ಮುಸ್ಲಿಂ ವ್ಯಕ್ತಿಗೆ ಹಿಂದುಗಳ ಸ್ಮಶಾನದಲ್ಲಿ ಸಂಸ್ಕಾರ; ನ್ಯೂಸ್​18 ವರದಿಗೆ ಎಚ್ಚೆತ್ತ ತೆಲಂಗಾಣ ವಕ್ಫ್​ ಬೋರ್ಡ್

ಸ್ಮಶಾನ ಯಾರೊಬ್ಬರ ಖಾಸಗಿ ಸ್ವತ್ತೂ ಅಲ್ಲ, ಯಾರ ಶವವನ್ನೂ ಹೂಳುವುದಿಲ್ಲ ಎಂದು ಹೇಳುವಂತಿಲ್ಲ ಎಂದು ತೆಲಂಗಾಣ ವಕ್ಫ್​ ಮಂಡಳಿ ಹೇಳಿದೆ.

news18-kannada
Updated:May 29, 2020, 6:58 AM IST
ಮುಸ್ಲಿಂ ವ್ಯಕ್ತಿಗೆ ಹಿಂದುಗಳ ಸ್ಮಶಾನದಲ್ಲಿ ಸಂಸ್ಕಾರ; ನ್ಯೂಸ್​18 ವರದಿಗೆ ಎಚ್ಚೆತ್ತ ತೆಲಂಗಾಣ ವಕ್ಫ್​ ಬೋರ್ಡ್
ಸಾಂದರ್ಭಿಕ ಚಿತ್ರ
  • Share this:
ಹೈದರಾಬಾದ್: ತೆಲಂಗಾಣದ ಮುಸ್ಲಿಂ ಯುವಕನೊಬ್ಬನಿಗೆ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲು ನಿರಾಕರಿಸಿದ ಕಾರಣ ಆತನ ಶವವನ್ನು ಹಿಂದುಗಳ ಸ್ಮಶಾನದಲ್ಲಿ ಸಂಸ್ಕಾರ ಮಾಡಿದ ಘಟನೆಯನ್ನು ನ್ಯೂಸ್​18 ಉರ್ದು ಚಾನೆಲ್​ನಲ್ಲಿ ಪ್ರಸಾರ ಮಾಡಲಾಗಿತ್ತು. ಈ ಪ್ರಕರಣದ ಕುರಿತು ತೆಲಂಗಾಣದ ವಕ್ಫ್​ ಬೋರ್ಡ್​ ಆ ಸ್ಮಶಾನದ ಮೇಲ್ವಿಚಾರಕರಿಗೆ ನೋಟಿಸ್ ಜಾರಿಗೊಳಿಸಿದೆ.

ವಕ್ಫ್​ ಬೋರ್ಡ್​ ಚೇರ್ಮನ್ ಮೊಹಮ್ಮದ್ ಸಲೀಂ ಆ ಮುಸ್ಲಿಂ ಸ್ಮಶಾನದ ಮೇಲ್ವಿಚಾರಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ. ಸ್ಮಶಾನ ಯಾರೊಬ್ಬರ ಖಾಸಗಿ ಸ್ವತ್ತೂ ಅಲ್ಲ, ಯಾರ ಶವವನ್ನೂ ಹೂಳುವುದಿಲ್ಲ ಎಂದು ಹೇಳುವಂತಿಲ್ಲ ಎಂದು ಹೇಳಿದ್ದಾರೆ. ಯಾರಾದರೂ ಕುಟುಂಬಸ್ಥರು ಬಂದು ಶವವನ್ನು ಸಂಸ್ಕಾರ ಮಾಡಲು ಜಾಗ ಬೇಕೆಂದು ಕೇಳಿದರೆ ನಿರಾಕರಿಸುವಂತಿಲ್ಲ. ಹಾಗೇ, ಕನಿಷ್ಠ ಶುಲ್ಕವನ್ನು ಹೊರತುಪಡಿಸಿ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಕಾರ್ ಬಾಂಬ್ ಪತ್ತೆ; ಮತ್ತೊಂದು ಪುಲ್ವಾಮ ಮಾದರಿ ದಾಳಿ ತಪ್ಪಿಸಿದ ಭದ್ರತಾ ಪಡೆ

ನ್ಯೂಸ್​18 ಕನ್ನಡದ ವರದಿಯನ್ನು ಆಧರಿಸಿ ತೆಹ್ರೀಕ್ ಮುಸ್ಲಿಂ ಶುಬ್ಬನ್ ತೆಲಂಗಾಣ ರಾಜ್ಯದ ವಕ್ಫ್​ ಬೋರ್ಡ್​ನಲ್ಲಿ ದೂರು ದಾಖಲಿಸಿತ್ತು. ಮುಸ್ಲಿಂ ವ್ಯಕ್ತಿಯನ್ನು ಮಣ್ಣು ಮಾಡಲು ಮುಸ್ಲಿಮರ 5 ಸ್ಮಶಾನಗಳಲ್ಲಿ ಕೂಡ ಅವಕಾಶ ನೀಡಿಲ್ಲವೆಂಬ ಕಾರಣಕ್ಕೆ ಹಿಂದುಗಳ ಸ್ಮಶಾನದಲ್ಲಿ ಆತನ ಶವವನ್ನು ಸಂಸ್ಕಾರ ಮಾಡುವಂತಾಗಿದೆ. ಹೀಗಾಗಿ, ಆ ಎಲ್ಲ ಸ್ಮಶಾನಗಳಿಗೆ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿತ್ತು.

ಕಳೆದ 4 ದಿನಗಳ ಹಿಂದೆ ತೆಲಂಗಾಣದ ಮುಸ್ಲಿಂ ವ್ಯಕ್ತಿಯೋರ್ವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರ ಕುಟುಂಬಸ್ಥರು ಆತನ ಶವವನ್ನು ಮಣ್ಣು ಮಾಡಲು ಸ್ಮಶಾನಗಳಲ್ಲಿ ಜಾಗ ಕೇಳಿದರೂ ಎಲ್ಲೂ ಅನುಮತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಹಿಂದುಗಳು ತಮ್ಮ ಜಾಗದಲ್ಲಿ ಆತನ ಶವವನ್ನು ಸಂಸ್ಕಾರ ಮಾಡಲು ಅವಕಾಶ ನೀಡಿದ್ದರು.

(ವರದಿ: ಅನೀಸ್ ಉನ್ ರೆಹಮಾನ್ ಖಾನ್)
First published: May 29, 2020, 6:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading