ನವದೆಹಲಿ (ಜ.8): ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಆದ ಲಷ್ಕರ್ ಇ ತೊಯ್ಬಾ ಸಂಘಟನೆಯ ಝಕೀರ್ ರೆಹಮಾನ್ ಲಖ್ವಿಗೆ ಪಾಕ್ನ ಭಯೋತ್ಪಾದನಾ ವಿರೋಧಿ ನ್ಯಾಯಾಲಯ 15 ವರ್ಷ ಜೈಲು ಶಿಕ್ಷೆ ವಿಧಿಸಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಲಖ್ವಿಯನ್ನು ಆರು ದಿನಗಳ ಹಿಂದೆ ಭಯೋತ್ಪಾದಕ ಹಣಕಾಸು ಆರೋಪದ ಮೇಲೆ ಬಂಧಿಸಲಾಗಿದೆ. 2015ರಿಂದ ಜಾಮೀನಿನ ಮೇಲೆ ಹೊರಗಿದ್ದ ಈತನನ್ನು ಪಂಜಾಬ್ ಪ್ರಾಂತ್ಯದ ಭಯೋತ್ಪದನಾ ನಿಗ್ರಹ ಇಲಾಖೆ (ಸಿಟಿಡಿ) ಬಂಧಿಸಿದೆ. ಈ ಪ್ರಕರಣದ ಕುರಿತು ಲಾಹೋರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 2015ರಲ್ಲಿ ರಾವಲ್ಪಿಂಡಿಯ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಈತನ ಪತ್ತೆಗೆ ತೀವ್ರ ಶೋಧ ನಡೆದಿತ್ತಾದರೂ, ಈತನ ಸುಳಿವು ಸಿಕ್ಕಿರಲಿಲ್ಲ.
ಸೆರೆವಾಸದಲ್ಲಿದ್ದಾಗಲೂ ಈತ ಜೈಲಿನಿಂದಲೇ ಎಲ್ ಇಟಿ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ. ಅಲ್ಲದೇ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಈತನದೇ ಎಂದು ತಿಳಿದುಬಂತಿತು.
ಇದನ್ನು ಓದಿ: ಶೀಘ್ರದಲ್ಲಿಯೇ ದೇಶದ ಎಲ್ಲರಿಗೂ ಕೊರೋನಾ ಲಸಿಕೆ ; ಸಚಿವ ಹರ್ಷವರ್ಧನ್
ಈತನ ಔಷಧಲಯವೊಂದನ್ನು ನಡೆಸುತ್ತಿದ್ದ ಈ ಮೂಲಕ ಭಯೋತ್ಪಾದನೆಗೆ ಹಣ ಸಂಗ್ರಹಿಸುತ್ತಿದ್ದ. ಈ ಔಷಧಾಲಯದ ಮೂಲಕ ಈತ ಮತ್ತು ಈತನ ಸಹಚರರು ಹಣ ಸಂಗ್ರಹಿಸುತ್ತಿದ್ದರು. ಅಲ್ಲದೇ ಈ ಹಣವನ್ನು ತನ್ನ ವೈಯಕ್ತಿಕ ಖರ್ಚಿಗೂ ಕೂಡ ಈತ ಬಳಸುತ್ತಿದ್ದ ಎಂದು ಸಿಟಿಡಿ ಕಳೆದ ವಾರ ತಿಳಿಸಿತು.
ಲಿಖ್ವಿಯನ್ನು ಭಯೋತ್ಪಾದನಾ ಹಣಕಾಸು ವ್ಯವಹಾರ ಸಂಬಂಧ ಸಿಟಿಡಿ ಪಂಜಾಬ್ನಲ್ಲಿ ವಿಚಾರಣೆ ನಡೆಸುತ್ತಿದ್ದು, ಶೀಘ್ರದಲ್ಲಿಯೇ ಲಾಹೋರ್ನ ಭಯೋತ್ಪಾದನಾ ನಿಗ್ರಹ ನ್ಯಾಯಲಯದ ಮುಂದೆ ಹಾಜರು ಪಡಿಸಲಿದೆ ಎಂದು ಪಿಟಿಐ ವರದಿ ಮಾಡಿದೆ.
2008ರಲ್ಲಿ ವಿಶ್ವಸಂಸ್ಥೆ ಲಿಖ್ವಿಯನ್ನು ಜಾಗತಿಕ ಭಯೋತ್ಪಾದಕನ ಪಟ್ಟಿಗೆ ಸೇರಿಸಿದೆ. ಈತ ಅಲ್ಖೈದಾ ಮತ್ತು ಎಲ್ಇಟಿಯೊಂದಿಗೆ ಹಣಕಾಸು, ಭಯೋತ್ಪಾದಕ ಕೃತ್ಯಗಳ ಯೋಜನೆ ರೂಪಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ