HOME » NEWS » National-international » MUNICIPAL OFFICER ENTERS MANHOLE TO INSPECT CLEANING WORK IN SAREE IN THANE VIRAL VIDEO LG

Viral News: ಸೀರೆಯುಟ್ಟು ಮ್ಯಾನ್​ಹೋಲ್​ಗೆ ಇಳಿದ ಮುನ್ಸಿಪಲ್ ಆಫೀಸರ್; ವೈರಲ್​ ಆಯ್ತು ವಿಡಿಯೋ..!

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುನ್ಸಿಪಲ್ ಆಫೀಸರ್ ಸುವಿಧಾ ಚವಾಣ್, ಚರಂಡಿ ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಲು ಸೀರೆಯುಟ್ಟು ಮ್ಯಾನ್​ ಹೋಲ್​ಗೆ ಇಳಿದಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಮಹಿಳಾ ಅಧಿಕಾರಿಯ ಕಾರ್ಯವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

news18-kannada
Updated:June 11, 2021, 9:48 AM IST
Viral News: ಸೀರೆಯುಟ್ಟು ಮ್ಯಾನ್​ಹೋಲ್​ಗೆ ಇಳಿದ ಮುನ್ಸಿಪಲ್ ಆಫೀಸರ್; ವೈರಲ್​ ಆಯ್ತು ವಿಡಿಯೋ..!
ಮ್ಯಾನ್​ ಹೋಲ್​ಗೆ ಇಳಿದಿರುವ ಮುನ್ಸಿಪಲ್​ ಆಫೀಸರ್
  • Share this:
ಮಹಾರಾಷ್ಟ್ರ(ಜೂ.11): ಜನಪರ ಅಥವಾ ಜನಸ್ನೇಹಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಿಗುವುದು ತುಂಬಾ ವಿರಳ. ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡು ಕೆಲಸ ನಿರ್ವಹಿಸಲು ಎಲ್ಲರಿಗೂ ಸಾಧ್ಯವಿಲ್ಲ. ಒಂದೆಡೆ ಜನಸಾಮಾನ್ಯರೊಂದಿಗೆ ಸಾಮಾನ್ಯರಂತೆ ಬೆರೆತು ಕೆಲಸ ಮಾಡುವ ವರ್ಗವನ್ನೂ ನೋಡಿದ್ದೇವೆ. ಇನ್ನೊಂದೆಡೆ ಜನರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಎಸಗಿ ಕೆಲಸ ಮಾಡುವವರನ್ನೂ ಕಂಡಿದ್ದೇವೆ. ಜನಪರ ಅಧಿಕಾರಿಗಳಿಗೆ ಜನರ ಪ್ರೋತ್ಸಾಹ, ಬೆಂಬಲ, ಪ್ರೀತಿ, ವಿಶ್ವಾಸ ಇದ್ದೇ ಇರುತ್ತದೆ. ಇಂತಹ ಸಾಲಿಗೆ ಸೇರುವವರು ಮಹಾರಾಷ್ಟ್ರದ ಸುವಿಧಾ ಚವಣ್. ಯಾಕೆ ಅಂತೀರಾ? ಮುಂದೆ ಓದಿ.

ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುನ್ಸಿಪಲ್ ಆಫೀಸರ್ ಸುವಿಧಾ ಚವಾಣ್, ಚರಂಡಿ ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಲು ಸೀರೆಯುಟ್ಟು ಮ್ಯಾನ್​ ಹೋಲ್​ಗೆ ಇಳಿದಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಮಹಿಳಾ ಅಧಿಕಾರಿಯ ಕಾರ್ಯವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂಗಾರು ಶುರುವಾಗಿರುವುದರಿಂದ ಮಳೆಯ ಆರ್ಭಟ ಹೆಚ್ಚಾಗಿದೆ. ಕಳೆದ 2 ದಿನಗಳ ಹಿಂದೆ ಮಹಾರಾಷ್ಟ್ರಕ್ಕೆ ಮಾನ್ಸೂನ್​ ಕಾಲಿಟ್ಟಿದ್ದು, ಭಾರೀ ಮಳೆಯಾಗುತ್ತಿದೆ. ಪ್ರತೀ ಬಾರಿ ಮಳೆ ಬಂದಾಗಲೂ ಮುಂಬೈ ಮುಳುಗುವ ಮಟ್ಟ ತಲುಪತ್ತದೆ. ಮುಂಬೈ, ಥಾಣೆ, ರಾಯ್​ಗಢ ಇನ್ನೂ ಮೊದಲಾದ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ರೆಡ್​ ಅಲರ್ಟ್​​ ಘೋಷಣೆ ಮಾಡಲಾಗಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಎನ್​ಡಿಆರ್​ಎಫ್​ ತಂಡವೂ ಸಹ ಬೀಡು ಬಿಟ್ಟಿದೆ.

ಇದನ್ನೂ ಓದಿ:Ramdev: ಕೊರೋನಾ ಲಸಿಕೆ ಪಡೆಯುತ್ತೇನೆ ಎಂದ ಬಾಬಾ ರಾಮದೇವ್; ವೈದ್ಯರೇ ದೇವದೂತರು ಎಂದು ಯೂಟರ್ನ್!

ಥಾಣೆಯಲ್ಲೂ ಮಳೆ ಹೆಚ್ಚಾಗಿರುವುದರಿಂದ ಮಳೆ ನೀರು ಸರಾಗವಾಗಿ ಹೋಗಲು ಚರಂಡಿ ವ್ಯವಸ್ಥೆ ಸರಿ ಇದೆಯೇ ಎಂದು ಮಹಿಳಾ ಅಧಿಕಾರಿ ಪರಿಶೀಲನೆ ನಡೆಸಿದ್ದಾರೆ. ಭಿವಾಂಡಿ-ನಿಜಾಂಪುರ್ ಮುನ್ಸಿಪಲ್​ ಕಾರ್ಪೋರೇಷನ್​(ಬಿಎನ್​ಎಂಸಿ)ನ ಸ್ಯಾನಿಟರಿ ಇನ್ಸ್​ಪೆಕ್ಟರ್ ಸುವಿಧಾ ಚವಾಣ್, ಮರದ ಏಣಿಯ ಸಹಾಯದಿಂದ ಮ್ಯಾನ್​ ಹೋಲ್​​ ಒಳಗೆ ಇಳಿದಿದ್ದಾರೆ. ಬಳಿಕ ಚರಂಡಿ ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಿ, ಅದರ ಫೋಟೋಗಳನ್ನು ತೆಗೆದಿದ್ದಾರೆ. ಅಲ್ಲಿನ ಕೆಲಸಗಾರರ ಜೊತೆ ಮಾತನಾಡಿ ಬಳಿಕ ಮ್ಯಾನ್​ ಹೋಲ್​ನಿಂದ ಹೊರಗೆ ಬಂದಿದ್ದಾರೆ.

ಸೀರೆಯುಟ್ಟ ಮಹಿಳಾ ಅಧಿಕಾರಿ ನಗರದಲ್ಲಿನ ಅನೇಕ ಚರಂಡಿಗಳನ್ನು ಪರಿಶೀಲನೆ ನಡೆಸಿದ್ದರು. ಭಿವಾಂಡಿಯಲ್ಲಿ ಪ್ರತೀ ಮಳೆಗಾಲದಲ್ಲೂ ಚರಂಡಿಗಳು ಬ್ಲಾಕ್​ ಆಗಲಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಸುವಿಧಾ ಮುನ್ನೆಚ್ಚರಿಕಾ ಕ್ರಮವಾಗಿ ತಾವೇ ಸ್ಥಳಕ್ಕೆ ಆಗಮಿಸಿ, ಮ್ಯಾನ್​ಹೋಲ್​ಗೆ ಇಳಿದು ಡ್ರೈನ್​ ಕ್ಲೀನಿಂಗ್ ಕುರಿತಾಗಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:Morning Digest: ಪೆಟ್ರೋಲ್​ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ ಪ್ರತಿಭಟನೆ, ಯೂಟರ್ನ್ ಹೊಡೆದ ಬಾಬಾ ರಾಮ್​ದೇವ್; ಇಂದಿನ ಪ್ರಮುಖ ಸುದ್ದಿಗಳಿವುಮಳೆಗಾಲದಲ್ಲಿ ಜನರು ಸಮಸ್ಯೆಗಳನ್ನು ಎದುರಿಸದಂತೆ ಮುನ್ಸಿಪಲ್ ಕಾರ್ಪೋರೇಷನ್​ಗಳಲ್ಲಿ ನಮಗೆ ಇಂತಹ ಹೆಚ್ಚಿನ ಅಧಿಕಾರಿಗಳು ಬೇಕಾಗಿದ್ದಾರೆ ಎಂದು ಈ ವೈರಲ್​ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಮುಂಗಾರು ಶುರುವಾಗುವ ಮುನ್ನ ಭಿವಾಂಡಿ-ನಿಜಾಂಪುರ್ ಪ್ರದೇಶದಲ್ಲಿ ಪರಿಶೀಲನೆ ನಡೆಸಬೇಕು ಚವಾಣ್​​ಗೆ ಆದೇಶ ನೀಡಲಾಗಿತ್ತು. ಹೀಗಾಗಿ ಪರಿಶೀಲನೆಗೆ ತೆರಳಿದ್ದ ಅವರು ಮ್ಯಾನ್​ ಹೋಲ್​ ಒಳಗೆ ಇಳಿದಿದ್ದಾರೆ. ಇದೇ ಮೊದಲ ಬಾರಿಗೆ ಮ್ಯಾನ್​ ಹೋಲ್​ಗೆ ಇಳಿದಿದ್ದಾಗಿ ಸುವಿಧಾ ಸ್ಥಳೀಯ ಮಾಧ್ಯಮಗಳೊಂದಿಗೆ ಹೇಳಿಕೊಂಡಿದ್ದಾರೆ.
Youtube Video

ಮಾನ್ಸೂನ್​ ಪೂರ್ವ ಪರಿಶೀಲನೆ ನಡೆಸಿ ಎಂದು ಕಾರ್ಪೋರೇಷನ್ ನನಗೆ ಕೆಲಸ ವಹಿಸಿತ್ತು. ಗುತ್ತಿಗೆದಾರರು ತಮಗೆ ವಹಿಸಿರುವ ಕೆಲಸಗಳನ್ನು ಸರಿಯಾಗಿ ಮಾಡುತ್ತಿದ್ದಾರೆಯೇ ಹಾಗೂ ಚರಂಡಿಗಳನ್ನು ಕ್ಲೀನ್ ಮಾಡುವುದು ಎಷ್ಟು ಕಷ್ಟ ಎಂದು ನಾನು ಖಚಿತಪಡಿಸಿಕೊಳ್ಳಬೇಕಿತ್ತು. ಹೀಗಾಗಿ ಖುದ್ದಾಗಿ ನಾನೇ ಮ್ಯಾನ್​ ಹೋಲ್​ಗೆ ಇಳಿದಿದ್ದೆ. ಮಳೆಗಾಲದಲ್ಲಿ ಜನರು ಯಾವುದೇ ಸಮಸ್ಯೆ ಎದುರಿಸಬಾರದು. ಇದು ನನ್ನ ಕರ್ತವ್ಯ ಕೂಡ ಆಗಿದೆ. ನನ್ನ ಕಾರ್ಯಕ್ಕೆ ಕಚೇರಿ ಹಾಗೂ ಕುಟುಂಬದ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
Published by: Latha CG
First published: June 11, 2021, 9:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories