ಪ್ರೌಢವಸ್ಥೆ ತಲುಪಿದ ಮುಸ್ಲಿಂ ಯುವತಿ ತಮ್ಮ ಆಯ್ಕೆಯಂತೆ ಮದುವೆಯಾಗಬಹುದು; ನ್ಯಾಯಾಲಯ

ಮೊಹಮ್ಮದನ್​ ಕಾನೂನಿನ ತತ್ವಗಳು ಪುಸ್ತಕದ 195ನೇ ವಿಧಿ ಉಲ್ಲೇಖನದ ಅನ್ವಯ ಪ್ರೌಢಾವಸ್ಥೆ ತಲುಪಿದ ಮುಸ್ಲಿಂ ಯುವತಿ ತನ್ನ ಇಷ್ಟ ಬಂದ ವೈಕ್ತಿ ಜೊತೆ ಮದುವೆಯಾಗವ ಸ್ವಾತಂತ್ರ್ಯ ಹೊಂದಿದ್ದಾಳೆ ಎಂದು ನ್ಯಾಯಾಪೀಠ ತಿಳಿಸಿದೆ.

Punjab and Haryana HC

Punjab and Haryana HC

 • Share this:
  18ಕ್ಕಿಂತ ಕಡಿಮೆ ವರ್ಷದ ಮತ್ತು ಪ್ರೌಢವಸ್ಥೆಗೆ ತಲುಪಿದ ಮುಸ್ಲಿಂ ಯುವತಿಯರು ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ತಾನು ಇಷ್ಟಪಟ್ಟವರನ್ನು ಮದುವೆಯಾಗುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ ಎಂದು ಪಂಜಾಬ್​ ಮತ್ತು ಹರಿಯಾಣ ನ್ಯಾಯಾಲಯ ತಿಳಿಸಿದೆ. ಮುಸ್ಲಿಂ ವಿಹಾವ ನಿಯಮ ಮತ್ತು ನ್ಯಾಯಾಲಯಗಳ ವಿವಿಧ ತೀರ್ಪುಗಳ ಆಧಾರದ ಮೇಲೆ ಕೋರ್ಟ್​ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಸರ್​ ದಿನ್ಶಾ ಫರ್ದುಂಜಿ ಮುಲ್ಲಾ ಅವರ ಮೊಹಮ್ಮದನ್​ ಕಾನೂನಿನ ತತ್ವಗಳು ಪುಸ್ತಕದ 195ನೇ ವಿಧಿ ಉಲ್ಲೇಖನದ ಅನ್ವಯ ಪ್ರೌಢಾವಸ್ಥೆ ತಲುಪಿದ ಮುಸ್ಲಿಂ ಯುವತಿ ತನ್ನ ಇಷ್ಟ ಬಂದ ವೈಕ್ತಿ ಜೊತೆ ಮದುವೆಯಾಗವ ಸ್ವಾತಂತ್ರ್ಯ ಹೊಂದಿದ್ದಾಳೆ ಎಂದು ನ್ಯಾಯಾಪೀಠ ತಿಳಿಸಿದೆ.

  ಪ್ರೌಢಾವಸ್ಥೆ ತಲುಪಿದ ಸ್ವಸ್ಥ ಚಿತ್ತಹೊಂದಿದ ಪ್ರತಿಯೊಬ್ಬ ಮೊಹಮ್ಮದನ್​ (ಮುಸ್ಲಿಂ) ವಿವಾಹದ ಒಪ್ಪಂದಕ್ಕೆ ಪ್ರವೇಶಿ ಸಬಹುದು. ಅಪ್ರಾಪ್ತ ವಯಸ್ಕರು ತಮ್ಮ ಪಾಲಕರ ಒಪ್ಪಿಗೆಯಂತೆ ಮದುವೆಯಾಗಬಹುದು. ಒಂದು ವೇಳೆ ಪ್ರೌಢಾವಸ್ಥೆಯ ಹೊರತಾದ ಈ ಮದುವೆ ಒಪ್ಪಿಗೆ ಇಲ್ಲದೇ ನಡೆದರೆ ಅದು ಅನೂರ್ಜಿತವಾಗುತ್ತದೆ ಎಂದು ತಿಳಿಸಿದೆ.

  ಇದನ್ನು ಓದಿ: ಜಾತ್ರೆ, ಉತ್ಸವಕ್ಕೆ ಅವಕಾಶ; ದೇವಾಲಯಗಳಲ್ಲಿ ಅನ್ನದಾಸೋಹಕ್ಕೂ ಅನುಮತಿ ನೀಡಿದ ಸರ್ಕಾರ

  ಮುಸ್ಲಿಂ ಧರ್ಮದ ಗ್ರಂಥದಂತೆ ಪ್ರೌಢವಸ್ಥೆಯೆಂಬುದು 15 ವರ್ಷಕ್ಕೆ ಮೇಲ್ಪಟ್ಟವರಾಗಿದ್ದಾರೆ. ಪಂಜಾಬ್​ನ ಮುಸ್ಲಿಂ ದಂಪತಿಗಳು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಅಲ್ಕಾ ಸರಿನ್​ ಈ ಆದೇಶವನ್ನು ತಿಳಿಸಿದ್ದಾರೆ.

  20201ರಂದು 36 ವರ್ಷ ವ್ಯಕ್ತಿ ಮತ್ತು 17 ವರ್ಷದ ಬಾಲಕಿ ಮುಸ್ಲಿಂ ವಿಧಿಯ ಪ್ರಕಾರ ಮದುವೆಯಾಗಿದ್ದರು. ಆದರೆ, ಅವರಿಬ್ಬರ ಈ ಮದುವೆಗೆ ಸಂಬಂಧಿಕರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನಲೆ ಜೀವ ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.
  Published by:Seema R
  First published: