• Home
  • »
  • News
  • »
  • national-international
  • »
  • Pakistan: ನಿಜಕ್ಕೂ ಭಾರತದೊಂದಿಗೆ ಶಾಂತಿ ಮಾತುಕತೆ ಬಯಸುತ್ತಿದೆಯಾ ಪಾಕ್​? ಶೆಹಬಾಜ್ ಷರೀಫ್ ನಾಟಕದ ಅಸಲಿಯತ್ತೇನು?

Pakistan: ನಿಜಕ್ಕೂ ಭಾರತದೊಂದಿಗೆ ಶಾಂತಿ ಮಾತುಕತೆ ಬಯಸುತ್ತಿದೆಯಾ ಪಾಕ್​? ಶೆಹಬಾಜ್ ಷರೀಫ್ ನಾಟಕದ ಅಸಲಿಯತ್ತೇನು?

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್

Pakistan Peace Talk with India: ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಮರು ಜಾರಿಗೊಳಿಸಿದ ನಂತರವೇ ಭಾರತದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಶಹಬಾಜ್ ಷರೀಫ್ ಹೇಳಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಕ್ತದಾರ್ ಖಾನ್ ಭಾರತದಲ್ಲಿರುವ ಅಲ್ಪಸಂಖ್ಯಾತರ ಸಮಸ್ಯೆ ಅಲ್ಲಿನ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವೆ ಇದೆ, ಈ ವಿಚಾರವಾಗಿ ಪಾಕಿಸ್ತಾನ ತಲೆಕೆಡಿಸಿಕೊಳ್ಳಬಾರದು. ಅದರಲ್ಲೂ ಭಾರತದ ಕೆಲವು ವರ್ಗದ ಮುಸ್ಲಿಮರ ವಿರುದ್ಧ ದ್ವೇಷದ ಬಗ್ಗೆ ಮಾತನಾಡಿದರೆ ಅದಕ್ಕೆ ಪಾಕಿಸ್ತಾನವೂ ಹೊಣೆಯಾಗುತ್ತದೆ ಎಂದಿದ್ದಾರೆ.

ಮುಂದೆ ಓದಿ ...
  • Share this:

ಇಸ್ಲಮಾಬಾದ್(ಜ.22): ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Pakistan PM Shehbaz Sharif) ಇತ್ತೀಚೆಗೆ ಪಾಕಿಸ್ತಾನವು ಪಾಠ ಕಲಿತಿದೆ ಮತ್ತು ಭಾರತದೊಂದಿಗೆ ಶಾಂತಿಯಿಂದ ಬದುಕಲು ಬಯಸುತ್ತದೆ ಎಂದು ಹೇಳಿದ್ದಾರೆ. ನೆರೆಹೊರೆಯವರು ತಮ್ಮ ಸಂಪನ್ಮೂಲಗಳನ್ನು ಬಾಂಬ್ ಮತ್ತು ಮದ್ದುಗುಂಡುಗಳಿಗೆ ವ್ಯರ್ಥ ಮಾಡಬಾರದು ಎಂದು ಅವರು ಒತ್ತಿ ಹೇಳಿದರು. ಆದರೆ ಇದ್ದಕ್ಕಿದ್ದಂತೆ ಭಾರತದ ಬಗೆಗಿನ ಪಾಕಿಸ್ತಾನದ ಧೋರಣೆಯಲ್ಲಿ ಇಂತಹ ಬದಲಾವಣೆ ಏಕೆ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ. ಪಾಕಿಸ್ತಾನವು ನಿಜವಾಗಿಯೂ ಶಾಂತಿಯನ್ನು (Peace Talk) ಬಯಸುತ್ತದೆಯೇ ಅಥವಾ ಕೆಲವು ಒತ್ತಡದಿಂದ ಶಾಂತಿಯ ಬಗ್ಗೆ ಮಾತನಾಡುತ್ತಿದೆಯೇ? ಯುನೈಟೆಡ್ ಅರಬ್ ಎಮಿರೇಟ್ಸ್ ನ (United Arab Emirates) ಒತ್ತಡಕ್ಕೆ ಮಣಿದು ಪಾಕಿಸ್ತಾನ ಶಾಂತಿ ಮಾತುಕತೆ ಆರಂಭಿಸಿದೆ ಎಂದು ಅಮೆರಿಕದ ಡೆಲವೇರ್ ವಿಶ್ವವಿದ್ಯಾಲಯದ ಇಸ್ಲಾಮಿಕ್ ಅಧ್ಯಯನ ಕಾರ್ಯಕ್ರಮದ ನಿರ್ದೇಶಕ ಪ್ರೊಫೆಸರ್ ಮುಕ್ತದಾರ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.


ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಮರು ಜಾರಿಗೊಳಿಸಿದ ನಂತರವೇ ಭಾರತದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಶಹಬಾಜ್ ಷರೀಫ್ ಹೇಳಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಕ್ತದಾರ್ ಖಾನ್ ಅವರು, ಭಾರತದಲ್ಲಿ ಅಲ್ಪಸಂಖ್ಯಾತರ ಸಮಸ್ಯೆ ಅಲ್ಲಿನ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವಿನದ್ದು. ಈ ಬಗ್ಗೆ ಪಾಕಿಸ್ತಾನ ತಲೆಕೆಡಿಸಿಕೊಳ್ಳಬಾರದು. ಅದರಲ್ಲೂ ಭಾರತದ ಕೆಲವು ವರ್ಗದ ಮುಸ್ಲಿಮರ ವಿರುದ್ಧ ದ್ವೇಷದ ಬಗ್ಗೆ ಮಾತನಾಡಿದರೆ ಅದಕ್ಕೆ ಪಾಕಿಸ್ತಾನವೂ ಹೊಣೆಯಾಗುತ್ತದೆ ಎಂದಿದ್ದಾರೆ.


ಇದನ್ನೂ ಓದಿ: Pakistan: ಪಾಕ್‌ ಅಧಿಕಾರಿ ವಿರುದ್ಧ ಭಾರತೀಯ ಮಹಿಳೆಯ ಆರೋಪ, ಅನುಚಿತ ವರ್ತನೆ ಸಹಿಸಲ್ಲ ಎಂದ ನೆರೆ ರಾಷ್ಟ್ರ


ಯುಎಇಯಲ್ಲಿ ಶಾಂತಿಯ ಮಾತುಕತೆಯ ಪ್ರಸ್ತಾಪವೇಕೆ?


ಯುಎಇಯಲ್ಲಿರುವ ಶಹಬಾಜ್ ಷರೀಫ್ ಟಿವಿ ಮೂಲಕ ವಿಶ್ವದಿಂದ ತನ್ನ ದೇಶಕ್ಕೆ ಆರ್ಥಿಕ ಸಹಾಯವನ್ನು ಕೋರಿದ್ದಾರೆ ಎಂಬುವುದು ಪ್ರೊಫೆಸರ್ ಮುಕ್ತದಾರ್ ಅಭಿಪ್ರಾಯ. ಪಾಕಿಸ್ತಾನದ ಆರ್ಥಿಕ ಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದು ಮುಕ್ತದಾರ್ ಹೇಳುತ್ತಾರೆ. ಯುಎಇ ಪಾಕಿಸ್ತಾನಕ್ಕೆ ಅಗ್ಗದ ತೈಲ, ಸಾಲವಾಗಿ ನೀಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಷರೀಫ್ ಅವರ ಯುಎಇ ಭೇಟಿಯೂ ಅವರ ಉಪಸ್ಥಿತಿಯಾಗಿದೆ. ಇದೇ ಕಾರಣಕ್ಕೆ ಷರೀಫ್ ಅಲ್ಲಿಗೆ ಹೋಗಿ ಭಾರತದೊಂದಿಗೆ ಶಾಂತಿ ಸ್ಥಾಪಿಸುವ ಬಗ್ಗೆ ಮಾತನಾಡಿದ್ದರು. ಅಲ್ಲದೇ ಪಾಕಿಸ್ತಾನದ ಸೇನೆ ತನ್ನ ದೇಶದಲ್ಲಿ ಇಂತಹ್ ಮಾತಿಕತೆಗೆ ಅವಕಾಶ ನೀಡುವುದಿಲ್ಲ ಎಂಬುವುದೂ ಇದರ ಹಿಂದಿರುವ ಮತ್ತೊಂದು ಕಾರಣ ಎಂದಿದ್ದಾರೆ ಮುಕ್ತದಾರ್.


ಪಾಕಿಸ್ತಾನ ಪ್ರಧಾನಿ ಹೇಳಿದ್ದೇನು?


ಸುದ್ದಿವಾಹಿನಿ ನಡೆಸಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಶೆಹಬಾಜ್ ಷರೀಫ್, ‘ಭಾರತ ಮತ್ತು ಪಾಕಿಸ್ತಾನ ನೆರೆಹೊರೆಯವರಾಗಿದ್ದು, ಪರಸ್ಪರ ಅರ್ಥೈಸಿಕೊಂಡು ಬಾಳಬೇಕು ಎಂದಿದ್ದರು. ಅಲ್ಲದೇ ‘ನಾವು ಶಾಂತಿ ಮತ್ತು ಪ್ರಗತಿಗಾಗಿ ಬದುಕಬೇಕೋ ಅಥವಾ ಜಗಳವಾಡಬೇಕೋ? ಸಮಯ ಮತ್ತು ಸಂಪನ್ಮೂಲಗಳನ್ನು ವ್ಯರ್ಥ ಮಾಡಬೇಕೋ? ಎಂಬುದು ನಮಗೆ ಬಿಟ್ಟದ್ದು. ನಾವು ಭಾರತದೊಂದಿಗೆ 3 ಯುದ್ಧಗಳನ್ನು ಮಾಡಿದ್ದೇವೆ. ಆದರೆ ಇದು ನಮ್ಮ ಜನರಿಗೆ ಹೆಚ್ಚಿನ ದುಃಖ, ಬಡತನ ಮತ್ತು ನಿರುದ್ಯೋಗ ಸಮಸ್ಯೆಯನ್ನು ತಂದಿದೆ’ ಎಂದು ಅವರು ಹೇಳಿದ್ದರು.


ಇದನ್ನೂ ಓದಿ: Pakistan: ಪಾಕ್‌ನಲ್ಲಿ ಅಪ್ರಾಪ್ತ ಬಾಲಕಿಯರಿಗೆ ಬಲವಂತವಾಗಿ ಮದುವೆ, ಮತಾಂತರ; ಕೃತ್ಯ ನಿಲ್ಲಿಸುವಂತೆ ವಿಶ್ವಸಂಸ್ಥೆ ಖಡಕ್ ಎಚ್ಚರಿಕೆ


ನಮ್ಮಲ್ಲಿ ಎಂಜಿನಿಯರ್‌ಗಳು, ವೈದ್ಯರು ಮತ್ತು ನುರಿತ ಕಾರ್ಮಿಕರಿದ್ದಾರೆ. ಈ ಆಸ್ತಿಗಳನ್ನು ಸಮೃದ್ಧಿಗಾಗಿ ಬಳಸಿಕೊಳ್ಳಲು ಮತ್ತು ಎರಡೂ ರಾಷ್ಟ್ರಗಳು ಬೆಳೆಯಲು ಈ ಪ್ರದೇಶದಲ್ಲಿ ಶಾಂತಿಯನ್ನು ತರಲು ನಾವು ಬಯಸುತ್ತೇವೆ ಎಂದು ಷರೀಫ್ ಉಲ್ಲೇಖಿಸಿದ್ದರು.



ಅಲ್ಲದೇ ನಾವು ಹಿಂದೆ ಮಾಡಿದ ತಪ್ಪುಗಳಿಂದ ಪಾಠಗಳನ್ನು ಕಲಿತಿದ್ದೇವೆ. ನಮ್ಮ ನೈಜ ಸಮಸ್ಯೆಗಳನ್ನು ಪರಿಹರಿಸಲು ನಾವು ಸಮರ್ಥರಾಗಿದ್ದು, ಶಾಂತಿಯಿಂದ ಬದುಕಲು ಬಯಸುತ್ತೇವೆ. ಮದ್ದುಗುಂಡುಗಳ ದಾಳಿಯಿಂದ ಅಮೂಲ್ಯ ಸಂಪನ್ಮೂಲಗಳನ್ನು ವ್ಯರ್ಥ ಮಾಡಬಯಸುವುದಿಲ್ಲ. ಇದು ನಾನು ಪ್ರಧಾನಿ ಮೋದಿಗೆ ಮಾಡುವ ಮನವಿ ಎಂದಿದ್ದರು.

Published by:Precilla Olivia Dias
First published: