ದೆಹಲಿ ಫ್ಲ್ಯಾಟ್​ನಲ್ಲಿ ಯುವತಿಯ ಕೊಳೆತ ಶವ ಪತ್ತೆ; 3 ದಿನಗಳಿಂದ ಆಕೆಯ ಪ್ರಿಯಕರ ನಾಪತ್ತೆ

Delhi Crime News: ಫ್ಲ್ಯಾಟ್​ನ ಪಕ್ಕದ ಮನೆಯವರು ಪೊಲೀಸರಿಗೆ ಫೋನ್ ಮಾಡಿ, ತಮ್ಮ ಪಕ್ಕದ ಮನೆಯಿಂದ ಕೊಳೆತ ವಾಸನೆ ಬರುತ್ತಿದೆ ಎಂದು ದೂರಿದ್ದರು. ಪೊಲೀಸರು ಬಂದು ನೋಡಿದಾಗ ಯುವತಿಯ ಶವ ಹಾಸಿಗೆಯ ಮೇಲೆ ಪತ್ತೆಯಾಗಿತ್ತು.

Sushma Chakre | news18-kannada
Updated:September 26, 2020, 8:43 AM IST
ದೆಹಲಿ ಫ್ಲ್ಯಾಟ್​ನಲ್ಲಿ ಯುವತಿಯ ಕೊಳೆತ ಶವ ಪತ್ತೆ; 3 ದಿನಗಳಿಂದ ಆಕೆಯ ಪ್ರಿಯಕರ ನಾಪತ್ತೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಸೆ. 26): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಅಪಾರ್ಟ್​ಮೆಂಟ್​ನ ಫ್ಲ್ಯಾಟ್​ ಒಂದರಲ್ಲಿ 26 ವರ್ಷದ ಯುವತಿಯ ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಫ್ಲ್ಯಾಟ್​ನಲ್ಲಿ ಬಾಡಿಗೆಗಿದ್ದ ಯುವತಿ ಜಾರ್ಖಂಡ್ ಮೂಲದವಳು ಎಂದು ಪತ್ತೆಯಾಗಿದೆ. ಆದರೆ, ಆಕೆ ಸಾವನ್ನಪ್ಪಿದ್ದು ಹೇಗೆ? ಎಂಬ ಬಗ್ಗೆ ಇನ್ನೂ ಮಾಹಿತಿ ದೊರೆತಿಲ್ಲ. ಎರಡು-ಮೂರು ದಿನಗಳ ಹಿಂದೆಯೇ ಈ ಕೊಲೆ ನಡೆದಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಫ್ಲ್ಯಾಟ್​ನಲ್ಲಿ ಆಕೆಯ ಬಾಯ್​ ಫ್ರೆಂಡ್ ಕೂಡ ವಾಸವಾಗಿದ್ದ ಎನ್ನಲಾಗಿದ್ದು, ಆತ ಈಗ ನಾಪತ್ತೆಯಾಗಿದ್ದಾನೆ. ಹೀಗಾಗಿ, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.

ಗುರುಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಯುವತಿ ದಿಶು ಕುಮಾರಿ ಕೊಲೆಯಾದಾಕೆ. ದೆಹಲಿಯ ದ್ವಾರಕಾದಲ್ಲಿರುವ ಫ್ಲ್ಯಾಟ್​ನಲ್ಲಿ ಆಕೆ ತನ್ನ ಗೆಳೆಯನ ಜೊತೆ ವಾಸವಾಗಿದ್ದಳು. ಆಕೆಯ ಗೆಳೆಯನಿದ್ದ ಫ್ಲ್ಯಾಟ್​ನಲ್ಲಿಯೇ ಆಕೆ ಉಳಿದುಕೊಂಡಿದ್ದಳು. ಆದರೆ, ಆಕೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಶವ ಕೊಳೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಕೆಯನ್ನು ಕೊಲೆ ಮಾಡಿ ಸಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೊಲೆಗೆ ಕಾರಣವೇನು ಮತ್ತು ಕಾರಣ ಯಾರು? ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Honour Killing: ಪ್ರೀತಿಸಿ ಮದುವೆಯಾದ ಮೂರೇ ತಿಂಗಳಿಗೆ ಯುವಕನ ಕೊಲೆ; ತೆಲಂಗಾಣದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ

ನಿನ್ನೆ ಆ ಫ್ಲ್ಯಾಟ್​ನ ಪಕ್ಕದ ಮನೆಯವರು ಪೊಲೀಸರಿಗೆ ಫೋನ್ ಮಾಡಿ, ತಮ್ಮ ಪಕ್ಕದ ಮನೆಯಿಂದ ಕೊಳೆತ ವಾಸನೆ ಬರುತ್ತಿದೆ. ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದರು. ನಿನ್ನೆ ಬೆಳಗ್ಗೆ ಆ ಫ್ಲ್ಯಾಟ್​ ಬಳಿ ಬಂದ ಪೊಲೀಸರು ಬಾಗಿಲು ಒಡೆದು, ಒಳಗೆ ಹೋಗಿದ್ದರು. ಆಗ ಯುವತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬೆಡ್​ರೂಂನಲ್ಲಿರುವ ಹಾಸಿಗೆಯ ಮೇಲೆ ಆಕೆಯನ್ನು ಕೊಲೆ ಮಾಡಲಾಗಿತ್ತು. ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಹಾಗೂ ಕೊಲೆ ಕೇಸ್ ದಾಖಲಿಸಿಕೊಳ್ಳಲಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಆ ಯುವತಿಯ ಗೆಳೆಯನೇ ಈ ಕೊಲೆ ಮಾಡಿ, ತಲೆಮರೆಸಿಕೊಂಡಿರುವ ಸಾಧ್ಯತೆಗಳು ಹೆಚ್ಚಾಗಿವೆ. ಆತ 2-3 ದಿನಗಳಿಂದ ಮನೆಗೆ ಬಂದಿಲ್ಲ ಎಂದು ಪಕ್ಕದ ಮನೆಯವರು ತಿಳಿಸಿದ್ದಾರೆ. ಆತನನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ.
Published by: Sushma Chakre
First published: September 26, 2020, 8:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading