳಿಸಲಾಗಿತ್ತು. ಘಟನೆ ಬಗ್ಗೆ ಕಲಾವಿದೆ ನೀನಾ ಫೇಸ್​​ ಬುಕ್​​ ನಲ್ಲಿ ಬರೆದುಕೊಂಡು ಅಳಲು ತೋಡಿಕೊಂಡಿದ್ದರು.
Published by:Kavya V
First published: