HOME » NEWS » National-international » MUMBAI WOMAN JUMPS FROM 12TH FLOOR APARTMENT WITH 7 YR OLD SON BLAMES NEIGHBOURS FOR HARASSING HER MAK

Crime News| ಮಗು ಅತ್ತಿದ್ದಕ್ಕೆ ಬೈದ ಪಕ್ಕದ ಮನೆಯವರು, ಮನನೊಂದು 12ನೇ ಮಹಡಿಯಿಂದ ಜಿಗಿದು ತಾಯಿ-ಮಗು ಸಾವು!

44 ವರ್ಷದ ರೇಷ್ಮಾ ತ್ರೆಂಚಿಲ್ ತನ್ನ ಮಗ ಜೋರಾಗಿ ಅಳುತ್ತಾನೆ ಎಂಬ ಬಗ್ಗೆ ನೆರೆಹೊರೆಯ ವರು ಪದೇ ಪದೇ ದೂರುಗಳನ್ನು ನೀಡಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಡೆತ್ ನೋಟ್ ಬರೆದಿಟ್ಟು, ಮಗನೊಂದಿಗೆ ಸಾವಿಗೆ ಶರಣಾಗಿದ್ದಾರೆ.

news18-kannada
Updated:June 24, 2021, 7:40 AM IST
Crime News| ಮಗು ಅತ್ತಿದ್ದಕ್ಕೆ ಬೈದ ಪಕ್ಕದ ಮನೆಯವರು, ಮನನೊಂದು 12ನೇ ಮಹಡಿಯಿಂದ ಜಿಗಿದು ತಾಯಿ-ಮಗು ಸಾವು!
ಸಾಂದರ್ಭಿಕ ಚಿತ್ರ.
  • Share this:
ಮುಂಬೈ; ಮಗು ಅಳುವಿನ ಸದ್ದಿಗೆ ಪಕ್ಕದ ಮನೆಯವರು ಅಗಿಂದಾಗ್ಗ ಬೈಯುತ್ತಲೇ ಇದ್ದರು. ಹೀಗೆ ಪಕ್ಕದ ಮನೆಯವರ ಕಿರುಕುಳಕ್ಕೆ ಬೇಸತ್ತು ಮುಂಬೈನ ಮಹಿಳೆಯೊ ಬ್ಬರು ತನ್ನ 7 ವರ್ಷದ ಮಗನೊಂದಿಗೆ 12 ನೇ ಮಹಡಿಯ ಅಪಾರ್ಟ್ಮೆಂಟ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. 44 ವರ್ಷದ ರೇಷ್ಮಾ ತ್ರೆಂಚಿಲ್ ತನ್ನ ಮಗ ಜೋರಾಗಿ ಅಳುತ್ತಾನೆ ಎಂಬ ಬಗ್ಗೆ ನೆರೆಹೊರೆಯ ವರು ಪದೇ ಪದೇ ದೂರುಗಳನ್ನು ನೀಡಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಡೆತ್ ನೋಟ್ ಬರೆದಿಟ್ಟು, ಮಗನೊಂದಿಗೆ ಸಾವಿಗೆ ಶರಣಾಗಿದ್ದಾರೆ.

ಪ್ರಕರಣ ದಾಖಲಾಗಿದ್ದು, ನೆರೆಹೊರೆಯವರಲ್ಲಿ ಅಯೂಬ್ ಖಾನ್ (67), ಅವರ 60 ವರ್ಷದ ಪತ್ನಿ ಮತ್ತು ಅವರ ಮಗ ಶಾದಾಬ್ ಇದಾರೆ. ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ 33 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ರೇಷ್ಮಾ ತ್ರೆಂಚಿಲ್ ಇತ್ತೀಚೆಗೆ ಕೊರೊನಾ ಸೋಂಕಿನಿಂದ ತನ್ನ ಗಂಡನನ್ನು ಕಳೆದುಕೊಂಡಿದ್ದರು. ತನ್ನ ಏಳು ವರ್ಷದ ಮಗನೊಂದಿಗೆ ಚಂಡಿವಾಲಿಯ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಏಪ್ರಿಲ್‌ನಲ್ಲಿ ಈ ಪ್ಲ್ಯಾಟ್‌ಗೆ ಬಂದಿದ್ದ ಇವರೊಂದಿಗೆ ಮಗನ ಅಳುವಿನ ಕಾರಣ ಹೇಳಿ ನೆರೆಹೊರೆಯವರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಚುನಾವಣೆಗೂ ಮುನ್ನವೇ ಸಿಎಂ ಸೀಟ್​ಗೆ ಟವೆಲ್ ಹಾಕುತ್ತಿರುವ ಕೈ ನಾಯಕರು; ಶಾಸಕ ಅಖಂಡ ಶ್ರೀನಿವಾಸ್ ಹೇಳಿದ್ದೇನು?

ಮೃತರ ಪತಿ ಶರತ್ ಮುಲುಕುಟ್ಲಾ ಕೊರೊನಾಗೆ ಮೇ 23 ರಂದು ನಿಧನರಾಗಿದ್ದರು. ಅಂದಿನಿಂದ ಅವರು ಖಿನ್ನತೆಗೆ ಒಳಗಾಗಿದ್ದರು. ಶರತ್ ಮುಲುಕುಟ್ಲಾ ಅವರು ಕೃಷಿ ಸರಕುಗಳನ್ನು ಆನ್‌ಲೈನ್ ವ್ಯಾಪಾರ ಮಾಡುವ ಪ್ಲಾಟ್‌ಫಾರಂನ ಮುಖ್ಯ ವ್ಯವಹಾರ ಅಧಿಕಾರಿಯಾಗಿದ್ದರು ಎಂದು ವರದಿಗಳು ತಿಳಿಸಿವೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: MAshok Kumar
First published: June 24, 2021, 7:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories