ಗಂಡನೊಂದಿಗೆ ಕಾರಿನಲ್ಲಿ ಲಾಂಗ್ ಡ್ರೈವ್ ಹೋದ ಚೆಲುವೆ ಗುಂಡೇಟಿಗೆ ಬಲಿಯಾದಳು!

ನ್ಯಾನ್ಸಿ ಶರ್ಮಾ ನಾಪತ್ತೆಯಾಗಿದ್ದಾಳೆ ಎಂದುಕೊಂಡಿದ್ದ ಪೊಲೀಸರು ಆಕೆಯ ಹುಡುಕಾಟಕ್ಕೆ ಮುಂದಾಗಿದ್ದರು. ಆದರೆ, ತನ್ನ ಅಳಿಯನ ಮೇಲೆ ಸಂಜಯ್ ಶರ್ಮಾ ಅನುಮಾನ ವ್ಯಕ್ತಪಡಿಸಿದಾಗ ಸಾಹಿಲ್​ನನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದರು.

Sushma Chakre | news18-kannada
Updated:November 28, 2019, 8:18 PM IST
ಗಂಡನೊಂದಿಗೆ ಕಾರಿನಲ್ಲಿ ಲಾಂಗ್ ಡ್ರೈವ್ ಹೋದ ಚೆಲುವೆ ಗುಂಡೇಟಿಗೆ ಬಲಿಯಾದಳು!
ಸಾಹಿಲ್ ಮತ್ತು ನ್ಯಾನ್ಸಿ
  • Share this:
ನವದೆಹಲಿ (ನ. 28): 18 ದಿನಗಳ ಹಿಂದೆ ಇದ್ದಕ್ಕಿದ್ದಂತೆ ಮನೆಯಿಂದ ಕಾಣೆಯಾಗಿದ್ದ 20 ವರ್ಷದ ಯುವತಿಯನ್ನು ಆಕೆಯ ಗಂಡನೇ ಗುಂಡಿಕ್ಕಿ ಕೊಲೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಲಾಂಗ್ ಡ್ರೈವ್‍ಗೆ ಕರೆದುಕೊಂಡು ಹೋದ ಗಂಡನೇ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದು, ನಂತರ ತನ್ನ ಪತ್ನಿ ಎಲ್ಲಿ ಹೋಗಿದ್ದಾಳೆಂಬುದೇ ಗೊತ್ತಿಲ್ಲ ಎಂಬಂತೆ ವರ್ತಿಸಿದ್ದಾನೆ.

ಹರಿಯಾಣದಲ್ಲಿ ಈ ಘಟನೆ ನಡೆದಿದ್ದು, ನ್ಯಾನ್ಸಿ ಶರ್ಮಾ ಎಂಬ 20 ವರ್ಷದ ಯುವತಿ ಕೊಲೆಯಾದಾಕೆ. ಇದೇ ವರ್ಷ ಮಾರ್ಚ್​ನಲ್ಲಿ 21 ವರ್ಷದ ಸಾಹಿಲ್ ಚೋಪ್ರಾನನ್ನು ನ್ಯಾನ್ಸಿ ಶರ್ಮಾ ಮದುವೆಯಾಗಿದ್ದಳು. ನ್ಯಾನ್ಸಿ ಲೇಟ್ ನೈಟ್ ಪಾರ್ಟಿ ಮಾಡುವುದು ಸಾಹಿಲ್‍ಗೆ ಇಷ್ಟವಿರಲಿಲ್ಲ. ಈ ವಿಷಯಕ್ಕಾಗಿ ಆತ ಪ್ರತಿದಿನ ಜಗಳವಾಡುತ್ತಿದ್ದ. ನೋಡಲು ಸುಂದರವಾಗಿದ್ದ ಹೆಂಡತಿ ಬೇರೆಯವರೊಂದಿಗೂ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಸಾಹಿಲ್​ಗೆ ಅನುಮಾನವೂ ಇತ್ತು. ರಾತ್ರಿ ಪಾರ್ಟಿಗೆ ಹೋಗಿ ಬೇರೆ ಗಂಡಸರೊಂದಿಗೆ ಆಕೆ ಇದ್ದು ಬರುತ್ತಾಳೆ ಎಂದು ಆತ ಸಂಶಯಪಟ್ಟಿದ್ದ. ಇದೇ ಕಾರಣಕ್ಕೆ ಜಗಳವೂ ನಡೆಯುತ್ತಿತ್ತು.

ಬಿಎಸ್​ವೈ- ನಾರಾಯಣ ಗೌಡರ ಡೀಲ್​ನ ಆಡಿಯೋ ರಿಲೀಸ್?; ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ನಾಯಕ ಶಿವರಾಮೇಗೌಡ

ಪೊಲೀಸರ ಬಳಿ ಸಾಹಿಲ್, ವಿಚ್ಛೇದನ ತೆಗೆದುಕೊಳ್ಳೋಣ ಎಂದು ನನ್ನ ಪತ್ನಿ ಬಳಿ ಕೇಳಿದ್ದೆ. ಅದಕ್ಕೆ ಆಕೆ ಒಪ್ಪಿರಲಿಲ್ಲ. ಅಲ್ಲದೆ, ತನಗೇನಾದರೂ ವಿಚ್ಛೇದನ ನೀಡಿದರೆ ವರದಕ್ಷಿಣೆಯ ಆರೋಪ ಮಾಡುವುದಾಗಿ ಹೆದರಿಸಿದ್ದಳು. ಮದುವೆಯಾದ ಒಂದೇ ವರ್ಷಕ್ಕೆ ವಿಚ್ಛೇದನ ಸಾಧ್ಯವಿಲ್ಲವಾದ್ದರಿಂದ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದೆ ಎಂದು ಸಾಹಿಲ್ ಪೊಲೀಸರ ಮುಂದೆ ಸತ್ಯ ಒಪ್ಪಿಕೊಂಡಿದ್ದಾನೆ.

ಆ ದಿನ ಆಗಿದ್ದೇನು?:
ನ. 9ರಂದು ಸಾಹಿಲ್ ಮತ್ತು ನ್ಯಾನ್ಸಿ ಶರ್ಮಾ ನಡುವೆ ದೊಡ್ಡ ಜಗಳ ನಡೆದಿತ್ತು. ಆಗ ಸಾಹಿಲ್ ತನ್ನ ಸಂಬಂಧಿ ಶುಭಂ ಹಾಗೂ ಡ್ರೈವರ್ ಬಿದಲ್ ಜೊತೆ ಸೇರಿ ನ್ಯಾನ್ಸಿಯನ್ನು ಕೊಲೆ ಮಾಡಲು ನಿರ್ಧರಿಸಿದ. ಅದಕ್ಕಾಗಿ ನ. 10ರಂದು ಅವರು ಅಕ್ರಮ ಪಿಸ್ತೂಲ್ ಖರೀದಿಸಲಾಗಿತ್ತು. ಆಕೆಯನ್ನು ಮನೆಯಲ್ಲೇ ಕೊಲೆ ಮಾಡಿದರೆ ಪೊಲೀಸರಿಗೆ ಅನುಮಾನ ಬರಬಹುದು ಎಂದು ನ್ಯಾನ್ಸಿಯನ್ನು ಹೊರಗೆ ಕರೆದುಕೊಂಡು ಹೋಗಲು ನಿರ್ಧರಿಸಿದರು. ಆದರೆ, ಹಿಂದಿನ ದಿನವಷ್ಟೇ ಜಗಳವಾಗಿದ್ದರಿಂದ ನ್ಯಾನ್ಸಿ ಬಳಿ ಹೋಗಿ ಕ್ಷಮೆ ಕೇಳಿದ ಸಾಹಿಲ್ ತಾವಿಬ್ಬರೂ ಲಾಂಗ್ ಡ್ರೈವ್‍ ಹೋಗೋಣ ಎಂದು ಕರೆದ. ಗಂಡನೇ ಕಾಂಪ್ರಮೈಸ್ ಆಗೋಣ ಎಂದು ಹೇಳಿದಾಗ ಸಮಾಧಾನಗೊಂಡ ನ್ಯಾನ್ಸಿ ಆತನೊಂದಿಗೆ ಕಾರಿನಲ್ಲಿ ಹೊರಟಳು. ಆಗ ನಡುರಸ್ತೆಯಲ್ಲಿ ಕಾರಿನಿಂದ ಇಳಿಸಿ ಆಕೆಯ ಹಣೆಗೆ ಪಿಸ್ತೂಲ್​ನಿಂದ ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

TikTok Tragedy: ಟಿಕ್​ಟಾಕ್ ವಿಡಿಯೋ ಪೋಸ್ಟ್​ ಮಾಡಿದ್ದಕ್ಕೆ ಹೆಂಡತಿ ಪ್ರಾಣವನ್ನೇ ತೆಗೆದ ಪತಿರಾಯ!ತಮ್ಮ ಮಗಳಿಗೆ ನ್ಯಾನ್ಸಿ ತಂದೆ ಸಂಜಯ್ ಶರ್ಮಾ ಹಲವು ಬಾರಿ ಫೋನ್ ಮಾಡಿದರೂ ಆಕೆ ರಿಸೀವ್ ಮಾಡಿರಲಿಲ್ಲ. ಮಾಡಿದ್ದಾರೆ. ಆದರೆ ಕರೆ ಮಾಡಿದಾಗ ಕಟ್ ಮಾಡಲಾಗುತಿತ್ತು. ಬಳಿಕ ಸಂಜಯ್ ಸಾಹಿಲ್ ಫೋನ್‍ಗೆ ಕರೆ ಮಾಡಿ ನ್ಯಾನ್ಸಿ ಕರೆ ಸ್ವೀಕರಿಸುತ್ತಿಲ್ಲ ಎಂದು ಹೇಳಿದ್ದಾರೆ. ಬಳಿಕ ಸಂಜಯ್ ತಮ್ಮ ಮಗಳಿಗಾಗಿ ಹುಡುಕಾಟ ನಡೆಸಲು ಶುರು ಮಾಡಿದ್ದರು. ಮಗಳು ಎಲ್ಲಿಯೂ ಸಿಗದಿದ್ದಾಗ ಪೊಲೀಸ್ ಠಾಣೆಗೆ ದೂರು ನೀಡಿದರು. ಈ ಸಂದರ್ಭದಲ್ಲಿ ಸಾಹಿಲ್, ನ್ಯಾನ್ಸಿ ಬೇರೊಬ್ಬ ವ್ಯಕ್ತಿ ಜೊತೆ ಮನೆಯಿಂದ ಓಡಿ ಹೋಗಿರಬಹುದು ಎಂದು ಸುಳ್ಳು ಕತೆಯನ್ನು ಸೃಷ್ಟಿಸಿದ್ದನು.

ನ್ಯಾನ್ಸಿ ಶರ್ಮಾ ನಾಪತ್ತೆಯಾಗಿದ್ದಾಳೆ ಎಂದುಕೊಂಡಿದ್ದ ಪೊಲೀಸರು ಆಕೆಯ ಹುಡುಕಾಟಕ್ಕೆ ಮುಂದಾಗಿದ್ದರು. ಆದರೆ, ತನ್ನ ಅಳಿಯನ ಮೇಲೆ ಸಂಜಯ್ ಶರ್ಮಾ ಅನುಮಾನ ವ್ಯಕ್ತಪಡಿಸಿದಾಗ ಸಾಹಿಲ್​ನನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ, ಆರಂಭದಲ್ಲಿ ಆತ ತನ್ನ ತಪ್ಪನ್ನು ಒಪ್ಪಿಕೊಂಡಿರಲಿಲ್ಲ. ನಂತರ ನ್ಯಾನ್ಸಿ ಕಾಣೆಯಾದ ದಿನ ಸಾಹಿಲ್ ಫೋನ್ ಲೋಕೇಶನ್ ಹಾಗೂ ಕಾಲ್ ಡಿಟೇಲ್ಸ್ ಪರಿಶೀಲಿಸಿದ್ದಾರೆ. ಬಳಿಕ ಆತನನ್ನು ವಿಚಾರಣೆ ನಡೆಸಿದ್ದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಬಳಿಕ ನ್ಯಾನ್ಸಿಯ ಮೃತದೇಹ ಎಸೆದಿದ್ದ ಜಾಗಕ್ಕೆ ಪೊಲೀಸರನ್ನು ಕರೆದುಕೊಂಡು ಹೋಗಿ ತೋರಿಸಿದ್ದ.
First published: November 28, 2019, 8:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading