ಲಕ್ನೋ: ಉತ್ತರ ಪ್ರದೇಶದ (Uttar Pradesh) ಬರೇಲಿಯಲ್ಲಿ 19 ವರ್ಷದ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಧರ್ಮಕ್ಕೆ (Hinduism) ಮತಾಂತರಗೊಂಡಿದ್ದಾಳೆ(Conversion). ಇಲ್ಮಾ ಖಾನ್ ಆಗಿದ್ದ ಯುವತಿ ಇದೀಗ ಸೌಮ್ಯಾ ಶರ್ಮಾ ಆಗಿ ತನ್ನ ಪ್ರಿಯಕರ (Lover) ಸೋಮೇಶ್ ಶರ್ಮಾ ಅವರನ್ನು ಹಿಂದೂ ಸಂಪ್ರದಾಯದಂತೆ (Hindu Custom) ದೇವಸ್ಥಾನದಲ್ಲಿ (Temple) ಸಪ್ತಪದಿ ತುಳಿದು ವಿವಾಹವಾಗಿದ್ದಾಳೆ (Marriage). ತ್ರಿವಳಿ ತಲಾಖ್ಗೆ (Triple Talaq) ಹೆದರಿರುವ ಯುವತಿ, ತನ್ನ ಅಕ್ಕ ಹೇಗೆ ದಬ್ಬಾಳಿಕೆಗೆ ಒಳಗಾಗಿದ್ದಳು ಎಂಬುದನ್ನು ನಾನು ನೋಡಿದ್ದೇನೆ ಎಂದು ಸೌಮ್ಯಾ ಹೇಳಿದ್ದಾರೆ. ಅಲ್ಲದೇ ತ್ರಿವಳಿ ತಲಾಖ್ ಎಂದರೆ ಹೆದರಿಕೆಯಾಗುತ್ತದೆ ಎಂದು ಯುವತಿ ತಿಳಿಸಿದ್ದಾಳೆ.
ಅಗಸ್ತ್ಯ ಮುನಿ ಆಶ್ರಮದಲ್ಲಿ ಮತಾಂತರಗೊಂಡ ಯುವತಿ
ಬರೇಲಿಯ ಠಾಣಾ ಸುಭಾಷ್ ನಗರದಲ್ಲಿರುವ ಅಗಸ್ತ್ಯ ಮುನಿ ಆಶ್ರಮದಲ್ಲಿ ಪಂಡಿತ್ ಕೆ.ಕೆ.ಶಂಖಧರ್ ಅವರು ಹಿಂದೂ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಯುವತಿ ಮತಾಂತರಗೊಳ್ಳುವ ಕಾರ್ಯಗಳನ್ನು ನೆರವೇರಿಸಿದರು.
ನನ್ನ ಜೀವನದುದ್ದಕ್ಕೂ ಹಿಂದೂವಾಗಿಯೇ ಇರ್ತೀನಿ
ಎರಡು ತಿಂಗಳ ಹಿಂದೆ ಯುವತಿ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದಳು. ಈ ವೇಳೆ ಆಕೆ, 'ನಾನು ವಯಸ್ಕಳಾಗಿದ್ದೇನೆ ಮತ್ತು ಈಗ ನಾನು ನನ್ನ ಜೀವನದುದ್ದಕ್ಕೂ ಹಿಂದೂವಾಗಿಯೇ ಇರುತ್ತೇನೆ ಎಂದಿದ್ದಾಳೆ.
ನನ್ನ ಜನ್ಮ ದಿನಾಂಕದ ಪ್ರಕಾರ ನನಗೆ 19 ವರ್ಷ
ಬದೌನ್ ಜಿಲ್ಲೆಯ ಬಿಲ್ಸಿ ಪೊಲೀಸ್ ಠಾಣೆ ವ್ಯಾಪ್ತಿಯ ಪರೋಲಿ ಗ್ರಾಮದ ನಿವಾಸಿಯಾಗಿರುವ ಇಲ್ಮಾ ಅಲಿಯಾಸ್ ಸೌಮ್ಯಾ 10ನೇ ತರಗತಿಯಲ್ಲಿ ತೇರ್ಗಡೆಯಾಗಿದ್ದಾಳೆ. ಪ್ರಸ್ತುತ ದಾಖಲೆಗಳಲ್ಲಿ ನನ್ನ ಜನ್ಮ ದಿನಾಂಕದ ಪ್ರಕಾರ ನನಗೆ 19 ವರ್ಷ ಎಂದು ಹೇಳಿದ್ದಾಳೆ.
ಗಂಗಾಜಲದಿಂದ ಶುದ್ಧಿಗೊಂಡ ಯುವತಿ
ಇಲ್ಮಾ ಅಲಿಯಾಸ್ ಸೌಮ್ಯಾ ತನ್ನ ಹಳ್ಳಿಯಲ್ಲಿ ವಾಸಿಸುವ ಸೋಮೇಶ್ ಶರ್ಮಾ ಅವರನ್ನು ದೇವಸ್ಥಾನದಲ್ಲಿ ವಿವಾಹವಾಗಿದ್ದಾಳೆ. ಈ ಹಿಂದೆ ಪಂಡಿತ್ ಕೆ.ಕೆ.ಶಂಖಧರ್ ಅವರು ಯುವತಿಯನ್ನು ಗಂಗಾಜಲದಿಂದ ಶುದ್ಧೀಕರಿಸಿದರು. ಇದು ನನ್ನ ನಿರ್ಧಾರ ಮತ್ತು ನನ್ನ ಧರ್ಮವನ್ನು ಬದಲಾಯಿಸಲು ಮತ್ತು ನನ್ನ ಇಚ್ಛೆಯಂತೆ ಮದುವೆಯಾಗಲು ನನಗೆ ಸಂಪೂರ್ಣ ಹಕ್ಕಿದೆ ಎಂದಿದ್ದಾಳೆ.
5 ವರ್ಷದಿಂದ ಸ್ನೇಹಿತರಾಗಿದ್ದ ಇಲ್ಮಾ ಖಾನ್, ಸೋಮೇಶ್ ಶರ್ಮಾ
ಐದು ವರ್ಷಗಳ ಹಿಂದೆ ಇಬ್ಬರು ಸ್ನೇಹಿತರಾಗಿದ್ದರು. ಆಕೆ, 'ನಾನು 10ನೇ ತರಗತಿಯ ನಂತರವೂ ಓದಲು ಬಯಸಿದ್ದೆ, ಆದರೆ ನನ್ನ ಕುಟುಂಬ ನನಗೆ ಓದಿಸಲು ನಿರಾಕರಿಸಿತು ಎಂದು ಯುವತಿ ತಿಳಿಸಿದ್ದಾಳೆ.
ತಲಾಖ್ ಎಂದರೇನು?
ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಪತಿಯು ತನ್ನ ಪತ್ನಿಗೆ ಮೂರು ಬಾರಿ ತಲಾಖ್ ಹೇಳುವ ಮೂಲಕ ವಿಚ್ಛೇದನ ನೀಡುವ ಪದ್ಧತಿ ಇದೆ. ಇದನ್ನು ತ್ರಿವಳಿ ತಲಾಖ್ ಎನ್ನಲಾಗುತ್ತದೆ.
ದುರ್ಬಳಕೆಯಾಗುತ್ತಿರುವ ತ್ರಿವಳಿ ತಲಾಖ್ ಪದ್ಧತಿ
ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ತ್ರಿವಳಿ ತಲಾಖ್ ಪದ್ಧತಿಗೆ ಸಮ್ಮತಿ ಇದೆ. ಮೂರು ಬಾರಿ ತಲಾಖ್ ಹೇಳುವ ಮೂಲಕ ಪತ್ನಿಗೆ ವಿಚ್ಛೇದನ ಕೊಡಬಹುದಾಗಿದೆ. ಇಸ್ಲಾಮ್ನ ಮೂಲ ಕಾನೂನಿನಲ್ಲಿ ತ್ರಿವಳಿ ತಲಾಖ್ಗೆ ಬೇರೆಯೇ ವಿಧಿವಿಧಾನಗಳು ಇವೆ. ಆದರೂ ಈಗೀಗ ಈ ಕಾನೂನು ದುರ್ಬಳಕೆಯಾಗುತ್ತಿದೆ.
ಇದನ್ನೂ ಓದಿ: Triple Talaq: ಕೋರ್ಟ್ ಆವರಣದಲ್ಲಿ ಮಡದಿಗೆ ತಲಾಖ್ ಹೇಳಿದ ಗಂಡ; ದೂರು ದಾಖಲಿಸಿದ ಪತ್ನಿ
ನಿಂತಲ್ಲೇ ಮೂರು ಬಾರಿ ತಲಾಖ್ ಎಂದು ಹೇಳುವುದು; ಮೊಬೈಲ್ ಫೋನಲ್ಲೇ ಮೂರು ಬಾರಿ ತಲಾಖ್ ಎಂದು ಹೇಳುವುದು; ವಾಟ್ಸಾಪ್ ಅಥವಾ ಮೆಸೇಜ್ ಮೂಲಕ ಮೂರು ಬಾರಿ ತಲಾಖ್ ಎಂದು ಹೇಳುವುದು; ಪತ್ರವೊಂದರಲ್ಲಿ ಮೂರು ಬಾರಿ ತಲಾಖ್ ಎಂದು ಬರೆಯುವುದು ಇತ್ಯಾದಿ ಅಕ್ರಮ ತಲಾಖ್ ಪದ್ಧತಿಗಳು ಚಾಲ್ತಿಯಲ್ಲಿವೆ. ಮುಸ್ಲಿಂ ಮಹಿಳೆಯರು ತಲಾಖ್ಗೆ ತುತ್ತಾಗಿ ನಿಕೃಷ್ಟಕ್ಕೊಳಗಾಗುತ್ತಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ