• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Marriage Age: ಬಾಲ್ಯ ವಿವಾಹ ಎತ್ತಿ ಹಿಡಿದ ಕೋರ್ಟ್! ಮುಸ್ಲಿಂ ಯುವತಿಗೆ 16 ವರ್ಷಕ್ಕೆ ಮದುವೆಗೆ ಅನುಮತಿ

Marriage Age: ಬಾಲ್ಯ ವಿವಾಹ ಎತ್ತಿ ಹಿಡಿದ ಕೋರ್ಟ್! ಮುಸ್ಲಿಂ ಯುವತಿಗೆ 16 ವರ್ಷಕ್ಕೆ ಮದುವೆಗೆ ಅನುಮತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅರ್ಜಿದಾರರ ಪ್ರಕಾರ ಅವರ ವಿವಾಹವನ್ನು ಜೂನ್ 8, 2022 ರಂದು ಮುಸ್ಲಿಂ ವಿಧಿಗಳು ಮತ್ತು ಸಮಾರಂಭಗಳ ಪ್ರಕಾರ ನೆರವೇರಿಸಲಾಯಿತು. ಆದರೆ ಅವರ ಕುಟುಂಬಗಳು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

  • Share this:

16 ವರ್ಷಕ್ಕಿಂತ ಮೇಲ್ಪಟ್ಟ ಮುಸ್ಲಿಂ ಯುವತಿ ತನ್ನ ಆಯ್ಕೆಯ ವ್ಯಕ್ತಿಯೊಂದಿಗೆ ವಿವಾಹದ ಒಪ್ಪಂದಕ್ಕೆ ಪ್ರವೇಶಿಸಲು ಸಮರ್ಥಳು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ (Punjab and Haryana High Court) ಸೋಮವಾರ ತೀರ್ಪು ನೀಡಿದೆ. 16 ಮತ್ತು 21 ವರ್ಷ ವಯಸ್ಸಿನ ಮುಸ್ಲಿಂ ಸಮುದಾಯದ ದಂಪತಿ (Muslim Couple) ಅವರ ಕುಟುಂಬ ಸದಸ್ಯರಿಂದ ರಕ್ಷಣೆ ನೀಡಿ ಸಲ್ಲಿಸಿದ್ದ ಅರ್ಜಿಯ (Muslim Girl Marriage) ವಿಚಾರಣೆ ನಡೆಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈ ಆದೇಶ ನೀಡಿದೆ. ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ ಪಠಾಣ್‌ಕೋಟ್ ಮೂಲದ ಮುಸ್ಲಿಂ ದಂಪತಿಯ ಮನವಿಯ ಮೇರೆಗೆ ನ್ಯಾಯಮೂರ್ತಿ ಜಸ್ಜಿತ್ ಸಿಂಗ್ ಬೇಡಿ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.


ಅರ್ಜಿದಾರರು ತಮ್ಮ ಕುಟುಂಬದ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ವಿವಾಹವಾದರು ಎಂಬ ಕಾರಣಕ್ಕಾಗಿ, ಅವರು ಭಾರತದ ಸಂವಿಧಾನದಲ್ಲಿ ಕಲ್ಪಿಸಿದಂತೆ ಅವರ ಮೂಲಭೂತ ಹಕ್ಕುಗಳಿಂದ ವಂಚಿತರಾಗಲು ಸಾಧ್ಯವಿಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಪೀಠ ಆದೇಶ ನೀಡಿದೆ.


ಇಸ್ಲಾಮಿಕ್ ಶರಿಯಾ ಕಾನೂನಿನ ಉಲ್ಲೇಖ
ಇಸ್ಲಾಮಿಕ್ ಶರಿಯಾ ಕಾನೂನನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಬೇಡಿ, ಮುಸ್ಲಿಂ ಹುಡುಗಿಯ ವಿವಾಹವನ್ನು ಮುಸ್ಲಿಂ ವೈಯಕ್ತಿಕ ಕಾನೂನಿನಿಂದ ನಿಯಂತ್ರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.


ಕೋರ್ಟ್​ ಆದೇಶ ಹೀಗಿದೆ
"ಸರ್ ದಿನ್ಶಾ ಫರ್ದುಂಜಿ ಮುಲ್ಲಾ ಅವರ 'ಪ್ರಿನ್ಸಿಪಲ್ಸ್ ಆಫ್ ಮೊಹಮ್ಮದನ್ ಲಾ' ಪುಸ್ತಕದ ಆರ್ಟಿಕಲ್ 195 ರ ಪ್ರಕಾರ, ಅರ್ಜಿದಾರರ ಸಂಖ್ಯೆ. 2 (ಹುಡುಗಿ) 16 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಅವರ ಆಯ್ಕೆಯ ವ್ಯಕ್ತಿಯೊಂದಿಗೆ ವಿವಾಹದ ಒಪ್ಪಂದಕ್ಕೆ ಪ್ರವೇಶಿಸಲು ಸಮರ್ಥರಾಗಿದ್ದಾರೆ. ಅರ್ಜಿದಾರ ನಂ.1 (ಹುಡುಗ) ವಯಸ್ಸು 21 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ಹೇಳಲಾಗಿದೆ.  ಹೀಗಾಗಿ, ಅರ್ಜಿದಾರರಿಬ್ಬರೂ ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಮದುವೆಯ ವಯಸ್ಸಿನವರಾಗಿದ್ದಾರೆ” ಎಂದು ಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ.   


ದಂಪತಿಗೆ ಸೂಕ್ತ ಭದ್ರತೆ ನೀಡಿ
ದಂಪತಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಮತ್ತು ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಎಸ್‌ಎಸ್‌ಪಿ ಪಠಾಣ್‌ಕೋಟ್‌ಗೆ ನಿರ್ದೇಶನ ನೀಡಿದೆ. ಈ ಮೂಲಕ ಪಂಜಾಬ್ ಹರ್ಯಾಣ ಹೈಕೋರ್ಟ್​ ಬಾಲ್ಯ ವಿವಾಹಕ್ಕೆ ಪುಷ್ಠಿ ನೀಡಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.


ಇದನ್ನೂ ಓದಿ: Electric Buses In Bengaluru: ಬೆಂಗಳೂರು ಜನರಿಗೆ ಖುಷಿ ಸುದ್ದಿ! ಈ ಮಾರ್ಗಗಳಲ್ಲಿ 300 ಎಲೆಕ್ಟ್ರಿಕ್ ಬಸ್ ಸಂಚಾರ​


ಅರ್ಜಿದಾರರ ಪ್ರಕಾರ ಅವರ ವಿವಾಹವನ್ನು ಜೂನ್ 8, 2022 ರಂದು ಮುಸ್ಲಿಂ ವಿಧಿಗಳು ಮತ್ತು ಸಮಾರಂಭಗಳ ಪ್ರಕಾರ ನೆರವೇರಿಸಲಾಯಿತು. ಆದರೆ ಅವರ ಕುಟುಂಬಗಳು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಮ್ಮ ಅನುಮತಿಯಿಲ್ಲದೆ ಮದುವೆಯಾಗಿದ್ದಕ್ಕಾಗಿ ಕುಟುಂಬದಿಂದ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.


ಇದನ್ನೂ ಓದಿ: Agniveer In Mahindra Group: ಅಗ್ನಿವೀರರಿಗೆ ಮಹೀಂದ್ರಾ ಕಂಪನಿಯಲ್ಲಿ ಉದ್ಯೋಗದ ಆಫರ್!


ಅರ್ಜಿದಾರ ದಂಪತಿಗಳು ಮುಸ್ಲಿಂ ಕಾನೂನಿನಲ್ಲಿ ಪ್ರೌಢಾವಸ್ಥೆ ಮತ್ತು ಬಹುಮತವು (Majority)  ಒಂದೇ ಆಗಿರುತ್ತದೆ.  ಓರ್ವ ವ್ಯಕ್ತಿಯು 15 ವರ್ಷ ವಯಸ್ಸಿನಲ್ಲಿ ಬಹುಮತವನ್ನು ಪಡೆಯುತ್ತಾರೆ ಎಂಬ ಊಹೆ ಇದೆ ಎಂದು ವಾದಿಸಿದ್ದರು. 16 ವರ್ಷದ ಮುಸ್ಲಿಂ ಯುವತಿ ಮತ್ತು 21 ವರ್ಷದ ಯುವಕ ಪರಸ್ಪರ ಸ್ವ ಇಚ್ಛೆಯಿಂದ ಮದುವೆಯಾಗಲು ಇದೀಗ ಪಂಜಾಬ್ ಹಹರ್ಯಾಣ ಹೈಕೋರ್ಟ್​ ಅನುಮತಿ ನೀಡಿದಂತಾಗಿದೆ.


ಕಾನೂನಿನ ಪ್ರಕಾರ ಕ್ರಮ. "ಅರ್ಜಿದಾರರು ತಮ್ಮ ಕುಟುಂಬದ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ವಿವಾಹವಾದರು ಎಂಬ ಕಾರಣಕ್ಕಾಗಿ, ಅವರು ಭಾರತದ ಸಂವಿಧಾನದಲ್ಲಿ ಕಲ್ಪಿಸಿದಂತೆ ಅವರ ಮೂಲಭೂತ ಹಕ್ಕುಗಳಿಂದ ವಂಚಿತರಾಗಲು ಸಾಧ್ಯವಿಲ್ಲ" ಎಂದು ಪೀಠ ಸ್ಪಷ್ಟವಾಗಿ ತಿಳಿಸಿದೆ.

First published: