Mumbai Rape Case: ಕಬ್ಬಿಣದ ರಾಡ್​ನಿಂದ ಅಮಾನುಷ ಹಲ್ಲೆಗೆ ಒಳಗಾಗಿದ್ದ ಅತ್ಯಾಚಾರ ಸಂತ್ರಸ್ತೆ ಸಾವು

"ಸಂತ್ರಸ್ತೆಗೆ ಲಭ್ಯವಿರುವ ಅತ್ಯುತ್ತಮ ವೈದ್ಯಕೀಯ ಸೌಲಭ್ಯವನ್ನು ಒದಗಿಸಬೇಕು ಮತ್ತು ತನಿಖೆಯನ್ನು ನ್ಯಾಯಯುತ ಮತ್ತು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು" ಎಂದು ಅದು ಹೇಳಿತ್ತು. ಆದರೆ ದುರಾದೃಷ್ಟವಶಾತ್​ ಸಂತ್ರಸ್ತ ಮಹಿಳೆ ಸಾವನ್ನಪ್ಪಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Mumbai Rape Case: ಸೆಪ್ಟೆಂಬರ್ 9 ರಂದು ಸಕಿನಾಕಾ ಪ್ರದೇಶದ ಖೈರಾನಿ ರಸ್ತೆಯಲ್ಲಿ (Khairani Road in the Saki Naka ) ಅತ್ಯಾಚಾರಕ್ಕೊಳಗಾದ ನಂತರ ಪ್ರಜ್ಞೆ ತಪ್ಪಿ ಬಿದ್ದಿದ್ದ 30 ವರ್ಷದ ಮಹಿಳೆ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಮುಂಬೈ ಪೊಲೀಸರು ಶನಿವಾರ 

  ಪ್ರಾಥಮಿಕ ತನಿಖೆಯ ಪ್ರಕಾರ, ಮಹಿಳೆಯ ಮೇಲೆ ಅತ್ಯಂತ ನಿರ್ಧಯವಾಗಿ ಅತ್ಯಾಚಾರ ಎಸಗಲಾಗಿದೆ ಮತ್ತು ಆಕೆಯ ಗುಪ್ತಾಂಗಗಳಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

  ಈ ಘಟನೆ ಉಪನಗರದ ಸಕಿನಾಕಾದ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಟೆಂಪೋವೊಂದರಲ್ಲಿ ನಡೆದಿದೆ. ಆರೋಪಿಯನ್ನು ಸೆಪ್ಟೆಂಬರ್ 21 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

  ಮಹಾರಾಷ್ಟ್ರದ (Maharashtra) ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಶೀಘ್ರ ವಿಚಾರಣೆಗೆ ಆಗ್ರಹಿಸಿದ್ದಾರೆ. ಹಾಗೂ ಈ ಪ್ರಕರಣವನ್ನು ತ್ವರಿತ ನ್ಯಾಯಾಲಯದ ವಿಚಾರಣೆಗೆ ನೀಡಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

  ಇಂತಹ ಘಟನೆ ಮಹಾರಾಷ್ಟ್ರಕ್ಕೆ ಕಪ್ಪು ಚುಕ್ಕೆ ಎಂದು ಈ ಬಿಜೆಪಿ ನಾಯಕ ಸರ್ಕಾರದ ಧೋರಣೆಗಳ ಬಗ್ಗೆಯೂ ಕಿಡಿ ಕಾರಿದರು. ಅಮರಾವತಿಯಲ್ಲಿ 17 ವರ್ಷದ ಹುಡುಗಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದು ತನ್ನ ಕುಟುಂಬದ ಪ್ರತಿಷ್ಠೆಗೆ ಧಕ್ಕೆ ತರುವ ಈ ಘಟನೆಗೆ ಹೆದರಿ, ಭಯದಿಂದ  ಅತ್ಯಾಚಾರ ಸಂತ್ರಸ್ತೆ ಈ ರೀತಿಯ ಆಘಾತಕಾರಿ ಕೆಲಸ ಮಾಡಿಕೊಂಡಿದ್ದಾಳೆ, ಈ ಎಲ್ಲಾ ಘಟನೆಗಳು ನಿಜಕ್ಕೂ ಮಹಾರಾಷ್ಟ್ರದ ಘನತೆಗೆ ಅಳಿಸಲಾಗದ ಕಪ್ಪು ಚುಕ್ಕೆಗಳು ಎಂದು ಹೇಳಿದ್ದಾರೆ.

  ಶುಕ್ರವಾರ ಮುಂಜಾನೆ ಖೈರಾನಿ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಥಳಿಸುತ್ತಿದ್ದಾನೆ ಎಂದು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿತು ಎಂದು ಅಧಿಕಾರಿಯೊಬ್ಬರು ಹೇಳಿದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಹುಡುಕಿಕೊಂಡು ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿತು. ಅಷ್ಟರಲ್ಲಾಗಲೇ ಆಕೆಯನ್ನು ಸ್ಥಳೀಯ ನಾಗರಿಕರ ರಾಜವಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
   ರಾಷ್ಟ್ರೀಯ ಮಹಿಳಾ ಆಯೋಗವು (The National Commission for Women) ಶುಕ್ರವಾರ ಈ ವಿಚಾರವಾಗಿ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಮಹಾರಾಷ್ಟ್ರದ ಪೊಲೀಸ್ ಮಹಾನಿರ್ದೇಶಕ ಸಂಜಯ್ ಪಾಂಡೆಗೆ ಪತ್ರ ಬರೆದಿದೆ. "ಸಂಜೆಯವರೆಗೆ ಯಾವುದೇ ಬೆಳವಣಿಗೆ ಇಲ್ಲದಿದ್ದರೆ, ನಾನು ಅದರ ಬಗ್ಗೆ ವಿಚಾರಿಸಲು ಮತ್ತು ಸಂತ್ರಸ್ತೆಯ ಕುಟುಂಬಕ್ಕೆ ಸಹಾಯ ಮಾಡಲು ಸದಸ್ಯರನ್ನು ಕಳುಹಿಸುತ್ತೇನೆ" ಎಂದು NCW ಅಧ್ಯಕ್ಷೆ ರೇಖಾ ಶರ್ಮಾ (Rekha Sharma ) ಕಟುವಾಗಿ ಹೇಳಿದ್ದಾರೆ.
  ಸಮಿತಿಯು ತನ್ನ ಹೇಳಿಕೆಯಲ್ಲಿ ಹೀಗೆ ಹೇಳಿದ್ದು:  ಅತ್ಯಾಚಾರಕ್ಕೆ ಒಳಗಾದ ಬಲಿಪಶು ಮೇಲೆ ನಡೆದಿರುವ ಅನಾಗರಿಕ ಮತ್ತು ಅತ್ಯಂತ ಹೇಯ ದೌರ್ಜನ್ಯದಿಂದ ಆಯೋಗವು ಕಂಗೆಟ್ಟಿದೆ ಮತ್ತು ಈ ಸಂಗತಿಯನ್ನು ಮಹಾರಾಷ್ಟ್ರ ಪೊಲೀಸ್​ ಅತ್ಯಂತ ಗಂಬೀರವಾಗಿ ಪರಿಗಣಿಸುತ್ತದೆ ಎಂದು ನಾವು ಭಾವಿಸಿದ್ದೇವೆ ಆದ್ದರಿಂದ ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು ಈ ವಿಷಯದಲ್ಲಿ ಒಂಚೂರು ರಿಯಾಯಿತಿ ನೀಡದೆ ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಜೊತೆಗೆ ಕಾನೂನಿನ ಇತರ ಸಂಬಂಧಿತ ನಿಬಂಧನೆಗಳನ್ನು ಬಳಸಿಕೊಂಡು ಆರೋಪಿಗೆ ತಕ್ಕ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ.

  "ಸಂತ್ರಸ್ತೆಗೆ ಲಭ್ಯವಿರುವ ಅತ್ಯುತ್ತಮ ವೈದ್ಯಕೀಯ ಸೌಲಭ್ಯವನ್ನು ಒದಗಿಸಬೇಕು ಮತ್ತು ತನಿಖೆಯನ್ನು ನ್ಯಾಯಯುತ ಮತ್ತು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು" ಎಂದು ಅದು ಹೇಳಿತ್ತು. ಆದರೆ ದುರಾದೃಷ್ಟವಶಾತ್​ ಸಂತ್ರಸ್ತ ಮಹಿಳೆ ಸಾವನ್ನಪ್ಪಿದ್ದಾಳೆ.


  ವಾಹನದ ಒಳಗೆ ರಕ್ತದ ಕಲೆಗಳು ಸಹ ಕಂಡುಬಂದಿದ್ದವು. ವೈದ್ಯರು ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಈ ಮೊದಲೇ ಹೇಳಿದ್ದರು. ಮೋಹನ್ ಚೌಹಾಣ್ (45) ಎಂಬ ಆರೋಪಿಯನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದರು.


  ಇದನ್ನೂ ಓದಿ: MS Dhoni: ಫ್ಲಾಟ್​ ಕೊಂಡುಕೊಂಡ ಧೋನಿ ಹಾಗೂ 1,800ಕ್ಕೂ ಹೆಚ್ಚು ಜನರಿಗೆ 15 ದಿನಗಳಲ್ಲಿ ಬಾಕಿ ಹಣ ನೀಡುವಂತೆ ನೋಟಿಸ್‌..!

  ಕೆಲವು ಸಾಂಧರ್ಬಿಕ ಸಾಕ್ಷ್ಯಗಳ ಮೇಲೆ, ಚೌಹಾಣ್ ಎಂಬ ಆರೋಪಿಯನ್ನು ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಮತ್ತು 376 (ಅತ್ಯಾಚಾರ) ಅಡಿಯಲ್ಲಿ ಬಂಧಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.  Published by:HR Ramesh
  First published: