• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Bike Travel: 100 ದಿನ, 24 ರಾಷ್ಟ್ರ, 3 ಖಂಡಗಳ ಲಾಂಗ್ ಜರ್ನಿ! ಮುಂಬೈ ಟು ಲಂಡನ್‌ ಸವಾರಿ ಮಾಡಲಿದ್ದಾನೆ ಈ ಬೈಕರ್

Bike Travel: 100 ದಿನ, 24 ರಾಷ್ಟ್ರ, 3 ಖಂಡಗಳ ಲಾಂಗ್ ಜರ್ನಿ! ಮುಂಬೈ ಟು ಲಂಡನ್‌ ಸವಾರಿ ಮಾಡಲಿದ್ದಾನೆ ಈ ಬೈಕರ್

ಬೈಕ್​ನಲ್ಲಿ 24 ದೇಶ ಸುತ್ತಲಿರುವ ಬೈಕರ್ ಯೋಗೇಶ್

ಬೈಕ್​ನಲ್ಲಿ 24 ದೇಶ ಸುತ್ತಲಿರುವ ಬೈಕರ್ ಯೋಗೇಶ್

ಯೋಗೀಶ್ ಅಲೆಕಾರಿ ಎಂಬ ಬೈಕರ್​ ಮುಂಬೈನಿಂದ ಲಂಡನ್​ವರೆಗೆ ಬೈಕ್​ನಲ್ಲಿ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ. ಯೋಗೇಶ್ ಕಳೆದ ಆರೇಳು ವರ್ಷಗಳಿಂದ ಬೈಕ್ ರೈಡಿಂಗ್ ಮಾಡುತ್ತಿದ್ದು, ಹಲವು ದೇಶಗಳನ್ನು ಸುತ್ತಿದ್ದಾರೆ.

 • Local18
 • 3-MIN READ
 • Last Updated :
 • Mumbai, India
 • Share this:

ಮುಂಬೈ: ಇಡೀ ಪ್ರಪಂಚವನ್ನು ಸುತ್ತಾಡಬೇಕೆಂಬ (World Tour) ಹಂಬಲ ಪ್ರತಿಯೊಬ್ಬರಲ್ಲೂ ಇರುತ್ತದೆ. ಕಳೆದ ಶತಮಾನದಲ್ಲಿ, ಪ್ರಪಂಚ ಪರ್ಯಟನೆ ಮಾಡುವುದಕ್ಕೆ ದೋಣಿ ಅಥವಾ ಹಡಗುಗಳ ( Boat or Ship) ಮೂಲಕ ಸಮುದ್ರ (Sea) ಮಾರ್ಗವನ್ನು ಅನುಸರಿಸಲಾಗುತ್ತಿತ್ತು. ಆದರೆ ವಿಜ್ಞಾನ (Science) ಬೆಳೆದಂತೆ ಸ್ಟೀಮ್ ಇಂಜಿನ್‌ಗಳು, ಕಾರುಗಳು ಮತ್ತು ವಿಮಾನಗಳ (Airplanes) ಆವಿಷ್ಕಾರಗಳಾಗಿದ್ದು, ಇದೀಗ ಪ್ರಯಾಣ ಸುಲಭವಾಗಿದೆ. ಇದು ಪ್ರವಾಸಿ ಪ್ರಿಯರಿಗೆ ತುಂಬಾ ದೊಡ್ಡ ಅನುಕೂಲ ಮಾಡಿಕೊಟ್ಟಿದೆ. ಅಲ್ಲದೆ ಪ್ರಸ್ತುತ ದಿನಗಳಲ್ಲಿ ಅನೇಕ ಜನರು ಪ್ರಪಂಚದ ವಿವಿಧ ಭಾಗಗಳಿಗೆ ಬೈಕ್ ಮೂಲಕವೇ ಪ್ರಯಾಣಿಸಲು ಬಯಸುತ್ತಾರೆ. ಮಹಾರಾಷ್ಟ್ರದ (Maharashtra) ಯುವಕನೊಬ್ಬ ಮುಂಬೈನಿಂದ ಲಂಡನ್‌ಗೆ ಪ್ರಯಾಣಿಸಲು ಸಿದ್ಧನಾಗಿದ್ದಾನೆ.


ದೇಶಾದ್ಯಂತ ಒಂದು ಲಕ್ಷ ಕಿಮೀ ಬೈಕ್​ ರೈಡಿಂಗ್


ಮುಂಬೈನ ಯುವಕ ಯೋಗೀಶ್ ಅಲೆಕಾರಿ ಮುಂಬೈನಿಂದ ಲಂಡನ್​ವರೆಗೆ ಬೈಕ್​ನಲ್ಲಿ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ. ಯೋಗೇಶ್ ಕಳೆದ ಆರೇಳು ವರ್ಷಗಳಿಂದ ಬೈಕ್ ರೈಡಿಂಗ್ ಮಾಡುತ್ತಿದ್ದಾರೆ. ಅವರು ಮಹಾರಾಷ್ಟ್ರದ ಗಡ್ಕಿಲೆ ಜಿಲ್ಲೆಯಲ್ಲಿ ತಮ್ಮ ಟ್ರೆಕ್ಕಿಂಗ್ ಮತ್ತು ಬೈಕ್ ರೈಡಿಂಗ್ ಅನ್ನು ಪ್ರಾರಂಭಿಸಿದ್ದರು. ಅವರು ಇದುವರೆಗೆ ಭಾರತದಾದ್ಯಂತ ಸುಮಾರು ಒಂದು ಲಕ್ಷ ಕಿಲೋಮೀಟರ್​ಗಳಿಗಿಂತ ಹೆಚ್ಚು ದೂರ ಬೈಕ್ ರೈಡಿಂಗ್ ಮಾಡಿದ್ದಾರೆ.


ಯೋಗೇಶ್ ಇದೀಗ ಮುಂಬೈನಿಂದ ಲಂಡನ್​ಗೆ ಬೈಕ್ ನಲ್ಲಿ ಪ್ರಯಾಣಿಸಲು ನಿರ್ಧರಿಸಿದ್ದಾರೆ. ಈ ಪ್ರಯಾಣದಲ್ಲಿ ಅವರು 24 ದೇಶಗಳು ಮತ್ತು 3 ಖಂಡಗಳನ್ನು ದಾಟಿ ಪ್ರಯಾಣಿಸಲಿದ್ದಾರೆ. ಅವರ ಯೋಜನೆಯಲ್ಲಿ 25000 ಕಿಲೋಮೀಟರ್‌ಗಳಷ್ಟು ದೂರ ಪ್ರಯಾಣಿಸುವುದನ್ನು ಎದುರು ನೋಡುತ್ತಿದ್ದು, ಮಹಾರಾಷ್ಟ್ರ ದಿನವಾದ ಮೇ 1 ರಿಂದ ಈ ಪ್ರಯಾಣ ಆರಂಭಿಸಲಿದ್ದಾರೆ. ಇದು 100 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: IRCTC: ರಾತ್ರಿ ಹೊತ್ತು ರೈಲಿನಲ್ಲಿ ಪ್ರಯಾಣಿಸುವವರೇ ಇಲ್ಲಿ ಕೇಳಿ! ಹೊಸ ರೂಲ್ಸ್​ ಬಂದಿದೆ, ಎಚ್ಚರ!


ಬೈಕ್​ನಲ್ಲಿ ವಿಶ್ವ ಪರ್ಯಟನೆ ಮಾಡುವ ಕನಸು, 30 ಲಕ್ಷ ಖರ್ಚು


ಬೈಕ್ ನಲ್ಲಿ ಹಲವು ದೇಶಗಳಿಗೆ ಭೇಟಿ ನೀಡಿದ ಬಳಿಕ ಬೈಕ್​ನಲ್ಲಿ ವಿಶ್ವ ಪರ್ಯಟನೆ ಮಾಡಬೇಕೆಂಬುದು ನನ್ನ ಕನಸಾಗಿತ್ತು. ಆ ದಿನಗಳಲ್ಲಿ ಮುಂದೊಂದು ದಿನ ನಾನು ಈ ಸುದೀರ್ಘ ಪ್ರವಾಸ ಮಾಡುತ್ತೇನೆ ಎಂದು ಸಂಕಲ್ಪ ಮಾಡಿದ್ದೆ. ಇದೀಗ ನೆರವೇರುತ್ತಿದೆ. ಮುಂಬೈನಿಂದ ಲಂಡನ್‌ಗೆ ಬೈಕ್‌ನಲ್ಲಿ ಪ್ರಯಾಣಿಸುವುದು ನನ್ನ ಯೋಜನೆಯಾಗಿದೆ.


ಈ ಪ್ರಯಾಣದಲ್ಲಿ, ನಾನು 24 ದೇಶಗಳಿಗೆ ಭೇಟಿ ನೀಡುತ್ತೇನೆ ಮತ್ತು 3 ಖಂಡಗಳನ್ನು ದಾಟಲಿದ್ದೇನೆ. 100 ದಿನಗಳ ಈ ಪ್ರವಾಸದಲ್ಲಿ ನಾನು ಸುಮಾರು 25,000 ಕಿಲೋಮೀಟರ್ ದೂರವನ್ನು ಪ್ರಯಾಣಿಸುತ್ತೇನೆ. ಈ ಪ್ರವಾಸಕ್ಕೆ ನನಗೆ ₹30 ಲಕ್ಷ ವೆಚ್ಚವಾಗಲಿದೆ. ಬೇರೆ ಬೇರೆ ದೇಶಗಳಿಂದ ವೀಸಾ ಪಡೆಯಬೇಕಾಗಿದೆ. ಏರ್ ಕಾರ್ಗೋ ಮೂಲಕ ಬೈಕ್ ಕಳುಹಿಸಲಾಗುತ್ತದೆ ಎಂದು ಯೋಗೇಶ್ ತಿಳಿಸಿದ್ದಾರೆ.ಪ್ರಯಾಣದ ವೇಳೆ ಹೇಗೆ ಕಾಳಜಿ ವಹಿಸಬೇಕು?


ಈ 100 ದಿನಗಳ ಪ್ರಯಾಣದಲ್ಲಿ ಏನು ಕಾಳಜಿ ವಹಿಸಬೇಕು ಎಂಬುದರ ಕುರಿತು ಯೋಗೇಶ್ ಸುದೀರ್ಘವಾಗಿ ಮಾತನಾಡಿದ್ದಾರೆ. " ಬೈಕ್ ಓಡಿಸುವಾಗ ನಿಮ್ಮನ್ನು ನೀವು ಫಿಟ್ ಆಗಿ ಇಟ್ಟುಕೊಳ್ಳುವುದು ಅತಿ ಮುಖ್ಯ. ವಿವಿಧ ದೇಶಗಳಲ್ಲಿ ಪ್ರಯಾಣಿಸುವಾಗ, ವಾತಾವರಣ ಬದಲಾಗುತ್ತದೆ ಮತ್ತು ಆಹಾರವೂ ಬದಲಾಗುತ್ತದೆ. ನಿಮ್ಮ ದೇಹವನ್ನು ಆ ವಾತಾವರಣಕ್ಕೆ ಒಗ್ಗಿಸಲು ವ್ಯಾಯಾಮ ಮಾಡುವುದು ಅತ್ಯಗತ್ಯ. ಸ್ಥಳೀಯ ಆಹಾರಗಳನ್ನು ತಿನ್ನುವಾಗ ಜಾಗರೂಕರಾಗಿರಬೇಕು. ಜೊತೆಗೆ, ನೀವು ಹೆಚ್ಚು ಹಣ್ಣುಗಳನ್ನು ಸೇವಿಸಿದರೆ ಮತ್ತು ಸಾಕಷ್ಟು ನೀರು ಕುಡಿಯಬೇಕು, ಇದರಿಂದ ದೇಹವು ಬದಲಾದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುತ್ತದೆ " ಯೋಗೇಶ್ ಹೇಳಿದರು.


mumbai to london in 100 days maharashtra youth will travel to 24 countries on bike
ಬೈಕ್​ನಲ್ಲಿ 24 ದೇಶ ಸುತ್ತಲಿರುವ ಬೈಕರ್ ಯೋಗೇಶ್


ಯೋಗೇಶ್ ಕಳೆದ 4 ವರ್ಷಗಳಿಂದ ಈ ಸುದೀರ್ಘ ಬೈಕ್ ರೈಡ್ ಪ್ಲಾನ್ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ನೇಪಾಳ, ಭೂತಾನ್, ಮಯನ್ಮಾರ್, ವಿಯೆಟ್ನಾಂ, ಕಾಂಬೋಡಿಯಾ ಮತ್ತಿತರ ದೇಶಗಳಿಗೆ ಬೈಕ್ ನಲ್ಲಿ ತೆರಳಿದ್ದಾರೆ. ಹಾಗಾಗಿ, ಈ ರೀತಿಯ ಬೈಕ್ ರೈಡ್ ಮಾಡುವುದು ಸುಲಭದ ಯೋಜನೆ ಅಲ್ಲ ಎಂಬುದುವನ್ನು ಅವರು ಚೆನ್ನಾಗಿ ಅರಿತುಕೊಂಡಿದ್ದಾರೆ.


ಇದನ್ನೂ ಓದಿ: Inspiration Story: ಚಿತ್ರಕಲೆಯ ಮೂಲಕ ನೂರು ವಿಶ್ವದಾಖಲೆ ಬರೆದ ವ್ಯಕ್ತಿ! ಇವರ ಕಲೆ ನಿಜಕ್ಕೂ ಗ್ರೇಟ್​


ಇದು ಯಾವ ರೀತಿಯ ಪ್ರಯಾಣವಾಗಿರುತ್ತದೆ?


ಯೋಗೇಶ್ ಅವರು ತಮ್ಮ ಪ್ರಯಾಣದ ಸಮಯದಲ್ಲಿ ಏಷ್ಯಾ, ಯುರೋಪ್ ಮತ್ತು ಆಫ್ರಿಕಾ ಎಂಬ ಮೂರು ಖಂಡಗಳನ್ನು ದಾಟಲಿದ್ದಾರೆ. ಮೇ 1 ರಂದು ಮುಂಬೈನ ಗೇಟ್‌ವೇ ಆಫ್ ಇಂಡಿಯಾದಿಂದ ತಮ್ಮ ಸುದೀರ್ಘ ಪ್ರವಾಸ ಪ್ರಾರಂಭಿಸಲಿದ್ದಾರೆ. ಮುಂಬೈನಿಂದ ನೇಪಾಳಕ್ಕೆ ತೆರಳಿ ಅಲ್ಲಿಂದ ಯುಎಇಗೆ ವಿಮಾನದ ಮೂಲಕ ತೆರಳಲಿದ್ದಾರೆ. ಯುಎಇಯಿಂದ, ಅವರು ಇರಾನ್, ಟರ್ಕಿ, ಗ್ರೀಸ್, ಇಟಲಿ, ಆಸ್ಟ್ರಿಯಾ, ಜೆಕ್, ಜರ್ಮನಿ, ಲಕ್ಸೆಂಬರ್ಗ್, ಬೆಲ್ಜಿಯಂ, ನೆದರ್ಲ್ಯಾಂಡ್ಸ್, ಫ್ರಾನ್ಸ್, ಲಂಡನ್‌ಗೆ ಪ್ರಯಾಣಿಸಲಿದ್ದಾರೆ ಮತ್ತು ಲಂಡನ್‌ನಿಂದ ಅವರು ಫ್ರಾನ್ಸ್, ಮೊರಾಕೊ ಮತ್ತು ಸ್ಪೇನ್‌ಗೆ ಹಿಂತಿರುಗಲಿದ್ದಾರೆ. ಸ್ಪೇನ್‌ನಿಂದ ಭಾರತಕ್ಕೆ ವಿಮಾನದ ಮೂಲಕ ಹಿಂದಿರುಗಲಿದ್ದಾರೆ.

First published: