Sushma ChakreSushma Chakre
|
news18-kannada Updated:January 16, 2021, 4:39 PM IST
ಸಾಂದರ್ಭಿಕ ಚಿತ್ರ
ಮುಂಬೈ (ಜ. 16): ಪ್ರೀತಿ ಕುರುಡು ಎಂಬ ಮಾತಿದೆ. ಆದರೆ, ಕೆಲವೊಮ್ಮೆ ಕುರುಡು ಪ್ರೀತಿಯಿಂದ ಪ್ರಾಣವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿಯೂ ಬರುತ್ತದೆ. ಮಹಾರಾಷ್ಟ್ರದ ಪಲಘಾರ್ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಅದನ್ನು ಮತ್ತೆ ನಿರೂಪಿಸುವಂತಿದೆ. ತನ್ನ ಪ್ರೇಯಸಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾಳೆ ಎಂಬ ಕೋಪದಿಂದ ಯುವಕನೊಬ್ಬ ಆಕೆಯನ್ನು ಕೊಲೆ ಮಾಡಿ, ಶವವನ್ನು ಗೋಡೆಯೊಳಗೆ ಹುದುಗಿಸಿಟ್ಟ ಘಟನೆ ಬೆಳಕಿಗೆ ಬಂದಿದೆ.
30 ವರ್ಷದ ಯುವಕನೊಬ್ಬ 32 ವರ್ಷದ ಯುವತಿಯನ್ನು 5 ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ, ಆತನ ಮನೆಯಲ್ಲಿ ಇದು ಯಾರಿಗೂ ಇಷ್ಟವಿರಲಿಲ್ಲ. ಆ ಯುವತಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು. ಇದರಿಂದ ಕೋಪಗೊಂಡ ಆ ಯುವಕ ಕಳೆದ ವರ್ಷ ಅಕ್ಟೋಬರ್ನಲ್ಲಿ ಆಕೆಯನ್ನು ಕೊಲೆ ಮಾಡಿದ್ದ. ಆಕೆಯ ಅಸ್ಥಿಪಂಜರ ಈಗ ಆತನ ಫ್ಲಾಟ್ನ ಗೋಡೆಯೊಳಗೆ ಪತ್ತೆಯಾಗಿದೆ!
ಇದನ್ನೂ ಓದಿ: Gang Rape: ಮಧ್ಯಪ್ರದೇಶ; ಸಾಮೂಹಿಕ ಅತ್ಯಾಚಾರವೆಸಗಿ ಮಹಿಳೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡು ತುರುಕಿದ ಕಾಮುಕರು!
ಮದುವೆಯಾಗುವಂತೆ ಪದೇ ಪದೆ ಒತ್ತಾಯಿಸುತ್ತಿದ್ದ ಪ್ರೇಯಸಿಯ ಕಾಟ ತಾಳಲಾರದೆ ಆತ 32 ವರ್ಷದ ಯುವತಿಯನ್ನು ಕೊಲೆ ಮಾಡಿದ್ದ. ಆಕೆಯ ಮನೆಯವರು ಕೇಳಿದಾಗ ಆಕೆ ಗುಜರಾತ್ನಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ಸುಳ್ಳು ಹೇಳಿದ್ದ. ಆದರೆ, 2020ರ ಅಕ್ಟೋಬರ್ ತಿಂಗಳಿಂದ ಆಕೆ ಮನೆಯವರ ಸಂಪರ್ಕಕ್ಕೆ ಸಿಗದಿದ್ದಾಗ ಅನುಮಾನಗೊಂಡು ಆಕೆಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಆ ಯುವಕ ತನಗೇನೂ ಗೊತ್ತಿಲ್ಲವೆಂದೇ ವಾದಿಸಿದ್ದ. ಮೊದಲ ಬಾರಿಗೆ ಆತನ ಮನೆಯಲ್ಲಿ ಪರಿಶೀಲನೆ ಮಾಡಿದಾಗ ಯಾವ ಮಾಹಿತಿಯೂ ಸಿಕ್ಕಿರಲಿಲ್ಲ.
ಆದರೆ, ಆಕೆ ಕಳೆದ ಅಕ್ಟೋಬರ್ 21ರಂದು ಕೊನೆಯ ಬಾರಿ ಆಯುವಕನೊಂದಿಗೆ ಕಾಣಿಸಿಕೊಂಡಿದ್ದಕ್ಕೆ ಸಾಕ್ಷಿ ಸಿಕ್ಕಿತ್ತು. ಹೀಗಾಗಿ, ಪೊಲೀಸರಿಗೆ ಆತನ ಮೇಲೆ ಅನುಮಾನ ಇನ್ನೂ ಹಾಗೇ ಉಳಿದಿತ್ತು. ಹೀಗಾಗಿ, ಮತ್ತೊಮ್ಮೆ ಆತನ ಮನೆಯಲ್ಲಿ ಸಂಪೂರ್ಣ ಪರಿಶೀಲನೆ ನಡೆಸಿದಾಗ ಆತನ ಬೆಡ್ ರೂಮಿನ ಗೋಡೆಯಲ್ಲಿ ಪ್ರೇಯಸಿಯ ಶವವನ್ನು ಹೂತಿಟ್ಟಿರುವ ವಿಷಯ ಗೊತ್ತಾಗಿತ್ತು. ಗೋಡೆಯನ್ನು ಒಡೆಸಿ ನೋಡಿದಾಗ ಅಲ್ಲಿ ಆಕೆಯ ಅಸ್ಥಿಪಂಜರವಿತ್ತು.
Published by:
Sushma Chakre
First published:
January 16, 2021, 4:37 PM IST